Lakshmi Narayana Yoga 2025: ಲಕ್ಷ್ಮೀನಾರಾಯಣ ಯೋಗ- ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಸೌರವ್ಯೂಹದಲ್ಲಿ ಗ್ರಹಗಳು ಸಂಚರಿಸುತ್ತಲೇ ಇರುತ್ತವೆ. ಈ ವೇಳೆ ಒಂದಕ್ಕಿಂತ ಹೆಚ್ಚು ಗ್ರಹಗಳು ಒಂದು ರಾಶಿಯಲ್ಲಿ ಸಂಚಾರ ಮಾಡಿದಾಗ ಅದನ್ನು ಸಂಯೋಗ ಎಂದು ಕರೆಯಲಾಗುತ್ತದೆ. ಈ ಗ್ರಹಗಳ ಸಂಯೋಗದಿಂದಾಗಿ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಅಂದಹಾಗೆ ಇದೇ ಮೇ ತಿಂಗಳಿನಲ್ಲಿ ಅತ್ಯಂತ ಮಂಗಳಕರ ಲಕ್ಷ್ಮೀನಾರಾಯಣ ಯೋಗ ರೂಪಗೊಳ್ಳಲಿದೆ.

ಮೇ ತಿಂಗಳಲ್ಲಿ ಶುಕ್ರ ಮತ್ತು ಬುಧ ಒಟ್ಟಾಗಿ ಸೇರಿ ಲಕ್ಷ್ಮೀ ನಾರಾಯಣ ರಾಜ ಯೋಗವನ್ನು ಸೃಷ್ಟಿ ಮಾಡುತ್ತವೆ. ಈ ಯೋಗ ಕೆಲ ರಾಶಿಯವರಿಗೆ ಕೋಟ್ಯಾಧಿಪತಿಗಳಾಗುವ ಯೋಗವನ್ನು ತರಲಿದೆ. ಕೆಲ ರಾಶಿಯವರ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಿಸಲಿದೆ. ಬುಧ ಗ್ರಹ ಬುದ್ಧಿವಂತಿಕೆ ಮತ್ತು ಆರ್ಥಿಕ ಪ್ರಗತಿಯನ್ನು ಪ್ರತಿನಿಧಿಸಿದರೆ, ಶುಕ್ರ ಐಷಾರಾಮಿ, ಸಂಪತ್ತು ಮತ್ತು ಜೀವನದ ಸಂತೋಷಗಳನ್ನು ಪ್ರತಿನಿಧಿಸುತ್ತದೆ. ಹೀಗೆ ಈ ಎರಡೂ ರಾಶಿಗಳು ಮೇಷ ರಾಶಿಯಲ್ಲಿ ಸೇರಿ ಲಕ್ಷ್ಮೀನಾರಾಯಣ ರಾಜಯೋಗವನ್ನು ಸೃಷ್ಟಿಸುತ್ತವೆ. ಅಲ್ಲದೆ ಈ ಯೋಗ ಜೀವನದ ಸುವರ್ಣಯುಗವನ್ನು ಪ್ರತಿನಿಧಿಸುತ್ತದೆ. ಹಾಗಾದರೆ ಈ ಯೋಗದಿಂದ ಯಾವ ರಾಶಿಯವರ ಸಂಪತ್ತು ಹೆಚ್ಚಾಗಲಿದೆ ಎಂದು ಈಗ ತಿಳಿಯೋಣ.

lakshmi narayana yoga 2025 this zodiac sign lucky door will open

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗ ಉದ್ಯೋಗದಲ್ಲಿ ಬಡ್ತಿ, ಧನಲಾಭ, ಖ್ಯಾತಿ, ಯಶಸ್ಸನ್ನು ನೀಡಲಿದೆ. ಕಷ್ಟಪಟ್ಟು ದುಡಿಮೆ ಮಾಡುವವರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಲಕ್ಷ್ಮೀ ದೇವಿಯ ಅನುಗ್ರಹದಿಂದ ಮನೆಯಲ್ಲಿ ಸಂಪತ್ತು ತಾಂಡವವಾಡುವುದು. ಕೆಲಸದಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಅಲ್ಲದೆ ಇದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ.

ಹೊಸ ಉದ್ಯಮ ಪ್ರಾರಂಭ ಮಾಡಬೇಕು ಅಂದುಕೊಂಡಿದ್ದರೆ ಈ ಸಮಯ ಉತ್ತಮವಾಗಿದೆ. ಉದ್ಯಮಿಗಳು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ ಇದು. ಕರ್ಕಾಟಕ ರಾಶಿಯವರಿಗೆ ವಿವಿಧ ಒಪ್ಪಂದಗಳ ಮೂಲಕ ಹಣದ ಹರಿವು ಹೆಚ್ಚಾಗಲಿದೆ. ಅಲ್ಲದೆ ಅವರ ಆರೋಗ್ಯ ಕೂಡ ಅತ್ಯುತ್ತಮವಾಗಿರುತ್ತದೆ. ಯಾವುದೇ ಅಡೆತಡೆಯಿಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುವಿರಿ.

lakshmi narayana yoga 2025 this zodiac sign lucky door will open

ಮಕರ ರಾಶಿ

ಮಕರ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ತರಲಿದೆ. ಈ ರಾಜಯೋಗ ಮಕರ ರಾಶಿಯ ನಾಲ್ಕನೇ ಮನೆಯಲ್ಲಿರುವುದರಿಂದ ವಿವಿಧ ರೀತಿಯಲ್ಲಿ ಲಾಭವನ್ನು ನೀವು ನಿರೀಕ್ಷಿಸಬಹುದು. ಈ ಅವಧಿಯಲ್ಲಿ ನಿಮಗೆ ಸೌಕರ್ಯ ಮತ್ತು ಅನುಕೂಲತೆ ಹೆಚ್ಚಾಗುತ್ತದೆ.

ವಾಹನ ಅಥವಾ ಆಸ್ತಿ ಖರೀದಿಸುವ ಸಾಧ್ಯತೆಗಳಿವೆ. ಕೆಲಸದಲ್ಲಿರುವವರಿಗೆ ಬಡ್ತಿಗಳು ಸಿಗಬಹುದು. ಅಲ್ಲದೆ ಕೆಲಸದ ಸ್ಥಳದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಅನೇಕ ವ್ಯವಹಾರಗಳ ಮೂಲಕ ಆರ್ಥಿಕ ಲಾಭಗಳನ್ನು ಗಳಿಸಲು ನಿಮಗೆ ಸಾಧ್ಯವಾಗುತ್ತದೆ. ಹೂಡಿಕೆಗಳು ಅನಿರೀಕ್ಷಿತ ಲಾಭವನ್ನು ತರುತ್ತವೆ. ಕುಟುಂಬದಲ್ಲಿ ಶಾಂತಿ ಸಂತೋಷ ನೆಲೆಸಲಿದೆ.

lakshmi narayana yoga 2025 this zodiac sign lucky door will open

ಮೀನ ರಾಶಿ

ಮೀನ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗ ಸುವರ್ಣಯುಗದ ಆರಂಭವನ್ನು ಸೂಚಿಸುತ್ತದೆ. ಈ ರಾಜಯೋಗ ಮೀನ ರಾಶಿಯ ಸಂಪತ್ತು ಹೆಚ್ಚಿಸಲಿದೆ. ಆದ್ದರಿಂದ ನಿಮಗೆ ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭಗಳು ಸಿಗಲಿವೆ. ವೃತ್ತಿಪರ ಜೀವನದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ.

Take a Poll

ಬಾಕಿ ಇರುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಕುಟುಂಬ ಸದಸ್ಯರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಸಮಾಜದಲ್ಲಿ ನಿಮಗೆ ಗೌರವ ಹಲವು ಪಟ್ಟು ಹೆಚ್ಚಾಗುವುದು. ಈ ಸಮಯದಲ್ಲಿ ನಿಮ್ಮ ಮಾತನಾಡುವ ಕೌಶಲ್ಯವು ಬಹಳವಾಗಿ ಸುಧಾರಿಸುತ್ತದೆ. ಅಲ್ಲದೆ ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಒಟ್ಟಾರೆಯಾಗಿ ಲಕ್ಷ್ಮೀ ನಾರಾಯಣ ಯೋಗ ನಿಮ್ಮ ಜೀವನದ ಸುವರ್ಣಯುಗವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+