Kuldeepak Yoga 2024: ಅ.31ರಂದು ಕುಲದೀಪಕ ಯೋಗ: ಈ 5 ರಾಶಿಗಳ ಮೇಲೆ ಲಕ್ಷ್ಮಿಯ ಆಶೀರ್ವಾದ

ದೀಪಾವಳಿಯ ದಿನ ಅಂದರೆ ಅಕ್ಟೋಬರ್ 31ರಂದು ಲಕ್ಷ್ಮೀ ಯೋಗ, ಕುಲದೀಪಕ ಯೋಗ ರೂಪಗೊಳ್ಳಲಿದೆ. ಅಲ್ಲದೆ ಇಂದು ಚಂದ್ರನು ತುಲಾ ರಾಶಿಗೆ ಚಲಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಮೇಲೆ ಇದರ ಪರಿಣಾಮ ಬೀರಲಿದೆ. ಹಾಗಾದರೆ ಗುರುವಾರ ರೂಪಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಯಾವ ರಾಶಿಯವರು ಪಡೆಯಲಿದ್ದಾರೆ ಎಂದು ತಿಳಿಯೋಣ.

ಯಾವುದೇ ಗ್ರಹ ಸಂಚಾರ ಮಾಡುವಾಗ ಶುಭ ಹಾಗೂ ಅಶುಭ ಯೋಗಗಳು ರೂಪಗೊಳ್ಳುತ್ತವೆ. ಈ ಸಮಯದಲ್ಲಿ ಜಾತಕದಲ್ಲಿ ಆ ಗ್ರಹದ ಸ್ಥಾನ ಬಲವಾಗಿದ್ದರೆ ಅಂತಹ ರಾಶಿಯವರು ನಿತ್ಯ ಹಬ್ಬವನ್ನು ಆಚರಿಸುತ್ತಾರೆ. ಆದರೆ ಜಾತಕದಲ್ಲಿ ಗ್ರಹದ ಸ್ಥಾನ ಉತ್ತಮವಾಗಿಲ್ಲದಿದ್ದರೆ ಅಂತಹ ರಾಶಿಯವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಗುರುವಾರ ಅಕ್ಟೋಬರ್ 31 ರಂದು ರೂಪುಗೊಂಡ ಲಕ್ಷ್ಮಿ ಯೋಗದಿಂದ ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯೋಣ.

Kuldeepak Yoga formed on 31st October Blessings of Lakshmi on these 5 Rasis including Pisces

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಅಕ್ಟೋಬರ್ 31 ರಂದು ರೂಪುಗೊಂಡ ಕುಲದೀಪಕ ಯೋಗ ಮಂಗಳಕರವಾಗಿದೆ. ಮನೆಯಲ್ಲಿ ಹಬ್ಬದ ವಾತಾವರಣ ಹರಡಲಿದೆ. ಸಂತೋಷ ಖುಷಿಯಲ್ಲಿ ಮನೆ ಜನ ಹಬ್ಬವನ್ನು ಆಚರಿಸುವಿರಿ. ಮನೆಗೆ ಆಪ್ತರು ಆಗಮಿಸುತ್ತಾರೆ. ಇದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಹೆಚ್ಚಾಗಲಿದೆ. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ಕೂಡ ಸುಧಾರಿಸಲಿದೆ. ಲಾಭದ ಉದ್ಯೋಗಗಳನ್ನು ಣೀವು ಆರಂಭಿಸುವಿರಿ.

Kuldeepak Yoga formed on 31st October Blessings of Lakshmi on these 5 Rasis including Pisces

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಅಕ್ಟೋಬರ್ 31 ರಂದು ರೂಪುಗೊಂಡ ಕುಲದೀಪಕ ಯೋಗ ಶುಭ ತರಲಿದೆ. ವ್ಯಾಪಾರ ಮಾಡುವವರ ಆರ್ಥಿಕ ಜೀವನ ಸುಧಾರಿಸಲಿದೆ. ಚಿನ್ನ, ಬೆಳ್ಳಿ, ವಜ್ರಗಳು ಮತ್ತು ವಾಹನಗಳಂತಹ ದುಬಾರಿ ವಸ್ತುಗಳನ್ನು ಖರೀದಿಸಬಹುದು. ನೀವು ಕುಟುಂಬ ಸದಸ್ಯರೊಂದಿಗೆ ಲಕ್ಷ್ಮೀ ಗಣೇಶ ಪೂಜೆಯಲ್ಲಿ ಭಾಗವಹಿಸುವಿರಿ. ವಾಹನ, ಆಸ್ತಿ ಖರೀದಿಗೆ ಇದು ಅತ್ಯಂತ ಶುಭ ದಿನ. ಈ ದಿನ ನೀವು ಖರೀದಿ ಮಾಡುವ ವಸ್ತುಗಳು ದುಪ್ಪಟ್ಟಾಗಲಿವೆ.

Kuldeepak Yoga formed on 31st October Blessings of Lakshmi on these 5 Rasis including Pisces

ತುಲಾ ರಾಶಿ

ತುಲಾ ರಾಶಿಯವರಿಗೆ ಅಕ್ಟೋಬರ್ 31 ರಂದು ರೂಪುಗೊಂಡ ಕುಲದೀಪಕ ಯೋಗ ಬಹಳ ವಿಶೇಷವಾಗಿದೆ. ಪೂಜೆ, ಶುಭ ಕಾರ್ಯಗಳಿಂದಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಇರುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ತುಲಾ ರಾಶಿಯ ಜನರು ಹಣವನ್ನು ಗಳಿಸಲು ಹೊಸ ಮಾರ್ಗಗಳನ್ನು ಪಡೆಯುತ್ತಾರೆ. ಇದು ಹಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ. ವ್ಯಾಪಾರದಲ್ಲಿ ನೀವು ಪ್ರತಿ ಕೆಲಸವನ್ನು ತಾಳ್ಮೆಯಿಂದ ಮಾಡುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ.

Kuldeepak Yoga formed on 31st October Blessings of Lakshmi on these 5 Rasis including Pisces

ಮಕರ ರಾಶಿ

ಈ ದೀಪಾವಳಿ ಮಕರ ರಾಶಿಯವರಿಗೆ ಲಾಭದಾಯಕವಾಗಲಿದೆ. ಮಕರ ರಾಶಿಯವರ ಮನೆಯಲ್ಲಿ ಧಾರ್ಮಿಕ ವಾತಾವರಣವಿರುತ್ತದೆ. ಈ ದಿನ ನೀವು ಆಸ್ತಿ, ವಾಹನ ಇತ್ಯಾದಿಗಳನ್ನು ಖರೀದಿಸಲು ಬಯಸಿದರೆ ಶುಭ ದಿನವಾಗಿರುತ್ತದೆ. ನೀವು ಲಕ್ಷ್ಮಿ ದೇವಿಯ ಅನುಗ್ರಹದಿಂದ ಹೆಚ್ಚಿನ ಹಣವನ್ನು ಗಳಿಸುವ ಅವಕಾಶಗಳನ್ನು ಪಡೆಯುತ್ತೀರಿ. ನಿಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೀರಿ. ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳು ನಡೆಯುತ್ತಿದ್ದರೆ, ಅದು ಹಬ್ಬದ ಕಾರಣಕ್ಕೆ ಕೊನೆಗೊಳ್ಳುತ್ತದೆ.

Kuldeepak Yoga formed on 31st October Blessings of Lakshmi on these 5 Rasis including Pisces

ಮೀನ ರಾಶಿ

ದೀಪಾವಳಿ ಮೀನ ರಾಶಿಯವರಿಗೆ ಬಹಳ ವಿಶೇಷವಾದ ದಿನವಾಗಿದೆ. ಮೀನ ರಾಶಿಯವರು ಕುಟುಂಬದೊಂದಿಗೆ ಹಬ್ಬವನ್ನು ಆನಂದಿಸುತ್ತಾರೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವುದು ಹೊಸ ಭರವಸೆಗಳನ್ನು ಹುಟ್ಟುಹಾಕುತ್ತದೆ. ನೀವು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಯೋಜಿಸಬಹುದು. ಹೊಸ ಬಟ್ಟೆ ಧರಿಸಿ ದೀಪಾವಳಿ ಪೂಜೆಯಲ್ಲಿ ಭಾಗವಹಿಸಿ ಹಬ್ಬದ ಊಟ ಸವಿಯುತ್ತೀರಿ. ದೀಪಾವಳಿಯ ಸಂದರ್ಭದಲ್ಲಿ ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಮೂಡಿ ನಗುವಿನ ವಾತಾವರಣವಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+