Ketu Transit 2023: ಕನ್ಯಾರಾಶಿಯಲ್ಲಿ ಕೇತು ಸಂಕ್ರಮಣ: ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್...

ಜ್ಯೋತಿಷ್ಯದಲ್ಲಿ ಕೇತುವನ್ನು ನೆರಳು ಗ್ರಹ ಎಂದು ಪರಿಗಣಿಸಲಾಗುತ್ತದೆ. ಪ್ರತಿ 18 ತಿಂಗಳಿಗೊಮ್ಮೆ ಕೇತು ರಾಶಿಯನ್ನು ಬದಲಾಯಿಸುತ್ತದೆ. ಪ್ರಸ್ತುತ ಕೇತು ಶುಕ್ರ ಅಧಿಪತ್ಯದ ತುಲಾ ರಾಶಿಯಲ್ಲಿ ಸಂಚರಿಸುತ್ತಿದೆ. ಈ ಸಂದರ್ಭದಲ್ಲಿ ಕೇತು ಅಕ್ಟೋಬರ್ 30 ರಂದು ಬುಧ ಅಧಿಪತ್ಯದ ಕನ್ಯಾರಾಶಿಗೆ ಪ್ರವೇಶಿಸುತ್ತದೆ.

ಶನಿಯ ನಂತರ ರಾಹು ಮತ್ತು ಕೇತು ಅತ್ಯಂತ ಕೆಟ್ಟ ಗ್ರಹಗಳಾಗಿವೆ. ಇಂತಹ ಕೇತು ಕನ್ಯಾರಾಶಿಯನ್ನು ಪ್ರವೇಶಿಸಿ ಮುಂದಿನ ಒಂದೂವರೆ ವರ್ಷಗಳ ಕಾಲ ಇದರಲ್ಲಿ ಸಂಚಾರ ಮಾಡುತ್ತದೆ. ಹೀಗೆ ಕೇತುವಿನ ಈ ಸಂಕ್ರಮಣದ ಪ್ರಭಾವ ಎಲ್ಲಾ ರಾಶಿಗಳ ಜೀವನದಲ್ಲಿ ಕಂಡುಬರುತ್ತದೆ.

ವಿಶೇಷವಾಗಿ 3 ರಾಶಿಯ ಜನರು ಈ ಕೇತು ಸಂಕ್ರಮಣದಿಂದಾಗಿ 2024 ರಲ್ಲಿ ಹಠಾತ್ ಹಣದ ಹರಿವು, ಪ್ರಗತಿ ಮತ್ತು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಈಗ ಆ ಅದೃಷ್ಟದ ರಾಶಿಗಳು ಯಾರೆಂದು ನೋಡೋಣ.

ketu transit in virgo on october 2023 these zodiac signs luck will shine in kannada

ತುಲಾ ರಾಶಿ

ಕೇತು ಈ ಸಂದರ್ಭದಲ್ಲಿ ತುಲಾ ರಾಶಿಯ 12ನೇ ಮನೆಯಲ್ಲಿ ಸಂಚರಿಸುತ್ತದೆ. ಇದರಿಂದ ಇಲ್ಲಿಯವರೆಗೆ ಒತ್ತಡದಲ್ಲಿದ್ದ ತುಲಾ ರಾಶಿಯವರಿಗೆ ಇದರಿಂದ ಮುಕ್ತಿ ಸಿಗಲಿದೆ. ತುಲಾ ರಾಶಿ ಅವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಹೊಸ ಕೆಲಸದಲ್ಲಿ ಸಂಗಾತಿಯ ಪೂರ್ಣ ಬೆಂಬಲವಿರುತ್ತದೆ. ಸಹಯೋಗಿಗಳು ಉತ್ತಮ ಹಣದ ಲಾಭವನ್ನು ಪಡೆಯುತ್ತಾರೆ.

ಮುಖ್ಯವಾಗಿ ಈ ಕೇತು ಸಂಕ್ರಮಣದಿಂದಾಗಿ ತುಲಾ ರಾಶಿಯವರ ಜೀವನದಲ್ಲಿ ದೊಡ್ಡ ಧನಾತ್ಮಕ ಬದಲಾವಣೆ ಇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ದೊರೆಯುತ್ತದೆ. ಈಗಾಗಲೇ ಕೆಲಸ ಮಾಡುತ್ತಿರುವವರಿಗೆ ಉತ್ತಮ ಉದ್ಯೋಗಾವಕಾಶಗಳು ಸಾಲಿಡಿದು ಬರಲಿದೆ. ಇದು ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅವಿವಾಹಿತರಿಗೆ ಒಳ್ಳೆಯ ವರ ಇದಾಗಿದೆ.

ketu transit in virgo on october 2023 these zodiac signs luck will shine in kannada

ಮಿಥುನ ರಾಶಿ

ಕೇತು ಈ ಸಂದರ್ಭದಲ್ಲಿ ಮಿಥುನ ರಾಶಿಯ 4 ನೇ ಮನೆಗೆ ಚಲಿಸುತ್ತದೆ. ಹೀಗಾಗಿ ಅಕ್ಟೋಬರ್ 30ರಿಂದ ಮುಂದಿನ ಒಂದೂವರೆ ವರ್ಷ ಮಿಥುನ ರಾಶಿಯವರಿಗೆ ಶುಭವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಿಥುನ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ಪಿತ್ರಾರ್ಜಿತ ಆಸ್ತಿ ಉತ್ತಮ ಲಾಭವನ್ನು ನೀಡುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಕೆಲವರು ಉತ್ತಮ ಸಂಬಳದೊಂದಿಗೆ ಹೊಸ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳುತ್ತಾರೆ. ಕುಟುಂಬದಲ್ಲಿನ ಮನಸ್ತಾಪಗಳು ಸುಧಾರಿಸುತ್ತವೆ.

ketu transit in virgo on october 2023 these zodiac signs luck will shine in kannada

ಮಕರ ರಾಶಿ

ಕೇತು ಮಕರ ರಾಶಿಯ 9ನೇ ಮನೆಗೆ ಚಲಿಸುತ್ತದೆ. 9ನೇ ಮನೆ ಅದೃಷ್ಟದ ಮನೆಯಾಗಿದೆ. ಹೀಗಾಗಿ ಮುಂದಿನ ಒಂದೂವರೆ ವರ್ಷ, ಮಕರ ರಾಶಿಯವರು ಅದೃಷ್ಟದ ಬೆಂಬಲದೊಂದಿಗೆ ಅನೇಕ ಯಶಸ್ಸು ಮತ್ತು ಹಣವನ್ನು ಸಂಗ್ರಹಿಸುತ್ತಾರೆ.

ಮಕರ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ನೀವು ಅನಿರೀಕ್ಷಿತ ಹಣದ ಹರಿವನ್ನು ಪಡೆಯಬಹುದು. ಕೆಲವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+