ಸೂರ್ಯಗ್ರಹಣದಂದೇ ಗುರು ಉದಯ : ಈ ರಾಶಿಯವರ ಬೆನ್ನಿಗಿರುವುದು ಅದೃಷ್ಟ, ಮಣ್ಣು ಮುಟ್ಟಿದರೂ ಹೊನ್ನಾಗುವ ಕಾಲ
ವೈದಿಕ ಜ್ಯೋತಿಷ್ಯದಲ್ಲಿ, ಗುರು ಗ್ರಹವನ್ನು ಜ್ಞಾನ, ಧರ್ಮ, ಅದೃಷ್ಟ, ಮಕ್ಕಳು ಮತ್ತು ಅಪಾರ ಸಂಪತ್ತಿನ ಅಂಶವೆಂದು ಕರೆಯಲಾಗುವುದು. ಪಂಚಾಂಗದ ಪ್ರಕಾರ, ಕಳೆದ ಕೆಲವು ದಿನಗಳಿಂದ ಕರ್ಕಾಟಕ ರಾಶಿಯಲ್ಲಿ ಅಸ್ತಮಿಸುತ್ತಿರುವ ದೇವಗುರು, ಆಗಸ್ಟ್ 12ರಂದು ಬೆಳಿಗ್ಗೆ 5.03 ಕ್ಕೆ ತನ್ನ ಉತ್ತುಂಗ ರಾಶಿ ಕರ್ಕಾಟಕ ರಾಶಿಯಲ್ಲಿ ಉದಯಿಸಲಿದ್ದಾನೆ.
ಜ್ಯೋತಿಷ್ಯದಲ್ಲಿ, ಗುರುಗ್ರಹದ ಉದಯವನ್ನು ಬಹಳ ಮುಖ್ಯ ಮತ್ತು ಶಕ್ತಿಯುತ ಎಂದೇ ಹೇಳಲಾಗುತ್ತದೆ. ಗುರುಗ್ರಹ ಅಸ್ತಮಿಸಿದಾಗ, ಅದರ ಶುಭ ಫಲಿತಾಂಶಗಳು ದುರ್ಬಲಗೊಳ್ಳುತ್ತವೆ. ಆದರೆ ಅದು ಉದಯಿಸಿದ ತಕ್ಷಣ, ಧರ್ಮ, ಶಿಕ್ಷಣ, ಅದೃಷ್ಟ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಸಕಾರಾತ್ಮಕ ಫಲಿತಾಂಶಗಳು ಮತ್ತೆ ಗೋಚರಿಸುವುದು.

ವಿಶೇಷವೆಂದರೆ ಈ ದಿನ, ಅಂದರೆ ಆಗಸ್ಟ್ 12 ರಂದು, ವರ್ಷದ ಕೊನೆಯ ಸೂರ್ಯಗ್ರಹಣ ಮತ್ತು ಆರು ಆಕಾಶ ಗ್ರಹಗಳ ಗ್ರಹ ಜೋಡಣೆಯಂತಹ ಪ್ರಮುಖ ಘಟನೆಗಳು ಸಹ ಏಕಕಾಲದಲ್ಲಿ ಸಂಭವಿಸುತ್ತಿವೆ. ಇದು ಗುರು ಉದಯದ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಗುರು ಉದಯವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
12 ರಾಶಿಗಳ ಮೇಲೂ ಗುರುಗ್ರಹದ ಉದಯದ ಪ್ರಭಾವ
ಮೇಷ ರಾಶಿ(Aries) : ಗುರುಗ್ರಹದ ಉದಯದಿಂದ ಸಂತೋಷ ಹೆಚ್ಚಾಗುವುದು. ಭೂಮಿ, ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆಗಳಿವೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ತಾಯಿ ನಿಮ್ಮ ಜೊತೆಗಿರುತ್ತಾರೆ.
ವೃಷಭ ರಾಶಿ (Taurus): ಈ ರಾಶಿಯ ಮೂರನೇ ಮನೆಯಲ್ಲಿ ಗುರು ಉದಯಿಸುತ್ತಿದ್ದಾನೆ. ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುವುದು. ನಿಮ್ಮ ಕೆಲಸ ಕಾರ್ಯಗಳಿಗೆ ಒಡಹುಟ್ಟಿದವರ ಸಂಪೂರ್ಣ ಬೆಂಬಲ ಸಿಗುವುದು. ತುಂಬಾ ದಿನಗಳಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ವ್ಯಾಪಾರ ಪಾಲುದಾರರಿಂದ ಲಾಭವಾಗುವುದು.
ಮಿಥುನ ರಾಶಿ (Gemini) : ಮಾತಿನ ಪ್ರಭಾವ ಹೆಚ್ಚಾಗುವುದು. ಜನರು ನಿಮ್ಮತ್ತ ಆಕರ್ಷಿತರಾಗುವರು. ಕಚೇರಿಯಾಗಲಿ, ಮನೆಯಾಗಲಿ ನಿಮ್ಮ ಮಾತೇ ನಡೆಯುವುದು. ಹಣ ಹೆಚ್ಚಾಗುವುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವುದು.
ಕರ್ಕಾಟಕ ರಾಶಿ (Cancer) : ಗುರು ಇದೇ ರಾಶಿಯಲ್ಲಿ ಉದಯಿಸುತ್ತಿದ್ದಾನೆ. ಈ ಸಮಯವು ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ಜನರಿಗೆ ಸುವರ್ಣ ಅವಕಾಶ ನೀಡುವುದು. ಹೊಸ ಉದ್ಯೋಗ ಸಿಗುವುದು. ಬಡ್ತಿಯ ಅವಕಾಶವಿದೆ. ಗೌರವ ಹೆಚ್ಚಾಗುವುದು.
ಸಿಂಹ ರಾಶಿ (Leo): ಖರ್ಚುಗಳು ಸ್ವಲ್ಪ ಹೆಚ್ಚಾಗಬಹುದು. ವಿದೇಶ ಪ್ರಯಾಣ ಅಥವಾ ದೂರದ ಸ್ಥಳಗಳಿಗೆ ಭೇಟಿ ನೀಡುವಿರಿ. ಆಧ್ಯಾತ್ಮಿಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಮಾನಸಿಕ ಶಾಂತಿ ಹೆಚ್ಚುವುದು.
ಕನ್ಯಾ ರಾಶಿ (Virgo): ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಸ್ನೇಹಿತರ ಸಹಾಯದಿಂದ, ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಹೂಡಿಕೆಗೆ ಅನುಕೂಲಕರ ಸಮಯ.
ತುಲಾ ರಾಶಿ (Libra): ವೃತ್ತಿ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಬದಲಾವಣೆಯಾಗುವುದು. ಪ್ರಗತಿಯ ಲಕ್ಷಣಗಳು ಕಂಡುಬರುವುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ದೊರೆಯುವುದು. ಮೇಲಧಿಕಾರಿಗಳ ಬೆಂಬಲ ಇರುವುದು.
ವೃಶ್ಚಿಕ ರಾಶಿ (Scorpio) : ಅದೃಷ್ಟದ ಸಂಪೂರ್ಣ ಬೆಂಬಲ ಸಿಗುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿಗಳು ಸಿಗಬಹುದು. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ.
ಧನು ರಾಶಿ (Sagitarius): ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಆದರೆ, ಹಠಾತ್ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ. ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಮನೆ ಖರೀದಿ ಯೋಚನೆ ಇದ್ದರೆ ಮುಂದುವರೆಯಬಹುದು.
ಮಕರ ರಾಶಿ (Capricorn) : ಗುರುವು ಈ ರಾಶಿಯ ಏಳನೇ ಮನೆಯಲ್ಲಿ ಉದಯಿಸುತ್ತಾನೆ. ಹೀಗಾಗಿ ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುವುದು.ದಾಂಪತ್ಯ ಜೀವನದ ಸಮಸ್ಯೆಗಳು ಬಗೆಹರಿಯುವುದು. ಪಾಲುದಾರಿಕೆ ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭವಾಗುವುದು. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವುದು.
ಕುಂಭ ರಾಶಿ (Aquarius): ಕಷ್ಟಗಳನ್ನು ಸೆಟೆದು ನಿಲ್ಲುವಿರಿ. ಹಳೆಯ ಸಾಲಗಳು ಪರಿಹಾರವಾಗುವುದು. ಕಾನೂನು ಹೋರಾಟದಲ್ಲಿ ಜಯ ಸಿಗುವುದು. ಬಾಕಿ ಇರುವ ಕೆಲಸಗಳು ಪೂರ್ಣವಾಗುವುದು. ಆರೋಗ್ಯವು ಸುಧಾರಿಸುವುದು.
ಮೀನ ರಾಶಿ (Pisces) : ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಪ್ರೇಮ ಸಂಬಂಧಗಳು ಗಾಢವಾಗುವುದು. ಸೃಜನಶೀಲ ಕೆಲಸ ಮತ್ತು ಕಲೆಯಲ್ಲಿ ತೊಡಗಿರುವ ಜನರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿಯಾಗಿರುವುದು.
ಗುರುವನ್ನು ಬಲಪಡಿಸಲು ಏನು ಮಾಡಬೇಕು
ಗುರುವಾರ ಉಪವಾಸ: ಪ್ರತಿ ಗುರುವಾರ ಉಪವಾಸ ಮಾಡಿ. ಹಳದಿ ಬಟ್ಟೆಗಳನ್ನು ಧರಿಸಿ.
ಬಾಳೆ ಮರಕ್ಕೆ ಪೂಜೆ: ಗುರುವಾರದಂದು ಬಾಳೆ ಮರಕ್ಕೆ ಪೂಜೆ ಮಾಡಿ. ಅರಿಶಿನ ಮತ್ತು ಬೇಳೆ ಬೆರೆಸಿದ ನೀರನ್ನು ಅರ್ಪಿಸಿ.
ದಾನ ಮಾಡಿ: ಈ ದಿನದಂದು ಕಡಲೆ ಬೇಳೆ, ಕಡಲೆ ಹಿಟ್ಟು ಲಡ್ಡು, ಹಳದಿ ಬಟ್ಟೆ ಅಥವಾ ಧಾರ್ಮಿಕ ಪುಸ್ತಕಗಳನ್ನು ದಾನ ಮಾಡುವುದು ತುಂಬಾ ಶುಭ.
ವಿಷ್ಣುಸಹಸ್ರನಾಮ ಪಠಣ : ನಿತ್ಯವೂ ಭಗವಾನ್ ವಿಷ್ಣುವನ್ನು ಪೂಜಿಸಿ. ವಿಷ್ಣುಸಹಸ್ರನಾಮವನ್ನು ಪಠಿಸಿ.


Click it and Unblock the Notifications
