Jupiter Nakshatra Transit 2024: ಗುರು ನಕ್ಷತ್ರ ಸಂಕ್ರಮಣದಿಂದಾಗಿ ಆಗಸ್ಟ್‌ನಲ್ಲಿ ಈ 3 ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್

ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ದೇವರ ಗುರು ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಗ್ರಹಗಳಲ್ಲಿ ಗುರುವನ್ನು ಶುಭ ಗ್ರಹವೆಂದು ಕರೆಯಲಾಗುತ್ತದೆ. ಈ ಗುರು ಗ್ರಹ ಕುಟುಂಬದ ಸಂತೋಷ, ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲ್ಪಟ್ಟಿದೆ. ಜೊತೆಗೆ ಇದು ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿಯೂ ಆಗಿದೆ.

ಗುರು ಗ್ರಹ ಸುಮಾರು 1 ವರ್ಷಗಳ ಕಾಲ ರಾಶಿಯ ಮೂಲಕ ಪ್ರಯಾಣಿಸುತ್ತದೆ. ಅಂದರೆ ರಾಶಿಯಿಂದ ಹೊರಬರಲು ಅದು 12 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಗುರು ಗ್ರಹ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುವುದರ ಜೊತೆಗೆ 3 ತಿಂಗಳಿಗೊಮ್ಮೆ ನಕ್ಷತ್ರವನ್ನು ಬದಲಾಯಿಸುತ್ತದೆ. ಗುರು ಗ್ರಹ ರೋಹಿಣಿ ನಕ್ಷತ್ರದಲ್ಲಿ ಸಂಚರಿಸಿ ಆಗಸ್ಟ್ 20ರಿಂದ ಮೃಗಶಿರಾ ನಕ್ಷತ್ರದಲ್ಲಿ ಸಾಗುತ್ತಿದೆ.

ಅದು ನವೆಂಬರ್ 28 ರವರೆಗೆ ಈ ನಕ್ಷತ್ರದಲ್ಲಿ ಇರಲಿದೆ. ಮೃಗಶಿರಾ ನಕ್ಷತ್ರದ ಅಧಿಪತಿ ಮಂಗಳ ಗ್ರಹವಾಗಿದೆ. ಈ ಮಂಗಳ ಧೈರ್ಯ, ಶೌರ್ಯ ಮತ್ತು ಶಕ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಗುರು ಮೃಗಶಿರಾ ನಕ್ಷತ್ರಕ್ಕೆ ತೆರಳುವುದರಿಂದ ಕೆಲವು ರಾಶಿಯವರು ತುಂಬಾ ಅದೃಷ್ಟಶಾಲಿಯಾಗಿರುತ್ತಾರೆ. ಹಾಗಾದರೆ ಈಗ ಆ ಅದೃಷ್ಟದ ರಾಶಿಗಳು ಯಾರೆಂದು ತಿಳಿಯೋಣ.

Jupiter nakshatra transit 2024 these zodiac signs will get more benefits in kannada

ಮೇಷ ರಾಶಿ

ಮೇಷ ರಾಶಿಯವರಿಗೆ ಗುರು ನಕ್ಷತ್ರದ ಸಂಕ್ರಮಣವು ಬಹಳಷ್ಟು ಯಶಸ್ಸನ್ನು ತರುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಮೇಷ ರಾಶಿಯವರು ಪಡೆಯುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ.

ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಹೊಸ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ. ಈ ಅವಧಿಯಲ್ಲಿ ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಳವಾಗಲಿದೆ. ನೀವು ಸಾಕಷ್ಟು ಹಣವನ್ನು ಗಳಿಸುವ ಅವಕಾಶವನ್ನು ಪಡೆಯುತ್ತೀರಿ. ಸಂಗಾತಿಯೊಂದಿಗಿನ ಸಂಬಂಧ ಆಹ್ಲಾದಕರವಾಗಿರುತ್ತದೆ.

Jupiter nakshatra transit 2024 these zodiac signs will get more benefits in kannada

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಗುರು ನಕ್ಷತ್ರದ ಸಂಚಾರದಿಂದ ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ ಮತ್ತು ಪ್ರಗತಿಗೆ ಅವಕಾಶಗಳಿವೆ. ಜೀವನ ಸುಖಮಯವಾಗಿರುತ್ತದೆ. ಹೂಡಿಕೆಯಿಂದ ಉತ್ತಮ ಲಾಭ ಸಿಗಲಿದೆ.

ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. ವ್ಯಾಪಾರಿಗಳು ತಮ್ಮ ಪ್ರತಿಸ್ಪರ್ಧಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಾರೆ. ಉತ್ತಮ ಲಾಭವನ್ನು ಗಳಿಸುತ್ತಾರೆ. ಬಹಳಷ್ಟು ಹಣವನ್ನು ಉಳಿಸಬಹುದು. ಆರೋಗ್ಯವೂ ಉತ್ತಮವಾಗಿರುತ್ತದೆ.

Jupiter nakshatra transit 2024 these zodiac signs will get more benefits in kannada

ವೃಶ್ಚಿಕ ರಾಶಿ

ಗುರು ನಕ್ಷತ್ರದ ಸಂಚಾರದಿಂದ ವೃಶ್ಚಿಕ ರಾಶಿಯವರಿಗೆ ಜೀವನ ತುಂಬಾ ಸಂತೋಷಕರವಾಗಿರುತ್ತದೆ. ನೀವು ಅನೇಕ ಹೊಸ ಸ್ನೇಹಿತರನ್ನು ಮಾಡಿಕೊಳ್ಳುತ್ತೀರಿ. ಆ ಸ್ನೇಹಿತರಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳ ಸಂಪೂರ್ಣ ಬೆಂಬಲದೊಂದಿಗೆ ನೀವು ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ.

ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಆಗಾಗ ಸಣ್ಣಪುಟ್ಟ ತೊಂದರೆಗಳನ್ನು ಹೊರತುಪಡಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+