ಸೊಂಟದ ಕೆಳ ಭಾಗದಲ್ಲಿ ವೃಶ್ಚಿಕ ರಾಶಿ ಸ್ತ್ರೀಯರ ಆ ಕ್ಷಣದ ಮೂಡ್

Posted By: ರಮಾಕಾಂತ್
Subscribe to Oneindia Kannada

ಗಂಡು- ಹೆಣ್ಣು ಈ ಸೃಷ್ಟಿ ಕ್ರಿಯೆಯಲ್ಲಿ ಅತಿ ಮುಖ್ಯ. ಇಬ್ಬರ ಮಧ್ಯೆ ಹೊಂದಾಣಿಕೆ ಎಂಬುದು ಎಷ್ಟು ಚೆನ್ನಾಗಿರುತ್ತದೋ ಬದುಕು ಕೂಡ ಅಷ್ಟೇ ಚೆನ್ನಾಗಿ ನಡೆಸಿಕೊಂಡು ಹೋಗಲು ನೆರವಾಗುತ್ತದೆ. ಈ ವಿಚಾರದಲ್ಲಿ ಮನಸ್ಸು ಹಾಗೂ ದೇಹ ಎರಡೂ ಮುಖ್ಯ. ಪರಸ್ಪರರು ಮಾನಸಿಕವಾಗಿ ಒಬ್ಬರನ್ನೊಬ್ಬರು ಅರಿತಿರಬೇಕು. ಅದೇ ವೇಳೆ ದೈಹಿಕವಾಗಿಯೂ ಪರಸ್ಪರರ ಆದ್ಯತೆಗಳನ್ನು ತಿಳಿದುಕೊಳ್ಳಬೇಕು.

ಮದುವೆ ಸಂದರ್ಭದಲ್ಲಿ ಗುಣ-ಕೂಟಗಳು ಕೂಡಿ ಬರುತ್ತವಾ ಎಂದು ಜ್ಯೋತಿಷಿಗಳ ಬಳಿ ಕೇಳುತ್ತಾರಲ್ಲಾ ಹಾಗೆ ಕೇಳುವುದರ ಹಿಂದಿನ ಕಾರಣಗಳಲ್ಲಿ ಇವೆಲ್ಲ ಒಳಗೊಂಡಿರುತ್ತವೆ. ಗಂಡ- ಹೆಂಡತಿ ಪರಸ್ಪರ ಅರಿತು ಮುಂದೆ ಬಾಳ್ವೆ ನಡೆಸುತ್ತಾರಾ, ಪರಸ್ಪರರ ಲೈಂಗಿಕ ಆಸಕ್ತಿಗಳು ಹೊಂದಿಕೆ ಆಗುವಂತೆ ಇರುತ್ತವಾ ಎಂಬುದನ್ನು ಜ್ಯೋತಿಷ್ಯದ ಮೂಲಕ ತಿಳಿಯುವ ಸನ್ನಿವೇಶ ಅದು.

ಹನ್ನೆರಡು ರಾಶಿಗಳ ಮದುವೆ, ಲವ್ ಭವಿಷ್ಯ 2018

ದ್ವಾದಶ ಕೂಟಗಳು ಎಂದು ಕರೆಸಿಕೊಳ್ಳುವುದರಲ್ಲಿ ಯೋನಿ ಕೂಟ ಎಂಬುದು ಕೂಡ ಒಂದು. ಆಯಾ ನಕ್ಷತ್ರಕ್ಕೆ ಇಂಥ ಯೋನಿ ಕೂಟ ಎಂಬುದು ಇರುತ್ತದೆ. ಗಂಡು- ಹೆಣ್ಣಿನ ಯೋನಿ ಕೂಟ ಪರಸ್ಪರ ವೈರಿ ಆಗಿದ್ದರೆ, ಅಂಥ ಇಬ್ಬರ ಮಧ್ಯೆ ಮದುವೆಯಾದರೆ ಸಾಂಸಾರಿಕ ಸುಖ ದೊರೆಯುವುದಿಲ್ಲ ಅಥವಾ ಸಾಮರಸ್ಯ ಇರುವುದಿಲ್ಲ. ಇನ್ನು ಈ ಲೇಖನದಲ್ಲಿ ವೃಶ್ಚಿಕ ರಾಶಿಯ ಸ್ತ್ರೀಯನ್ನು ಉತ್ತೇಜಿಸುವ ಬಗೆಯನ್ನು ಜ್ಯೋತಿಷ್ಯ ರೀತ್ಯಾ ತಿಳಿಸಲಾಗುತ್ತಿದೆ.

ಹುಲಿ ಹಾಗೂ ಜಿಂಕೆ

ಹುಲಿ ಹಾಗೂ ಜಿಂಕೆ

ವಿಶಾಖಾ ನಕ್ಷತ್ರದ ಮೂರು, ನಾಲ್ಕನೇ ಪಾದ, ಅನೂರಾಧಾ ನಕ್ಷತ್ರದ ನಾಲ್ಕು ಪಾದ ಹಾಗೂ ಜ್ಯೇಷ್ಠಾ ನಕ್ಷತ್ರದ ನಾಲ್ಕು ಪಾದ ಸೇರಿ ವೃಶ್ಚಿಕ ರಾಶಿ ಆಗುತ್ತದೆ. ವಿಶಾಖಾ ನಕ್ಷತ್ರಕ್ಕೆ ಯೋನಿ ಕೂಟ ಹುಲಿ, ಅನೂರಾಧಾ ಹಾಗೂ ಜ್ಯೇಷ್ಠಾ ನಕ್ಷತ್ರಕ್ಕೆ ಹುಲ್ಲೆ (ಜಿಂಕೆ) ಯೋನಿ ಕೂಟವಾಗುತ್ತದೆ.

ನಿರಾಸೆ ಮಾಡುವುದಿಲ್ಲ

ನಿರಾಸೆ ಮಾಡುವುದಿಲ್ಲ

ವೃಶ್ಚಿಕ ರಾಶಿಯ ಸ್ತ್ರೀಯರ ಲೈಂಗಿಕ ಆಸಕ್ತಿಯನ್ನು ಉದ್ರೇಕಿಸುವುದಕ್ಕೆ ಬಹಳ ಶ್ರಮದ ಅಗತ್ಯವಿಲ್ಲ. ಏಕೆಂದರೆ ದಾಂಪತ್ಯದಲ್ಲಿ ಇದರ ಅಗತ್ಯ ಎಷ್ಟು ಎಂಬುದನ್ನು ಈ ರಾಶಿಯ ಸ್ತ್ರೀಯರು ಚೆನ್ನಾಗಿ ಬಲ್ಲರು. ಆದ್ದರಿಂದ ಗಂಡನಿಗೆ ಯಾವ ಕಾರಣಕ್ಕೂ ನಿರಾಸೆ ಆಗುವುದಿಲ್ಲ. ಈ ರಾಶಿಯ ಸ್ತ್ರೀಯರು ಆಕ್ರಮಣಕಾರಿ ಧೋರಣೆ ಹೊಂದಿರುತ್ತಾರೆ.

ಲಯಕ್ಕೆ ಬಂದ ಮೇಲೆ ಡ್ರೈವಿಂಗ್ ಸೀಟ್ ನಲ್ಲಿ

ಲಯಕ್ಕೆ ಬಂದ ಮೇಲೆ ಡ್ರೈವಿಂಗ್ ಸೀಟ್ ನಲ್ಲಿ

ಸಿಟ್ಟಾದರೆ ಕುಟುಕುವುದು ಈ ರಾಶಿಯ ಸ್ವಭಾವ. ಸೊಂಟದಿಂದ ಕೆಳ ಭಾಗ ಈ ರಾಶಿಯ ಸ್ತ್ರೀಯರ ಉದ್ದೀಪನಗೊಳಿಸುವ ಸ್ಥಳವಾಗಿರುತ್ತದೆ. ಸೊಂಟದ ಕೆಳಗೆ ಮಸಾಜ್ ಮಾಡುತ್ತಾ ಸಾಗಿದಂತೆ ಮುಂದಿನ ಕ್ರಿಯೆಗೆ ಸಜ್ಜಾಗುತ್ತಾರೆ ಈ ಸ್ತ್ರೀಯರು. ಒಮ್ಮೆ ಲಯಕ್ಕೆ ಬಂದ ಮೇಲೆ ಡ್ರೈವಿಂಗ್ ಸೀಟ್ ನಲ್ಲಿ ಅವರೇ ಬಂದರೂ ಅಚ್ಚರಿ ಬೇಡ.

ಅನುಮಾನ ಮೂಡದಂತೆ ವರ್ತಿಸಿ

ಅನುಮಾನ ಮೂಡದಂತೆ ವರ್ತಿಸಿ

ಈ ವಿಚಾರದಲ್ಲಿ ವೃಶ್ಚಿಕ ರಾಶಿಯ ಸ್ತ್ರೀಯರಿಗೆ ನಿಯಮಗಳು ಇಷ್ಟವಾಗುವುದಿಲ್ಲ. ಆದರೆ ಅವರನ್ನು ಹಂಗಿಸಿದಿರೋ ಅಥವಾ ಮೂದಲಿಸಿದರೋ ಅಲ್ಲಿಗೆ ಅಂದಿನ ಆಟ ಬಂದ್ ಆಗಿ ಬಿಡುತ್ತದೆ. ಇವರೆದುರು ಹಳೆ ವಿಚಾರಗಳನ್ನು ಎಳೆಯಬೇಡಿ. ಸಣ್ಣ ಅನುಮಾನ ಕೂಡ ಬರದಂತೆ ವರ್ತಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is an article about Scorpio zodiac sign woman sensual behavior and tips to how to induce them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ