Guru Uday 2024: ವೃಷಭ ರಾಶಿಯಲ್ಲಿ ಗುರು ಉದಯ 2024: ಈ 3 ರಾಶಿಗಳ ಸಂಪತ್ತು ಮುಂದಿನ 1 ವರ್ಷದಲ್ಲಿ ಹೆಚ್ಚಳ...

ಗ್ರಹಗಳು ಸಂಚಾರದ ವೇಳೆ ನಿರ್ಧಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ರಾಶಿಯಲ್ಲಿ ಹಿಮ್ಮುಖವಾಗಿ, ವಕ್ರವಾಗಿ ಸಂಚಾರ ಮಾಡುವುದಲ್ಲದೆ ಕೆಲ ಬಾರಿ ಉದಯಿಸುತ್ತವೆ. ಹೀಗೆ ಗ್ರಹಗಳ ಸ್ಥಾನಗಳು ಅಥವಾ ಚಲನೆಗಳಲ್ಲಿನ ಬದಲಾವಣೆಗಳ ಪ್ರಭಾವವನ್ನು ಎಲ್ಲಾ ರಾಶಿಗಳ ಜೀವನದಲ್ಲಿ ಕಾಣಬಹುದು.

ಶುಭ ಗ್ರಹವಾದ ಗುರು ಪ್ರಸ್ತುತ ವೃಷಭರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಇದು ಜೂನ್ ತಿಂಗಳ ಆರಂಭದಲ್ಲಿ ಉದಯಿಸಲಿದೆ. ಇದರಿಂದ ಗುರು ಗ್ರಹ ಇದುವರೆಗೆ ನೀಡಿದ ಅನುಗ್ರಹದಲ್ಲಿನ ಅಡೆತಡೆಗಳು ದೂರವಾಗುತ್ತವೆ. ಮುಖ್ಯವಾಗಿ ಅದೃಷ್ಟದ ಬೆಂಬಲ ಸಿಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಏರಿಕೆ ಕಂಡುಬರಲಿದೆ. ಈಗ ಗುರು ದೇವ ವೃಷಭರಾಶಿಯಲ್ಲಿ ಉದಯಿಸುವುದರಿಂದ ಯಾರಿಗೆ ಲಾಭವಾಗಲಿದೆ ಎಂದು ತಿಳಿಯೋಣ.

Guru uday 2024 jupiter rise in taurus 2024 these zodiac signs wealth will increase in kannada

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ 7ನೇ ಮನೆಯಲ್ಲಿ ಗುರು ಉದಯಿಸುತ್ತದೆ. ಈ ಕಾರಣದಿಂದಾಗಿ ವೃಶ್ಚಿಕ ರಾಶಿಯವರ ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ. ಪ್ರೀತಿಯ ಜೀವನ ಎಂದಿಗಿಂತಲೂ ಉತ್ತಮವಾಗಿರುತ್ತದೆ. ಅಲ್ಲದೆ ಇದು ವಿದ್ಯಾರ್ಥಿಗಳಿಗೆ ಉತ್ತಮ ಸಮಯವಾಗಿದೆ. ಜಂಟಿ ಉದ್ಯಮಗಳು ಲಾಭವನ್ನು ತರುತ್ತವೆ.

ಅವಿವಾಹಿತರಿಗೆ ಅಂದುಕೊಂಡ ಜೀವನ ಸಂಗಾತಿ ದೊರೆಯಲಿದ್ದಾರೆ. ನೀವು ಉನ್ನತ ಶಿಕ್ಷಣವನ್ನು ಕಲಿಯಲು ಬಯಸಿದರೆ ನಿಮಗೆ ಅವಕಾಶಗಳು ಸಿಗುತ್ತವೆ. ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರಲಿದೆ. ಬಹುಕಾಲದ ಆಸೆಗಳು ಈಡೇರುತ್ತವೆ. ಒಟ್ಟಿನಲ್ಲಿ ಮುಂದಿನ 1 ವರ್ಷ ಅದ್ಭುತವಾಗಲಿದೆ.

Guru uday 2024 jupiter rise in taurus 2024 these zodiac signs wealth will increase in kannada

ಕನ್ಯಾ ರಾಶಿ

ಕನ್ಯಾ ರಾಶಿಯ 9ನೇ ಮನೆಯಲ್ಲಿ ಗುರು ಉದಯಿಸಲಿದ್ದಾನೆ. ಇದರಿಂದ ಈ ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ನೀವು ಈ ಸಮಯದಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತೀರಿ.

ಬಹಳ ದಿನಗಳಿಂದ ಬಾಕಿಯಿದ್ದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇದು ಅಧಿಕ ಲಾಭವನ್ನು ತರುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆಗಳು ಈಡೇರುತ್ತವೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಳ ಇತ್ಯಾದಿಗಳು ದೊರೆಯುತ್ತವೆ.

Guru uday 2024 jupiter rise in taurus 2024 these zodiac signs wealth will increase in kannada

ಮಕರ ರಾಶಿ

ಗುರು ಮಕರ ರಾಶಿಯ 5ನೇ ಮನೆಯಲ್ಲಿ ಉದಯಿಸುತ್ತದೆ. ಆದ್ದರಿಂದ ಈ ರಾಶಿಯವರು ಮಗುವಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳು ಮೊದಲಿಗಿಂತ ಉತ್ತಮವಾಗಿ ಓದುತ್ತಾರೆ. ನೀವು ವಿದೇಶಕ್ಕೆ ಹೋಗಲು ಬಯಸಿದರೆ, ಅದು ನೆರವೇರುತ್ತದೆ.

ಮುಂದಿನ ಒಂದು ವರ್ಷದಲ್ಲಿ ನೀವು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಜ್ಯೋತಿಷಿಗಳು, ಲೇಖಕರು, ಭಾಷಣಕಾರರು, ಚಿಂತಕರು ಇತರರಿಗೆ ಗುರು ಉದಯದಿಂದ ಸಾಕಷ್ಟು ಲಾಭ ಸಿಗಲಿದೆ. ದುಡಿಯುವ ಜನರಿಗೆ ಗಳಿಕೆ ಹೆಚ್ಚಾಗುತ್ತದೆ. ಪರಿಣಾಮವಾಗಿ ಸಂಪತ್ತು ಹೆಚ್ಚಾಗುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+