12 ವರ್ಷಗಳ ನಂತರ ಗುರು ಆದಿತ್ಯ ರಾಜ ಯೋಗ: ಬದಲಾಗುವುದು ಈ 4 ರಾಶಿಯವರ ಜೀವನದ ದಿಕ್ಕು, ಕೈಯ್ಯಲ್ಲಿ ನಲಿದಾಡುವಳು ಲಕ್ಷ್ಮೀ

ಸೂರ್ಯ ಮತ್ತು ಗುರು ಒಂದೇ ರಾಶಿಯಲ್ಲಿ ಸಾಗುವಾಗ, ಗುರು ಆದಿತ್ಯ ರಾಜ ಯೋಗ ರೂಪುಗೊಳ್ಳುತ್ತದೆ. ಇದು ಅತ್ಯಂತ ಶುಭ ಯೋಗ. ಈ ಯೋಗವು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಈ ಅಪರೂಪದ ರಾಜಯೋಗವು ಚಂದ್ರನ ಅಧಿಪತ್ಯದ ಕರ್ಕ ರಾಶಿಯಲ್ಲಿ ರೂಪುಗೊಂಡಿದೆ. ಸೂರ್ಯನು ಆತ್ಮ ವಿಶ್ವಾಸ, ನಾಯಕತ್ವ, ಅಧಿಕಾರ ಮತ್ತು ಖ್ಯಾತಿಯ ಸಂಕೇತ. ಗುರುವನ್ನು ಜ್ಞಾನ, ಸಂಪತ್ತು, ಶುಭ ಫಲ ಮತ್ತು ಅದೃಷ್ಟದ ಸೂಚಕ ಎಂದು ಹೇಳಲಾಗುತ್ತದೆ. ಈ ಎರಡು ಶುಭ ಗ್ರಹಗಳ ಸಂಯೋಜನೆಯು ಕೆಲವು ರಾಶಿಯವರ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುವ ಸಾಧ್ಯತೆಯಿದೆ.

ಸೂರ್ಯ ಮತ್ತು ಗುರು ಪರಸ್ಪರ ಸ್ನೇಹಿತರಾಗಿರುವುದರಿಂದ, ಅವರ ಸಂಯೋಜನೆಯಿಂದ ರೂಪುಗೊಂಡ ಗುರು ಆದಿತ್ಯ ರಾಜ ಯೋಗವು ತುಂಬಾ ಶಕ್ತಿಶಾಲಿಯಾಗಿರುವುದು. ಈ ಯೋಗದ ಪ್ರಭಾವದಿಂದ, ಕೆಲವು ರಾಶಿಯವರು ವೃತ್ತಿ, ಉದ್ಯೋಗ, ವ್ಯವಹಾರ, ಹಣ ಮತ್ತು ಕುಟುಂಬ ಜೀವನದಲ್ಲಿ ಶುಭ ಫಲಗಳನದನೇ ಪಡೀತಾರೆ. ವಿಶೇಷವಾಗಿ, ನಾಲ್ಕು ರಾಶಿಯವರ ಜೀವನದ ದಿಕ್ಕನ್ನೇ ಬದಲಾಯಿಸುವ ರಾಜ ಯೋಗ ಇದಾಗಿರಲಿದೆ.

Guru Aditya Rajayoga

ಮೇಷ ರಾಶಿ (Aries) : ಈ ರಾಶಿಯವರಿಗೆ ಗುರು ಆದಿತ್ಯ ರಾಜಯೋಗವು ಅದೃಷ್ಟವನ್ನು ತರುವುದು. ಉದ್ಯೋಗದಲ್ಲಿ ಹೊಸ ಅವಕಾಶಗಳ ಜೊತೆಗೆ, ಬಡ್ತಿ ಪಡೆಯುವ ಸಾಧ್ಯತೆಯೂ ಇದೆ. ಉದ್ಯೋಗ ಬದಲಾಯಿಸುವ ಯೋಚನೆ ಇದ್ದರೆ ಇದು ಅನುಕೂಲಕರ ಸಮಯ. ಉದ್ಯಮಿಗಳು ಈ ಸಮಯದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದು. ಆರ್ಥಿಕವಾಗಿ ಗಟ್ಟಿಯಾಗುವಿರಿ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವ ಸೂಚನೆಗಳಿವೆ. ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಹೆಚ್ಚಾಗುವುದು. ತುಂಬಾ ಸಮಯದಿಂದ ಮನಸ್ಸಿನಲ್ಲಿರುವ ಆಸೆಗಳು ಈ ಅವಧಿಯಲ್ಲಿ ಈಡೇರುವುದು.

ಕರ್ಕಾಟಕ ರಾಶಿ (Cancer): ಈ ರಾಜಯೋಗವು ಕರ್ಕಾಟಕ ರಾಶಿಯಲ್ಲಿಯೇ ರೂಪುಗೊಳ್ಳುವುದರಿಂದ, ಈ ಅವಧಿಯನ್ನು ಅತ್ಯಂತ ಶುಭ ಎಂದು ಕರೆಯಲಾಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುವುದು. ನೀವು ಕೈ ಹಾಕುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುವುದು. ಮೇಲಧಿಕಾರಿಗಳು ನಿಮ್ಮ ಪ್ರತಿಭೆಯನ್ನು ಗುರುತಿಸುವರು. ಹಣದ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಬರುವುದು. ಆದಾಯ ಹೆಚ್ಚಾಗುವುದು. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ.

ವೃಶ್ಚಿಕ ರಾಶಿ (Scorpio): ಈ ಗ್ರಹಗಳ ಸಂಯೋಗವು ಅದೃಷ್ಟದ ಬಾಗಿಲುಗಳನ್ನು ತೆರೆಯುವುದು. ಉನ್ನತ ಶಿಕ್ಷಣ, ವಿದೇಶಿ ಉದ್ಯೋಗಗಳು ಅಥವಾ ವಿದೇಶ ಪ್ರಯಾಣದ ಅವಕಾಶಗಳು ಸಿಗುವುದು. ಹಿಂದೆ ಮಾಡಿದ ಹೂಡಿಕೆಗಳು ಈಗ ಉತ್ತಮ ಲಾಭವನ್ನು ನೀಡುವ ಸಾಧ್ಯತೆಯಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ಅನುಕೂಲಕರ ಸಮಯ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು.

ಮೀನ ರಾಶಿ (Pisces): ಈ ಗುರು ಆದಿತ್ಯ ರಾಜಯೋಗವು ನಿಮಗೆ ತುಂಬಾ ಅನುಕೂಲಕರವಾಗಿರುವುದು. ಬುದ್ಧಿವಂತಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದಿಂದ ಕಷ್ಟಕರವಾದ ಕೆಲಸಗಳನ್ನು ಕೂಡಾ ಸುಲಭವಾಗಿ ಮಾಡಿ ಮುಗಿಸುವಿರಿ. ಷೇರು ಮಾರುಕಟ್ಟೆಯಿಂದ ಲಾಭವಾಗುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಲಾಭವಾಗುವುದು. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯವಾಗಿರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಅವಕಾಶಗಳು ಸಿಗುವುದು. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಗುರು ಆದಿತ್ಯ ರಾಜಯೋಗವು ಈ ನಾಲ್ಕು ರಾಶಿಯವರಿಗೆ ವೃತ್ತಿ, ಹಣ, ಕುಟುಂಬ ಜೀವನ, ಶಿಕ್ಷಣ, ವೈಯಕ್ತಿಕ ಅಭಿವೃದ್ಧಿ ಹೀಗೆ ಎಲ್ಲಾ ಹಂತಗಳಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದು. ಈ ಅವಧಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ, ಅದೃಷ್ಟ ನಿಮ್ಮ ಬೆನ್ನ ಹಿಂದಿರುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿದಿನ ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಸೂರ್ಯ ದೇವರಿಗೆ ನೀರು ಅರ್ಪಿಸಿದರೆ ಮಾಡುವ ಕೆಲಸ ಕಾರ್ಯಗಳು ಕೈ ಹಿಡಿಯುವುದು. ಗುರುವಾರ ರಾಘವೇಂದ್ರ ಸ್ವಾಮಿ, ಶಿರಡಿ ಸಾಯಿಬಾಬಾ ಅವರನ್ನು ಭಕ್ತಿಯಿಂದ ಪೂಜಿಸುವುದರಿಂದ ಗುರುಗ್ರಹದ ಆಶೀರ್ವಾದ ದೊರೆಯುತ್ತದೆ. ಹಳದಿ ಬಟ್ಟೆಗಳನ್ನು ಧರಿಸುವುದು, ಹಳದಿ ಹೂವುಗಳಿಂದ ಪೂಜಿಸುವುದು ಮತ್ತು ನಿರ್ಗತಿಕರಿಗೆ ದಾನ ಮಾಡುವುದರಿಂದ ಅದೃಷ್ಟ ಇನ್ನೂ ಹೆಚ್ಚಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+