Gemstone Astrology: ಈ ರಾಶಿಯವರು ಮುತ್ತು ಧರಿಸಿದರೆ ಅದೃಷ್ಟವೋ ಅದೃಷ್ಟ : ಧರಿಸೋ ಮುನ್ನ ಈ ವಿಷ್ಯ ಗೊತ್ತಿರಲಿ

ರತ್ನಶಾಸ್ತ್ರದಲ್ಲಿ ಒಂಭತ್ತು ರತ್ನಗಳ ಬಗ್ಗೆ ಹೇಳಲಾಗಿದೆ. ಅವುಗಳೆಂದರೆ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲಮಣಿ, ಗೋಮೇಧಿಕ ಮತ್ತು ವೈಢೂರ್ಯ. ಈ ಎಲ್ಲಾ ರತ್ನವೂ ಒಂದು ನಿರ್ದಿಷ್ಟ ಗ್ರಹಕ್ಕೆ ಸಂಬಂಧಿಸಿದೆ. ಮಾತ್ರವಲ್ಲ ಪ್ರತಿಯೊಂದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಮುತ್ತು ಚಂದ್ರನಿಗೆ ಸಂಬಂಧಿಸಿದ ಹರಳು.

ಜನ್ಮ ರಾಶಿ ಬಹಳ ಮುಖ್ಯ:

ರತ್ನಶಾಸ್ತ್ರದಲ್ಲಿ (Gem Astrology) ಹೇಳಿರುವ ಹಾಗೆ ಮುತ್ತು ಅಥವಾ ಮುತ್ತಿನಿಂದ ಮಾಡಿದ ಆಭರಣವನ್ನು ಧರಿಸುವುದರಿಂದ ತುಂಬಾ ಪ್ರಯೋಜನ ಇದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ಹಾಗಂತ ಯಾರು ಬೇಕು ಅವರು ಮುತ್ತು ಧರಿಸಿದ ಕೂಡಲೇ ಐಶ್ವರ್ಯ ಸಿಗಲ್ಲ. ಅದಕ್ಕೂ ಒಂದು ನಿಯಮ ಇದೆ. ಈ ನಿಯಮಕ್ಕೆ ಅನುಸಾರವಾಗಿ ಧರಿಸಿದಾಗ ಮಾತ್ರ ಅದರಿಂದ ಸಿಗಬಹುದಾದ ಫಲ ಸಿಗೋದು.

Gemstone Astrology Which Zodiac Sign Should Wear Pearl To Get Good Luck And Success Who Should Avoid

ರಾಶಿಗನುಗುಣವಾಗಿ (Zodiac Sign) ಯಾವ ರಾಶಿಯವರು ಯಾವ ರತ್ನ ಅಥವಾ ಹರಳು ಧರಿಸಬೇಕು ಎನ್ನುವ ವಿಚಾರ ಕೂಡಾ ಈ ರತ್ನಶಾಸ್ತ್ರದಲ್ಲಿ ಇದೆ. ಹಾಗಾಗಿ ಮುತ್ತು ಧರಿಸುವಾಗ ನಿಮ್ಮ ಜನ್ಮ ರಾಶಿ ಯಾವುದು ಎನ್ನುವುದನ್ನು ನೋಡಿಕೊಳ್ಳಿ.

ಯಾವ ರಾಶಿಯವರು ಮುತ್ತು ಧರಿಸಿದರೆ ಶುಭ?

ಮೊದಲೇ ಹೇಳಿದ ಹಾಗೆ ರಾಶಿಗನುಗುಣವಾಗಿ ಮುತ್ತು (Pearl) ಧರಿಸಿದರೆ ಮಾತ್ರ ಅದು ಶುಭ ಫಲ ಕೊಡುವುದು. ಇಲ್ಲವಾದರೆ ಒಂದು ಹೋಗಿ ಮತ್ತೊಂದು ಆಗಬಹುದು. ನಿಮ್ಮ ಸ್ನೇಹಿತರಿಗೆ ಮುತ್ತು ಧರಿಸಿದ ಮೇಲೆ ಅದೃಷ್ಟ ಒಲಿಯಿತು ಎಂದು ನೀವು ಕೂಡಾ ಧರಿಸಿಕೊಂಡರೆ ಅದೃಷ್ಟದ ಬದಲು ದುರಾದೃಷ್ಟ ಬೆನ್ನು ಬೀಳಬಹುದು. ಮನಸ್ಸಿನ ನೆಮ್ಮದಿ ಕೆಡಬಹುದು. ಇನ್ನು ನಿಯಮ ಪ್ರಕಾರ ಮೇಷ, ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರು ಮಾತ್ರ ಮುತ್ತು ಅಥವಾ ಮುತ್ತಿನಿಂದ ಮಾಡಿದ ಆಭರಣ ಧರಿಸಬೇಕು. ಅವರಿಗೆ ಮುತ್ತು ಅದೃಷ್ಟ ರತ್ನ. ಇವರು ಚಿನ್ನದಲ್ಲಿಯೋ, ಬೆಳ್ಳಿಯಲ್ಲಿಯೋ ಕಟ್ಟಿ ಮುತ್ತನ್ನು ಧರಿಸಿಕೊಂಡರೆ ಭಾಗ್ಯ ಬೆಳಗುವುದು ಗ್ಯಾರಂಟಿ ಎನ್ನುವುದು ನಂಬಿಕೆ.

ಯಾರು ಮುತ್ತು ಧರಿಸಬಾರದು?

ಸಿಂಹ, ತುಲಾ ಮತ್ತು ಧನು ರಾಶಿಯವರು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮುತ್ತಿನ ಆಭರಣ ಧರಿಸಬಹುದು. ನಿತ್ಯ ಇವರ ಮೈ ಮೇಲೆ ಮುತ್ತಿನ ಒಡವೆ ಇರುವಂತಿಲ್ಲ ಎನ್ನುತ್ತದೆ ನಿಯಮ. ಇನ್ನು ವೃಷಭ, ಮಿಥುನ, ಕನ್ಯಾ, ಮಕರ, ಕುಂಭ ರಾಶಿಯವರು ಯಾವುದೇ ಕಾರಣಕ್ಕೂ ಮುತ್ತನ್ನು ಧರಿಸಲೇ ಬಾರದು. ಇವರು ಮುತ್ತು ಧರಿಸಿದರೆ ದುರಾದೃಷ್ಟ ಬೆನ್ನು ಹತ್ತಿದ ಹಾಗೆಯೇ. ಸಮಸ್ಯೆಗಳ ಸರಮಾಲೆ ಬೆನ್ನು ಬೀಳುವುದು.

ಮುತ್ತು ಧರಿಸುವುದು ಹೇಗೆ?

ರತ್ನಶಾಸ್ತ್ರದ ಪ್ರಕಾರ, ಶುಕ್ಷ ಪಕ್ಷದ ಸೋಮವಾರ ರಾತ್ರಿ ಮುತ್ತು ಧರಿಸಬೇಕು. ಬೆಳ್ಳಿಯಲ್ಲಿ ಕಟ್ಟಿದ ಮುತ್ತಿನ ಉಂಗುರವನ್ನು ಕಿರುಬೆರಳಿಗೆ ಹಾಕಬೇಕು. ಹುಣ್ಣಿಮೆ ದಿನ ಕೂಡಾ ಇದನ್ನು ಧರಿಸಿದರೆ ಒಳ್ಳೆಯದು ಎಂದು ಹೇಳುವವರಿದ್ದಾರೆ. ಈ ಉಂಗುರವನ್ನು ಧರಿಸುವ ಮೊದಲು ನೀರಿನಿಂದ ತೊಳೆದು ಶುದ್ದ ಮಾಡಬೇಕು. ಇದನ್ನು ಮೊದಲು ಶಿವನಿಗೆ ಅರ್ಪಿಸಬೇಕು. ನಂತರ ನಿಮ್ಮ ಬೆರಳಿಗೆ ಹಾಕಿಕೊಳ್ಳಬೇಕು.

ಮುತ್ತುಗಳನ್ನು ಧರಿಸುವುದರಿಂದ ಏನು ಪ್ರಯೋಜನ :

ರತ್ನಶಾಸ್ತ್ರದ ಪ್ರಕಾರ, ಮುತ್ತು ಧರಿಸುವುದರಿಂದ ಮನಸ್ಸಿನ ನೆಮ್ಮದಿ ಹೆಚ್ಚಾಗುತ್ತದೆ. ಮನಸ್ಸು ಯಾವಾಗಲೂ ಶಾಂತವಾಗಿ ಇರುತ್ತದೆ. ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುವವರ ಕೋಪ ಕಂಟ್ರೋಲ್‌ಗೆ ಸಿಗುತ್ತದೆ. ಮುತ್ತು ಧರಿಸುವುದರಿಂದ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+