Ugadi Horoscope 2025: ಮಿಥುನ ರಾಶಿಯ ಯುಗಾದಿ ಜಾತಕ- ನಿಮ್ಮ ಕಣ್ಣೀರಿಗೆ ಪೂರ್ಣ ವಿರಾಮ

ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ. ಯುಗಾದಿ ಹಬ್ಬವನ್ನು ಇದೇ ತಿಂಗಳು ಮಾರ್ಚ್ 30ರಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಹೊಸ ಚಿಗುರು ಬರುವ ಈ ದಿನದಿಂದ ಶೋಭಾಕೃತಿ ನಾಮ ಸಂವತ್ಸರ ಕಳೆದು ವಿಶ್ವವಸು ನಾಮ ಸಂವತ್ಸರ ಪ್ರಾರಂಭವಾಗುತ್ತದೆ. ಹಾಗಾದರೆ ಈ ಶುಭ ಸಂದರ್ಭದಲ್ಲಿ ಮಿಥುನ ರಾಶಿಯ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಗ್ರಹಗಳ ಸ್ಥಾನಪಲ್ಲಟ

2025-26ರ ಮಧ್ಯದಲ್ಲಿ ಅಂದರೆ ಮಾರ್ಚ್‌ ತಿಂಗಳಲ್ಲಿ ಶನಿ ದೇವ ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಗುರು ಮೇ ತಿಂಗಳಲ್ಲಿ ವೃಷಭ ರಾಶಿಯಿಂದ ಮಿಥುನ ರಾಶಿಗೆ ಸಂಚಾರ ಮಾಡಲಿದ್ದಾನೆ. ಇದೇ ರೀತಿ ರಾಹು ಕೇತುಗಳು ಸಹ ಐದನೇ ತಿಂಗಳು ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಈ ರಾಶಿಗಳ ಬದಲಾವಣೆ ಫಲ ಮಿಥುನ ರಾಶಿಯವರ ಜೀವನದ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂದು ತಿಳಿಯೋಣ.

Gemini ugadi horoscope 2025 mithuna rashi bhavishya astrology predictions kannada

ಮಿಥುನ ರಾಶಿಯ ಯುಗಾದಿ ಆರ್ಥಿಕ ಭವಿಷ್ಯ

ಮಿಥುನ ರಾಶಿಯವರು ಯುಗಾದಿಯ ನಂತರ ತಮ್ಮ ಹಣಕಾಸಿನ ವಿಷಯಗಳನ್ನು ಎಚ್ಚರಿಕೆಯಿಂದ ಯೋಜಿಸಬೇಕು. ಆರ್ಥಿಕ ಸ್ಥಿರತೆಯನ್ನು ಸಾಧಿಸಲು ನೀವು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು. ನೀವು ಅಗತ್ಯ ಖರ್ಚು ಮಾಡಿದರೆ, ನೀವು ಆದಾಯವನ್ನು ಹೆಚ್ಚಿಸಬೇಕಾಗುತ್ತದೆ. ಆದರೆ ಅದರಲ್ಲಿ ಗಮನಾರ್ಹ ಹೆಚ್ಚಳ ಸಾಧ್ಯವಿಲ್ಲ.

ಮಿಥುನ ರಾಶಿಯ ಯುಗಾದಿ ಕೌಟುಂಬಿಕ ಜಾತಕ

ಯುಗಾದಿಯ ನಂತರ ನಿಮ್ಮ ಕುಟುಂಬ ಸಂಬಂಧಗಳು ಸುಧಾರಿಸಲಿವೆ. ನಿಮ್ಮ ಕುಟುಂಬ ಸದಸ್ಯರ ಬಗ್ಗೆ ನಿಮಗೆ ಉತ್ತಮ ತಿಳುವಳಿಕೆ ಬರಲಿದೆ. ಈ ಸಮಯದಲ್ಲಿ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯರು ಸೇರ್ಪಡೆಯಾಗಲಿದ್ದಾರೆ. ಕೆಲಸದಲ್ಲಿ ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವಿರಿ. ನಿಮ್ಮ ಕುಟುಂಬದ ವಾತಾವರಣ ಆಹ್ಲಾದಕರವಾಗಿರುತ್ತದೆ.

Gemini ugadi horoscope 2025 mithuna rashi bhavishya astrology predictions kannada

ಮಿಥುನ ರಾಶಿಯ ಯುಗಾದಿ ಶೈಕ್ಷಣಿಕ ಜಾತಕ

ಈ ರಾಶಿಯ ಜನರು ಯುಗಾದಿಯ ನಂತರ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಹೊಸ ಕೋರ್ಸ್‌ಗಳು, ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ವಿದ್ಯಾರ್ಥಿಗಳು ವಿಶೇಷವಾಗಿ ತಮ್ಮ ಅಧ್ಯಯನದ ಮೇಲೆ ಗಮನ ಹರಿಸಬೇಕು. ನೀವು ಎಲ್ಲಾ ಕೋರ್ಸ್‌ಗಳಲ್ಲಿ ಉತ್ತಮವಾಗಿ ವಿದ್ಯಾಬ್ಯಾಸ ಮಾಡುವಿರಿ. ಈ ರಾಶಿಯವ ವಿದ್ಯಾರ್ಥಿಗಳು ಸಂವಹನ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಈ ಅವಧಿಯಲ್ಲಿ ನೀವು ವಿದೇಶದಲ್ಲಿ ಅಧ್ಯಯನ ಮಾಡಲು ಅವಕಾಶಗಳನ್ನು ಪಡೆಯಬಹುದು.

ಮಿಥುನ ರಾಶಿಯ ಯುಗಾದಿ ವೃತ್ತಿ ಭವಿಷ್ಯ

ಯುಗಾದಿ ಹಬ್ಬದ ನಂತರ ಮಿಥುನ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿ ಸಾಧಿಸುತ್ತಾರೆ. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಪಡೆಯುತ್ತಾರೆ. ನೀವು ಕೆಲಸದಲ್ಲಿ ತುಂಬಾ ಹೆಸರು ಮಾಡುವಿರಿ. ಈ ಅವಧಿಯಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಹೊಸ ಉದ್ಯೋಗಾವಕಾಶಗಳು ಬರಬಹುದು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಲ್ಲಾ ವಿಷಯಗಳನ್ನು ಪರಿಗಣಿಸುವುದು ಉತ್ತಮ.

Gemini ugadi horoscope 2025 mithuna rashi bhavishya astrology predictions kannada

ಮಿಥುನ ರಾಶಿಯ ಯುಗಾದಿ ಆರೋಗ್ಯ ಭವಿಷ್ಯ

ಈ ರಾಶಿಯ ಜನರು ಯುಗಾದಿಯ ನಂತರ ಉತ್ತಮ ಆರೋಗ್ಯ ಪಡೆಯುತ್ತಾರೆ. ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೂ ಕೂಡ ಅವು ದೂರವಾಗುತ್ತವೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಅಲ್ಲದೆ, ನಿಯಮಿತವಾಗಿ ವ್ಯಾಯಾಮ ಮಾಡಿ. ಅದೇ ರೀತಿ ನೀವು ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ವರ್ಷ ನೀವು ಕೆಲವೊಮ್ಮೆ ಶೀತ, ಕೆಮ್ಮು ಅಥವಾ ತಲೆನೋವಿನಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.

ಮಿಥುನ ರಾಶಿಯ ಯುಗಾದಿ ದಾಂಪತ್ಯ ಭವಿಷ್ಯ

ಅವಿವಾಹಿತ ಮಿಥುನ ರಾಶಿಯವರಿಗೆ ಯುಗಾದಿಯ ನಂತರ ವಿವಾಹ ಪ್ರಸ್ತಾಪ ಬರಲಿದೆ. ನೀವು ಕೆಲವು ವಿಶೇಷ ಜನರನ್ನು ಭೇಟಿ ಮಾಡುವಿರಿ. ಆದರೆ ನಿಮ್ಮ ವಿವಾಹ ಯೋಜನೆಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಈ ಸಮಯದಲ್ಲಿ ತಾಳ್ಮೆಯಿಂದಿರಿ. ವಿವಾಹಿತರ ದಾಂಪತ್ಯ ಜೀವನದಲ್ಲಿ ಸಂತೋಷ ಇರಲಿದೆ.

ಮಿಥುನ ರಾಶಿಯ ಯುಗಾದಿ ಆಸ್ತಿ/ವಾಹನ ಭವಿಷ್ಯ

ಯುಗಾದಿ ಬಳಿಕ ಮಿಥುನ ರಾಶಿಯವರಿಗೆ ಆಸ್ತಿ, ವಾಹನ ಖರೀದಿಗೆ ಅದ್ಭುತ ಸಮಯ ಇರಲಿದೆ. ಹೂಡಿಕೆಯಿಂದಲೂ ಲಾಭವನ್ನು ಗಳಿಸುವಿರಿ. ನಿಮ್ಮ ಎಲ್ಲಾ ಆಸೆಗಳು ಯುಗಾದಿ ಬಳಿಕ ಈಡೇರಲಿವೆ. ಹೊಸ ಮನೆ ಖರೀದಿ ಮಾಡುವ ಕನಸು ನನಸಾಗಲಿದೆ. ಹೀಗಾಗಿ ಮಿಥುನ ರಾಶಿಯವರಿಗೆ ಯುಗಾದಿ ನಂತರದ ದಿನಗಳು ಮಂಗಳಕರವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+