ಇಂದಿನಿಂದ ಈ ರಾಶಿಯವರಿಗೆ ಗಜಕೇಸರಿ ಯೋಗ : ಮಣ್ಣು ಮುಟ್ಟಿದರೂ ಚಿನ್ನವಾಗುವ ಕಾಲ, ಒಲಿದು ಬರುವುದು ಅಷ್ಟೈಶ್ವರ್ಯ
ಜ್ಯೋತಿಷ್ಯದ ಪ್ರಕಾರ, ಆಗಸ್ಟ್ 22 ಅಂದರೆ ಇಂದು ಬಹಳ ವಿಶೇಷವಾದ ದಿನ. ಇವತ್ತು ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತಿದೆ. ಗುರು ಮತ್ತು ಚಂದ್ರನ ಶುಭ ಅಂಶಗಳು ಅಥವಾ ಕೇಂದ್ರ ಸ್ಥಾನಗಳ ಸಂಯೋಜನೆಯಿಂದ ರೂಪುಗೊಳ್ಳುವ ಯೋಗ ಇದು. ಈ ಯೋಗದ ಪರಿಣಾಮವಾಗಿ ಕೆಲವು ರಾಶಿಯವರು ಆರ್ಥಿಕ ಲಾಭ ಪಡೆಯುವರು.
ಮೇಷ ರಾಶಿ (Aries) : ಮೇಷ ರಾಶಿಯವರಿಗೆ ಇಂದು ಬಹಳ ರೋಮಾಂಚಕಾರಿ ದಿನವಾಗಿರುವುದು. ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಪ್ರೀತಿಪಾತ್ರರಿಂದ ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಅನಿರೀಕ್ಷಿತ ಧನಲಾಭವಾಗುವುದು.ಹೊಸ ಅವಕಾಶಗಳು ಸಿಗುತ್ತವೆ.

ವೃಷಭ ರಾಶಿ (Taurus) : ಗ್ರಹ ಸಂಚಾರವು ನಿಮಗೆ ಅನುಕೂಲಕರವಾಗಿರುವುದು. ನಿಮಗೆ ಹೊಸ ಹೊಸ ಅವಕಾಶಗಳು ಎದುರಾಗುವುದು.ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯಬೇಡಿ. ತೆಗೆದುಕೊಳ್ಳುವ ನಿರ್ಧಾರ ತುಂಬಾ ಪ್ರಯೋಜನಕಾರಿಯಾಗಿರುವುದು. ಆತ್ಮವಿಶ್ವಾಸ ಹೆಚ್ಚುವುದು. ಪ್ರಗತಿಯತ್ತ ಸಾಗುವಿರಿ.
ಮಿಥುನ ರಾಶಿ (Gemini): ಮಿಥುನ ರಾಶಿಯವರು ಕೆಲವು ಸಮಯದಿಂದ ಅನುಭವಿಸುತ್ತಿದ್ದ ಗೊಂದಲ, ಕಿರಿಕಿರಿಗಳು ಕೊನೆಯಾಗುವುದು. ಪ್ರಮುಖ ವಿಷಯದ ಬಗ್ಗೆ ನಿಮಗೆ ಸ್ಪಷ್ಟತೆ ಸಿಗುತ್ತದೆ. ಯಾವುದೇ ವಿಷಯ ಇರಲಿ ನಿಮ್ಮ ವಿಚಾರವನ್ನು ಸ್ಪಷ್ಟವಾಗಿ ಹೇಳಿ. ಪ್ರಮುಖ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಿರಿ.
ಕರ್ಕಾಟಕ ರಾಶಿ (Cancer) : ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ಉನ್ನತ ಸ್ಥಾನಮಾನಕ್ಕೆ ಏರುವಿರಿ. ಸಾಮಾಜಿಕವಾಗಿ ಗೌರವ ಹೆಚ್ಚಾಗುವುದು. ಹಣಕಾಸಿನ ವಿಷಯದಲ್ಲಿ ಲಾಭವಾಗುವುದು.
ಸಿಂಹ ರಾಶಿ (Leo) : ನಿಮ್ಮ ಮಾತಿನಿಂದಲೇ ಎದುರಿಗಿರುವವರನ್ನು ಆಕರ್ಷಿಸುವಿರಿ. ಅನೇಕ ಜವಾಬ್ದಾರಿಗಳು ಹೊಸ ಜವಾಬ್ದಾರಿಗಳು ಹೆಗಲೇರುವುದು. ಆದ್ಯತೆಗಳಿಗೆ ಅನುಗುಣವಾಗಿ ಕೆಲಸಗಳನ್ನು ಪೂರ್ಣಗೊಳಿಸಿ. ಆರ್ಥಿಕ ಮತ್ತು ವೈಯಕ್ತಿಕ ವ್ಯವಹಾರಗಳು ಸರಾಗವಾಗಿ ನಡೆಯುತ್ತವೆ.
ಕನ್ಯಾ ರಾಶಿ (Virgo): ಗಜಕೇಸರಿ ಯೋಗದಿಂದ ನಷ್ಟಗಳು ಲಾಭವಾಗಿ ಬದಲಾಗುವುದು. ತಾಳ್ಮೆಯಿಂದ ವರ್ತಿಸಿ. ಸಮಸ್ಯೆಗಳು ಒಂದೊಂದಾಗಿಯೇ ಪರಿಹಾರವಾಗುವುದು. ಕೈತುಂಬಾ ಹಣ ಉಳಿಯುವುದು.
ತುಲಾ ರಾಶಿ (Libra): ಹಣಕಾಸಿನ ವಿಷಯದಲ್ಲಿ ತುಂಬಾ ಲಾಭದಾಯಕವಾಗಿರುವುದು. ಬಾಕಿ ಇರುವ ಕೆಲಸಗಳು ಸರಾಗವಾಗಿ ಪೂರ್ತಿಯಾಗುವುದು. ಆರ್ಥಿಕ ಲಾಭ ಹೆಚ್ಚುವುದು.
ವೃಶ್ಚಿಕ ರಾಶಿ (Scorpio) : ನಿಮ್ಮ ವ್ಯಕ್ತಿತ್ವಕ್ಕೆ ಹೊಸ ಹೊಳಪು ಸಿಗುವುದು.
ನಿಮಗೇ ಅರಿವಿಲ್ಲದ ಮೂಲದಿಂದ ಹಣ ಹರಿದು ಬರುವುದು. ಈ ಅವಧಿಯಲ್ಲಿ ಮಾಡುವ ಹೂಡಿಕೆಯಿಂದ ದೊಡ್ಡ ಮಟ್ಟದ ಲಾಭವಾಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು.
ಧನು ರಾಶಿ (Sagitarius) : ಗಜಕೇಸರಿ ಯೋಗ ನಿಮಗೆ ತುಂಬಾ ಅನುಕೂಲಕರವಾಗಿರುವುದು. ಬಾಕಿ ಇರುವ ಎಲ್ಲಾ ಕೆಲಸಗಳು ಒಂದೊಂದಾಗಿಯೇ ಮುಗಿಸುವಿರಿ. ಹೊಸ ಆರ್ಥಿಕ ಅವಕಾಶಗಳು ಸಿಗುವುದು.
ಮನೆ ನಿರ್ಮಾಣಕ್ಕೆ ಕೈ ಹಾಕಿವಿರಿ. ವಾಹನ ಖರೀದಿ ಯೋಗವೂ ಇದೆ.
ಮಕರ ರಾಶಿ (Capricorn) : ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ತುಂಬಾ ಒಳ್ಳೆಯ ಸಮಯ. ಗಜಕೇಸರಿ ರಾಜಯೋಗದ ಪರಿಣಾಮವಾಗಿ ವೃತ್ತಿ ಜೀವನದಲ್ಲಿ ಗೌರವ ಮತ್ತು ಮನ್ನಣೆ ಸಿಗುವುದು. ವಿದೇಶ ಪ್ರಯಾಣದ ಯೋಗವಿದೆ.
ಕುಂಭ ರಾಶಿ(Aquarius) : ಕುಂಭ ರಾಶಿಯವರಿಗೆ ಇಂದು ಸಾಮಾಜಿಕವಾಗಿ ಬಹಳ ರೋಮಾಂಚಕಾರಿ ದಿನವಾಗಿರುವುದು. ಆರ್ಥಿಕ ಆಶಾವಾದ ಮತ್ತು ಸೃಜನಶೀಲ ವಿಚಾರಗಳು ಹೆಚ್ಚಾಗುವುದು. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ.
ಮೀನ ರಾಶಿ (Pisces): ಇಂದು ಮಿಶ್ರ ಫಲಿತಾಂಶಗಳು ಸಿಗುವುದು. ವೃತ್ತಿಜೀವನದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆಯುವುದು. ಅನಗತ್ಯ ಖರ್ಚುಗಳ ಬಗ್ಗೆ ಜಾಗರೂಕರಾಗಿರಬೇಕು. ಆದರೂ ಹಣದ ಹರಿವು ಚೆನ್ನಾಗಿ ಇರುವುದು. ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುವುದು.


Click it and Unblock the Notifications
