Gajkesari Rajyog 2025: ಗಜಕೇಸರಿ ರಾಜಯೋಗ- ಯುಗಾದಿ ನಂತರ ಈ ರಾಶಿಯವರಿಗೆ ಶುಭ ಸುದ್ದಿ

ಕಾಲ ಕಾಲಕ್ಕೆ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತವೆ. ಇದರಿಂದ ಕೆಲ ಶುಭ ಯೋಗಗಳು ರೂಪಗೊಳ್ಳುತ್ತವೆ. ಇದರ ಪರಿಣಾಮ ದ್ವಾದಶಿ ರಾಶಿಗಳ ಮೇಲೆ ಕಂಡುಬರಲಿದೆ. ಅಲ್ಲದೆ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಬದಲಾಯಿಸಿದಾಗ ಅವು ಕೆಲವೊಮ್ಮೆ ಇತರ ಗ್ರಹಗಳೊಂದಿಗೆ ಸೇರಿ ಶುಭ ಹಾಗೂ ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ.

ಹೌದು... ಇದೇ ಏಪ್ರಿಲ್ 2 ರಂದು ಚಂದ್ರನು ವೃಷಭ ರಾಶಿಗೆ ಸಾಗುತ್ತಾನೆ. ಇದು ಒಂದು ರಾಶಿಯಲ್ಲಿ ಎರೆಡುವರೆ ದಿನಗಳ ಕಾಲ ಮಾತ್ರ ಇರುತ್ತದೆ. ಅಲ್ಲದೆ ಗುರು ಈಗಾಗಲೇ ಈ ರಾಶಿಯಲ್ಲಿ ಸಂಚಾಋ ಮಾಡುತ್ತಿರುವುದರಿಂದ ಗಜಕೇಸರಿ ರಾಜಯೋಗ ಸೃಷ್ಟಿಯಾಗಲಿದೆ.

ಈ ರಾಜಯೋಗದ ಪ್ರಭಾವ ಎಲ್ಲಾ ರಾಶಿಗಳ ಜನರ ಜೀವನದಲ್ಲಿ ಗೋಚರಿಸುತ್ತದೆ. ಈ ರಾಜಯೋಗ ಕೆಲವು ರಾಶಿಗಳಿಗೆ ಅದೃಷ್ಟವನ್ನು ತರಲಿದೆ. ಈ ಯೋಗದ ಪರಿಣಾಮವಾಗಿ ಹಠಾತ್ ಆರ್ಥಿಕ ಲಾಭ ಮತ್ತು ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಿಗಲಿದೆ. ಹಾಗಾದರೆ ಈಗ ವೃಷಭ ರಾಶಿಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳುವುದರಿಂದ ಯಾವ ರಾಶಿಯವರಿಗೆ ಅದೃಷ್ಟ ಸೂರ್ಯನಂತೆ ಪ್ರಕಾಶಿಸಲಿದೆ ಎಂದು ತಿಳಿಯೋಣ.

Gajakesari rajyog 2025 good news for these zodiac signs after ugadi in kannada

ವೃಷಭ ರಾಶಿ

ನಿಮ್ಮ ಸ್ನೇಹ ಭವಿಷ್ಯದಲ್ಲಿ ಉತ್ತಮ ಫಲವನ್ನು ನೀಡುತ್ತದೆ. ನಿಮಗೆ ಸಾಕಷ್ಟು ಹಣ ಗಳಿಸುವ ಅವಕಾಶವೂ ಸಿಗುತ್ತದೆ. ಉದ್ಯಮಿಗಳು ಭಾರಿ ಲಾಭ ಗಳಿಸುವರು. ವಿವಾಹಿತರು ಸಂತೋಷದ ಜೀವನವನ್ನು ಹೊಂದಿರುತ್ತಾರೆ. ಅಲ್ಲದೆ ಈ ಅವಧಿಯಲ್ಲಿ ಈ ರಾಶಿಗಳ ಸಂಗಾತಿಯು ಬಡ್ತಿಯನ್ನು ಪಡೆಯುವ ಸಾಧ್ಯತೆಯಿದೆ. ಅವಿವಾಹಿತರಿಗೆ ಒಳ್ಳೆಯ ವರ ಸಿಗುತ್ತಾನೆ.

Take a Poll

ವೃಷಭ ರಾಶಿಯ ಮೊದಲ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳುವುದರಿಂದ ಇದು ಈ ರಾಶಿಗಳ ವ್ಯಕ್ತಿತ್ವದಲ್ಲಿ ಉತ್ತಮ ಪ್ರಗತಿಯನ್ನು ತರುತ್ತದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ನೀವು ಸ್ನೇಹ ಬೆಳೆಸುವಿರಿ.

Gajakesari rajyog 2025 good news for these zodiac signs after ugadi in kannada

ಕರ್ಕಾಟಕ ರಾಶಿ

ನೀವು ಜೀವನದಲ್ಲಿ ಅನಿರೀಕ್ಷಿತ ಆದಾಯ ಗಳಿಸುವಿರಿ. ನೀವು ಈಗಾಗಲೇ ಹೂಡಿಕೆ ಮಾಡಿದ್ದರೆ, ನಿಮಗೆ ಉತ್ತಮ ಲಾಭ ಸಿಗುತ್ತದೆ. ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಈ ರಾಜಯೋಗ ಆರ್ಥಿಕವಾಗಿ ಲಾಭದಾಯಕವಾಗಿದೆ. ಕರ್ಕಾಟಕ ರಾಶಿಯ 11ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ಉಂಟಾಗಲಿದೆ. ಪರಿಣಾಮವಾಗಿ ಈ ರಾಶಿಯ ಜನರು ಆದಾಯದಲ್ಲಿ ಭಾರಿ ಹೆಚ್ಚಳವನ್ನು ಕಾಣುತ್ತಾರೆ. ಉದ್ಯಮಿಗಳು ಉತ್ತಮ ಬೆಳವಣಿಗೆ ಮತ್ತು ಲಾಭ ಗಳಿಸುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವುದು. ಪ್ರಗತಿಗೆ ಹಲವು ಅವಕಾಶಗಳು ನಿಮಗೆ ಸಿಗಲಿವೆ.

Gajakesari rajyog 2025 good news for these zodiac signs after ugadi in kannada

ಸಿಂಹ ರಾಶಿ

ಸಿಂಹ ರಾಶಿಯ 10ನೇ ಮನೆಯಲ್ಲಿ ಗಜಕೇಸರಿ ರಾಜಯೋಗ ರೂಪುಗೊಳ್ಳುತ್ತದೆ. ಇದು ಈ ರಾಶಿಗಳಿಗೆ ಕೆಲಸ ಮತ್ತು ವ್ಯವಹಾರದಲ್ಲಿ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಕೆಲಸ ಹುಡುಕುತ್ತಿರುವವರಿಗೆ ಉತ್ತಮ ಸಂಬಳದೊಂದಿಗೆ ಅಪೇಕ್ಷಿತ ಕೆಲಸ ಸಿಗುತ್ತದೆ. ನೀವು ಉದ್ಯೋಗಗಳನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅವಕಾಶಗಳು ನಿಮ್ಮ ದಾರಿಗೆ ಬರುತ್ತವೆ.

ಕೆಲಸ ಮಾಡುವವರಿಗೆ ಸಂಬಳ ಹೆಚ್ಚಳ ಮತ್ತು ಬಡ್ತಿ ಸಿಗುವ ಸಾಧ್ಯತೆ ಇದೆ. ನೀವು ಸ್ಥಳಾಂತರಗೊಳ್ಳಲು ಬಯಸಿದರೆ ಅದಕ್ಕೂ ಅವಕಾಶಗಳಿವೆ. ಉದ್ಯಮಿಗಳು ಉತ್ತಮ ಲಾಭ ಗಳಿಸುವರು. ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳು ಲಭ್ಯವಿರುತ್ತವೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದು. ಇದನ್ನು ಮಾಹಿತಿಯಾಗಿ ಮಾತ್ರ ತೆಗೆದುಕೊಳ್ಳಬೇಕು. ಯಾವುದೇ ಮಾಹಿತಿ ಕಾರ್ಯಗತಗೊಳಿಸುವ ಮೊದಲು ದಯವಿಟ್ಟು ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+