GajaKesari Raja yoga: ನವರಾತ್ರಿಯಲ್ಲಿ ಗಜಕೇಸರಿ ರಾಜಯೋಗ: ಈ ರಾಶಿಯವರಿಗೆ ದುಡ್ಡಿನ ಸುರಿಮಳೆ, ಬಂಪರ್ ಅದೃಷ್ಟ!
Gajakesari Rajayoga: ಈ ವರ್ಷದ ನವರಾತ್ರಿ ಅಕ್ಟೋಬರ್ 11 ರಿಂದ ಆರಂಭವಾಗಲಿದೆ. ಅಶ್ವಿನಿ ಮಾಸದ ಪ್ರತಿಪದ ದಿನಾಂಕದಂದು ಪ್ರಾರಂಭವಾಗುವ ಈ ಒಂಭತ್ತು ದಿನಗಳ ಹಬ್ಬವು ಬಹಳ ಅಪರೂಪದ ಮತ್ತು ಶುಭ ಗ್ರಹ ಸಂಯೋಗಕ್ಕೆ ಸಾಕ್ಷಿಯಾಗಲಿದೆ.
ವೈದಿಕ ಕ್ಯಾಲೆಂಡರ್‌ನ ಲೆಕ್ಕಾಚಾರಗಳ ಪ್ರಕಾರ, ಸುಮಾರು 100 ವರ್ಷಗಳ ನಂತರ, ನವರಾತ್ರಿಯ ಸಮಯದಲ್ಲಿ ದೇವಗುರು ಗುರು ಮತ್ತು ಚಂದ್ರನ ಸಂಯೋಗದಿಂದ ಗಜಕೇಸರಿ ರಾಜಯೋಗ ನಿರ್ಮಾಣವಾಗುತ್ತಿದೆ. ಜ್ಯೋತಿಷ್ಯದಲ್ಲಿ, ಗಜಕೇಸರಿ ಯೋಗವನ್ನು ಸ್ಥಾನ, ಪ್ರತಿಷ್ಠೆ, ಅಪಾರ ಸಂಪತ್ತು, ಬುದ್ಧಿವಂತಿಕೆ ಮತ್ತು ಅದೃಷ್ಟವನ್ನು ನೀಡುವ ಶ್ರೇಷ್ಠ ಯೋಗ ಅಂತ ಕರೀತಾರೆ. ಆದ್ದರಿಂದ, ಈ ಮಹಾನ್ ಯೋಗದ ಪ್ರಭಾವವು ದುರ್ಗಾ ದೇವಿಯ ಒಂಭತ್ತು ಶಕ್ತಿಗಳ ಆರಾಧನೆಯೊಂದಿಗೆ ಸೇರಿ, ಎಲ್ಲಾ ದ್ವಾದಶ ರಾಶಿಯವರ ವೃತ್ತಿ, ಆರೋಗ್ಯ ಮತ್ತು ಕುಟುಂಬ ಜೀವನದ ಮೇಲೆ ವ್ಯಾಪಕವಾಗಿ ಕಂಡುಬರುತ್ತದೆ.

Gajakesari Rajayoga: ಗಜಕೇಸರಿ ಯೋಗದ ಮಹತ್ವ
ಗುರು ಮತ್ತು ಚಂದ್ರರು ಕೇಂದ್ರ ಮನೆಗಳಲ್ಲಿ ಜಾತಕ ಅಥವಾ ಸಂಚಾರದಲ್ಲಿ ಪರಸ್ಪರ ಸಂಯೋಗದಲ್ಲಿರುವಾಗ ಗಜಕೇಸರಿ ಯೋಗವು ರೂಪುಗೊಳ್ಳುತ್ತದೆ. ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯ ಒಂಭತ್ತು ಶಕ್ತಿಗಳೊಂದಿಗೆ ಈ ರಾಜಯೋಗದ ಸಂಯೋಜನೆಯು ಎಲ್ಲಾ 12 ರಾಶಿಯವರ ಜಾತಕಫಲದ ಮೇಲೂ ಪ್ರಭಾವ ಬೀರುತ್ತದೆ.
ಮೇಷ ರಾಶಿ (Aries): ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳು ಹೆಚ್ಚು. ನೀವು ಉತ್ಸಾಹದಿಂದ ಕೂಡಿರುವಿರಿ. ಪ್ರೇಮ ಸಂಬಂಧಗಳು ಬಲಗೊಳ್ಳುವುದು.
ಪರಿಹಾರ: ಸ್ಕಂದಮಾತೆಗೆ ಕೆಂಪು ಗುಲಾಬಿಗಳು ಮತ್ತು ಕಡಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ. ಓಂ ದುಂ ದುರ್ಗಾಯೈ ನಮಃ ಎಂದು ಜಪಿಸಿ.
ವೃಷಭ ರಾಶಿ (Taurus): ಬಹಳ ದಿನಗಳಿಂದ ಹೊರಗೆ ಉಳಿದಿದ್ದ ಹಣ ಮತ್ತೆ ನಿಮ್ಮ ಕೈ ಸೇರುವುದು. ವೈವಾಹಿಕ ಜೀವನದಲ್ಲಿ ಹೆಚ್ಚಿನ ಮಾಧುರ್ಯ ಇರುತ್ತದೆ. ವೃತ್ತಿ ಜೀವನದಲ್ಲಿಯೂ ಯಶಸ್ಸು ಸಿಗುವುದು.
ಪರಿಹಾರ: ಮಹಾಗೌರಿ ದೇವಿಗೆ ಬಿಳಿ ಶ್ರೀಗಂಧ ಮತ್ತು ಸಕ್ಕರೆ ಮಿಠಾಯಿಯನ್ನು ಅರ್ಪಿಸಿ. ಕನ್ಯೆಯರಿಗೆ ಸಿಹಿ ತಿಂಡಿ ಕೊಡಿ.
ಮಿಥುನ ರಾಶಿ (Gemini): ಹೊಸ ಯೋಜನೆಗಳು ಕೈಗೂಡುವುದು. ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ಮಾನಸಿಕ ಒತ್ತಡ ಕಡಿಮೆಯಾಗುವುದು. ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗುವುದು.
ಪರಿಹಾರ: ಬ್ರಹ್ಮಚಾರಿಣಿ ದೇವಿಗೆ ಗರಿಕೆ ಹುಲ್ಲು ಮತ್ತು ಹಸಿರು ಏಲಕ್ಕಿಯನ್ನು ಅರ್ಪಿಸಿ. ಗುರು ಮಂತ್ರವನ್ನು 108 ಬಾರಿ ಪಠಿಸಿ.
ಕರ್ಕಾಟಕ ರಾಶಿ (Cancer): ನಿಮಗೆ ಗಜಕೇಸರಿ ಯೋಗವು ಹೆಚ್ಚಿನ ಲಾಭವನ್ನು ತರುವುದು. ನಿಮ್ಮ ಪ್ರತಿಷ್ಠೆ ಹೆಚ್ಚಾಗುವುದು. ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು. ಅವಿವಾಹಿತರಿಗೆ ಮದುವೆ ನಿಶ್ಚಯವಾಗುವುದು.
ಪರಿಹಾರ: ಶೈಲಪುತ್ರಿ ದೇವಿಗೆ ಹಾಲಿನಿಂದ ಮಾಡುವ ಸಿಹಿತಿಂಡಿಗಳನ್ನು ಅರ್ಪಿಸಿ. ಪೂಜಾ ಸ್ಥಳದಲ್ಲಿ ಬೆಳ್ಳಿ ನಾಣ್ಯವನ್ನು ಇರಿಸಿ .
ಸಿಂಹ ರಾಶಿ (Leo): ವ್ಯವಹಾರವು ದೊಡ್ಡ ಮಟ್ಟದ ಲಾಭವನ್ನು ನೀಡುವುದು. ಋತುಮಾನದ ಕಾಯಿಲೆಗಳಿಂದ ಎಚ್ಚರ ಇರಲಿ. ಸಂಗಾತಿಯೊಂದಿಗೆ ಪ್ರವಾಸ ತೆರಳುವ ಸಾಧ್ಯತೆ ಇದೆ.
ಪರಿಹಾರ: ಕಾಳರಾತ್ರಿ ದೇವಿಗೆ ದಾಸವಾಳ ಹೂವುಗಳನ್ನು ಅರ್ಪಿಸಿ ಮತ್ತು ಹಳದಿ ಹಣ್ಣುಗಳನ್ನು ದಾನ ಮಾಡಿ.
ಕನ್ಯಾ ರಾಶಿ (Virgo): ಹೂಡಿಕೆಗಳು ಅತ್ಯುತ್ತಮ ಲಾಭವನ್ನು ನೀಡುವುದು. ನಿಮ್ಮ ಸಂಗಾತಿಯ ಸಲಹೆಯು ನಿಮ್ಮ ಪ್ರಗತಿಗೆ ಸಹಾಯ ಮಾಡುತ್ತದೆ. ತಲೆನೋವಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಾಡಬಹುದು.
ಪರಿಹಾರ: ಚಂದ್ರಘಂಟಾ ದೇವಿಗೆ ಹಸಿರು ಹಣ್ಣುಗಳನ್ನು ಅರ್ಪಿಸಿ. ಅಗತ್ಯವಿರುವವರಿಗೆ ಬೇಳೆಯನ್ನು ದಾನ ಮಾಡಿ.
ತುಲಾ ರಾಶಿ (Libra): ನಿಮ್ಮ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗುವುದು. ಆರೋಗ್ಯವು ಅತ್ಯುತ್ತಮವಾಗಿರುವುದು. ಪ್ರೇಮ ಜೀವನವು ಹೊಸ ತಿರುವು ಪಡೆಯುವುದು.
ಪರಿಹಾರ: ಕಾತ್ಯಾಯನಿ ದೇವಿಗೆ ಸುಗಂಧ ದ್ರವ್ಯ ಮತ್ತು ಬಿಳಿ ಹೂವುಗಳನ್ನು ಅರ್ಪಿಸಿ; ನೈವೇದ್ಯವಾಗಿ ಕೇಸರಿ ಕಡುಬನ್ನು ಅರ್ಪಿಸಿ.
ವೃಶ್ಚಿಕ ರಾಶಿ (Scorpio): ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಆದರೆ ನಿಮ್ಮ ಖರ್ಚುಗಳನ್ನು ನಿಯಂತ್ರಣದಲ್ಲಿಡಿ. ಮಾತನಾಡುವಾಗ ಸ್ವಲ್ಪ ಎಚ್ಚರ ಇರಲಿ. ನಿಮ್ಮ ಮಾತೇ ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ.
ಪರಿಹಾರ: ಸಿದ್ಧಿಧಾತ್ರಿ ದೇವಿಗೆ ಕೆಂಪು ಬಟ್ಟೆ ಅರ್ಪಿಸಿ. ನಿಮ್ಮ ತಿಜೋರಿಯಲ್ಲಿ ಅರಿಶಿನದ ತುಂಡನ್ನು ಇರಿಸಿ.
ಧನು ರಾಶಿ (Sagittarius): ಅದೃಷ್ಟ ನಿಮ್ಮ ಕಡೆ ಇರುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯುವಿರಿ. ಮನಸ್ಸಿನ ಆಸೆಗಳು ನೆರವೇರುವುದು. ವೈವಾಹಿಕ ಜೀವನವು ಸಂತೋಷವಾಗಿರುವುದು.
ಪರಿಹಾರ: ಕೂಷ್ಮಾಂಡಾ ದೇವಿಗೆ ಹಳದಿ ಹೂವುಗಳು ಮತ್ತು ಕಡಲೆ ಬೇಳೆಯನ್ನು ಅರ್ಪಿಸಿ. ದುರ್ಗಾ ಚಾಲೀಸಾ ಪಠಿಸಿ.
ಮಕರ ರಾಶಿ (Capricorn): ಜಮೀನು ಖರೀದಿಸುವ ಮಾರ್ಗ ತೆರೆದುಕೊಳ್ಳುವುದು. ಕೀಲು ನೋವಿನ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಸಂಗಾತಿಯಿಂದ ಭಾವನಾತ್ಮಕ ಬೆಂಬಲ ಸಿಗುವುದು.
ಪರಿಹಾರ: ಕಾಳರಾತ್ರಿ ಮಾತೆಯ ಮುಂದೆ ಎಳ್ಳೆಣ್ಣೆಯ ದೀಪವನ್ನು ಹಚ್ಚಿ, ಒಣ ಹಣ್ಣುಗಳನ್ನು ಅರ್ಪಿಸಿ.
ಕುಂಭ ರಾಶಿ (Aquarius): ನಿಮ್ಮ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗಬಹುದು. ಆದರೆ ಎಲ್ಲವನ್ನೂ ನೀವು ಸಮರ್ಥವಾಗಿ ನಿಭಾಯಿಸುವಿರಿ. ಪ್ರತೀ ಕೆಲಸದಲ್ಲಿ ಗಮನಾರ್ಹ ಪ್ರಯೋಜನವಾಗುವುದು. ನಿಯಮಿತ ದಿನಚರಿಯನ್ನು ಕಾಪಾಡಿಕೊಳ್ಳಿ.
ಪರಿಹಾರ: ಬ್ರಹ್ಮಚಾರಿಣಿ ದೇವಿಗೆ ಮಲ್ಲಿಗೆ ಸುಗಂಧ ದ್ರವ್ಯವನ್ನು ಅರ್ಪಿಸಿ. ಇಡೀ ಉದ್ದಿನ ಬೇಳೆಯನ್ನು ದಾನ ಮಾಡಿ.
ಮೀನ ರಾಶಿ (Pisces): ಜ್ಞಾನ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಎರಡೂ ಹೆಚ್ಚಾಗುವುದು. ಮನಸ್ಸಿನ ಶಾಂತಿ ಕೂಡಾ ಹೆಚ್ಚಾಗುವುದು. ಪ್ರೇಮ ಸಂಬಂಧಗಳು ಗಾಢವಾಗುವುದು.
ಪರಿಹಾರ: ಚಂದ್ರಘಂಟಾ ಮಾತೆಗೆ ಕೇಸರಿ ತಿಲಕ ಹಚ್ಚಿ ಮತ್ತು ಹಳದಿ ಸಿಹಿತಿಂಡಿಗಳನ್ನು ಅರ್ಪಿಸಿ.
ನವರಾತ್ರಿ ದೈನಂದಿನ ಪೂಜಾ ವಿಧಿ (Navaratri Pooja Vidhi)
ಸಂಕಲ್ಪ: ಸ್ನಾನದ ನಂತರ, ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ. ನೀರು, ಧಾನ್ಯಗಳು ಮತ್ತು ಹೂವುಗಳನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ನಿಮ್ಮ ಆಸೆಯನ್ನು ಈಡೇರಿಸಲು ಸಂಕಲ್ಪ ಮಾಡಿ.
ದೀಪ ಹಚ್ಚುವುದು: ದುರ್ಗಾ ಮಾತೆಯ ಮುಂದೆ ಶುದ್ಧ ಹಸುವಿನ ತುಪ್ಪದ ದೀಪ ಹಚ್ಚಿ.
ಅಲಂಕಾರ ಮತ್ತು ನೈವೇದ್ಯ: ರಾಶಿಗೆ ಅನುಗುಣವಾಗಿ ದೇವಿಗೆ ಅಕ್ಷತೆ, ಹಳದಿ ಶ್ರೀಗಂಧ ಮತ್ತು ತಾಜಾ ಹೂವು, ಹಣ್ಣುಗಳನ್ನು ಅರ್ಪಿಸಿ.
ನೈವೇದ್ಯ: ರಾಶಿಗೆ ಅನುಗುಣವಾಗಿ ನೈವೇದ್ಯ ಅರ್ಪಿಸಿ. ಮತ್ತು ಓಂ ದುಮ್ ದುರ್ಗಾಯೈ ನಮಃ ಎಂದು 108 ಬಾರಿ ಜಪಿಸಿ.
ಆರತಿ: ಕೊನೆಯದಾಗಿ, ಕರ್ಪೂರವನ್ನು ಹಚ್ಚಿ ದೇವಿಯ ಆರತಿಯನ್ನು ಮಾಡಿ. ಪ್ರಾರ್ಥನೆಯೊಂದಿಗೆ ಪೂಜೆಯನ್ನು ಮುಗಿಸಿ.


Click it and Unblock the Notifications
