ದ್ವಿದ್ವಾದಶ ಯೋಗದಿಂದ ಈ ರಾಶಿಯವರಿಗೆ ಬಂಪರ್ ಲಕ್; ಸಂಪತ್ತು ವೃದ್ಧಿ, ಆರ್ಥಿಕ ಸಂಕಷ್ಟಕ್ಕೆ ತೆರೆ
Dwidwadasha Yoga:ಸೆಪ್ಟೆಂಬರ್ 7 ರಿಂದ ಸೂರ್ಯ ಮತ್ತು ಗುರು ದ್ವಿದ್ವಾದಶ ದೃಷ್ಟಿ ಯೋಗವನ್ನು ರೂಪಿಸುತ್ತಿದ್ದಾರೆ. ಈ ಯೋಗವು ಗ್ರಹಗಳ ವಿಶೇಷ ಸ್ಥಾನದಿಂದ ರೂಪುಗೊಳ್ಳುವ ಯೋಗ. ಎರಡು ಗ್ರಹಗಳು ಪರಸ್ಪರ ಎರಡನೇ ಮತ್ತು ಹನ್ನೆರಡನೇ ಮನೆಗಳಲ್ಲಿದ್ದಾಗ ಈ ಯೋಗವನ್ನು ಸೃಷ್ಟಿಯಾಗುವುದು. ಇದರ ಪ್ರಭಾವದಿಂದಾಗಿ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು.
ಈ ರಾಶಿಯವರ ಜೀವನದಲ್ಲಿ ವೃತ್ತಿಯಲ್ಲಿ ಪ್ರಗತಿಯಾಗುವುದು. ಹೊಸ ಅವಕಾಶಗಳು ಹುಟ್ಟಿಕೊಳ್ಳುವುದು. ಸೂರ್ಯ ಮತ್ತು ಗುರುಗಳ ನಡುವಿನ ಈ ಯೋಗವು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ತರುವುದು. ಗ್ರಹಗಳ ರಾಜನಾಗಿರುವ ಸೂರ್ಯನನ್ನು ಗೌರವ ಮತ್ತು ಆತ್ಮವಿಶ್ವಾಸದ ಗ್ರಹ ಎಂದು ಹೇಳಲಾಗುತ್ತದೆ. ಗುರು ಜ್ಞಾನ, ಸಂಪತ್ತು, ಅದೃಷ್ಟ, ಐಶ್ವರ್ಯವನ್ನು ಕರುಣಿಸುವವನು.

ಸೂರ್ಯ ಮತ್ತು ಗುರವಿನ ಪ್ರಭಾವದಿಂದ ಉಂಟಾಗುವ ಈ ದ್ವಿದ್ವಾದಶ ದೃಷ್ಟಿ ಯೋಗದಿಂದ ನಾಲ್ಕು ರಾಶಿಗಳು ತುಂಬಾ ಶುಭಫಲವನ್ನು ಪಡೆಯುತ್ತವೆ. ರಾಶಿಯವರ ಆರ್ಥಿಕ ಸ್ಥಿತಿಯು ದೊಡ್ಡ ಮಟ್ಟದ ಜಿಗಿತವನ್ನು ಕಾಣುವುದು. ಇದರೊಂದಿಗೆ, ಉದ್ಯೋಗ ಮತ್ತು ವ್ಯವಹಾರದಲ್ಲಿಯೂ ಬಂಪರ್ ಲಾಭವಾಗುವ ಸಾಧ್ಯತೆ ಇದೆ. ಹಾಗಿದ್ದರೆ ಈ ಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು ಯಾವುವು ನೋಡೊಣ.
Dwidwadasha Yoga:ಮಿಥುನ ರಾಶಿ (Gemini)
ಮಿಥುನ ರಾಶಿಯವರಿಗೆ, ಗುರು ಮತ್ತು ಸೂರ್ಯನ ನಡುವೆ ರೂಪುಗೊಂಡ ದ್ವಿದ್ವಾದಶ ದೃಷ್ಟಿ ಯೋಗವು ಪ್ರಯೋಜನಕಾರಿಯಾಗಿರುವುದು. ಇವರ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುವುದು. ಆರ್ಥಿಕ ಲಾಭವಾಗುವುದು. ಕ್ಯ ಹಾಕುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಕೈ ಸೇರದೆ ಬಾಕಿ ಉಳಿದಿರುವ ಹಣ ವಾಪಸ್ ಬರುವುದು. ಆರೋಗ್ಯವು ಉತ್ತಮವಾಗಿರುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿರುವವರಿಗೆ ಲಾಭವಾಗುವುದು. ಉದ್ಯಮವನ್ನು ವಿಸ್ತರಿಸುವುದಕ್ಕೆ ಸೂಕ್ತ ಕಾಲ. ಹೊಸ ಉದ್ಯೋಗಗಳು ಮತ್ತು ಬಡ್ತಿಗಳು ಸಾಧ್ಯತೆ ಇದೆ. ಮನಸ್ಸಿನ ಆಸೆ ಈಡೇರುವುದು. ಮನೆ ಅಥವಾ ವಾಹನ ಖರೀದಿ ಯೋಗವಿದೆ.
Dwidwadasha Yoga: ಕರ್ಕಾಟಕ ರಾಶಿ (cancer)
ದ್ವಿದ್ವಾದಶ ದೃಷ್ಟಿ ಯೋಗದ ಪ್ರಭಾವವು ಕರ್ಕಾಟಕ ರಾಶಿಯವರ ಭವಿಷ್ಯವನ್ನು ಬೆಳಗುವುದು. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚುವುದು. ಮಾಡುವ ಕೆಲಸ ಕಾರ್ಯಗಳಿಗೆ ಪ್ರಶಂಸೆ ಸಿಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಇದು ಉದ್ಯಮಿಗಳಿಗೆ ಉತ್ತಮ ಸಮಯವಾಗಿರುವುದು. ಸಂಪತ್ತಿನಲ್ಲಿ ಹೆಚ್ಚಳವಾಗುವುದು. ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಾಗುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಬಹುದು. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ. ನಿಮ್ಮ ಸೌಕರ್ಯಗಳು ಮತ್ತು ಐಷಾರಾಮ ಹೆಚ್ಚಾಗುವುದು. ನಿಮ್ಮ ಪಾಲಿನ ಸುಖ ಸಮೃದ್ದಿಯ ಕಾಲ ಇದು.
Dwidwadasha Yoga: ಸಿಂಹ ರಾಶಿ (Leo)
ಸೂರ್ಯ ಮತ್ತು ಗುರುವಿನ ಶುಭ ಸಂಯೋಗವು ಸಿಂಹ ರಾಶಿಯವರ ಆದಾಯವನ್ನು ಹೆಚ್ಚಿಸಬಹುದು. ಕಾನೂನು ವಿಷಯಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ಹಠಾತ್ ಆರ್ಥಿಕ ಲಾಭವಾಗುವುದು. ಯಾವುದೇ ಸುಳಿವಿಲ್ಲದೆ ಪೂರ್ವಜರ ಸಂಪತ್ತು ಅನುವಂಶಿಕವಾಗಿ ಒದಗಿ ಬರುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ದ್ವಿದ್ವಾದಶ ದೃಷ್ಟಿ ಯೋಗದ ರಚನೆಯ ಫಲವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚುವುದು. ಪ್ರತಿಯೊಂದು ವಿಷಯದಲ್ಲಿಯೂ ಪೋಷಕರ ಬೆಂಬಲ ಸಿಗುವುದು.
Dwidwadasha Yoga: ತುಲಾ ರಾಶಿ (Libra)
ತುಲಾ ರಾಶಿಯವರಿಗೆ ದ್ವಿದ್ವಾದಶ ಯೋಗವು ಶುಭವೆಂದು ಸಾಬೀತಾಗುವುದು. ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಪ್ರಯೋಜನಗಳಾಗುವುದು. ಕೆಲಸ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗುವುದು. ಕೈ ಹಾಕುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಪ್ರಮುಖ ಒಪ್ಪಂದದ ಮೂಲಕ ಉದ್ಯಮಿಗಳಿಗೆ ಆರ್ಥಿಕವಾಗಿ ಲಾಭವಾಗುವುದು. ಬಹಳ ದಿನಗಳಿಂದ ಕಾಯುತ್ತಿದ್ದ ಶುಭ ಸುದ್ದಿ ಸಿಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ.


Click it and Unblock the Notifications
