ಈ 5 ರಾಶಿಯವರು ಕೆಟ್ಟ ಕುಡುಕರು, ಮದ್ಯದ ಚಟಕ್ಕೆ ಬಿದ್ದರೆ ಮುಗಿತು... ನಿಮ್ಮ ರಾಶಿ ಯಾವುದು?

ಹಣ ಕೊಟ್ಟು ಆರೋಗ್ಯ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳುವುದು ಅಂದರೆ ಅದು ಮದ್ಯದ ಚಟದಿಂದ. ಒಮ್ಮೆ ಮದ್ಯದ ಚಟಕ್ಕೆ ಬಿದ್ದರೆ ಅದರಿಂದ ದೂರ ಉಳಿಯುವುದು ಕಷ್ಟಸಾಧ್ಯ. ಹೀಗಾಗಿ ಮದ್ಯ ಸೇವನೆಯ ಬಗ್ಗೆ ಜಾಗರೂಕರಾಗಿರಲು ಸೂಚಿಸಲಾಗುತ್ತದೆ. ಆದರೂ ಕೆಲ ಬಾರಿ ನಮ್ಮೊಡನೆ ಇರುವ ಸ್ನೇಹಿತರು ಮತ್ತು ನಾವು ಬೆಳೆದ ಪರಿಸರದಿಂದಾಗಿ ಮದ್ಯದ ಚಟಕ್ಕೆ ಗುರಿಯಾಗಿಬಿಡುತ್ತೇವೆ. ಕೆಲವರು ಸ್ವಾಭಾವಿಕವಾಗಿ ಕೆಟ್ಟ ಅಭ್ಯಾಸಗಳಿಗೆ ಬೀಳುವಷ್ಟು ದುರ್ಬಲರಾಗಿರುತ್ತಾರೆ. ಅದಕ್ಕೆ ಅವರ ಜನ್ಮ ರಾಶಿ ಮುಖ್ಯ ಕಾರಣವಾಗಿರಬಹುದು.

ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿ ಅಡಿಯಲ್ಲಿ ಜನಿಸಿದ ಜನರು ಕೆಲವು ಕೆಟ್ಟ ಅಭ್ಯಾಸಗಳಿಗೆ, ವಿಶೇಷವಾಗಿ ಮದ್ಯಪಾನಕ್ಕೆ ಒಳಗಾಗುತ್ತಾರೆ. ಈ ಜನರು ಸಾಮಾನ್ಯವಾಗಿ ತಮ್ಮ ಕುಡಿತವನ್ನು ತ್ಯಜಿಸಲು ಯೋಚಿಸುತ್ತಾರೆ ಆದರೆ ಅವರೊಂದಿಗಿರುವ ಸ್ನೇಹಿತರು, ಜೊತೆಗೆ ಅವರ ಹಾಳಾದ ಮನಸ್ಸು ಬಾರಿನತ್ತ ಎಳೆದೊಯ್ಯಬಹುದು. ಈ ಅಪಾಯಕಾರಿ ಅಭ್ಯಾಸಕ್ಕೆ ಯಾವ ರಾಶಿಯವರು ಹೆಚ್ಚು ಒಳಗಾಗುತ್ತಾರೆ ಎಂಬುದನ್ನು ನೋಡೋಣ.

These 5 zodiac signs are bad drinkers, if you get addicted to alcohol its over, What is your zodiac sign?

ಮೀನ ರಾಶಿ

ಮೀನ ರಾಶಿಯವರು ಹೆಚ್ಚಾಗಿ ಸಭ್ಯ ಕುಡುಕರಾಗಿರುತ್ತಾರೆ. ಇವರು ಇತರ ರಾಶಿಯವರಿಗಿಂತ ಹೆಚ್ಚು ಕುಡಿಯುವ ಸಾಧ್ಯತೆ ಇದೆ. ಜೊತೆಗೆ ಇವರು ಹೆಚ್ಚು ಭಾವನಾತ್ಮಕವಾಗಿರುತ್ತಾರೆ. ಕುಡಿದಾಗ ಅವರ ಭಾವನೆಗಳು ಕೆಟ್ಟದರ ಕಡೆಗೆ ವಾಲಬಹುದು. ಹೀಗಾಗಿ ಈ ರಾಶಿಯವರು ಹೆಚ್ಚು ಮದ್ಯ ಪ್ರಿಯರಾಗಿದ್ದರೆ ಅಥವಾ ಮದ್ಯ ವ್ಯಸನಿಗಳಾಗಿದ್ದರೆ ಇದರಿಂದ ದೂರ ಉಳಿಯುವುದು ಒಳ್ಳೆಯದು. ಇಲ್ಲದಿದ್ದರೆ ಅವರು ಊಹಿಸಲಾಗದ ಕೆಲಸಗಳನ್ನು ಮಾಡಬಹುದು. ಹೀಗಾಗಿ ಮಿತವಾಗಿದ್ದರೆ ಎಲ್ಲವೂ ಒಳ್ಳೆಯದು, ಮಿತಿ ಮೀರಿದರೆ ಅದು ಕೆಟ್ಟ ಅಭ್ಯಾಸವಾಗಬಹುದು ಎನ್ನುವುದನ್ನು ಮರೆಯದಿರಿ.

These 5 zodiac signs are bad drinkers, if you get addicted to alcohol its over, What is your zodiac sign?


ಕರ್ಕಾಟಕ

ಕರ್ಕಾಟಕ ರಾಶಿಯವರು ತಮ್ಮ ಜೀವಿತಾವಧಿಯಲ್ಲಿ ಬಹಳಷ್ಟು ಮದ್ಯವನ್ನು ಸೇವಿಸಲು ಸಿದ್ಧರಿರುತ್ತಾರೆ. ಇವರು ವಿಪರೀತ ಮದ್ಯಪಾನ ಮಾಡುವವರು ಮತ್ತು ತೊಂದರೆಯಲ್ಲಿದ್ದಾಗ ಎಡೆಬಿಡದೆ ಕುಡಿಯಲು ಸಿದ್ಧರಿರುತ್ತಾರೆ. ಕರ್ಕಾಟಕ ರಾಶಿಯವರು ಕುಡಿಯುವಾಗ ಅವರೊಂದಿಗೆ ವ್ಯವಹರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕರ್ಕಾಟಕ ರಾಶಿಯವರು ಕುಡಿಯಲು ಯೋಜಿಸಿದಾಗ ಅವರು ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ಮದ್ಯಪಾನ ಮಾಡುವಾಗ ಸುತ್ತಮುತ್ತಲಿನವರಿಗೆ ಕೆಟ್ಟ ಸಂದರ್ಭವನ್ನು ಸೃಷ್ಟಿಸಬಹುದು.

These 5 zodiac signs are bad drinkers, if you get addicted to alcohol its over, What is your zodiac sign?

ಮಕರ ರಾಶಿ

ಮಕರ ರಾಶಿಯವರು ಅಸಭ್ಯ ಕುಡುಕರಾಗಿರಬಹುದು. ಯಾವುದೇ ಕಾರಣಗಳಿಲ್ಲದೆ ಮಕರ ರಾಶಿಯವರು ಕುಡಿಯಲು ಬಯಸುತ್ತಾರೆ. ಅವರ ಮಿತಿಯಲ್ಲಿ ಕುಡಿಯಲು ಮನಸ್ಸು ಮಾಡುವುದಿಲ್ಲ. ಸ್ನೇಹಿತರ ಬಲವಂತಕ್ಕೋ, ಸ್ಥಳೀಯ ವಾತಾವರಣಕ್ಕೋ ಒಗ್ಗಿಕೊಂಡು ಹೆಚ್ಚು ಕುಡಿಯಲುಬಹುದು. ಹೀಗಾಗಿ ಮಕರ ರಾಶಿಯವರು ಮಧ್ಯಮ ಕುಡುಕರಾಗಿರುತ್ತಾರೆ. ಆದರೂ ಎಷ್ಟೇ ಮದ್ಯ ಸೇವಿಸಿದರೂ ಸಾಮಾನ್ಯರಂತೆ ಉಳಿಯುವ ಶಕ್ತಿ ಅವರಲ್ಲಿದೆ. ಇತರರಂತೆ ಕುಡಿದಾಗ ಹುಚ್ಚರಂತೆ ವರ್ತಿಸುವುದಿಲ್ಲ.

These 5 zodiac signs are bad drinkers, if you get addicted to alcohol its over, What is your zodiac sign?

ಮೇಷ ರಾಶಿ

ಮೇಷ ರಾಶಿಯವರು ಸಾಂದರ್ಭಿಕವಾಗಿ ಕುಡಿಯುವವರು. ಆದರೆ ಮೇಷ ರಾಶಿಯವರು ಕುಡಿತವನ್ನು ಇಷ್ಟಪಡುತ್ತಾರೆ. ಅವರು ಮದ್ಯಪಾನ ಮಾಡುವಾಗ ಹಿಂಸಾತ್ಮಕ ಮತ್ತು ದಬ್ಬಾಳಿಕೆಗೆ ಒಳಗಾಗಬಹುದು. ಕುಡಿದ ನಂತರ ಅವರು ಕೆಟ್ಟದಾಗಿ ವರ್ತಿಸಬಹುದು. ಮೇಷ ರಾಶಿಯವರು ಕುಡಿಯಲು ಹೋದಾಗ ಅಂಗರಕ್ಷಕರ ಅಗತ್ಯವಿರುತ್ತದೆ. ಯಾಕೆಂದರೆ ಅವರು ಛಾವಣಿಯ ಮೇಲಿಂದ ಜಿಗಿಯಲು ಅಥವಾ ಅಪಾಯಕಾರಿಯಾಗಿ ಏನಾದರು ಮಾಡಲು ಪ್ರಯತ್ನಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರಿಗೆ ಯಾರಾದರು ಅಗತ್ಯವಿದೆ.

These 5 zodiac signs are bad drinkers, if you get addicted to alcohol its over, What is your zodiac sign?

ತುಲಾ ರಾಶಿ

ಇತರ ರಾಶಿಯವರಿಗಿಂತ ತುಲಾ ರಾಶಿಯವರು ಮದ್ಯಪಾನ ಮಾಡುವ ಸಾಧ್ಯತೆ ಕಡಿಮೆ ಎಂಬುದು ಸಮಾಧಾನಕರ ಸಂಗತಿ. ವಾಸ್ತವವಾಗಿ ಇವರು ಇಚ್ಛಾಶಕ್ತಿಯನ್ನು ಗೌರವಿಸುತ್ತಾರೆ. ಜೊತೆಗೆ ಮದ್ಯ ಸೇವನೆಯನ್ನು ನಿಯಂತ್ರಿಸುತ್ತಾರೆ. ಕುಡಿದಾಗ ತುಲಾ ರಾಶಿಯವರು ನಿರಾಶಾವಾದಿ ಮತ್ತು ಗೊಂದಲಕ್ಕೊಳಗಾಗುತ್ತಾರೆ. ಈ ವೇಳೆ ತಮ್ಮ ನಡವಳಿಕೆಯನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯತ್ನಿಸುತ್ತಾರೆ. ಕುಡಿದಾಗ ತಮ್ಮ ಸ್ವಭಾವವನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಹೀಗಾಗಿ ಕಡಿಮೆ ಮದ್ಯಪಾನ ಮಾಡುತ್ತಾರೆ. ಆದರೆ ತುಲಾ ರಾಶಿ ಅವರು ಕುಡಿಯುವುದನ್ನು ಆನಂದಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+