Dangerous Yoga 2025: ಏಪ್ರಿಲ್‌ನಲ್ಲಿ ಗ್ರಹ ಗೋಚರ- 3 ಅಪಾಯಕಾರಿ ಗ್ರಹಗಳ ಸಂಯೋಜನೆಯಿಂದ ಈ ರಾಶಿಗೆ ಕಂಟಕ
ಇಂದಿನಿಂದ ಏಪ್ರಿಲ್ ತಿಂಗಳು ಪ್ರಾರಂಭವಾಗಿದೆ. ಈ ತಿಂಗಳು ಗ್ರಹಗಳು ಮತ್ತು ನಕ್ಷತ್ರಗಳ ಸಂಚಾರಕ್ಕೆ ವಿಶೇಷವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕಾಲಕಾಲಕ್ಕೆ ಎಲ್ಲಾ ಗ್ರಹಗಳು ಸಂಚಾರ ಮಾಡಿ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಹಲವು ಬಾರಿ ಗ್ರಹಗಳ ಸಂಚಾರ ಸಂಯೋಗವನ್ನು ಸೃಷ್ಟಿಸುತ್ತದೆ. ಇದು ರಾಶಿಗಳ ಮೇಲೆ ಶುಭ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ. ಪ್ರತಿ ತಿಂಗಳಂತೆ ಏಪ್ರಿಲ್ ತಿಂಗಳಿನಲ್ಲಿಯೂ ಸಹ ಗ್ರಹಗಳ ಸಂಚಾರದಿಂದ ಅಪಾಯಕಾರಿ ಯೋಗಗಳು ರೂಪಗೊಳ್ಳುತ್ತವೆ. ಈ ಕಾರಣದಿಂದಾಗಿ ಕೆಲವು ರಾಶಿಗಳು ಜಾಗರೂಕರಾಗಿರಬೇಕು.
ಹಾಗಾದರೆ ಏಪ್ರಿಲ್ ತಿಂಗಳಲ್ಲಿ ಯಾವ ಗ್ರಹಗಳ ಸಂಯೋಗವಾಗಲಿದೆ? ಯಾವ ರಾಶಿಯವರಿಗೆ ಇದರಿಂದ ಅಪಾಯವಿದೆ? ಯಾವಾಗ ಗ್ರಹಗಳ ಸಂಯೋಗ ಸಂಭವಿಸಲಿದೆ ಎಂದು ಈಗ ತಿಳಿಯೊಣ.

ಶನಿ-ಬುಧ ಸಂಯೋಗ:
ಶನಿಯು ಪ್ರಸ್ತುತ ಪೂರ್ವ ಭಾದ್ರಪದ ನಕ್ಷತ್ರದಲ್ಲಿದ್ದಾನೆ. ಏಪ್ರಿಲ್ 3, 2025 ರಂದು ಬುಧ ಗ್ರಹ ಈ ನಕ್ಷತ್ರಪುಂಜಕ್ಕೆ ಬರಲಿದೆ. ಇದರಿಂದಾಗಿ ಶನಿ ಮತ್ತು ಬುಧ ಗ್ರಹಗಳ ಸಂಯೋಗವಾಗುತ್ತದೆ. ಇದು ಕೆಲ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೀನ ರಾಶಿಯಲ್ಲಿ ಬುಧ-ಶನಿಯವರ ಸಂಯೋಗದಿಂದಾಗಿ ಸಿಂಹ, ವೃಶ್ಚಿಕ ಮತ್ತು ಮಕರ ರಾಶಿಯವರು ಹೆಚ್ಚು ಜಾಗರೂಕರಾಗಿರಬೇಕು.
ಸೂರ್ಯ-ಶನಿ ಸಂಯೋಗ:
ಮಾರ್ಚ್ 29ರಂದು ಶನಿಯೂ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಈಗಾಗಲೇ ಸೂರ್ಯ ಮೀನ ರಾಶಿಯಲ್ಲಿ ಇದ್ದು, ಶನಿ ಪ್ರವೇಶದಿಂದ ಶನಿ ಹಾಗೂ ಸೂರ್ಯ ಸಂಯೋಗವಾಗಿದೆ. ಈ ಸಂಯೋಗ ಏಪ್ರಿಲ್ 14ರವರೆಗೆ ಮೀನ ರಾಶಿಯಲ್ಲಿ ಇರುತ್ತದೆ. ಸೂರ್ಯ ಮತ್ತು ಶನಿಯ ಸಂಯೋಗದಿಂದಾಗಿ ಗ್ರಹಣ ಯೋಗ ರೂಪುಗೊಂಡಿದೆ. ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಇದು ಶುಭವಲ್ಲ.

ಈ ರಾಶಿಯವರು ಜಾಗರೂಕರಾಗಿರಬೇಕು. ಮೀನ ರಾಶಿಯಲ್ಲಿ ತಂದೆ ಮತ್ತು ಮಗನ ಸಂಯೋಗದಿಂದಾಗಿ, ಮೇಷ, ಸಿಂಹ, ಕನ್ಯಾ, ಧನು ಮತ್ತು ಮೀನ ರಾಶಿಯ ಜನರು ಜಾಗರೂಕರಾಗಿರಬೇಕು. ಈ ರಾಶಿಗಳು ಈ ಸಮಯದಲ್ಲಿ ಕುಟುಂಬ, ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ಏರಿಳಿತಗಳನ್ನು ಎದುರಿಸಬೇಕಾಗಬಹುದು.
ಸೂರ್ಯ-ಶುಕ್ರ-ಶನಿ ಸಂಯೋಗ:
ಏಪ್ರಿಲ್ ತಿಂಗಳಲ್ಲಿ ಸೂರ್ಯ, ಶುಕ್ರ ಮತ್ತು ಶನಿಯ ಸಂಯೋಗ ಮೀನ ರಾಶಿಯಲ್ಲಿ ರೂಪುಗೊಳ್ಳುತ್ತಿದೆ. ಮೀನ ರಾಶಿಯಲ್ಲಿ ಶುಕ್ರ, ಶನಿ ಮತ್ತು ಸೂರ್ಯನ ಸಂಯೋಗ ಏಪ್ರಿಲ್ 14 ರವರೆಗೆ ಇರುತ್ತದೆ. ಏಪ್ರಿಲ್ 14 ರಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಹೋಗುತ್ತಾನೆ. ಮೀನ ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಶನಿಯ ಸಂಯೋಗದಿಂದಾಗಿ ತ್ರಿಗ್ರಹಿ ಯೋಗ ರೂಪುಗೊಳ್ಳುತ್ತದೆ.
ಇದರಿಂದ ಕೆಲ ರಾಶಿಯವರು ಜಾಗರೂಕರಾಗಿರಬೇಕು. ಜ್ಯೋತಿಷ್ಯದಲ್ಲಿ ಮೂರು ಗ್ರಹಗಳ ಸಂಯೋಗವನ್ನು ಪ್ರತಿಕೂಲವೆಂದು ಪರಿಗಣಿಸಲಾಗುತ್ತದೆ. ಸೂರ್ಯ, ಶನಿ ಮತ್ತು ಶುಕ್ರ ಗ್ರಹಗಳು ಒಟ್ಟಿಗೆ ಇರುವುದರಿಂದ ದೈಹಿಕ ಸಮಸ್ಯೆಗಳು ಉಂಟಾಗುತ್ತವೆ. ವೈವಾಹಿಕ ಜೀವನವು ಅಸ್ತವ್ಯಸ್ತವಾಗಿಯೇ ಇರುತ್ತದೆ. ಸೂರ್ಯ, ಶುಕ್ರ ಮತ್ತು ಶನಿಯ ಸಂಯೋಗದಿಂದಾಗಿ ಮೀನ, ತುಲಾ ಮತ್ತು ಧನು ರಾಶಿಯ ಜನರು ಏಪ್ರಿಲ್ 14 ರವರೆಗೆ ಜಾಗರೂಕರಾಗಿರಬೇಕು.

ಶುಕ್ರ-ಮಂಗಳ ಸಂಯೋಗ:
ಶುಕ್ರನು ಮೇ 31 ರವರೆಗೆ ಮೀನ ರಾಶಿಯಲ್ಲಿ ಇರುತ್ತಾನೆ. ಜೂನ್ 29 ರವರೆಗೆ ಮಂಗಳನು ಈ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಮೀನ ರಾಶಿಯಲ್ಲಿ ಶುಕ್ರ ಮತ್ತು ಮಂಗಳನ ಗ್ರಹಗಳ ಸಂಯೋಗವಾಗಲಿದೆ. ಇದು ಕೂಡ ಕೆಲ ರಾಶಿಯವರ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಮೇಷ, ಸಿಂಹ, ಕನ್ಯಾ, ಧನು ಮತ್ತು ಮೀನ ರಾಶಿಯ ಜನರು ಜಾಗರೂಕರಾಗಿರಬೇಕು.












Click it and Unblock the Notifications