Horoscope Today: ದಿನ ಭವಿಷ್ಯ ಜನವರಿ 9- ಗುರುವಾರ ಈ ರಾಶಿಗೆ ಗುರುರಾಯರ ಕೃಪೆಯಿಂದ ಹೊಸ ಉದ್ಯೋಗ ಯೋಗ

ಜನವರಿ 9 ಕೆಲವು ರಾಶಿಗಳಿಗೆ ಸಂತೋಷ ಮತ್ತು ಯಶಸ್ಸನ್ನು ತರಲಿದೆ. ಗ್ರಹಗಳ ಚಲನೆ ಮತ್ತು ಶುಭ ಯೋಗದ ಕಾರಣದಿಂದಾಗಿ ಈ ರಾಶಿಗಳ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ವೃತ್ತಿ, ಹಣ, ಆರೋಗ್ಯ ಮತ್ತು ಸಂಬಂಧಗಳಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುವ ಮತ್ತು ಹೊಸ ಅವಕಾಶಗಳ ಲಾಭವನ್ನು ಪಡೆಯುವ ದಿನವಿದು. ಹಾಗಾದರೆ ಯಾವ ರಾಶಿಯವರಿಗೆ ಜನವರಿ 9 ಅತ್ಯಂತ ಮಂಗಳಕರವಾಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಜನವರಿ 9 ಬಹಳ ಶುಭಕರವಾಗಿದೆ. ನಿಮ್ಮ ಶ್ರಮದ ಫಲವನ್ನು ಈ ದಿನ ಪಡೆಯುವಿರಿ. ಕೆಲಸದಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರುತ್ತವೆ. ನೀವು ವ್ಯಾಪಾರ ಮಾಡಿವಂತವರಾಗಿದ್ದರೆ ಈ ದಿನ ದೊಡ್ಡ ಲಾಭವನ್ನು ಗಳಿಸಬಹುದು. ಗುರುವಾರ ಹೊಸ ಕೆಲಸವನ್ನು ಪ್ರಾರಂಭಿಸುವುದು ಸಹ ನಿಮಗೆ ಪ್ರಯೋಜನಕಾರಿಯಾಗಿದೆ.

Horoscope today january 9 this zodiac sign has a new job opportunity by grace of guru rayaru

ಅಷ್ಟೇ ಅಲ್ಲದೆ ಮೇಷ ಜನವರಿ 9 ಅದೃಷ್ಟದ ರಾಶಿಯಾಗಿದೆ. ಹೀಗಾಗಿ ಈ ದಿನ ವಿವಿಧ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಸ್ನೇಹಿತರಿಂದ ದ್ರೋಹಕ್ಕೆ ಒಳಗಾಗಬಹುದು ಎಚ್ಚರದಿಂದ ಇರಿ. ಆತ್ಮವಿಶ್ವಾಸದ ಕೊರತೆಯೂ ಇರುತ್ತದೆ. ಉದ್ಯೋಗ ಬದಲಾವಣೆಯ ಸಾಧ್ಯತೆಗಳಿವೆ. ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬೆಳಿಗ್ಗೆ ವಿಷ್ಣುವಿನ ಆರಾಧನೆ ಮಾಡಿ. ಸಂಜೆ ದೀಪ ಬೆಳಗಿಸುವುದು ಶುಭ ಫಲವನ್ನು ನೀಡುತ್ತದೆ.

ವೃಷಭ ರಾಶಿ

ಈ ದಿನ ವೃಷಭ ರಾಶಿಯವರಿಗೆ ಸಂತೋಷವನ್ನು ತರಲಿದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಸಾಲ ನೀಡಿದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ನೀವು ಕೆಲವು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯ ತುಂಬಾ ಮಂಗಳಕರವಾಗಿದೆ. ಗುರುವಾರ ನೀವು ಶುಭ ಅಥವಾ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸುವಿರಿ. ವ್ಯಾಪಾರದಲ್ಲಿ ಲಾಭ ಹೆಚ್ಚಳ ಕಂಡುಬರಲಿದೆ. ಬೆಳಿಗ್ಗೆ ವಿಷ್ಣುವಿನ ಮಂತ್ರವನ್ನು ಪಠಿಸಿ. ಅಗತ್ಯ ಇರುವವರಿಗೆ ದಾನ ಮಾಡಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಜನವರಿ 9 ಮಂಗಳಕರ ದಿನವಾಗಿದೆ. ವಿಷ್ಣುವಿನ ಆಶೀರ್ವಾದಿಂದಾಗಿ ಸಮಾಜಿದಲ್ಲಿ ಗೌರವಗಳು ಹೆಚ್ಚಾಗುತ್ತದೆ. ಧಾರ್ಮಿಕ ಸ್ಥಳದಲ್ಲಿ ಪವಿತ್ರ ಸ್ನಾನದ ಸಾಧ್ಯತೆಗಳಿವೆ. ಶೈಕ್ಷಣಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಬೆಳಿಗ್ಗೆ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ ಮತ್ತು ಗುರು ರಾಯರನ್ನು ಜಪಿಸಿ. ಶುಭ ಫಲ ಸಿಗಲಿದೆ.

ಕಟಕ ರಾಶಿ

ಜನವರಿ 9 ಕಟಕ ರಾಶಿಯವರಿಗೆ ಅಷ್ಟೊಂದು ಶುಭವಾಗಿರುವುದಿಲ್ಲ. ಸಣ್ಣಪುಟ್ಟ ವಿಷಯಗಳನ್ನು ಪ್ರತಿಷ್ಠೆಯ ವಿಷಯವನ್ನಾಗಿ ನೋಡಬೇಡಿ. ಜನರೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ. ನಿಮ್ಮ ಕೆಲಸದಲ್ಲಿ ಸಂಗಾತಿಯಿಂದ ಬೆಂಬಲ ಸಿಗಲಿದೆ. ಗುರುರಾಯರ ಆಶೀರ್ವಾದ ಪಡೆಯಲು ಈ ದಿನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ವಿಷ್ಣುವಿನ ಮಂತ್ರವನ್ನು ಜಪಿಸಿ ಜೊತೆಗೆ ಬಡವರಿಗೆ ದಾನ ಮಾಡಿ.

ಸಿಂಹ ರಾಶಿ

ಈ ದಿನ ಸಿಂಹ ರಾಶಿಯವರ ವ್ಯಾಪಾರ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡಲಿವೆ. ಮಾತಿನ ಪ್ರಭಾವದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಬಟ್ಟೆ ಇತ್ಯಾದಿಗಳನ್ನು ಉಡುಗೊರೆಯಾಗಿ ಪಡೆಯುವಿರಿ. ಕೆಲಸದ ಸ್ಥಳದಲ್ಲಿ ಬದಲಾವಣೆ ಕಂಡುಬರಬಹುದು. ಆಂತರಿಕ ತೃಪ್ತಿ ಸಿಗಲಿದೆ.

ನೀವು ಆರೋಗ್ಯದಲ್ಲಿ ಸುಧಾರಣೆಯನ್ನು ಸಹ ಅನುಭವಿಸುವಿರಿ. ಈ ದಿನವು ಯಾವುದೇ ದೊಡ್ಡ ನಿರ್ಧಾರಕ್ಕೆ ಅನುಕೂಲಕರ ಸಮಯವೂ ಆಗಿದೆ. ಬೆಳಗ್ಗೆ ವಿಷ್ಣುವನ್ನು ಆರಾಧಿಸಿ, ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ. ಅಲ್ಲದೆ ಬೀದಿ ಪ್ರಾಣಿಗಳಿಗೆ ಸಹಾಯ ಮಾಡುವುದು ಕೂಡ ತುಂಬಾ ಉತ್ತಮ ಫಲಗಳನ್ನು ನೀಡುತ್ತದೆ.

ಕನ್ಯಾ ರಾಶಿ

ನೀವು ಮಹಿಳಾ ಅಧಿಕಾರಿಯಿಂದ ಬೆಂಬಲವನ್ನು ಪಡೆಯುತ್ತೀರಿ. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯ ಇರುತ್ತದೆ. ಕುಟುಂಬದಿಂದ ಬೆಂಬಲ ಸಿಗಲಿದೆ. ಬೆಳಗ್ಗೆ ಹಸುವಿಗೆ ಆಹಾರ ನೀಡಿ ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಜನವರಿ 9 ಅದ್ಭುತವಾಗಿರುತ್ತದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ನೀವು ಮೇಲಾಧಿಕಾರಿಗಳ ಸಹಾಯದಿಂದ ಸಾಕಷ್ಟು ಅಭಿವೃದ್ಧಿ ಹೊಂದಬಹುದು. ಇದರಿಂದ ಹಣ ಗಳಿಸುವಿರಿ. ಅಗತ್ಯ ಇರುವವರಿಗೆ ದಾನ ಮಾಡಿ. ವಸ್ತ್ರ ದಾನದಿಂದ ವಿಷ್ಣುವನ್ನು ಮೆಚ್ಚಿಸಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಲಿದ್ದಾರೆ. ನೀವು ಪ್ರವಾಸಕ್ಕೆ ಹೋಗುತ್ತಿದ್ದರೆ, ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗಿನ ಸಂಬಂಧಗಳು ಬಲಗೊಳ್ಳುತ್ತವೆ. ಅನಾವಶ್ಯಕ ಓಡಾಟವಿರುತ್ತದೆ, ಇದರಿಂದ ಮನಸ್ಸು ವಿಚಲಿತವಾಗಬಹುದು. ತಾಳ್ಮೆಯನ್ನು ಕಾಪಾಡಿಕೊಳ್ಳಿ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಬೆಳಿಗ್ಗೆ ವಿಷ್ಣು ಮಂತ್ರವನ್ನು ಪಠಿಸಿ. ಅನಾಥರಿಗೆ ಕೈಲಾದ ಸಹಾಯ ಮಾಡಿ. ಇವರ ಆಶೀರ್ವಾದ ನಿಮಗೆ ಕೊನೆಯವರೆಗೂ ಕೂ ಹಿಡಿದು ಕಾಪಾಡುತ್ತದೆ.

ಧನು ರಾಶಿ

ಜನವರಿ 9 ಧನು ರಾಶಿಯವರಿಗೆ ಮಿಶ್ರ ದಿನವಾಗಿದೆ. ಈ ದಿನ ಸಂಪತ್ತು, ಗೌರವ ಮತ್ತು ಖ್ಯಾತಿ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಅಧಿಕ ಖರ್ಚು ಇರುತ್ತದೆ. ನೆರೆಹೊರೆಯವರಿಗೆ ಅಗತ್ಯವಿರುವ ಸಹಾಯ ಮಾಡಿ. ಇದರಿಂದ ವಿಷ್ಣುದೇವನ ಕೃಪೆಯನ್ನು ನೀವು ಪಡೆಯುವಿರಿ.

ಮಕರ ರಾಶಿ

ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮಗೆ ಸಂಗಾತಿಯಿಂದ ಬೆಂಬಲ ಸಿಗಲಿದೆ. ತಾಳ್ಮೆ ಹೆಚ್ಚಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಗೌರವ ಹೆಚ್ಚಾಗಲಿದೆ. ಮಿತ್ರರ ನೆರವಿನಿಂದ ವ್ಯಾಪಾರ ವೃದ್ಧಿಯಾಗಲಿದೆ. ಅಗತ್ಯ ಇರುವವರಿಗೆ ಅನ್ನ ದಾನ ಮಾಡಿ, ಕಪ್ಪು ನಾಯಿಗೆ ಶನಿವಾರದಂದು ಆಹಾರ ನೀಡಿ. ಇದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.

ಕುಂಭ ರಾಶಿ

ವ್ಯಾಪಾರ ವಿಷಯಗಳಲ್ಲಿ ಕುಂಭ ರಾಶಿಯವರು ಯಶಸ್ಸನ್ನು ಪಡೆಯುತ್ತಾರೆ. ಸ್ನೇಹಿತರ ಸಹಾಯದಿಂದ ಹೊಸ ವ್ಯಾಪಾರ ಶುರು ಮಾಡಲು ಅವಕಾಶಗಳನ್ನು ಪಡೆಯಬಹುದು. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ಬೆಳಿಗ್ಗೆ ವಿಷ್ಣುವಿನ ಮಂತ್ರವನ್ನು ಪಠಿಸಿ ಮತ್ತು ಸಂಜೆ ವಿಷ್ಣುವಿನ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪವನ್ನು ಬೆಳಗಿಸಿ.

ಮೀನ ರಾಶಿ

ಜನವರಿ 9 ಮೀನ ರಾಶಿಯವರಿಗೆ ತುಂಬಾ ವಿಶೇಷವಾಗಿರುತ್ತದೆ. ಪ್ರೇಮ ಸಂಬಂಧಗಳಲ್ಲಿ ಹೊಸತನ ಇರುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಹಳೆಯ ಸಮಸ್ಯೆ ಪರಿಹಾರಗೊಳ್ಳುತ್ತದೆ. ಅದೃಷ್ಟ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯ ಇರುವ ಮಾಹಿತಿಯನ್ನು ಅವಲಂಭಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+