Horoscope Today: ದಿನ ಭವಿಷ್ಯ ಜನವರಿ 23- ಗುರು ರಾಯರ ಆಶೀರ್ವಾದದಿಂದ ಈ ರಾಶಿಗೆ ಲಕ್ಷಾಧಿಪತಿ ಯೋಗ
ಜನವರಿ 23 ಗುರುವಾರ ಗ್ರಹಗಳ ಸಂಚಾರ ಹಾಗೂ ನಕ್ಷತ್ರ ಬದಲಾವಣೆಯಿಂದಾಗಿ ಕೆಲ ರಾಶಿಯವರ ಜೀವನ ಬದಲಾಗಲಿದೆ. ಈ ದಿನ ಗುರು ರಾಯರು ಹಾಗೂ ವಿಷ್ಣು ದೇವರನ್ನು ಪೂಜಿಸುವುದು ತುಂಬಾ ಮಂಗಳಕರ ಫಲಿತಾಂಶ ನೀಡಲಿದೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರು ಅದೃಷ್ಟವಂತರು ಎಂದು ತಿಳಿಯೋಣ.
ಮೇಷ ರಾಶಿ
ಜನವರಿ 23ರಂದು ಮೇಷ ಅದೃಷ್ಟ ರಾಶಿಯವಾಗಿದೆ. ಕುಟುಂಬದಲ್ಲಿ ಶಾಂತಿ, ವೈವಾಹಿಕ ಜೀವನದಲ್ಲಿ ನೆಮ್ಮದಿ ಸಿಗಲಿದೆ. ಆಸ್ತಿ ಹೆಚ್ಚಳವಾಗುವುದು. ವ್ಯವಹಾರದಲ್ಲಿ ಖ್ಯಾತಿ ಅಧಿಕವಾಗುವುದು. ಉದ್ಯೋಗ ಸಮಸ್ಯೆಗಳು ದೂರವಾಗುತ್ತವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ನಿರುದ್ಯೋಗಿಗಳಿಗೆ ಅಂದುಕೊಂಡ ಉದ್ಯೋಗ ಸಿಗುವ ಸಮಯ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಜನವರಿ 23 ಮಿಶ್ರ ದಿನವಾಗಿದೆ. ಈ ದಿನ ಮಾಡಿದ ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಹೆಚ್ಚು ಕೆಲಸದಿಂದಾಗಿ ನೀವು ಒತ್ತಡಕ್ಕೊಳಗಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹೊಸ ಆದಾಯ ಮೂಲಗಳತ್ತ ಗಮನಹರಿಸಿ. ಚಿಂತಿಸಬೇಡಿ. ಆರ್ಥಿಕ ಜೀವನ ದಿನ ಕಳೆದಂತೆ ಬಲಗೊಳ್ಳಲಿದೆ.
ಮಿಥುನ ರಾಶಿ
ಈ ದಿನ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳುತ್ತದೆ. ಮನೆಯ ಮುಖ್ಯಸ್ಥರೊಂದಿಗೆ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಈ ಸಮಯದಲ್ಲಿ ಶಾಂತವಾಗಿರಿ ಮತ್ತು ಆಧ್ಯಾತ್ಮಿಕತೆಯ ಸಹಾಯ ಪಡೆಯಿರಿ. ಈ ದಿನ ಅಗತ್ಯವಿರುವವರಿಗೆ ದಾನ ಮಾಡಿ. ಬಡವರಿಗೆ ಊಟ ಹಾಕಿ. ಇದರಿಂದ ಜೀವನ ಸುಂದರವಾಗಿರಲಿದೆ.
ಕರ್ಕಾಟಕ ರಾಶಿ
ಕಟಕ ರಾಶಿಯವರಿಗೆ ಜನವರಿ 23 ಅದ್ಭುತವಾಗಿದೆ. ಸಂಪತ್ತು, ಗೌರವ ಮತ್ತು ಖ್ಯಾತಿಯಲ್ಲಿ ಹೆಚ್ಚಳವಾಗುತ್ತದೆ. ಆರ್ಥಿಕ ಲಾಭ ಉಂಟಾಗಬಹುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ನಿಮಗೆ ಸ್ನೇಹಿತರಿಂದ ಕೆಲಸದಲ್ಲಿ ಬೆಂಬಲ ಸಿಗುವುದು. ನೀವು ಇಂದು ಸಂಬಂಧಿಕರು ಅಥವಾ ಸ್ನೇಹಿತರ ಶುಭ ಸಮಾರಂಭದಲ್ಲಿ ಭಾಗವಹಿಸಬಹುದು. ಕಷ್ಟಗಳ ನಿವಾರಣೆಗೆ ಈ ದಿನ ಗುರು ರಾಯರನ್ನು ಪೂಜಿಸಿ.
ಸಿಂಹ ರಾಶಿ
ನಿಮಗೆ ಉನ್ನತ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಹೆತ್ತವರ ಆಶೀರ್ವಾದದೊಂದಿಗೆ ಕೆಲಸ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಲು ಎಲ್ಲಾ ಸಾಧ್ಯತೆಗಳಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ಹೆಚ್ಚು ಹಣ ಖರ್ಚಾಗುವುದು. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಕುಟುಂಬ ಕೆಲಸಗಳಲ್ಲಿ ನಿರತರಾಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಹಿಳೆಯರೊಂದಿಗೆ ಹೆಚ್ಚು ಮಾತನಾಡುವುದನ್ನು ತಪ್ಪಿಸಿ. ಈ ದಿನ ಒಳ್ಳೆಯದಾಗಿರುತ್ತದೆ.
ತುಲಾ ರಾಶಿ
ನಿಮ್ಮ ಮಾತನ್ನು ನಿಯಂತ್ರಿಸಿ. ಸಂಪತ್ತು, ಖ್ಯಾತಿ ಹೆಚ್ಚಾಗುವುದು. ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ಫಲಪ್ರದವಾಗುತ್ತವೆ. ಕಾರಣವಿಲ್ಲದೆ ಯಾರೊಂದಿಗೂ ಸಂಘರ್ಷಕ್ಕೆ ಇಳಿಯಬೇಡಿ, ಇಲ್ಲದಿದ್ದರೆ ನೀವು ನಷ್ಟ ಅನುಭವಿಸಬಹುದು. ಅಗತ್ಯ ಇರುವವರಿಗೆ ಬಿಳಿ ಬಟ್ಟೆಗಳನ್ನು ದಾನ ಮಾಡಿ.
ವೃಶ್ಚಿಕ ರಾಶಿ
ಈ ದಿನ ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಜನರು ನಿಮ್ಮ ಸ್ವಭಾವದತ್ತ ಆಕರ್ಷಿತರಾಗುತ್ತಾರೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ನಿಮಗೆ ಕೆಲಸದಲ್ಲಿ ಸರ್ಕಾರದಿಂದ ಬೆಂಬಲ ಸಿಗುತ್ತದೆ. ಕುಟುಂಬದಲ್ಲಿ ಕೆಲವು ವಿವಾಹ ಸಮಾರಂಭಗಳು ನಡೆಯಲಿವೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಹೆಚ್ಚು ಹಣ ಸಿಗುವುದು. ಈ ದಿನದ ಅದೃಷ್ಟ ರಾಶಿಗಳಲ್ಲಿ ವೃಶ್ಚಿಕ ರಾಶಿ ಕೂಡ ಸೇರಿದೆ.
ಧನು ರಾಶಿ
ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಅತ್ತೆ-ಮಾವರಿಂದ ನಿಮಗೆ ಹಣದ ಬೆಂಬಲ ಸಿಗುತ್ತದೆ. ಈ ದಿನ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗುವುದು. ಉದ್ಯೋಗದಲ್ಲಿ ಬಡ್ತಿ ಹೆಚ್ಚಾಗುವ ಸಾಧ್ಯತೆಯೂ ಇದೆ.
ಮಕರ ರಾಶಿ
ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ನೀವು ಅನಗತ್ಯ ಗೊಂದಲ ಮತ್ತು ಒತ್ತಡವನ್ನು ಎದುರಿಸಬೇಕಾಗಬಹುದು. ಆರ್ಥಿಕ ಅಪಾಯಗಳಿಂದ ದೂರವಿರಿ. ಈ ಸಮಯದಲ್ಲಿ ಸಾಲ ಮಾಡುವುದು ಅಪಾಯ. ಎಲ್ಲಾ ಸಮಸ್ಯೆಗಳು ಒಟ್ಟಿಗೆ ಬಂದು ಒತ್ತಡ ಹೆಚ್ಚಾಗಬಹುದು. ಇದರಿಂದ ಧೈರ್ಯ ಕಳೆದುಕೊಳ್ಳಬೆಡಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಮಂಗಳಕರವಾಗಿದೆ. ಅನಗತ್ಯವಾಗಿ ಓಡಾಡಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಎಚ್ಚರಿಕೆಯಿಂದ ಚಾಲನೆ ಮಾಡಿ. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದು ಮನೆಯಿಂದ ಹೊರಗೆ ಹೋದರೆ ದಿನ ಚೆನ್ನಾಗಿರುತ್ತದೆ. ಹಸಿದ ಪ್ರಾಣಿಗಳಿಗೆ ಆಹಾರ ನೀಡಿ. ಜೀವನದಲ್ಲಿ ಬರುವ ಸಮಸ್ಯೆಗಳು ದೂರವಾಗುತ್ತವೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುವುದು. ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ಮನೆಯಲ್ಲಿ ವಿವಾದಗಳು ದೂರವಾಗಲಿದೆ. ಪ್ರಯಾಣ ಮಾಡಲು ಇದು ಉತ್ತಮ ಸಮಯ ಅಲ್ಲ. ಆಧ್ಯಾತ್ಮದತ್ತ ಹೆಚ್ಚು ಗಮನ ಗರಿಸುವಿರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications