Horoscope Today: ದಿನ ಭವಿಷ್ಯ ಜನವರಿ 20- ಈ ರಾಶಿಗೆ ಶಿವನ ಕೃಪೆಯಿಂದ ಶುಭ ಸುದ್ದಿಯೊಂದಿಗೆ ದಿನ ಆರಂಭ

ಜನವರಿ 20 ಸೋಮವಾರ ಕೆಲ ರಾಶಿಯವರಿಗೆ ಅದ್ಭುತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ಗ್ರಹಗಳ ಸ್ಥಾನ ಕೆಲ ರಾಶಿಯವರಿಗೆ ವೃತ್ತಿ, ಹಣ ಮತ್ತು ವೈಯಕ್ತಿಕ ಜೀವನದಲ್ಲಿ ಸಂತೋಷ ಸಿಗುವುದು. ಸಂಪತ್ತಿನಲ್ಲಿ ವೃದ್ಧಿ, ಧನಲಾಭ, ವೃತ್ತಿಯಲ್ಲಿ ಏಳಿಗೆಯನ್ನು ಪಡೆಯುವ ಸುಸಂದರ್ಭ ಇದಾಗಿದೆ. ಹಾಗಾದರೆ ಈ ದಿನ ಯಾರಿಗೆ ವಿಶೇಷವಾಗಿರುತ್ತದೆ? 12 ರಾಶಿಗಳ ಭವಿಷ್ಯ ಇಂದು ಹೇಗಿದೆ ಎಂದು ತಿಳಿಯೋಣ.

ಮೇಷ ರಾಶಿ

ಜನವರಿ 20 ಸೋಮವಾರ ಮೇಷ ರಾಶಿಯವರಿಗೆ ಶಿವ ದೇವನ ಕೃಪೆಯಿಂದ ಎಲ್ಲಾ ಸಮಸ್ಯೆಗಳು ದೂರವಾಗಲಿದೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಪ್ರಯಾಣ ಆಹ್ಲಾದಕರವಾಗಿರುವುದು. ಕೌಟುಂಬಿಕ ಸಂತೋಷ, ಹಣಕಾಸಿನ ವಿಷಯಗಳಲ್ಲಿ ಸುಧಾರಣೆಯ ಸಾಧ್ಯತೆಗಳಿವೆ. ಕುಟುಂಬದ ಎಲ್ಲ ಸದಸ್ಯರಿಗೂ ನೀವು ಏನಾದರೂ ಒಳ್ಳೆಯದನ್ನು ಮಾಡುತ್ತೀರಿ. ಬೆಳಿಗ್ಗೆ ಶಿವ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ ಶಿವ ಮಂತ್ರವನ್ನು ಪಠಿಸಿ. ಇದರಿಂದಾಗಿ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.

Horoscope today january 20 these zodiac signs day start with good news by grace of lord shiva

ವೃಷಭ ರಾಶಿ

ಸೋಮವಾರ ವೃಷಭ ಅದೃಷ್ಟ ರಾಶಿಯಾಗಿರುವುದಿಲ್ಲ. ಕುಟುಂಬದಲ್ಲಿ ಒತ್ತಡ, ಆರೋಗ್ಯದಲ್ಲಿ ಸಮಸ್ಯೆ ಕಂಡು ಬರಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಆರ್ಥಿಕ ನಷ್ಟವಾಗುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಆದರೆ ಮನಸ್ಸಿನಲ್ಲಿಂದು ಭವಿಷ್ಯದ ಬಗ್ಗೆ ಚಿಂತೆ ಕಾಡಲಿದೆ. ಬಡವರಿಗೆ ಮತ್ತು ಹಸಿದ ಪ್ರಾಣಿಗಳಿಗೆ ಊಟ ಹಾಕಿ. ಶಿವ ಮಂತ್ರವನ್ನು ಪಠಿಸಿ. ದಾಂಪತ್ಯದಲ್ಲಿನ ಸಮಸ್ಯೆಗಳು ಬಗೆ ಹರಿಯುತ್ತವೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ಕುಟುಂಬ ಜೀವನ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಆರ್ಥಿಕ ಸ್ಥಿತಿಯಲ್ಲಿ ಬಲ, ಸಂಬಂಧದಲ್ಲಿ ನಂಬಿಕೆ ಹೆಚ್ಚಾಗಲಿದೆ. ಸೃಜನಶೀಲ ಪ್ರಯತ್ನಗಳು ಫಲಪ್ರದವಾಗುತ್ತವೆ. ಬೆಳಗ್ಗೆ ಶಿವ ಮಂತ್ರವನ್ನು ಜಪಿಸಿ ಹಸುವಿಗೆ ಹಸಿರು ಮೇವು ತಿನ್ನಿಸಿ, ನಿಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿ. ಇದರಿಂದ ಶತ್ರುಗಳ ಕಾಟ ದೂರವಾಗಲಿದೆ.

ಕರ್ಕಾಟಕ ರಾಶಿ

ಕಟಕ ರಾಶಿಯವರಿಗೆ ಜನವರಿ 20 ಅಶುಭ ದಿನವಾಗಿದೆ. ಪ್ರಯಾಣದ ವೇಳೆ ಜಾಗರೂಕರಾಗಿರಿ. ಕೇತು ಮತ್ತು ಚಂದ್ರನ ಸಂಯೋಗ ಮಾನಸಿಕ ಒತ್ತಡವನ್ನು ನೀಡುತ್ತದೆ. ನೀವು ಸ್ನೇಹಿತ ಅಥವಾ ಸಂಬಂಧಿಕರಿಂದ ಮೋಸಕ್ಕೊಳಗಾಗಬಹುದು. ಕೌಟುಂಬಿಕ ಒತ್ತಡ ಉಂಟಾಗಲಿದೆ. ಸಂಗಾತಿಯ ಬೆಂಬಲ ಪಡೆಯುವಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಇಂದು ಬೆಳಗ್ಗೆ ಸೂರ್ಯ ಮಂತ್ರವನ್ನು ಪಠಿಸಿ. ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.

ಸಿಂಹ ರಾಶಿ

ಜನವರಿ 20 ಸೋಮವಾರ ಸಿಂಹ ರಾಶಿಯವರಿಗೆ ಮಂಗಳಕರ ದಿನವಾಗಿದೆ. ಈ ದಿನ ಕೆಲವು ಒಳ್ಳೆಯ ಸುದ್ದಿಗಳು ಸಿಗಲಿದೆ. ದೀರ್ಘ ಪ್ರಯಾಣದ ಸಾಧ್ಯತೆಗಳು ಇವೆ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮಗೆ ಸರ್ಕಾರದಿಂದ ಬೆಂಬಲ ಸಿಗುವುದು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಆಧ್ಯಾತ್ಮಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ದಿನ ಸೂರ್ಯ ಮಂತ್ರವನ್ನು ಪಠಿಸಿ, ಮನೆ ದೇವರನ್ನು ಪೂಜಿಸಿ.

ಕನ್ಯಾ ರಾಶಿ

ಈ ದಿನ ಕನ್ಯಾ ರಾಶಿಯವರಿಗೆ ಮಿಶ್ರ ಫಲ ನೀಡುವುದು. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗದಲ್ಲಿ ಪ್ರಗತಿ, ಸಂಬಂಧಗಳಲ್ಲಿ ನಂಬಿಕೆ ಹೆಚ್ಚಾಗಲಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಆದರೆ ಹೆಚ್ಚು ಶ್ರಮಪಟ್ಟಾಗ ಮಾತ್ರ ಲಾಭ ಪಡೆಯಲು ಸಾಧ್ಯ. ಸಮಾಜದಲ್ಲಿ ಗೌರವ ಹಾಗೂ ಕೀರ್ತಿ ಅಂದುಕೊಂಡಿದ್ದಕ್ಕಿಂತೆ ಅಧಿಕವಾಗುತ್ತದೆ. ಹಸಿದ ಹಸುವಿಗೆ ಹಸಿರು ಮೇವು ತಿನ್ನಿಸಿ, ಶಿವ ದೇವನನ್ನು ಪೂಜಿಸಿದರೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.

ತುಲಾ ರಾಶಿ

ಈ ದಿನ ಮಾಡಿದ ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಸಹೋದರ ಸಹೋದರಿಯರಿಂದ ನಿಮಗೆ ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಆರ್ಥಿಕ ವಿಷಯಗಳು ಸುಧಾರಿಸುತ್ತವೆ. ನೀವು ಅನಗತ್ಯವಾಗಿ ಓಡಾಡಬೇಕಾಗುತ್ತದೆ. ತುಲಾ ರಾಶಿ ಶಿವ ಮೆಚ್ಚುವ ರಾಶಿಗಳಲ್ಲಿ ಒಂದಾಗಿದೆ. ಹೀಗಾಗಿ ಇಂದು ಮಾಡುವ ದಾನ ಹಾಗೂ ಧಾರ್ಮಿಕ ಕಾರ್ಯಗಳಿಂದಾಗಿ ವಿಶೇಷ ಅನುಗ್ರಹವನ್ನು ನೀವು ಪಡೆಯುವಿರಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಸೋಮವಾರ ಮಂಗಳಕರವಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ, ಲಾಭದಾಯಕ ವ್ಯವಹಾರಗಳು ನಿಮ್ಮ ಅಭಿವೃದ್ದಿಗೆ ಶಕ್ತಿಯಾಗುವುದು. ಸಾಮಾಜಿಕ ಕಾರ್ಯಗಳಿಂದಾಗಿ ಖ್ಯಾತಿಯೂ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಸ್ತಿ, ವಾಹನ, ಮನೆ ಖರೀದಿ ಮಾಡಲು ಇದು ಉತ್ತಮ ಸಮಯ. ಬೆಳಿಗ್ಗೆ ಹನುಮಾನ್ ಚಾಲೀಸಾ ಪಠಿಸಿ. ಅಗತ್ಯ ಇರುವವರಿಗೆ ಅನ್ನದಾನ ಮಾಡಿ. ಈ ಪೂಣ್ಯದ ಫಲ ನಿಮ್ಮನ್ನು ಸದಾ ಕಾಯುತ್ತದೆ.

ಧನು ರಾಶಿ

ಜನವರಿ 20 ಧನು ರಾಶಿಯವರಿಗೆ ಶುಭ ದಿನವಾಗಿದೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸುವುದು. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಬೆಳಗ್ಗೆ ಬೇಗ ಎದ್ದು ಸೂರ್ಯನಿಗೆ ಪೂಜೆ ಸಲ್ಲಿಸಿ ಶಿವನ ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪ ಹಚ್ಚಿ ಭಕ್ತಿಯಿಂದ ಶಿವ ಮಂತ್ರವನ್ನು ಪಠಿಸಿ. ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿ. ಇದರ ಫುಣ್ಯದ ಫಲ ಶೀರ್ಘದಲ್ಲೇ ನೀವು ಪಡೆಯುವಿರಿ.

ಮಕರ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಿವ ನೆಚ್ಚಿನ ರಾಶಿಗಳಲ್ಲಿ ಮಕರ ರಾಶಿ ಕೂಡ ಒಂದು. ಈ ದಿನದ ಅದೃಷ್ಟ ರಾಶಿಗಳಲ್ಲಿ ಮಕರ ರಾಶಿಯೂ ಇದೆ. ಸಂಪತ್ತು ವೃದ್ಧಿ, ಆರೋಗ್ಯ ಭಾಗ್ಯ, ರಾಜನಾಗುವ ಅವಕಾಶ, ಕೋಟ್ಯಾಧಿಪತಿಯಾಗಲು ಮಾರ್ಗಗಳನ್ನು ನೀವು ಇಂದು ಕಂಡುಕೊಳ್ಳುವಿರಿ. ಧೀರ್ಘ ಪ್ರಯಾಣ ಮಾಡಬಹುದು. ಮನೆಯಲ್ಲಿ ನೆಮ್ಮದಿ ನೆಲೆಸಲಿದೆ.

ಕುಂಭ ರಾಶಿ

ಜನವರಿ 20 ಕುಂಭ ರಾಶಿಯವರಿಗೆ ಅದೃಷ್ಟದ ದಿನವಾಗಿರುವುದಿಲ್ಲ. ಕುಟುಂಬ ಸಂಬಂಧಗಳು ಹದಗೆಡಬಹುದು. ಸಂಗಾತಿಯಿಂದ ಬೆಂಬಲ ಸಿಗದಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಶನಿಯ ಮಂತ್ರವನ್ನು ಪಠಿಸಿ. ಹಸಿದ ನಾಯಿಗೆ ಆಹಾರ ನೀಡಿ. ದಾನ ಕಾರ್ಯಗಳಲ್ಲಿ ಭಾಗಿಯಾಗಿ. ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿ.

ಮೀನ ರಾಶಿ

ಈ ದಿನ ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದ ಕೆಲಸಗಳಲ್ಲಿ ನೀವು ಇಂದು ನಿರತರಾಗುವಿರಿ. ವ್ಯವಹಾರದ ಖ್ಯಾತಿ ಹೆಚ್ಚಾಗುತ್ತದೆ.ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಬೆಳಿಗ್ಗೆ ಶಿವನನ್ನು ಪೂಜಿಸಿ ಮನೆಯಿಂದ ಹೊರಡಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+