Horoscope Today: ದಿನ ಭವಿಷ್ಯ ಜನವರಿ 17- ಈ ರಾಶಿಗೆ ಲಕ್ಷ್ಮೀ ಕೃಪೆಯಿಂದ ಸಂಪತ್ತು ದುಪ್ಪಟ್ಟು

ಜನವರಿ 17 ಶುಕ್ರವಾರ ಕೆಲವು ರಾಶಿಗಳಿಗೆ ಸಂತೋಷ ಮತ್ತು ಪ್ರಗತಿಯ ಸಂದೇಶವನ್ನು ತರಲಿದೆ. ಈ ದಿನ ಕೆಲ ರಾಶಿಯವರ ಜೀವನದಲ್ಲಿ ಹೊಸ ಉದ್ಯೋಗ ಅವಕಾಶಗಳು ಮತ್ತು ಯಶಸ್ಸಿನ ಬಾಗಿಲು ತೆರೆಯುವುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಆರ್ಥಿಕ ಸ್ಥಿತಿ ಸುಧಾರಣೆ, ಸಂಪತ್ತಿನಲ್ಲಿ ಹೆಚ್ಚಳ, ಮನೆಗೆ ಹಣದ ಆಗಮನವಾಗುವುದು. ವೃತ್ತಿಜೀವನದಲ್ಲಿ ಪ್ರಗತಿ, ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಾಗಾದರೆ ಜನವರಿ 17ರಂದು ಯಾವ ರಾಶಿಗಳಿಗೆ ಅದೃಷ್ಟ ಒಲಿಯಲಿದೆ ಎಂದು ಈಗ ತಿಳಿಯಿರಿ.

ಮೇಷ ರಾಶಿ

ಮೇಷ ರಾಶಿಯವರಿಗೆ ಜನವರಿ 17 ತುಂಬಾ ಶುಭ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯಲಿದ್ದೀರಿ. ಉದ್ಯೋಗದಲ್ಲಿ ಬಡ್ತಿ ಅಥವಾ ವ್ಯವಹಾರದಲ್ಲಿ ದೊಡ್ಡ ಲಾಭ ಸಿಗಬಹುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಇದು ಸರಿಯಾದ ಸಮಯ.

Horoscope today january 17 wealth will double for this zodiac sign due to the grace of goddess lakshmi

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಈ ದಿನ ಸಂತೋಷ ತರಲಿದೆ. ನಿಮ್ಮ ಹಿಂದಿನ ಕಠಿಣ ಪರಿಶ್ರಮದ ಫಲ ಈಗ ಸಿಗುವುದು. ನಿಮ್ಮ ಕುಟುಂಬದಿಂದ ಕೆಲಸದಲ್ಲಿ ನಿಮಗೆ ಸಂಪೂರ್ಣ ಬೆಂಬಲ ಸಿಗಲಿದೆ. ಹಣ ಗಳಿಕೆಯಲ್ಲಿ ವ್ಯತ್ಯಾಸವಾದರೆ ಕುಟುಂಬಸ್ಥರು ನಿಮಗೆ ಸಹಾಯ ಮಾಡುವರು. ಅವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ನೀವು ಪ್ರವಾಸವನ್ನು ಯೋಜಿಸುತ್ತಿದ್ದರೆ, ಅದು ಪ್ರಯೋಜನಕಾರಿಯಾಗಲಿದೆ. ಹಣದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಮಂಗಳಕರವಾಗಿದೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ಈ ದಿನ ಬಡ್ತಿ ಪಡೆಯುವಿರಿ. ವ್ಯಾಪಾರದಲ್ಲಿ ಏಳಿಗೆ, ಉದ್ಯೋಗದಲ್ಲಿ ಖ್ಯಾತಿ, ಹಣ ಸಂಪಾದನೆಯಲ್ಲಿ ಶಕ್ತಿ ಹೆಚ್ಚಾಗಲಿದೆ. ಏಕಾಂಗಿಯಾಗಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವ್ಯವಹಾರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ನೀವು ಕಾಣುವಿರಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿ ರಾಶಿಯವರಿಗೆ ಜನವರಿ 17 ಸಂಪತ್ತು, ಉತ್ತಮ ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ತಮದುಕೊಡಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸಲಿದೆ. ನೀವು ಸ್ನೇಹಿತ ಅಥವಾ ಸಂಬಂಧಿಕರ ಮನೆಗೆ ಭೇಟಿ ನೀಡಬೇಕಾಗುತ್ತದೆ. ನೀವು ದಾನದಂತಹ ಉತ್ತಮ ಕಾರ್ಯಗಳತ್ತ ಗಮನ ಹರಿಸಬಹುದು. ಬೆಳಿಗ್ಗೆ ಬಡವರಿಗೆ ಅಕ್ಕಿ ಮತ್ತು ಧಾನ್ಯಗಳನ್ನು ದಾನ ಮಾಡಿ. ಸೂರ್ಯನಿಗೆ ನೀರನ್ನು ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಿ.

ಸಿಂಹ ರಾಶಿ

ಜನವರಿ 17ರಂದು ಸಿಂಹ ರಾಶಿಯವರಿಗೆ ಪ್ರಗತಿಯ ಹಾದಿ ತೆರೆದುಕೊಳ್ಳಲಿದೆ. ನಿಮ್ಮ ಕೆಲಸದಲ್ಲಿ ಗೌರವ ಹೆಚ್ಚಾಗಲಿದೆ. ಬಡ್ತಿ ಪಡೆಯುವ ಅಥವಾ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವಕಾಶವಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಜನರು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತಾರೆ. ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳುವ ಸಮಯ ಇದು. ಈ ದಿನ ಲಕ್ಷ್ಮೀ ದೇವಿ ಆಶೀರ್ವಾದವನ್ನು ನೀವು ಪಡೆಯುವಿರಿ.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರಿಗೆ ಜನವರಿ 17 ಯಶಸ್ಸು ಮತ್ತು ಸಂತೋಷದ ದಿನವಾಗಿದೆ. ಮನಸ್ಸಿನಲ್ಲಿ ಶಾಂತಿ, ಮನೆಯಲ್ಲಿ ಸಂಪತ್ತು, ಸಮಾಜದಲ್ಲಿ ಕೀರ್ತಿ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಸಾಕಷ್ಟು ಆದಾಯ ಸಿಗಲಿದೆ. ನೀವು ಯಾವುದೇ ಕೆಲಸದಲ್ಲಿ ಹೂಡಿಕೆ ಮಾಡಿದ್ದರೆ, ಅದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅಲ್ಲದೆ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಈ ದಿನ ನೀವು ಲಕ್ಷ್ಮೀ ದೇವಿಯ ಆಶೀರ್ವಾದದಿಂದಾಗಿ ಉಲ್ಲಾಸದಿಂದ ಇರುವಿರಿ. ನಿಮ್ಮ ಮನೆಯಲ್ಲಿ ಸದಾ ಸಂಪತ್ತು ತಾಂಡವ ಆಡಲಿದೆ.

ತುಲಾ ರಾಶಿ

ಜನವರಿ 17 ತುಲಾ ರಾಶಿಯವರಿಗೆ ಮಂಗಳಕರ ದಿನವಾಗಿದೆ. ಲಕ್ಷ್ಮೀ ದೇವಿಯ ಕೃಪೆಯಿಂದ ಎಲ್ಲಾ ಆರ್ಥಿಕ ಸಮಸ್ಯೆಗಳು ಇಂದು ದೂರವಾಗುತ್ತವೆ. ಹಾಳಾದ ಕೆಲಸಗಳನ್ನು ಬುದ್ಧಿವಂತಿಕೆ ಮತ್ತು ಕೌಶಲ್ಯದ ಮೂಲಕ ಸಾಧಿಸುವಿರಿ. ನಿಮ್ಮ ಆರೋಗ್ಯದ ಜೊತೆ ಆಟವಾಡಬೇಡಿ. ನಿರ್ಲಕ್ಷ್ಯ ತೋರದೆ ಆರೋಗ್ಯದ ಬಗ್ಗೆ ಗಮನ ಕೊಡಿ. ವ್ಯವಹಾರದಲ್ಲಿ ಏರಿಳಿತಗಳು ಇರುತ್ತವೆ ಆದರೆ ಭಯಪಡಬೇಡಿ. ಲಕ್ಷ್ಮೀ ದೇವಿಯನ್ನು ಈ ದಿನ ಆರಾಧನೆ ಮಾಡಿ.

ವೃಶ್ಚಿಕ ರಾಶಿ

ಈ ದಿನ ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಇಂದು ವೃಶ್ಚಿಕ ರಾಶೀಯವರಿಗೆ ಒಳ್ಳೆಯ ದಿನವಾಗಿದೆ. ನೀವು ಉತ್ಸಾಹದಿಂದ ಕೆಲಸ ಮಾಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಒಳ್ಳೆಯದು. ಬೆಳಿಗ್ಗೆ ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಲಕ್ಷ್ಮೀದೇವಿ ಮಂತ್ರವನ್ನು ಪಠಿಸಿ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ದೊಡ್ಡ ಬದಲಾವಣೆಗಳನ್ನು ತರಲಿದೆ. ನೀವು ವೃತ್ತಿಜೀವನಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಅದು ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತದೆ. ಹಳೆಯ ಹೂಡಿಕೆಯಿಂದ ಲಾಭ ಪಡೆಯುವಿರಿ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ. ಕೆಲಸದ ಒತ್ತಡ ಕಡಿಮೆ ಆಗಿ ಮಾನಸಿಕ ಸ್ಥಿತಿ ಉತ್ತಮವಾಗಿರುತ್ತದೆ.

ಮಕರ ರಾಶಿ

ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗಲಿದೆ. ನಿಮ್ಮ ಮಾತನ್ನು ನಿಯಂತ್ರಿಸಿ. ಚೆನ್ನಾಗಿ ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಿ. ವಕೀಲರು ಅಥವಾ ಪೊಲೀಸರಾಗಿ ಕೆಲಸ ಮಾಡುವ ಜನರು ತಮಗೆ ಸಾಕಷ್ಟು ತಾಳ್ಮೆ ಬೇಕು. ಯಾರೊಂದಿಗೂ ಅನಗತ್ಯ ಜಗಳಕ್ಕೆ ಇಳಿಯಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಕುಂಭ ರಾಶಿ

ಕುಟುಂಬ ಸದಸ್ಯರೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕವೂ ಸಂಬಂಧಗಳು ಬಲಗೊಳ್ಳುತ್ತವೆ. ನೀವು ನಿಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಹೆಚ್ಚು ಶಾಂತವಾಗಿರುತ್ತೀರಿ, ಈ ನಿಮಗೆ ಉತ್ತಮವಾಗಿರುತ್ತದೆ. ಬೆಳಿಗ್ಗೆ ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ. ಬೆಳಿಗ್ಗೆ ಎದ್ದು ಸೂರ್ಯನಿಗೆ ಪೂಜೆ ಮಾಡಿ, ಬಡವರಿಗೆ ದಾನ ಮಾಡಿ.

ಮೀನ ರಾಶಿ

ಜನವರಿ 17 ರಂದು ಮಾಡಿದ ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ವ್ಯಾಪಾರ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಒಳ್ಳೆಯ ದಿನವಾಗಿದೆ. ದೀರ್ಘ ಪ್ರಯಾಣದ ಸಾಧ್ಯತೆ ಇರಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಬೆಳಿಗ್ಗೆ ಹಸು ಮತ್ತು ನಾಯಿಗೆ ಆಹಾರ ನೀಡಿ. ಲಕ್ಷ್ಮೀ ದೇವಿಯ ಮಂತ್ರವನ್ನು ಪಠಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಕಾರ್ಯ ರೂಪಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+