Horoscope Today August 4: ಸರ್ವಾರ್ಥ ಸಿದ್ಧಿ ಯೋಗದಿಂದ ಮೂರು ರಾಶಿಯವರಿಗೆ ಶುಭ ದಿನ: ಸಾಲ ನೀಡಿದ ಹಣ ಕೈ ಸೇರುವುದು

Horoscope August 4: ಈ ದಿನ ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಮಂಗಳವಾರ ಯಾವ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.

ಮೇಷ ರಾಶಿ

ಹೊಸ ಮೂಲದಿಂದ ಹಠಾತಾಗಿ ಹಣ ಸಿಗುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಮನೆ ಮಾಡುವುದು. ಮಹಿಳೆಯರಿಗೆ ತುಂಬಾ ಒಳ್ಳೆಯ ದಿನ. ತವರು ಮನೆಯಿಂದ ಸಿಹಿ ಸುದ್ದಿ ಕೇಳುವಿರಿ. ನಿಮ್ಮ ಆಲೋಚನೆಗಳಿಗೆ ಮನೆಯ ಹಿರಿಯರು ಬೆಂಬಲವಾಗಿ ನಿಲ್ಲುವರು.

Horoscope Today August 4 Daily Horoscope for All 12 Zodiac Signs Career Money Family Predictions

ವೃಷಭ ರಾಶಿ

ಕೆಲಸದ ಸ್ಥಳದಲ್ಲಿ ಕೆಲವು ಬದಲಾವಣೆಗಳಾಗುವುದು. ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ನಿಂತು ಹೋಗಿರುವ ಕೆಲಸ ಮತ್ತೆ ಚುರುಕು ಪಡೆಯುವುದು. ಭವಿಷ್ಯಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಇವತ್ತು ತೆಗೆದುಕೊಳ್ಳುವ ನಿರ್ಧಾರ ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗುವುದು.

ಮಿಥುನ ರಾಶಿ

ಜೀವನದಲ್ಲಿ ಯಶಸ್ಸು ಸಾಧಿಸುವ ಅವಕಾಶ ಸಿಗುವುದು. ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಸಿಗುವುದು. ವ್ಯವಹಾರವನ್ನು ವಿಸ್ತರಿಸಲು ಸೂಕ್ತ ಸಮಯ. ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ ಇರಲಿ. ಸ್ವಲ್ಪ ಎಡವಿದರೂ ನಷ್ಟವಾಗುವುದು. ಸಾಲ ನೀಡಿದ ಹಣ ವಾಪಸ್‌ ಬರುವುದು.

ಕರ್ಕಾಟಕ ರಾಶಿ

ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗುವುದು. ನಿಂತು ಹೋಗಿದ್ದ ಆದಾಯದ ಮೂಲ ಮತ್ತೆ ಪುನರಾರಂಭವಾಗುವುದು. ಯುವಕರಿಗೆ ತಮ್ಮ ಇಷ್ಟದ ಕಂಪನಿಯಿಂದ ಉದ್ಯೋಗದ ಆಫರ್ ಸಿಗುವುದು.

ಸಿಂಹ ರಾಶಿ

ಇವತ್ತು ಬಿಡುವಿಲ್ಲದ ದಿನವಾಗಿರುವುದು. ಕೆಲಸಗಳನ್ನು ವಿವೇಚನೆಯಿಂದ ಮಾಡಿ ಮುಗಿಸಿ. ನೀವು ಮಾಡಿರುವ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವುದು. ತಮ್ಮ ಕುಟುಂಬದ ಬಗ್ಗೆ ಹೆಚ್ಚು ಒಲವು ತೋರುವಿರಿ.

ಕನ್ಯಾ ರಾಶಿ

ಇವತ್ತು ಸಾಮಾನ್ಯಕ್ಕಿಂತ ಉತ್ತಮ ದಿನವಾಗಿರುವುದು. ಕುಟುಂಬದ ವಾತಾವರಣ ಉತ್ತಮವಾಗಿರುವುದು.ಸ್ವಲ್ಪ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನವಿರಲಿ. ನೀವು ಮಾಡುವ ಕೆಲಸಕ್ಕೆ ಸಂಗಾತಿಯ ಬೆಂಬಲ ಸಿಗುವುದು.

ತುಲಾ ರಾಶಿ

ಇವತ್ತು ಅನುಕೂಲಕರ ದಿನವಾಗಿರುವುದು. ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಯಾವುದೇ ವಿಷಯದಲ್ಲಿ ಅನಗತ್ಯವಾಗಿ ಮಾತನಾಡುವುದನ್ನು ನಿಲ್ಲಿಸಿ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು.

ವೃಶ್ಚಿಕ ರಾಶಿ

ಸೋಮಾರಿತನದಿಂದಲೇ ಇಂದಿನ ದಿನ ಆರಂಭವಾಗುವುದು. ಸೋಮಾರಿತನ ಬದಿಗಿಟ್ಟು ಕೆಲಸ ಮಾಡಿದರೆ ಯಶಸ್ಸು ಸಿಗುವುದು. ನಿಮಗಿಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಕೋಪದ ಕೈಗೆ ಬುದ್ದಿ ಕೊಡದೆ ತಾಳ್ಮೆಯಿಂದ ಕೆಲಸ ಮಾಡಿದರೆ ಗೆಲುವು ಸಿಗುವುದು.

ಧನು ರಾಶಿ

ಸ್ನೇಹಿತರು ಮತ್ತು ಸಂಬಂಧಿಕರಿಂದ ಸಂಪೂರ್ಣ ಬೆಂಬಲ ಸಿಗುವುದು. ಸ್ನೇಹಿತರೊಂದಿಗೆ ನಿರ್ದಿಷ್ಟ ವಿಷಯವನ್ನು ಚರ್ಚಿಸಬಹುದು. ಯಾವುದೇ ಪ್ರಮುಖ ಕೆಲಸವನ್ನು ಕೈಗೆತ್ತಿಕೊಳ್ಳುವ ಮೊದಲು ಕುಟುಂಬ ಸದಸ್ಯರ ಸಲಹೆ ಪಡೆಯುವುದು ಮುಖ್ಯವಾಗುವುದು.

ಮಕರ ರಾಶಿ

ಉತ್ಸಾಹದಿಂದಲೇ ದಿನದ ಆರಂಭವಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ವೃತ್ತಿಜೀವನದಲ್ಲಿ ಹೊಸ ಬದಲಾವಣೆಯಾಗುವುದು. ಕೈಸೇರದೆ ಉಳಿದಿರುವ ಹಣ ವಾಪಸ್‌ ಬರುವುದು.

ಕುಂಭ ರಾಶಿ

ಇವತ್ತು ನಿಮ್ಮ ಪಾಲಿಗೆ ಅದ್ಭುತ ದಿನವಾಗಿರುವುದು. ಹಣಕಾಸಿನ ಸಮಸ್ಯೆ ಪರಿಹಾರವಾಗುವುದು. ಕುಟುಂಬ ಮತ್ತು ಕೆಲಸದ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕಾಗುವುದು. ಮಕ್ಕಳ ಸಮಸ್ಯೆಯತ್ತ ಗಮನ ಹರಿಸಿ. ಮಕ್ಕಳ ಅಧ್ಯಯನ ಮತ್ತು ವೃತ್ತಿಜೀವನದ ಮೇಲೆ ಗಮನ ಹರಿಸಿ.

ಮೀನ ರಾಶಿ

ಎಲ್ಲಾ ರೀತಿಯ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಮಕ್ಕಳ ಸಾಧನೆ ತೃಪ್ತಿ ತರುವುದು. ನಿಮ್ಮ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸುವಿರಿ. ಕಠಿಣ ಪರಿಶ್ರಮವು ಆದಾಯವನ್ನು ಹೆಚ್ಚಿಸುತ್ತದೆ. ಅನಗತ್ಯವಾಗಿ ಯಾರೊಂದಿಗೂ ವಾದಕ್ಕೆ ಇಳಿಯಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+