Horoscope Today: ದಿನ ಭವಿಷ್ಯ ಜನವರಿ 8- ಬುಧವಾರ 12 ರಾಶಿಗಳ ಜಾತಕ ಹೇಗಿದೆ?
ನವಗ್ರಹಗಳು ಸಂಚಾರದ ವೇಳೆ ಕಾಲ ಕಾಲಕ್ಕೆ ರಾಶಿಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳು ರಾಶಿ ಹಾಗೂ ನಕ್ಷತ್ರಗಳನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಕಂಡುಬರಲಿದೆ. ಬುಧವಾರ ಅಂದರೆ ಜನವರಿ 8ರಂದು ರಾಹುಕಾಲ ಮಧ್ಯಾಹ್ನ 12:25 ರಿಂದ 1:51 ನಿಮಿಷಗಳವರೆಗೆ ಇರುತ್ತದೆ. ಚಂದ್ರ ಗ್ರಹ ಮೀನ ರಾಶಿಯಲ್ಲಿ ಸಾಗಲಿದೆ. ಹಾಗಾದರೆ ಜ್ಯೋತಿಷ್ಯಶಾಸ್ತ್ರದ ಮೂಲಕ ಬುಧವಾರ 12 ರಾಶಿಗಳಿಗೆ ದಿನ ಹೇಗಿರುತ್ತದೆ? ಯಾವ ಕ್ರಮಗಳು ನಿಮಗೆ ಪ್ರಯೋಜನಕಾರಿಯಾಗುತ್ತವೆ? ಇಂದಿನ ರಾಶಿಭವಿಷ್ಯ ಮತ್ತು ಪರಿಹಾರವನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ನೀವು ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ. ನ್ಯಾಯಾಲಯದಲ್ಲಿ ನಡೆಯುವ ಚರ ಅಥವಾ ಸ್ಥಿರ ಆಸ್ತಿ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಪ್ರಯತ್ನಗಳು ಫಲಪ್ರದವಾಗುತ್ತವೆ. ಸಂಪತ್ತು, ಗೌರವ ಮತ್ತು ಖ್ಯಾತಿಯ ಹೆಚ್ಚಳ ಇರುತ್ತದೆ. ಕೊಂಚ ಗೊಂದಲದ ವಾತಾವರಣ ಇರಲಿದೆ. ಇದರ ನಿವಾರಣೆಗೆ ಬುಧವಾರ ಬೆಳಿಗ್ಗೆ ಗಣೇಶ ಮಂತ್ರವನ್ನು ಪಠಿಸಿ. ಸರಸ್ವತಿಯನ್ನು ಪೂಜಿಸಿ.

ವೃಷಭ ರಾಶಿ
ವ್ಯಾಪಾರ ವಿಷಯಗಳಲ್ಲಿ ಜನವರಿ 8 ವೃಷಭ ರಾಶಿಯವರಿಗೆ ಯಶಸ್ಸು ತಂದುಕೊಡಲಿದೆ. ಶಿಕ್ಷಣ ಸ್ಪರ್ಧೆಯಲ್ಲಿ ಮಾಡಿದ ಪರಿಶ್ರಮ ವಿನಾಯಕನ ಆಶೀರ್ವಾದದಿಂದ ಫಲಪ್ರದವಾಗಲಿದೆ. ಮಕ್ಕಳ ಶಿಕ್ಷಣದ ಬಗ್ಗೆ ನೀವು ಚಿಂತಿತರಾಗಿರಬಹುದು. ಆದರೆ ಚಿಂಸಬೇಡಿ. ನಿಮ್ಮ ಮಕ್ಕಳ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಸಂಬಂಧಗಳು ಗಟ್ಟಿಯಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಬೆಳಿಗ್ಗೆ ಅರಿಶಿನ ಮತ್ತು ಅಕ್ಕಿ ಬೆರೆಸಿದ ನೀರನ್ನು ಸೂರ್ಯನಿಗೆ ಅರ್ಪಿಸಿ. ಹಸುವಿಗೆ ಆಹಾರ ನೀಡಿ. ವಿಧ್ಯಾದಾತ ಗಣೇಶನನ್ನು ಪೂಜಿಸಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಜನವರಿ 8 ತುಂಬಾ ಲಾಭದಾಯವಾಗಿ ಇಲ್ಲ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಇತರರಿಂದ ಸಹಾಯ ಪಡೆಯುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಇಂದು ಗಣೇಶನನ್ನು ಪೂಜಿಸಿ. ಬೀದಿಯಲ್ಲಿರುವ ಪ್ರಾಣಿಗಳಿಗೆ ಆಹಾರವನ್ನು ನೀಡಿ. ಗಣೇಶ ಮಂತ್ರವನ್ನು ಪಠಿಸಿ ಆರಾಧಿಸಿ. ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆಗಳು ದೂರವಾಗುತ್ತವೆ.
ಕಟಕ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೆಲಸದಲ್ಲಿ ನಿಮ್ಮ ತಂದೆ ಅಥವಾ ಧಾರ್ಮಿಕ ಗುರುಗಳಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಬಹುನಿರೀಕ್ಷಿತ ಕೆಲಸ ಪೂರ್ಣಗೊಳ್ಳಲಿದೆ. ಬೆಳಿಗ್ಗೆ ವಿನಾಯಕನ ಪೂಜೆ ಮಾಡಿ ಜೀವನದ ಎಲ್ಲಾ ವಿಘ್ನಗಳು ದೂರವಾಗುತ್ತವೆ. ಹಸಿದವರಿಗೆ ಅನ್ನ ನೀಡಿ.
ಸಿಂಹ ರಾಶಿ
ಜನವರಿ 8 ಸಿಂಹ ರಾಶಿಯವರ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಂಪೂರ್ಣ ಅವಕಾಶವಿದೆ. ಬೆಳಿಗ್ಗೆ ಬೇಗ ಎದ್ದು ಮನೆ ದೇವರನ್ನು ಪೂಜಿಸಿ, ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ. ಇದರಿಂದ ನಿರ್ಲಕ್ಷ್ಯ, ಅಸಡ್ಡೆ ದೂರವಾಗುತ್ತದೆ.
ಕನ್ಯಾ ರಾಶಿ
ಜನವರಿ 8 ಕನ್ಯಾರಾಶಿಯವರಿಗೆ ಮಿಶ್ರ ದಿನವಾಗಿರುತ್ತದೆ. ಗೃಹೋಪಯೋಗಿ ವಸ್ತುಗಳು ಹೆಚ್ಚಳವಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ನಿಮ್ಮ ವಿರೋಧಿಗಳು ನಿಮ್ಮ ಮುಂದೆ ಸೋಲುವ ಸಮಯವಿದು. ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ. ಮಹಿಳಾ ಅಧಿಕಾರಿಯ ಬೆಂಬಲ ನಿಮಗೆ ಸಿಗಲಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಪರಿಹಾರಕ್ಕಾಗಿ ಬಡವನಿಗೆ ಆಹಾರ ಕೊಡಿ.
ತುಲಾ ರಾಶಿ
ಜನವರಿ 8 ತುಲಾ ರಾಶಿಯವರಿಗೆ ತುಂಬಾ ಅದ್ಬುತವಾಗಿರುವುದಿಲ್ಲ. ದಾಂಪತ್ಯ ಜೀವನದಲ್ಲಿ ಆಪ್ತತೆ ಇರುತ್ತದೆ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಸಂಬಂಧಿಕರಿಂದ ನೀವು ಒತ್ತಡಕ್ಕೆ ಒಳಗಾಗಬಹುದು. ತಪ್ಪು ನಿರ್ಧಾರ ನೋವು ತರುತ್ತದೆ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ. ನಿಮ್ಮ ಸಮಸ್ಯೆಗಳು ದೂರವಾಗುತ್ತವೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಜನವರಿ 8 ಮಂಗಳಕರ ದಿನವಾಗಿದೆ. ನಿಮ್ಮ ಎಲ್ಲಾ ಕೆಲಸವನ್ನು ಪೂರ್ಣಗೊಳಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಜೀವನೋಪಾಯಕ್ಕಾಗಿ ಮಾಡಿದ ಶ್ರಮ ಸಾರ್ಥಕವಾಗುತ್ತದೆ. ಸರಕಾರದಿಂದ ಸಹಕಾರ ದೊರೆಯಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಪ್ರಯಾಣದ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ಬುಧವಾರ ವಿನಾಯಕನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.
ಧನು ರಾಶಿ
ಜನವರಿ 8 ಧನು ರಾಶಿಯವರಿಗೆ ಮಿಶ್ರ ದಿನವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ನಿಮಗೆ ಸರಕಾರದಿಂದ ಬೆಂಬಲ ಸಿಗಲಿದೆ. ವ್ಯಾಪಾರ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಬುದ್ಧಿವಂತಿಕೆಯಿಂದ ಮಾಡಿದ ಕೆಲಸ ಪೂರ್ಣಗೊಳ್ಳಲಿದೆ. ಕಪ್ಪು ನಾಯಿಗೆ ಅರಿಶಿನ ಬೆರೆಸಿದ ಹಾಲನ್ನು ನೀಡಿ. ಆಲದ ಗಿಡವನ್ನು ನೆಟ್ಟು ಪೋಷಣೆ ಮಾಡಿ. ಬಿಳಿ ವಸ್ತ್ರವನ್ನು ದಾನ ಮಾಡುವುದರಿಂದ ನಿಮ್ಮ ಪಾಪಗಳು ದೂರವಾಗುತ್ತವೆ.
ಮಕರ ರಾಶಿ
ಮಕರ ರಾಶಿಯವರಿಗೆ ಜನವರಿ 8 ಶುಭ ದಿನವಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ. ನಿಮ್ಮ ನೆರೆಹೊರೆಯವರೊಂದಿಗೆ ಜಗಳವಾಡಬೇಡಿ ಅಥವಾ ವಾದ ಮಾಡಬೇಡಿ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಗಾಯಗೊಂಡ ನಾಯಿಗೆ ನೀವು ಸೇವೆ ಸಲ್ಲಿಸಿದರೆ ಒಳ್ಳೆಯದು.
ಕುಂಭ ರಾಶಿ
ಕುಂಭ ರಾಶಿಯವರ ಸಂಗಾತಿ ನಡುವೆ ಭಿನ್ನಾಭಿಪ್ರಾಯಗಳಿರಬಹುದು. ಮಕ್ಕಳ ವರ್ತನೆಯಿಂದ ಚಿಂತಿತರಾಗುವಿರಿ. ನಿಮ್ಮ ಮಾತನ್ನು ನೀವು ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೈಹಿಕ ನೋವು ಬರುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು. ಪತಿ-ಪತ್ನಿ ಬಾಂಧವ್ಯಕ್ಕೆ ಉತ್ತಮ ಸಮಯ ಇದಾಗಿದ್ದು ಮಾತಿನ ಮೂಲಕ ಎಲ್ಲವೂ ಬಗೆಹರಿಯುತ್ತದೆ. ಗಾಯಗೊಂಡ ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆ ಕೊಡಿಸಿ. ಆಹಾರ ನೀಡುವುದು ಕೂಡ ಉತ್ತಮ ಫಲ ನೀಡುತ್ತದೆ.
ಮೀನ ರಾಶಿ
ಮೀನ ರಾಶಿಯವರಿಗೆ ಜನವರಿ 8 ಉತ್ತಮವಾಗಿದೆ. ಮಕ್ಕಳ ಜವಾಬ್ದಾರಿಗಳನ್ನು ತುಂಬಾ ಆಸಕ್ತಿಯಿಂದ ನಿಭಾಯಿಸುವಿರಿ. ನಿಮಗೆ ಸಂಗಾತಿಯಿಂದ ಬೆಂಬಲ ಸಿಗಲಿದೆ. ವ್ಯಾಪಾರ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಪ್ರಯಾಣ ಅಥವಾ ದೇಶ ಪ್ರವಾಸದ ಸಾಧ್ಯತೆ ಇದೆ. ನೀರಿನಲ್ಲಿ ಚಿಟಿಕೆ ಅರಿಶಿನ ಸೇರಿಸಿ ಸ್ನಾನ ಮಾಡಿದರೆ ದಿನ ಚೆನ್ನಾಗಿರುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿಯು ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶವಾಗಿದೆ. ಈ ಮಾಹಿತಿಯನ್ನು ಕಾರ್ಯರೂಪಕ್ಕೆ ತರುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications