Horoscope Today: ದಿನ ಭವಿಷ್ಯ ಜನವರಿ 6; ಸೋಮವಾರ 12 ರಾಶಿಗಳ ಜಾತಕ ಹೇಗಿದೆ?
ಸೌರವ್ಯೂಹದಲ್ಲಿ ಗ್ರಹಗಳು ಸಂಚಾರ ಮಾಡುವಾಗ ರಾಶಿಗಳನ್ನು ಬದಲಾಯಿಸುತ್ತವೆ. ಕೆಲವೊಂದು ಗ್ರಹಗಳು ನಿಧಾನವಾಗಿ ರಾಶಿ ಬದಲಾಯಿಸಿದರೆ ಇನ್ನೂ ಕೆಲವು ಗ್ರಹಗಳು ವರ್ಷಗಳ ಬಳಿಕ ನಿಧಾನವಾಗಿ ರಾಶಿಯನ್ನು ಬದಲಾಯಿಸುತ್ತವೆ. ಹೀಗೆ ಗ್ರಹಗಳು ರಾಶಿ ಹಾಗೂ ನಕ್ಷತ್ರಗಳನ್ನು ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ ದ್ವಾದಶಿ ರಾಶಿಗಳ ಮೇಲೆ ಬೀಳುತ್ತದೆ.
ಜನವರಿ 6ರಂದು ಧನು ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗವಾಗಲಿದೆ. ಇದರಿಂದ ಬುಧಾದಿತ್ಯ ಯೋಗದ ಜೊತೆಗ ಶಿವಯೋಗ ಹಾಗೂ ಉತ್ತರಾಭಾದ್ರಪದ ನಕ್ಷತ್ರದ ಶುಭ ಸಂಯೋಗವೂ ನಡೆಯಲಿದೆ. ಈ ಶುಭ ಯೋಗದ ಫಲವನ್ನು ಯಾವ ರಾಶಿಯವರು ಪಡೆಯಲಿದ್ದಾರೆ, ಯಾವ ಪರಿಹಾರಗಳನ್ನು ಮಾಡುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನವು ಬಲಗೊಳ್ಳುತ್ತದೆ, ಜೊತೆಗೆ ಜನವರಿ 6 ಸೋಮವಾರ 12 ರಾಶಿಗಳ ಜಾತಕ ಹೇಗಿದೆ ಎಂದು ತಿಳಿಯೋಣ.

ಮೇಷ ರಾಶಿ
ಜನವರಿ 6 ಮೇಷ ರಾಶಿಯವರ ಜಾತಕ ಅದ್ಭುತವಾಗಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವಿರಿ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಆಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗವಹಿಸುವಿರಿ. ಬೆಳಿಗ್ಗೆ ಬೇಗ ಎದ್ದು ಸೂರ್ಯೋದಕ್ಕಿಂತ ಮುಂಚಿತವಾಗಿ ಶಿವನನ್ನು ಪೂಜಿಸಿ, ಶಿವ ಮಂತ್ರವನ್ನು ಪಠಿಸಿ. ಇದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ.
ವೃಷಭ ರಾಶಿ
ಜನವರಿ 6 ವೃಷಭ ರಾಶಿಯವರಿಗೆ ಮಿಶ್ರವಾಗಿರುತ್ತದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಇರಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಧಾರ್ಮಿಕ ಗುರುಗಳಿಂದ ನೀವು ಆಶೀರ್ವಾದ ಪಡೆಯುತ್ತೀರಿ. ಕೌಟುಂಬಿಕ ಗೌರವ ಹೆಚ್ಚಲಿದೆ. ಸರಕಾರದಿಂದ ಸಹಕಾರ ದೊರೆಯಲಿದೆ. ಬೆಳಿಗ್ಗೆ ಶಿವನ ಆರಾಧನೆ ಮಾಡಿ, ವಿಶೇಷ ಪೂಜೆಯನ್ನು ಸಲ್ಲಿಸಿ. ಬಡವರಿಗೆ ದಾನ ಮಾಡಿ. ನಿಮ್ಮ ಆಸೆಗಳು ಈಡೇರುತ್ತವೆ.
ಮಿಥುನ ರಾಶಿ
ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಚರ ಅಥವಾ ಸ್ಥಿರ ಆಸ್ತಿಯಲ್ಲಿ ಹೆಚ್ಚಳವಾಗಲಿದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ಲಾಭದಲ್ಲಿ ಇಳಿಕೆಯಾಗಬಹುದು. ಬೆಳಿಗ್ಗೆ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. ಶಿವನನ್ನು ಪೂಜಿಸಿ. ನಿಮ್ಮ ಶ್ರಮದ ಫಲವನ್ನು ಪಡೆಯುವಿರಿ. ಇದರಿಂದ ನಿಮ್ಮ ಎಲ್ಲಾ ಕೆಲಸಗಳು ಈಡೇರುತ್ತವೆ.
ಕಟಕ ರಾಶಿ
ಜನವರಿ 6 ಕಟಕ ರಾಶಿಯವರ ಜಾತಕ ಅಷ್ಟೊಂದು ಉತ್ತಮವಾಗಿಲ್ಲ. ಕೆಲಸದಲ್ಲಿ ನೀವು ಒತ್ತಡವನ್ನು ಅನುಭವಿಸಬಹುದು. ಮನಸ್ಸು ಗೊಂದಲದಿಂದ ಕೂಡಿರುತ್ತದೆ. ಅನಗತ್ಯ ಗೊಂದಲ ಉಂಟಾಗುತ್ತದೆ. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಇರುತ್ತದೆ. ಸಂಪತ್ತು ಹೆಚ್ಚಾಗಬಹುದು. ಬೆಳಿಗ್ಗೆ ಶಿವನನ್ನು ಪೂಜಿಸಿ ಮಂತ್ರವನ್ನು ಪಠಿಸಿ. ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸಿ.
ಸಿಂಹ ರಾಶಿ
ಜನವರಿ 6 ಸಿಂಹ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚಲಿದೆ. ಧಾರ್ಮಿಕ ಪ್ರವೃತ್ತಿ ಹೆಚ್ಚಲಿದೆ. ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಯಶಸ್ಸನ್ನು ಸಾಧಿಸುತ್ತಾರೆ. ಬೆಳಿಗ್ಗೆ ಮನೆ ದೇವರನ್ನು ಶ್ರದ್ಧೆಯಿಂದ ಪೂಜಿಸಿ. ಹಸುವಿಗೆ ಆಹಾರ ನೀಡಿ. ಅಗತ್ಯ ಇರುವವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಜನವರಿ 6 ಮಿಶ್ರ ದಿನವಾಗಿರುತ್ತದೆ. ಸಮಾಜಸೇವೆಯಲ್ಲಿ ಆಸಕ್ತಿ ವಹಿಸುವಿರಿ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ನೀವು ಸಂಬಂಧಿಕರಿಂದ ಒತ್ತಡಕ್ಕೆ ಒಳಗಾಗಬಹುದು. ಇದರಿಂದ ಚಿಂತಿಸಬೇಡಿ ಎಲ್ಲಾ ಸಂದರ್ಭವನ್ನು ತಾಳ್ಮೆಯಿಂದ ನಿಭಾಯಿಸಿ. ಬೆಳಿಗ್ಗೆ ಹಸುವಿಗೆ ಹಸಿರು ಮೇವನ್ನು ತಿನ್ನಿಸಿ. ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸುವುದು ಅದ್ಭುತ ಫಲವನ್ನು ನೀಡುತ್ತದೆ.
ತುಲಾ ರಾಶಿ
ಜನವರಿ 6 ತುಲಾ ರಾಶಿಯವರಿಗೆ ಉತ್ತಮವಾಗಿರುವುದಿಲ್ಲ. ಹಣಕಾಸಿನ ವಿಚಾರದಲ್ಲಿ ನಷ್ಟ ಉಂಟಾಗಬಹುದು. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಕೆಲಸದ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಗುರುವಿನ ಬೆಂಬಲ ಸಿಗಲಿದೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚಲಿದೆ. ನಿಮಗೆ ಕೆಲಸದಲ್ಲಿ ಬೆಂಬಲ ಸಿಗಬಹುದು. ಶಿವ ಮಂತ್ರವನ್ನು ಪಠಿಸಿ. ದೇವರನ್ನು ಆರಾಧಿಸಿ.
ವೃಶ್ಚಿಕ ರಾಶಿ
ಜನವರಿ 6ರಂದು ವೃಶ್ಚಿಕ ರಾಶಿಯವರ ವೈಯಕ್ತಿಕ ಸಂತೋಷ ಹೆಚ್ಚಾಗುತ್ತದೆ. ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಬೆಳಿಗ್ಗೆ ಶಿವ ಚಾಲೀಸಾ ಪಠಿಸಿ. ಕೋತಿಗೆ ಆಹಾರವನ್ನು ತಿನ್ನಿಸಿ.ಇದು ನಿಮ್ಮ ಕಷ್ಟಗಳನ್ನು ದೂರ ಮಾಡುತ್ತದೆ.
ಧನು ರಾಶಿ
ಈ ದಿನ ಧನು ರಾಶಿಯವರಿಗೆ ಉತ್ತಮವಾಗಿದೆ. ಶಿವನ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ವ್ಯಾಪಾರದ ಖ್ಯಾತಿ ಹೆಚ್ಚಾಗುತ್ತದೆ. ಸ್ವಾಭಿಮಾನ ಹೆಚ್ಚಾಗುತ್ತದೆ. ಪ್ರಯತ್ನಗಳು ಫಲಪ್ರದವಾಗುತ್ತವೆ. ನೀವು ಆರ್ಥಿಕ ಯಶಸ್ಸನ್ನು ಪಡೆಯುತ್ತೀರಿ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಗಾಯಗೊಂಡ ಹಸುವಿಗೆ ಚಿಕಿತ್ಸೆ ನೀಡಿ ಆಹಾರ ನೀಡಿ.
ಮಕರ ರಾಶಿ
ಜನವರಿ 6 ಮಕರ ರಾಶಿಯವರಿಗೆ ಉತ್ತಮವಾಗಿದೆ. ದೂರ ಪ್ರಯಾಣದ ಸಾಧ್ಯತೆಗಳಿವೆ. ಸಂಗಾತಿಯೊಂದಿಗಿನ ಸಂಬಂಧ ಉತ್ತಮವಾಗಿರುತ್ತದೆ. ಎಲ್ಲಾ ಕಾರ್ಯಗಳಲ್ಲಿ ಸಂತೋಷ ಹೆಚ್ಚಾಗಲಿದೆ. ಬೆಳಿಗ್ಗೆ ಶಿವನಿಗೆ ನೀರನ್ನು ಅರ್ಪಿಸಿ ಮತ್ತು ಬಿಲ್ವಪತ್ರೆಯಿಂದ ಪೂಜಿಸಿ. ಇದು ಜೀವನದಲ್ಲಿ ಶತ್ರುಗಳ ಕಾಟವನ್ನು ದೂರ ಮಾಡುತ್ತದೆ. ಪರಶಿವನ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.
ಕುಂಭ ರಾಶಿ
ಜನವರಿ 6 ಕುಂಭ ರಾಶಿಯವರಿಗೆ ಶುವಾಗಿರುವುದಿಲ್ಲ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ಕುಟುಂಬ ಸದಸ್ಯರ ಆರೋಗ್ಯದ ಕಾರಣದಿಂದ ತೊಂದರೆಯಾಗಲಿದೆ. ದೂರ ಪ್ರಯಾಣದ ಸಾಧ್ಯತೆಗಳಿವೆ. ಇದರಕ್ಕೆ ಪರಿಹಾರವಾಗಿ ಬೆಳಿಗ್ಗೆ ಬೇಗ ಎದ್ದು ಮನೆ ದೇವರನ್ನು ಪೂಜಿಸಿ, ಹಿರಿಯರ ಆಶೀರ್ವಾದ ಪಡೆದೇ ಮನೆಯಿಂದ ಹೊರ ಬನ್ನಿ. ಶಿವ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಮಾಡಿ. ಇದು ನಿಮ್ಮ ಸಂಕಷ್ಟಗಳನ್ನು ದೂರ ಮಾಡುತ್ತದೆ.
ಮೀನ ರಾಶಿ
ಜನವರಿ 6 ಮೀನ ರಾಶಿಯವರಿಗೆ ಉತ್ತಮವಾಗಿದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಸೃಜನಾತ್ಮಕ ಕೆಲಸಗಳಲ್ಲಿ ನಿರತರಾಗುವಿರಿ. ಮನೆಯಲ್ಲಿ ನಿಮ್ಮ ಮಾತಿಗೆ ಗೌರವ ಹೆಚ್ಚಾಗುತ್ತದೆ. ಈ ದಿನ ಶಿವನ್ನು ಭಕ್ತಿಯಿಂದ ಪೂಜಿಸಿ. ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಮಾಡುವುದು ಶುಭ ಫಲವನ್ನು ನೀಡುತ್ತದೆ.












Click it and Unblock the Notifications