Horoscope on July 29: ಭದ್ರ ಯೋಗದಿಂದ ಈ ರಾಶಿಯವರಿಗೆ ಶುಭ; ಎಲ್ಲಾ ಅಡೆತಡೆಗಳು ಆಗುವುದು ನಿವಾರಣೆ
Horoscope on July 29: ಹೊಸ ಭರವಸೆ ಮತ್ತು ಉತ್ಸಾಹದೊಂದಿಗೆ ಮತ್ತೊಂದು ದಿನ ಶುರುವಾಗಿದೆ. ಕೆಲ ರಾಶಿಯವರಿಗೆ ಲಕ್ಷ್ಮಿ ಒಲಿಯಲಿದ್ದು, ಕಷ್ಟಗಳು ದೂರವಾಗಲಿದೆ. ಇನ್ನು ಕೆಲವರಿಗೆ ವೃತ್ತಿ ಹಾಗೂ ವ್ಯವಹಾರದಲ್ಲಿ ಹೊಸ ಅವಕಾಶಗಳು ಬಾಗಿಲು ತರೆಯಲಿವೆ. ಹಾಗಾದರೆ ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೇಷ ರಾಶಿ
ತುಂಬಾ ದಿನಗಳಿಂದ ಮಾಡದೇ ಉಳಿಸಿಕೊಂಡಿರುವ ಕೆಲಸ ಇವತ್ತು ಪೂರ್ತಿಯಾಗುವುದು. ಶತ್ರುಗಳಿಂದ ಎಚ್ಚರದಿಂದ ಇರಿ. ಹಣ ಹೂಡಿಕೆ ಮಾಡುವಾಗ ಸರಿಯಾಗಿ ಯೋಚಿಸಿ. ವಿದ್ಯಾರ್ಥಿಗಳಿಗೆ ಅದೃಷ್ದ ದಿನವಾಗಿರುವುದು. ಕೌಟುಂಬಿಕ ಜೀವನ ಸಂತೋಷವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.

ವೃಷಭ ರಾಶಿ
ನಿಮ್ಮ ಕೆಲಸದಲ್ಲಿ ಸಂಗಾತಿಯ ಬೆಂಬಲ ಸಿಗುತ್ತದೆ. ಸಾಲವಾಗಿ ನೀಡಿದ ಹಣ ಇವತ್ತು ನಿಮ್ಮ ವಾಪಸ್ ಸಿಗುವುದು. ಇದರಿಂದ ನಿಮ್ಮ ಹಣದ ಸಮಸ್ಯೆ ಕಡಿಮೆಯಾಗುವುದು. ಸ್ವಲ್ಪ ಕಷ್ಟ ಬಂದರೆ ದೊಡ್ಡ ಯಶಸ್ಸು ಸಿಗುವುದು. ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.
ಮಿಥುನ ರಾಶಿ
ಕ್ರೀಡೆಯಲ್ಲಿ ತೊಡಗಿಕೊಂಡವರಿಗೆ ಅದೃಷ್ಟದ ದಿನವಾಗಿರುವುದು. ಸಿಹಿ ಸುದ್ದಿ ಸಿಗುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಬೇರೆ ಬೇರೆ ಮೂಲಗಳಿಂದ ಹಣ ಬರುವುದು. ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಹೊಸ ಕೆಲಸ ಆರಂಭಿಸಲು ಸಮಯ ಉತ್ತಮವಾಗಿದೆ.
ಕರ್ಕಾಟಕ ರಾಶಿ
ವ್ಯವಹಾರದಲ್ಲಿ ಯಶಸ್ಸು ಸಿಗುವುದು. ಉದ್ಯೋಗದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಇರುವುದು. ವ್ಯವಹಾರದಲ್ಲಿ ಹಣ ಗಳಿಸುವ ಪ್ರಯತ್ನಕ್ಕೆ ಯಶಸ್ಸು ಸಿಗುವುದು. ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಿರಿ.
ಸಿಂಹ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಮಾಡುವ ಪ್ರಯತ್ನಗಳಲ್ಲಿ ಯಶಸ್ಸು ಸಿಗುವುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರುವಿರಿ. ಹೊಸ ವಾಹನವನ್ನು ಖರೀದಿಸುವ ಯೋಚನೆ ಇದ್ದರೆ ಇವತ್ತು ಮುಂದುವರಿಯಬಹುದು. ವ್ಯವಹಾರದಲ್ಲಿ ಲಾಭವಾಗುವುದು. ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವುದು.
ಕನ್ಯಾ ರಾಶಿ
ಇಂದು ದಿನ ನಿಮ್ಮ ಪರವಾಗಿರುತ್ತದೆ. ಹೊಸ ಆಸ್ತಿಯನ್ನು ಖರೀದಿಸಲು ಇಂದು ಶುಭ ದಿನ. ಕುಟುಂಬ ಸದಸ್ಯರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಎಚ್ಚರಿಕೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.
ತುಲಾ ರಾಶಿ
ಹೊಸ ಉತ್ಸಾಹದೊಂದಿಗೆ ಈ ದಿನದ ಆರಂಭವಾಗುವುದು. ಆಧ್ಯಾತ್ಮದತ್ತ ವಾಲುವಿರಿ. ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗಬಹುದು. ವ್ಯವಹಾರ ನಡೆಸುವವರಿಗೆ ಉತ್ತಮ ಲಾಭವಾಗುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ವೃಶ್ಚಿಕ ರಾಶಿ
ನಿಮ್ಮ ಪಾಲಿಗೆ ಇವತ್ತು ಅದೃಷ್ಟ ತರುವ ದಿನ. ಸಕಾರಾತ್ಮಕ ಆಲೋಚನೆಗಳೊಂದಿಗೆ ದಿನ ಪ್ರಾರಂಭವಾಗುವುದು. ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಬೇರೆ ಬೇರೆ ಮೂಲಗಳಿಮದ ಹಣ ಗಳಿಸುವ ಅವಕಾಶ ಸಿಗುವುದು. ಆರೋಗ್ಯ ಸಮಸ್ಯೆ ಪರಿಹಾರವಾಗುವುದು.
ಧನು ರಾಶಿ
ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಪರೀಕ್ಷೆಗಳಲ್ಲಿ ಅಪೇಕ್ಷಿತ ಫಲಿತಾಂಶ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯವಹಾರದಲ್ಲಿ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ಅದೃಷ್ಟ ಇಂದು ನಿಮ್ಮ ಕಡೆ ಇರುವುದು.
ಮಕರ ರಾಶಿ
ಇಂದು ಲಾಭದಾಯಕ ದಿನವಾಗಿರುತ್ತದೆ. ವ್ಯವಹಾರವನ್ನು ವಿಸ್ತರಿಸಲು ಹೊಸ ಅವಕಾಶ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮ ಫಲಿತಾಂಶ ಸಿಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು.
ಕುಂಭ ರಾಶಿ
ಸಂತೋಷ ತುಂಬಿದ ದಿನ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ನೀವು ಮಾಡುವ ಕೆಲಸಕ್ಕೆ ತಾಯಿಯ ಬೆಂಬಲ ಸಿಗುವುದು. ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ.
ಮೀನ ರಾಶಿ
ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಹೊಸ ಉದ್ಯಮ ಪ್ರಾರಂಭಿಸಲು ಸರಿಯಾದ ಸಮಯ. ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸಲು ಅವಕಾಶ ಸಿಗುವುದು. ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಸ್ನೇಹಿತನ ಸಹಾಯ ಸಿಗುವುದು.


Click it and Unblock the Notifications
