Daily Horoscope: ಈ ರಾಶಿಯವರ ಖರ್ಚು ಹೆಚ್ಚಾಗುವುದು, ಮೋಸ ಹೋಗುವ ಭೀತಿ, ಆರೋಗ್ಯ ಸಮಸ್ಯೆ ಕಾಡುವುದು

Horoscope May 24: ಭಾನುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಭಾನುವಾರ ರಾಹುಕಾಲವು ಸಂಜೆ 4:30 ರಿಂದ ಸಂಜೆ 6:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ:

ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಇಂದು ಯಾರಿಗೂ ಸಾಲ ನೀಡಲು ಹೋಗಬೇಡಿ. ಇಂದು ಸಾಲ ನೀಡಿದ ಹಣ ಮರಳಿ ಬರುವುದಿಲ್ಲ. ಕುಟುಂಬದೊಂದಿಗೆ ಕಾಲ ಕಳೆಯುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.

Horoscope May 24

ವೃಷಭ ರಾಶಿ:

ಸಂಗಾತಿಯ ಮೂಲಕ ಸಂತಸದ ಸುದ್ದಿ ಸಿಗಬಹುದು. ಹಳೆಯ ಸ್ನೇಹಿತರು ಮನೆಗೆ ಬರುವರು. ಖರ್ಚು ಹೆಚ್ಚಾಗುವುದು. ಮನೆಯಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆ ಇದೆ.

ಮಿಥುನ ರಾಶಿ:

ಹೊಸ ವಿಷಯಗಳನ್ನು ಕಲಿಯುವಿರಿ. ನಿಮ್ಮವರಿಂದಲೇ ಮೋಸ ಹೋಗುವ ಭೀತಿ ಇದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ. ಆರೋಗ್ಯ ಸಮಸ್ಯೆ ಕಾಡಬಹುದು.

ಕಟಕ ರಾಶಿ:

ಇಂದು ಸಮಯ ನಿಮ್ಮ ಪರವಾಗಿ ಇರಲಿದೆ. ಮನಸ್ಸಿನ ಆಸೆ ಈಡೇರುವುದು. ಆದರೂ ಸಂಗಾತಿಯ ಜೊತೆಗೆ ಮನಸ್ತಾಪ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಅಂತಹ ಸಮಯದಲ್ಲಿ ಶಾಂತವಾಗಿರುವುದು ಉತ್ತಮ.

ಸಿಂಹ ರಾಶಿ:

ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ಸಮಸ್ಯೆಗೆ ಕಾರಣವಾಗಬಹುದು. ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಲಾಭವಾಗುವುದು. ಖರ್ಚುಗಳು ಹೆಚ್ಚಾಗುವುದು.

ಕನ್ಯಾರಾಶಿ:

ಪ್ರೇಮ ಜೀವನದಲ್ಲಿ ಸಮಸ್ಯೆ ಹುಟ್ಟಿಕೊಳ್ಳಬಹುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಬಹಳ ಸಮಯದಿಂದ ಆರಂಭ ಮಾಡಬೇಕು ಅಂದುಕೊಂದಿದ್ದ ಕಾರ್ಯಕ್ಕೆ ಕೈ ಹಾಕುವಿರಿ.
ಆದಾಯ ಹೆಚ್ಚಾಗುವುದು. ಖರ್ಚಿನ ಮೇಲೆ ನಿಯಂತ್ರಣ ಇರಲಿ. ಮನೆ ಅಥವಾ ವಾಹನ ಖರೀದಿಸುವ ಸಾಧ್ಯತೆ.

ತುಲಾ ರಾಶಿ:

ಕೌಟುಂಬಿಕ ವಿವಾದಗಳು ಕಡಿಮೆಯಾಗುತ್ತವೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಆದಾಯ ಉತ್ತಮವಾಗಿರುತ್ತದೆ. ಐಷಾರಾಮಿ ವಸ್ತುಗಳನ್ನು ಖರೀದಿಸುವರಿ.

ವೃಶ್ಚಿಕ ರಾಶಿ:

ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗುವುದು. ಹೂಡಿಕೆಗಳಿಂದ ಲಾಭ ಗಳಿಸುವಿರಿ. ಆದಾಯ ಹೆಚ್ಚಾಗುತ್ತದೆ.

ಧನು ರಾಶಿ:

ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ. ವಿದೇಶ ಪ್ರಯಾಣ ಸಾಧ್ಯತೆ. ಪ್ರವಾಸಕ್ಕೆ ತೆರಳುವ ಮೂಲಕ ಲಾಭ.

ಮಕರ ರಾಶಿ:

ಇಂದು ಸ್ವಲ್ಪ ಗೊಂದಲಮಯವಾಗಿರುತ್ತದೆ.ಶಿಸ್ತಿನ ಕೆಲಸ ಫಲ ನೀಡುತ್ತದೆ. ವ್ಯಾಪಾರ ವಿಸ್ತರಣೆಗೆ ಒಳ್ಳೆಯ ಸಮಯ. ಮನೆಯ ಹಿರಿಯರ ಆಶೀರ್ವಾದ ಇರುವುದು.

ಕುಂಭ ರಾಶಿ:

ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಶುಭ ಸುದ್ದಿ. ತಂತ್ರಜ್ಞಾನ ಮತ್ತು ಆನ್‌ಲೈನ್ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗಿಗಳಿಗೆ ಪ್ರಶಂಸೆ ದೊರೆಯಲಿದೆ. ಹಣದ ಸಮಸ್ಯೆ ಕಾಡಬಹುದು.

ಮೀನ ರಾಶಿ:

ಭವಿಷ್ಯಕ್ಕಾಗಿ ಮಾಡಿದ ಹೂಡಿಕೆಗಳು ಲಾಭವನ್ನು ನೀಡುತ್ತವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವಿರಿ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+