Daily Horoscope May 16: ವೃತ್ತಿಯಲ್ಲಿ ಪ್ರಗತಿ, ಹಳೆಯ ಸಮಸ್ಯೆಗಳಿಗೆ ಸಿಗುವುದು ಪರಿಹಾರ, ದ್ವಾದಶ ರಾಶಿಗಳ ನಿತ್ಯ ಭವಿಷ್ಯ
Horoscope May 16: ಶನಿವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಶನಿವಾರ ರಾಹುಕಾಲವು ಸಾಮಾನ್ಯವಾಗಿ ಬೆಳಿಗ್ಗೆ 9:00 ರಿಂದ 10:30 ರವರೆಗೆ ಇರುತ್ತದೆ.ಮೇ 16 ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಮೇಷ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟವಾಗಬಹುದು. ಕೆಲವು ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡ ಹೆಚ್ಚಾಗಬಹುದು. ಆದರೆ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದರೆ, ಸಮಸ್ಯೆ ಸುಲಭವಾಗಿ ಬಗೆಹರಿಯುವುದು. ಕುಟುಂಬ ಸದಸ್ಯರೊಂದಿಗೆ ಸ್ಪಷ್ಟವಾಗಿ ಮಾತನಾಡುವುದು ಒಳ್ಳೆಯದು.

ವೃಷಭ ರಾಶಿ:
ಸಣ್ಣ ಸಣ್ಣ ವಿಷಯಗಳಿಗೂ ಜಗಳಗಳಾಗಬಹುದು. ಪ್ರೀತಿಯಿಂದ ಮಾತನಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ನಿಮ್ಮ ಅನಿಸಿಕೆಗಳನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು ಒಳ್ಳೆಯದು.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಇಂದು ತುಂಬಾ ಒಳ್ಳೆಯ ದಿನ. ಸೃಜನಶೀಲತೆ ಮತ್ತು ಉತ್ಸಾಹ ಹೆಚ್ಚಾಗುತ್ತದೆ. ಹೊಸ ಪರಿಚಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗುತ್ತದೆ.
ಕಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಇಂದು ಶುಭ ದಿನ. ಕುಟುಂಬ ಸದಸ್ಯರೊಂದಿಗಿನ ಬಾಂಧವ್ಯ ಬಲಗೊಳ್ಳುತ್ತದೆ. ಹಳೆಯ ಸಮಸ್ಯೆಗಳು ಬಗೆಹರಿಯುವುದು. ನಿಮ್ಮ ಒಳ್ಳೆತನವೇ ನಿಮಗೆ ವರವಾಗಲಿದೆ.
ಸಿಂಹ ರಾಶಿ:
ಸಿಂಹ ರಾಶಿಯವರು ಸ್ವಲ್ಪ ಒತ್ತಡವನ್ನು ಎದುರಿಸಬೇಕಾಗಬಹುದು. ನಿಮ್ಮ ಅಜಾಗರೂಕತೆಯಿಂದ ಸಣ್ಣ ವಿಷಯಗಳು ದೊಡ್ಡ ಸಮಸ್ಯೆಗಳಾಗಿ ಬದಲಾಗದಂತೆ ಎಚ್ಚರವಹಿಸಿ. ಇತರರು ಹೇಳುವುದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಪರಿಸ್ಥಿತಿ ಸುಧಾರಿಸುತ್ತದೆ.
ಕನ್ಯಾರಾಶಿ:
ಕನ್ಯಾ ರಾಶಿಯವರ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ಆದ್ದರಿಂದ ಮಾತನಾಡುವಾಗ ಬಳಸುವ ಪದಗಳ ಬಗ್ಗೆ ಜಾಗರೂಕರಾಗಿರಿ.
ತುಲಾ ರಾಶಿ:
ತುಲಾ ರಾಶಿಯವರಿಗೆ ಇಂದು ತುಂಬಾ ಅನುಕೂಲಕರವಾಗಿದೆ. ನಿಮ್ಮ ಮಾತು ಮತ್ತು ನಡವಳಿಕೆ ಇತರರ ಮೆಚ್ಚುಗೆ ಪಡೆಯುವುದು.ವೃತ್ತಿಯಲ್ಲಿ ಪ್ರಗತಿಯಾಗುವುದು. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯ ಕಳೆಯುವಿರಿ.
ವೃಶ್ಚಿಕ ರಾಶಿ:
ಪ್ರೀತಿ ಮತ್ತು ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ. ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದರಿಂದ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುವುದು.
ಧನು ರಾಶಿ:
ಧನು ರಾಶಿಯವರು ಇಂದು ಮಿಶ್ರ ಫಲಿತಾಂಶಗಳನ್ನು ಪಡೆಯುವರು. ತಾಳ್ಮೆಯಿಂದ ಇರಬೇಕಾಗುತ್ತದೆ. ಸಮಸ್ಯೆಗಳು ಒಂದೊಂದಾಗಿಯೇ ಬಗೆಹರಿಯುವುದು.ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಒಳ್ಳೆಯದು.
ಮಕರ ರಾಶಿ:
ಮಕರ ರಾಶಿಯವರಿಗೆ ಇಂದು ತುಂಬಾ ಶುಭ ದಿನ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶವಿದೆ. ಮಾತಿನ ರೀತಿ ಇತರರ ಮೆಚ್ಚುಗೆ ಪಡೆಯುವುದು.
ಕುಂಭ ರಾಶಿ:
ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಭಾವನೆಗಳನ್ನು ಶಾಂತವಾಗಿ ವ್ಯಕ್ತಪಡಿಸಲು ಪ್ರಯತ್ನಿಸಬೇಕು. ತಾಳ್ಮೆಯಿಂದಿದ್ದರೆ, ಸಮಸ್ಯೆಗಳು ಕಡಿಮೆಯಾಗುತ್ತವೆ.
ಮೀನ ರಾಶಿ:
ಮೀನ ರಾಶಿಯವರಿಗೆ ಈ ದಿನ ತುಂಬಾ ವಿಶೇಷವಾಗಿರುತ್ತದೆ. ಪ್ರೀತಿ ಮತ್ತು ಕುಟುಂಬ ಸಂಬಂಧಗಳಲ್ಲಿ ಸಂತೋಷ ಹೆಚ್ಚಾಗುತ್ತದೆ. ನಿಮ್ಮ ಭಾವನೆಗಳನ್ನು ಧೈರ್ಯದಿಂದ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications