Daily Horoscope: ಈ ರಾಶಿಯವರ ವೃತ್ತಿಯಲ್ಲಿ ಪ್ರಗತಿ, ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು, ಹಣದ ಲಾಭ
Horoscope June 15: ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಸೋಮವಾರ ರಾಹುಕಾಲವು ಬೆಳಿಗ್ಗೆ 7:30 ರಿಂದ 9:00 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ:
ಬಹಳ ಕಾಲದಿಂದ ಅನುಭವಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರಲಿದೆ. ಕೌಟುಂಬಿಕ ಸಂತೋಷ ಹೆಚ್ಚಾಗುವುದು. ಇಂದು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ವೃಷಭ ರಾಶಿ:
ಇಂದು ನಿಮಗೆ ದಿನ ಉತ್ತಮವಾಗಿರಲಿದೆ. ಕಠಿಣ ಪರಿಶ್ರಮದ ಮೂಲಕ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಯೋಜಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು.

ಮಿಥುನ ರಾಶಿ:
ಇಂದು ನಿಮ್ಮ ಪಾಲಿಗೆ ದಿನ ಅದ್ಭುತವಾಗಿರಲಿದೆ. ವೈಯಕ್ತಿಕ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುವಿರಿ. ಕುಟುಂಬ ಸಂಬಂಧಗಳು ಬಲಗೊಳ್ಳುತ್ತವೆ. ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುತ್ತದೆ. ಆದಾಯ ಹೆಚ್ಚಾಗುವುದು.
ಕರ್ಕಾಟಕ ರಾಶಿ:
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ಸ್ನೇಹಿತರೊಂದಿಗಿನ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ಮಕ್ಕಳ ಉತ್ತಮ ಪರೀಕ್ಷಾ ಫಲಿತಾಂಶಗಳು ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ತರುತ್ತವೆ. ಸಾಲವಾಗಿ ನೀಡಿದ್ದ ಹಣ ಹಿಂದಕ್ಕೆ ಸಿಗುವುದು. ಅಪೂರ್ಣ ಕೆಲಸದ ಯೋಜನೆಗಳು ಪೂರ್ಣವಾಗುವುದು.
ಸಿಂಹ ರಾಶಿ:
ವ್ಯಾಪಾರಿಗಳು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮಕ್ಕಳೊಂದಿಗಿನ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ಶಿಕ್ಷಕರ ವರ್ಗಾವಣೆ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗುವುದು. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ವ್ಯವಹಾರದಲ್ಲಿ ಯಶಸ್ಸಿಗೆ ಹಲವು ಅವಕಾಶಗಳು ಸಿಗುತ್ತವೆ.
ಕನ್ಯಾ ರಾಶಿ:
ಇಂದು ನಿಮ್ಮ ಮಾತು ಕಠಿಣವಾಗಿರಬಹುದು. ಉದರದ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಮಕ್ಕಳಿಂದ ಶುಭ ಸುದ್ದಿ ಕೇಳುವಿರಿ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಪ್ರತಿ ಹಂತದಲ್ಲೂ ಸ್ನೇಹಿತರಿಂದ ಬೆಂಬಲ ಸಿಗುವುದು.
ತುಲಾ ರಾಶಿ:
ಸ್ನೇಹಿತರೊಂದಿಗೆ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಚರ್ಚಿಸಬಹುದು. ಯಾವ ಕೆಲಸ ಮಾಡುವುದಾದರೂ ಎಚ್ಚರ ಅಗತ್ಯ. ಖರ್ಚುಗಳು ನಿಮ್ಮ ಆದಾಯವನ್ನು ಮೀರುವ ಸಾಧ್ಯತೆಯಿದೆ. ವಾಹನ ಖರೀದಿಸಲು ಯೋಚಿಸುತ್ತಿರುವವರು ಸ್ವಲ್ಪ ದಿನ ಕಾಯುವುದು ಒಳ್ಳೆಯದು.
ವೃಶ್ಚಿಕ ರಾಶಿ:
ಯೋಜಿತ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಆಸ್ತಿಗೆ ಸಂಬಂಧಿಸಿದ ಕೆಲಸಗಳು ವೇಗವಾಗಿ ಪ್ರಗತಿ ಹೊಂದುತ್ತವೆ. ಕುಟುಂಬದಲ್ಲಿನ ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಇಂದು ಬಗೆಹರಿಯಬಹುದು. ಐಶಾರಾಮಿ ವಸ್ತುಗಳನ್ನು ಖರೀದಿಸುವಿರಿ.
ಧನು ರಾಶಿ:
ಇಂದು ಸಂತೋಷ ಮತ್ತು ಶಾಂತಿಯಿಂದ ತುಂಬಿದ ದಿನವಾಗಿರುತ್ತದೆ. ಮಕ್ಕಳಿಂದ ನಿಮಗೆ ಬೆಂಬಲ ಸಿಗುತ್ತದೆ. ಸಂಬಂಧಗಳು ಹೆಚ್ಚು ಸಾಮರಸ್ಯವನ್ನು ಹೊಂದುತ್ತವೆ. ಬಡ್ತಿ ಸಿಗುವುದು. ವೈವಾಹಿಕ ಜೀವನದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯ ಇಂದು ಕೊನೆಗೊಳ್ಳುತ್ತದೆ.
ಮಕರ ರಾಶಿ:
ಇಂದು ನಿಮಗೆ ಅದ್ಭುತವಾದ ದಿನವಾಗಲಿದೆ. ಎಲ್ಲಾ ಕೆಲಸದಲ್ಲಿಯೂ ಪ್ರಗತಿಯಾಗುವುದು. ನಿಮ್ಮ ಎಲ್ಲಾ ತೊಂದರೆಗಳು ಇಂದು ಕೊನೆಗೊಳ್ಳುತ್ತವೆ. ಯಶಸ್ಸಿನ ಹೊಸ ಕಿರಣ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆಯಾಗುವುದು.
ಕುಂಭ ರಾಶಿ:
ಯೋಜಿತ ಕೆಲಸಗಳು ಒಂದೊಂದಾಗಿ ಪೂರ್ಣಗೊಳ್ಳುತ್ತವೆ. ವ್ಯವಹಾರವು ಇಂದು ಸಕಾರಾತ್ಮಕ ಬದಲಾವಣೆಯನ್ನು ಕಾಣಲಿದೆ. ಆದಾಯ ಹೆಚ್ಚಾಗುತ್ತದೆ. ಜವಾಬ್ದಾರಿಗಳನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುವಿರಿ. ಹಠಾತ್ ಆರ್ಥಿಕ ಲಾಭವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು.
ಮೀನ ರಾಶಿ:
ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ವೇತನ ಹೆಚ್ಚಳವಾಗಬಹುದು. ಶೀಘ್ರದಲ್ಲೇ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರಲಿದೆ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications