Horoscope July 31: ಎರಡು ರಾಶಿಯವರಿಗೆ ಅತ್ಯಂತ ಶುಭ ದಿನ, ಮನದ ಆಸೆ ಈಡೇರುವುದು, ಕಾರು ಖರೀದಿ ಸಾಧ್ಯತೆ
Horoscope July 31: ಈ ದಿನ ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಮೇಷ ರಾಶಿ
ಇಂದು ನಿಮಗೆ ವಿಶೇಷ ದಿನವಾಗಿರುತ್ತದೆ. ಮಾಡುವ ಕೆಲಸಗಳಲ್ಲಿ ಸಕಾರಾತ್ಮಕ ಫಲ ಸಿಗುವುದು. ಹಳೆಯ ಸ್ನೇಹಿತನನ್ನು ಭೇಟಿಯಾಗುವಿರಿ. ಈ ಭೇಟಿ ನಿಮ್ಮ ಜೀವನದ ದಿಕ್ಕು ಬದಲಾಯಿಸುವ ಸಾಧ್ಯತೆ ಇದೆ. ಯಶಸ್ಸಿನ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.

ವೃಷಭ ರಾಶಿ
ಒಡಹುಟಿದವರೊಂದಿಗಿನ ಸಂಬಂಧ ಸುಧಾರಿಸುವುದು. ವ್ಯವಹಾರದಲ್ಲಿ ಲಾಭವಾಗುವುದು. ಸರ್ಕಾರಿ ಕೆಲಸಕ್ಕಾಗಿ ಅಲೆಯುತ್ತುದ್ದವರಿಗೆ ಯಶಸ್ಸು ಸಿಗುವುದು. ಹೊಸ ಕೆಲಸಗಳು ಮತ್ತು ಜವಾಬ್ದಾರಿಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣವಿರುವುದು.
ಮಿಥುನ ರಾಶಿ
ಉದ್ಯಮಿಗಳಿಗೆ ಈ ದಿನ ಶುಭವಾಗಿರುವುದು. ವ್ಯವಹಾರವನ್ನು ವಿಸ್ತರಿಸುವ ಯೋಜನೆಯಿದ್ದರೆ ಇದು ಸೂಕ್ತ ಸಮಯ. ಆಧ್ಯಾತ್ಮಿಕತೆಯ ಕಡೆಗೆ ಒಲವು ಹೆಚ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರಲಿದೆ. ಆರೋಗ್ಯದ ಬಗ್ಗೆ ಗಮನ ಇರಲಿ.
ಕರ್ಕಾಟಕ ರಾಶಿ
ಇಂದಿನ ದಿನ ಉತ್ಸಾಹದಿಂದ ತುಂಬಿರುವುದು. ಅಂದುಕೊಂಡದ್ದನ್ನು ಸಾಧಿಸಲು ಸರಿಯಾದ ಸಮಯ. ಮನೆಯ ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವಿರಿ. ನಿಮ್ಮ ಕೆಲಸಕ್ಕೆ ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ವೃತ್ತಿಜೀವನದಲ್ಲಿ ಕೆಲವು ಅರ್ಥಪೂರ್ಣ ಬದಲಾವಣೆಗಳಾಗಲಿದೆ.
ಸಿಂಹ ರಾಶಿ
ಈ ದಿನ ಸಂತೋಷದಿಂದಲೇ ಕೂಡಿರುವುದು. ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿದ್ದರೆ ಮುಂದುವರೆಯಬಹುದು. ಲಾಭವಾಗುವ ಸಾಧ್ಯತೆ ಇದೆ. ಪ್ರಗತಿಗೆ ಉತ್ತಮ ಅವಕಾಶಗಳಿವೆ. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಮನಸ್ಸಿನ ಶಾಂತಿ ಹೆಚ್ಚಾಗುವುದು.
ಕನ್ಯಾ ರಾಶಿ
ನಿಮ್ಮ ಗೌರವ ಹೆಚ್ಚಾಗುವುದು. ವೈವಾಹಿಕ ಜೀವನ ಸುಖಕರವಾಗಿರುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ನಿಮ್ಮ ಹಿರಿಯರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಆರೋಗ್ಯದ ಬಗ್ಗೆ ಗಮನ ಹರಿಸಿ.
ತುಲಾ ರಾಶಿ
ತುಲಾ ರಾಶಿಯವರಿಗೆ ದಿನ ಅನುಕೂಲಕರವಾಗಿರುತ್ತದೆ. ಕಚೇರಿ ಕೆಲಸದಲ್ಲಿ ಎದುರಾಗಿರುವ ಸಮಸ್ಯೆ ಬಗೆಹರಿಯುವುದು. ಪ್ರಗತಿಗೆ ಹೊಸ ಮಾರ್ಗಗಳು ನಿಮಗಾಗಿ ತೆರೆದುಕೊಳ್ಳುತ್ತವೆ. ಕುಟುಂಬದಲ್ಲಿ ಸಾಮರಸ್ಯವಿರುವುದು. ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ.
ವೃಶ್ಚಿಕ ರಾಶಿ
ವ್ಯವಹಾರವನ್ನು ಮುನ್ನಡೆಸಲು ಆರ್ಥಿಕ ಯೋಜನೆಯನ್ನು ಸರಿಯಾಗಿ ರೂಪಿಸಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗುವುದು. ಶ್ರಮಕ್ಕೆ ತಕ್ಕ ಫಲ ಸಿಗುವುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಧನು ರಾಶಿ
ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ವ್ಯವಹಾರ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಹೊಸ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ.
ಮಕರ ರಾಶಿ
ಇಂದು ಸಕಾರಾತ್ಮಕ ದಿನವಾಗಿರುತ್ತದೆ. ಕೆಲಸದ ಹೊರೆ ಹೆಚ್ಚಾಗಬಹುದು. ಹಣದ ವಿಷಯಗಳಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಸಂಗಾತಿಯಿಂದ ಒಳ್ಳೆಯ ಉಡುಗೊರೆ ಸಿಗುವುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ದಿನ ಉತ್ತಮವಾಗಿರಲಿದೆ. ವ್ಯವಹಾರಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ. ವ್ಯವಹಾರ ನಡೆಸುವವರಿಗೆ ಆರ್ಥಿಕ ಲಾಭವಾಗುವುದು. ಆರೋಗ್ಯವು ಸುಧಾರಿಸುತ್ತದೆ. ಆದಾಯದ ಹೊಸ ಮೂಲ ಹುಟ್ಟಿಕೊಳ್ಳುವುದು.
ಮೀನ ರಾಶಿ
ಕೆಲಸದ ಶೈಲಿಯನ್ನು ಸುಧಾರಿಸುವತ್ತ ಸಂಪೂರ್ಣ ಗಮನವಿರುತ್ತದೆ. ಸಾಲವಾಗಿ ನೀಡಿದ ಹಣ ವಾಪಸ್ ಬರುವುದು. ವ್ಯವಹಾರದಲ್ಲಿ ಗಮನಾರ್ಹ ಯಶಸ್ಸು ಸಿಗುವುದು. ಕುಟುಂಬದ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳು ಪರಿಣಾಮಕಾರಿಯಾಗಿರಲಿವೆ.


Click it and Unblock the Notifications
