Horoscope July 26: ಇಂದು ಬೆಳಗುವುದು ಈ ರಾಶಿಯವರ ಅದೃಷ್ಟ: ಎದುರಾಗಿದ್ದ ಅಡೆತಡೆಗಳು ದೂರವಾಗುವುದು
Horoscope July 26: ಇಂದಿನ ದಿನವು ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಮೇಷದಿಂದ ಮೀನ ವರೆಗಿನ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎಂದು ಇಲ್ಲಿ ತಿಳಿಯಿರಿ.
ಮೇಷ ರಾಶಿ
ಇಂದು ನಿಮಗೆ ಹೊಸ ಅವಕಾಶಗಳು ದೊರೆಯುತ್ತವೆ. ಹಣಕಾಸು ಯೋಜನೆಯತ್ತ ಗಮನ ಹರಿಸುವಿರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಇಂದು ಕೆಲವು ಪ್ರಮುಖ ಕೆಲಸಗಳಲ್ಲಿ ಪ್ರಯೋಜನಗಳನ್ನು ಪಡೆಯುವಿರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದು. ಹೊಸ ಆದಾಯದ ಮೂಲಗಳು ಹೊರಹೊಮ್ಮುತ್ತವೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.

ವೃಷಭ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಒಂದು ನಿರ್ದಿಷ್ಟ ಕಾರ್ಯಕ್ಕೆ ಸಾಕಷ್ಟು ಶ್ರಮ ವಹಿಸುವಿರಿ. ಅದು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಆಸ್ತಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರ ಸಮಯ. ಉದ್ಯೋಗಿಗಳಿಗೆ ಇಂದು ಪ್ರಮುಖ ಜವಾಬ್ದಾರಿಗಳು ಸಿಗಬಹುದು. ಬಡ್ತಿಯ ಅವಕಾಶವೂ ಇರುತ್ತದೆ.
ಮಿಥುನ ರಾಶಿ
ಇಂದು ನಿಮಗೆ ವಿಶೇಷ ದಿನವಾಗಿರಲಿದೆ. ಕೈ ಹಾಕುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಕಠಿಣ ಪರಿಶ್ರಮ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಮೊಬೈಲ್ ಅಥವಾ ಇಮೇಲ್ ಮೂಲಕ ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದೆ. ನಿಮ್ಮ ಸಂಗಾತಿ ಮತ್ತು ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ.
ಕರ್ಕಾಟಕ ರಾಶಿ
ಇಂದಿನ ದಿನ ನಿಮಗೆ ಅನುಕೂಲಕರವಾಗಿರಲಿದೆ. ಸಹೋದರರು ಅಥವಾ ಆಪ್ತ ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಖರ್ಚುಗಳ ಜೊತೆಗೆ, ನಿಮ್ಮ ಬಜೆಟ್ ಅನ್ನು ಕೂಡಾ ಗಮನದಲ್ಲಿರಿಸಿಕೊಳ್ಳಿ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುವುದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.
ಸಿಂಹ ರಾಶಿ
ಈ ದಿನ ನಿಮಗೆ ಸಂತೋಷ ತರುತ್ತದೆ. ಹೊಸ ಉದ್ಯಮಕ್ಕೆ ಇಳಿಯುವ ಬಗ್ಗೆ ಯೋಚಿಸುವಿರಿ. ನೆಚ್ಚಿನ ಸ್ಥಳಕ್ಕೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ನಿಮ್ಮ ವ್ಯವಹಾರವನ್ನು ಮುನ್ನಡೆಸಲು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಿರಿ. ಸಮಸ್ಯೆಯಲ್ಲಿ ಕುಟುಂಬದ ಬೆಂಬಲವು ನಿಮಗೆ ಸಹಾಯಕವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ.
ಕನ್ಯಾ ರಾಶಿ
ಇಂದು ನಿಮಗೆ ಅನುಕೂಲಕರ ದಿನವಾಗಿರುತ್ತದೆ. ಸಕಾರಾತ್ಮಕ ಚಿಂತನೆ ಮತ್ತು ಹರ್ಷಚಿತ್ತದಿಂದ ಕೂಡಿದ ಮನೋಭಾವವು ದೈನಂದಿನ ದಿನಚರಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಭವಿಷ್ಯದ ಯೋಜನೆಗಳ ಬಗ್ಗೆ ಹೆಚ್ಚು ಸಕ್ರಿಯ ಮತ್ತು ಗಂಭೀರವಾಗಿರುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು.
ತುಲಾ ರಾಶಿ
ಉತ್ಸಾಹ ತುಂಬಿದ ದಿನವಾಗಿರುತ್ತದೆ. ಅನಿರೀಕ್ಷಿತವಾಗಿ ವಿಶೇಷ ಸ್ನೇಹಿತನನ್ನು ಭೇಟಿಯಾಗುವಿರಿ. ನಿರ್ದಿಷ್ಟ ವಿಷಯದ ಬಗ್ಗೆ ನಡೆಯುವ ಮಾತುಕತೆ ಪ್ರಯೋಜನಕಾರಿಯಾಗಿರುವುದು. ನಿಕಟ ಸಂಬಂಧಿಗಳೊಂದಿಗಿನ ನಿಮ್ಮ ಬಾಂಧವ್ಯವು ಉತ್ತಮವಾಗಿರುವುದು. ವ್ಯವಹಾರ ದೃಷ್ಟಿಕೋನದಿಂದ, ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಕೌಟುಂಬಿಕ ಜೀವನವು ಚೆನ್ನಾಗಿರುವುದು.
ವೃಶ್ಚಿಕ ರಾಶಿ
ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ದಿನದ ಆರಂಭದಲ್ಲಿ ಒಳ್ಳೆಯ ಸುದ್ದಿ ಸಿಗುವುದು. ಪ್ರಭಾವಿ ಮತ್ತು ಅನುಭವಿ ವ್ಯಕ್ತಿಯೊಂದಿಗೆ ಸಮಯ ಕಳೆಯಲು ಅವಕಾಶ ಸಿಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು. ವ್ಯವಹಾರಗಳಲ್ಲಿ ತೊಡಗಿರುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ.
ಧನು ರಾಶಿ
ನಿಮ್ಮ ಮನೆಯಲ್ಲಿ ಯಾವುದೇ ಬದಲಾವಣೆಗಳು ಅಥವಾ ಸುಧಾರಣೆಗಳನ್ನು ತರುವ ಬಗ್ಗೆ ಯೋಜಿಸುತ್ತಿದ್ದರೆ, ಇದು ಉತ್ತಮ ಸಮಯ. ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯುವ ಉತ್ತಮ ಅವಕಾಶವಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಗಮನಾರ್ಹ ಯಶಸ್ಸನ್ನು ಕಾಣುತ್ತಾರೆ. ಇಂದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನವು ಸಂತೋಷ ಮತ್ತು ಶಾಂತಿಯುತವಾಗಿರುತ್ತದೆ.
ಮಕರ ರಾಶಿ
ಸಂತೋಷದಿಂದ ತುಂಬಿದ ದಿನವಾಗಿರುತ್ತದೆ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುವುದರಿಂದ ಹೆಚ್ಚುವರಿ ಸಮಯ ಕೆಲಸ ಮಾಡಬೇಕಾಗಬಹುದು. ವೈವಾಹಿಕ ಜೀವನವು ಸುಖಕರವಾಗಿರುವುದು. ಆಮದು-ರಫ್ತು ವ್ಯವಹಾರದಲ್ಲಿ ತೊಡಗಿರುವವರು ಲಾಭದಾಯಕ ಅವಕಾಶಗಳನ್ನು ಕಂಡುಕೊಳ್ಳುತ್ತಾರೆ. ಆರೋಗ್ಯ ಉತ್ತಮವಾಗಿರುವುದು.
ಕುಂಭ ರಾಶಿ
ಇಂದು ಉತ್ತಮ ದಿನವಾಗಲಿದೆ. ಕಠಿಣ ಪರಿಶ್ರಮವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಸಾಧ್ಯತೆಯಿದೆ. ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಲು ಸಹಾಯವಾಗುವುದು. ಮನೆಯಲ್ಲಿ ಸಂತೋಷದ ವಾತಾವರಣವಿರುವುದು. ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ವೈವಾಹಿಕ ಜೀವನ ಅದ್ಭುತವಾಗಿರುತ್ತದೆ.
ಮೀನ ರಾಶಿ
ಎಲ್ಲಾ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಯಾವುದೇ ಹೂಡಿಕೆ ಮಾಡುವ ಮೊದಲು, ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯುವುದು ಪ್ರಯೋಜನಕಾರಿಯಾಗಿರಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರುತ್ತದೆ.


Click it and Unblock the Notifications
