Daily Horoscope: ಹಣದ ವಿಷಯದಲ್ಲಿ ಈ ರಾಶಿಯವರಿಗೆ ಶುಭ ದಿನ, ಎಲ್ಲಾ ಕೆಲಸದಲ್ಲಿಯೂ ಸಿಗುವುದು ಯಶಸ್ಸು

Horoscope August 7: ಈ ದಿನ ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.

ಮೇಷ ರಾಶಿ

ಹೊಸ ಉದ್ಯೋಗಾವಕಾಶಗಳು ಸಿಗುತ್ತವೆ. ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವಿರಿ. ಆಧ್ಯಾತ್ಮಿಕ ಕೆಲಸದಲ್ಲಿ ಭಾಗಿಯಾಗುವಿರಿ. ಮನಸ್ಸಿನ ಸಂತೋಷ ಹೆಚ್ಚಾಗುವುದು. ಭೂಮಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಮುಂದುವರೆಯಬಹುದು.

Horoscope August on 7 Daily Horoscope Zodiac Predictions Lucky Number Colour of all signs

ವೃಷಭ ರಾಶಿ

ವೃಷಭ ರಾಶಿಯವರಿಗೆ ಉತ್ತಮ ದಿನವಾಗಿರುವುದು. ತುಂಬಾ ದಿನಗಳಿಂದ ಬಾಕಿ ಇರುವ ಕೆಲಸ ಪೂರ್ಣವಾಗುವುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ವೈವಾಹಿಕ ಜೀವನದಲ್ಲಿ ಮಾಧುರ್ಯವಿರುವುದು. ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ.

ಮಿಥುನ ರಾಶಿ

ಇಂದು ಆತ್ಮವಿಶ್ವಾಸದಿಂದ ತುಂಬಿದ ದಿನವಾಗಿರುವುದು. ಎರಡು ಪಟ್ಟು ಲಾಭವನ್ನು ನೀಡುವ ಹೊಸ ಯೋಜನೆಯನ್ನು ಪ್ರಾರಂಭಿಸಬಹುದು. ಕೆಲಸದಲ್ಲಿ ಬಡ್ತಿಗೆ ಅವಕಾಶವಿದೆ. ಸಾಮಾಜಿಕ ಸ್ಥಾನಮಾನ ಹೆಚ್ಚುವುದು. ಆರೋಗ್ಯವು ಉತ್ತಮವಾಗಿರುವುದು.

ಕರ್ಕಾಟಕ ರಾಶಿ

ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ. ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಲಾಭವಾಗುವುದು. ಆದರೆ ದಿನವಿಡೀ ಕೆಲಸದಲ್ಲಿ ಬ್ಯಸಿಯಾಗಿರುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ.ವೃತ್ತಿಜೀವನದ ಬಗ್ಗೆ ಅನುಭವಿ ವ್ಯಕ್ತಿಯಿಂದ ಸಲಹೆ ಪಡೆಯಬಹುದು.

ಸಿಂಹ ರಾಶಿ

ಹೂಡಿಕೆ ಮಾಡಲು ಉತ್ತಮ ದಿನ. ಹೆಚ್ಚು ಸಮಯ ವ್ಯರ್ಥ ಮಾಡಬೇಡಿ. ಯಾವುದರ ಬಗ್ಗೆಯೂ ಅತಿಯಾಗಿ ಯೋಚಿಸದೆ ಶೀಘ್ರ ನಿರ್ಧಾರ ತೆಗೆದುಕೊಳ್ಳಿ, ಲಾಭವಾಗುವುದು. ಆರೋಗ್ಯದ ದೃಷ್ಟಿಯಿಂದ, ಇಂದು ಒಳ್ಳೆಯ ದಿನವಾಗಿರುವುದು.

ಕನ್ಯಾ ರಾಶಿ

ಅನುಕೂಲಕರ ದಿನವಾಗಿರಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಸಂತೋಷ ಹೆಚ್ಚಾಗುವುದು. ಮಹತ್ವದ ಜವಾಬ್ದಾರಿ ಹೆಗಲೇರುವುದು. ಬಾಕಿ ಇರುವ ಕೆಲಸಗಳನ್ನು ಸರಾಗವಾಗಿ ಮಾಡಿ ಮುಗಿಸುವಿರಿ.

ತುಲಾ ರಾಶಿ

ಇಂದು ದಿನ ಉತ್ತಮವಾಗಿರಲಿದೆ. ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳ ಕಡೆಗೆ ಒಲವು ಹೆಚ್ಚಾಗುವುದು. ವಿದೇಶ ಪ್ರವಾಸಕ್ಕೆ ಹೋಗಬೇಕಾಗಬಹುದು. ಈ ಪ್ರವಾಸವು ಪ್ರಯೋಜನಕಾರಿಯಾಗಿರಲಿದೆ.

ವೃಶ್ಚಿಕ ರಾಶಿ

ವ್ಯವಹಾರದಲ್ಲಿ ಎರಡು ಪಟ್ಟು ಲಾಭವಾಗುವುದು. ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಸಿದ್ಧರಾಗಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವುದಕ್ಕೆ ಸೂಕ್ತ ಸಮಯ.

ಧನು ರಾಶಿ

ಇಂದು ನಿಮಗೆ ಮಹತ್ವದ ದಿನವಾಗಿರುವುದು. ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ಭೌತಿಕ ಸೌಕರ್ಯಗಳು ಹೆಚ್ಚಾಗುವುದು. ಕಲಾ ಕ್ಷೇತ್ರದಲ್ಲಿರುವವರು ಅದ್ಭುತ ಅವಕಾಶವನ್ನು ಪಡೆಯುವರು. ಆರೋಗ್ಯ ಇಂದು ಪರಿಪೂರ್ಣವಾಗಿರುವುದು.

ಮಕರ ರಾಶಿ

ಇಂದು ಅನುಕೂಲಕರ ದಿನವಾಗಿರುವುದು. ಪಾಲುದಾರಿಕೆಯಲ್ಲಿ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಚರ್ಚಿಸಬಹುದು. ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಯಶಸ್ಸು ಸಿಗುವುದು. ಈ ರಾಶಿಯ ಅಡಿಯಲ್ಲಿ ಜನಿಸಿದ ಉದ್ಯಮಿಗಳು ಇಂದು ಇದ್ದಕ್ಕಿದ್ದಂತೆ ಗಮನಾರ್ಹ ಲಾಭವನ್ನು ಪಡೆಯುವರು.

ಕುಂಭ ರಾಶಿ

ಈ ದಿನ ನಿಮಗೆ ಪ್ರಯೋಜನಕಾರಿಯಾಗಿರುವುದು. ಹೆಚ್ಚಿನ ಕೆಲಸಗಳು ಪೂರ್ಣಗೊಳ್ಳುವುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳಿ. ಮಿತಿ ಮೀರಿ ಜವಾಬ್ದಾರಿಗಳಿಗೆ ತಲೆ ಕೊಡಬೇಡಿ. ಮಕ್ಕಳ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುವುದು.

ಮೀನ ರಾಶಿ

ಕೆಲಸದಲ್ಲಿ ಬಡ್ತಿ ಸಿಗುವುದು. ಹೊಸ ಜನರನ್ನು ಭೇಟಿಯಾಗುವಿರಿ. ಬಾಕಿ ಇರುವ ಕೆಲಸಗಳು ಪೂರ್ಣವಾಗುವುದು.ಮನೆಗೆ ಅನಿರೀಕ್ಷಿತವಾಗಿ ಅತಿಥಿ ಬರಬಹುದು. ಭಾವನೆಗಳನ್ನು ನಿಯಂತ್ರಿಸಿ. ಇಮೋಶನ್‌ಗೆ ಬಿದ್ದು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+