Horoscope August 2: ವೃತ್ತಿ ವ್ಯವಹಾರದಲ್ಲಿ ಅಪೇಕ್ಷಿತ ಲಾಭ, ಈ ರಾಶಿಯವರಿಗೆ ಅದೃಷ್ಟದ ದಿನ
Horoscope August 2: ಈ ದಿನ ಕೆಲವರಿಗೆ ಹೊಸ ಅವಕಾಶಗಳು, ಉದ್ಯೋಗದಲ್ಲಿ ಬಡ್ತಿ ಮತ್ತು ಧನಲಾಭವನ್ನು ತಂದರೆ, ಇನ್ನು ಕೆಲವರಿಗೆ ಕಠಿಣ ಶ್ರಮಕ್ಕೆ ಸಕಾರಾತ್ಮಕ ಫಲಿತಾಂಶ ಹಾಗೂ ಕುಟುಂಬದಲ್ಲಿ ಸಂತಸ ತರಲಿದೆ. ಹಾಗಾದ್ರೆ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿರಲಿದೆ ಎನ್ನುವ ವಿವರವನ್ನು ಇಲ್ಲಿ ಗಮನಿಸಿ.
ಮೇಷ ರಾಶಿ
ವ್ಯವಹಾರವನ್ನು ಮುನ್ನಡೆಸಲು ಹೊಸ ಯೋಜನೆಗಳನ್ನು ರೂಪಿಸುವಿರಿ. ಈ ಮೂಲಕ ಯಶಸ್ಸಿನ ಹೊಸ ಎತ್ತರಕ್ಕೆ ಏರುವಿರಿ. ಬಾಲ್ಯದ ಸ್ನೇಹಿತನ ಭೇಟಿಯಾಗುವುದು. ಮನೆಮಂದಿಯ ನಡುವೆ ಇದ್ದ ಭಿನ್ನಾಭಿಪ್ರಾಯ ಬಗೆಹರಿಯುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣವಿರುವುದು.

ವೃಷಭ ರಾಶಿ
ಇಂದು ನಿಮಗೆ ಶುಭ ದಿನವಾಗಲಿದೆ. ಹೊಸ ಜನರನ್ನು ಭೇಟಿಯಾಗುವಿರಿ. ಎದುರಾಗಿದ್ದ ಸಮಸ್ಯೆಗಳು ಬಗೆಹರಿಯುವುದು. ಶುಭ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ವ್ಯವಹಾರಗಳಲ್ಲಿ ಉತ್ತಮ ಗಳಿಕೆಯಾಗುವುದು. ನಿಮ್ಮ ಗುರಿಗಳನ್ನು ತಲುಪುವಲ್ಲಿ ಯಶಸ್ವಿಯಾಗುವಿರಿ.
ಮಿಥುನ ರಾಶಿ
ಇಂದು ನಿಮಗೆ ಉತ್ತಮ ದಿನವಾಗಲಿದೆ. ಕುಟುಂಬವು ನಿಮ್ಮ ಉತ್ತಮ ಕೆಲಸವನ್ನು ಹೊಗಳುತ್ತದೆ.ವ್ಯವಹಾರವನ್ನು ಮುನ್ನಡೆಸಲು ಉತ್ತಮ ಅವಕಾಶ ಸಿಗುವುದು. ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಸಿದ್ಧತೆಗಳನ್ನು ಮುಂದುವರಿಸಬೇಕು. ವೈವಾಹಿಕ ಜೀವನದಲ್ಲಿ ಸಂತೋಷವು ಹೆಚ್ಚಾಗುವುದು.
ಕರ್ಕಾಟಕ ರಾಶಿ
ಇಂದು ನಿಮಗೆ ಒಳ್ಳೆಯ ದಿನವಾಗಲಿದೆ. ಬೇರೆ ಬೇರೆ ಮೂಲಗಳಿಂದ ಆದಾಯ ಬರುವುದು. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಪರಿಹಾರ ಕಂಡುಕೊಳ್ಳಬಹುದು. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಿರಿ.
ಸಿಂಹ ರಾಶಿ
ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಿ. ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವಿರಿ. ಹೊಸ ಕೆಲಸ ಪ್ರಾರಂಭಿಸಲು ಸರಿಯಾದ ದಿನ. ಇವತ್ತು ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಸಂಗಾತಿಯು ವೃತ್ತಿಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು.
ಕನ್ಯಾ ರಾಶಿ
ಹೆಚ್ಚುತ್ತಿರುವ ವೆಚ್ಚಗಳು ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲಸದ ಸ್ಥಳದಲ್ಲಿ ಪ್ರಗತಿಯ ಹಾದಿ ಸುಗಮವಾಗಿರುವುದು. ಮಗುವಿನ ವೃತ್ತಿ ಅಥವಾ ಶಿಕ್ಷಣದ ಬಗ್ಗೆ ಇರುವ ಚಿಂತೆ ದೂರವಾಗುವುದು. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುವುದು.
ತುಲಾ ರಾಶಿ
ಇಂದಿನ ದಿನ ಉಲ್ಲಾಸದಿಂದ ಕೂಡಿರುವುದು. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸ ಕಾರ್ಯಗಳಲ್ಲಿ ಶೀಘ್ರದಲ್ಲೇ ಯಶಸ್ಸು ಸಿಗುವುದು. ಆರೋಗ್ಯದ ಬಗ್ಗೆ ವಿಶೇಷ ಗಮನ ಕೊಡಿ.
ವೃಶ್ಚಿಕ ರಾಶಿ
ಇಂದು ನಿಮ್ಮ ಪಾಲಿನ ಸುವರ್ಣ ದಿನವಾಗಿರಲಿದೆ. ವ್ಯವಹಾರ ಜವಾಬ್ದಾರಿಗಳನ್ನು ಪೂರೈಸಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಯೋಜಿತ ಕೆಲಸ ಇಂದು ಪೂರ್ಣಗೊಳ್ಳುವುದು. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರುವುದು.
ಧನು ರಾಶಿ
ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಜ್ಞರೊಂದಿಗೆ ಸಮಾಲೋಚಿಸುವುದು ಒಳ್ಳೆಯದು.ಕಠಿಣ ಪರಿಶ್ರಮವನ್ನು ಮುಂದುವರಿಸಿದರೆ, ಶೀಘ್ರದಲ್ಲೇ ಯಶಸ್ಸು ಸಿಗುವುದು. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಮಕರ ರಾಶಿ
ನಿರಂತರವಾಗಿ ಎದುರಿಸುತ್ತಿದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಜೀವನವನ್ನು ಸುಧಾರಿಸಲು ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಆರೋಗ್ಯವು ಇಂದು ಉತ್ತಮವಾಗಿರುತ್ತದೆ.
ಕುಂಭ ರಾಶಿ
ಹೊಸ ಉತ್ಸಾಹ ತುಂಬಿದ ದಿನವಾಗಿರುತ್ತದೆ. ವಿದ್ಯಾರ್ಥಿಗಳು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಕಾಣುವರು. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಉತ್ತಮ ಸಮಯ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು.
ಮೀನ ರಾಶಿ
ಉದ್ಯಮಿಗಳು ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುವರು. ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆರ್ಥಿಕವಾಗಿ ದಿನ ಚೆನ್ನಾಗಿರುವುದು. ಆರೋಗ್ಯ ಸಮಸ್ಯೆ ಕಾಡಬಹುದು.


Click it and Unblock the Notifications
