Daily Horoscope: ಇಂದು ಮೂರು ಯೋಗಗಳಿಂದ ಎರಡು ರಾಶಿಯವರಿಗೆ ಸಿಗಲಿದೆ ಶುಭ; ಮನೆ ಅಥವಾ ಆಸ್ತಿ ಖರೀದಿ ಸಾಧ್ಯತೆ

ಇಂದು ಭಾದ್ರಪದ ಶುಕ್ಲ ಪಕ್ಷದ ಪ್ರತಿಪದ ತಿಥಿ ಬೆಳಿಗ್ಗೆ 7.47 ರವರೆಗೆ ಇರುತ್ತದೆ. ನಂತರ ದ್ವಿತೀಯ ತಿಥಿ ಪ್ರಾರಂಭವಾಗುತ್ತದೆ. ಉತ್ತರಫಲ್ಗುಣಿ ನಕ್ಷತ್ರವು ಮಧ್ಯಾಹ್ನ 12.55 ರವರೆಗೆ ಇರುತ್ತದೆ, ನಂತರ ಹಸ್ತಾ ನಕ್ಷತ್ರವು ಪ್ರಾರಂಭವಾಗುತ್ತದೆ. ಚಂದ್ರನು ದಿನವಿಡೀ ಕನ್ಯಾರಾಶಿಯಲ್ಲಿ ಸಾಗುತ್ತಾನೆ.ಇಂದು ಶುಭ ಯೋಗ, ಬುಧಾದಿತ್ಯ ಯೋಗ , ಭದ್ರ ಯೋಗಗಳ ಭವ್ಯ ಸಂಯೋಜನೆಯು ನಿರ್ದಿಷ್ಟ ರಾಶಿಯವರಿಗೆ ಅದೃಷ್ಟ ತರುವುದು.

ಮೇಷ ರಾಶಿ (Aries):

ಮನೆಯಲ್ಲಿ ಶಾಂತಿಯುತ ವಾತಾವರಣವಿರುವುದು. ಮನೆ ಅಥವಾ ಆಸ್ತಿ ಖರೀದಿಗೆ ಸಂಬಂಧಿಸಿದ ಯೋಜನೆಗಳು ಮುಂದುವರಿಯಬಹುದು. ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಹಳೆಯ ಯೋಜನೆಗಳನ್ನು ಪೂರ್ಣಗೊಳಿಸಲು ಅವಕಾಶ ಸಿಗುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ.

Daily Horoscope Today Rashi Bhavishya September 12 Zodiac Predictions Lucky Number Colour of all signs

ವೃಷಭ ರಾಶಿ (Taurus) :

ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಮನೆಯಲ್ಲಿನ ವಾತಾವರಣವು ಅನುಕೂಲಕರವಾಗಿರುವುದು. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದು. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ವ್ಯವಹಾರದಲ್ಲಿ ಹಳೆಯ ಗ್ರಾಹಕರಿಂದ ಲಾಭವಾಗುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು.

ಮಿಥುನ ರಾಶಿ (Gemini) :

ಕುಟುಂಬದಲ್ಲಿ ಸಾಮರಸ್ಯ ಇರುವುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದು. ಸಂಗಾತಿ ಮತ್ತು ಕುಟುಂಬ ಸದಸ್ಯರ ಬೆಂಬಲ ಸಿಗುವುದು. ವ್ಯವಹಾರದಲ್ಲಿ ಲಾಭವಾಗುವುದು. ವ್ಯಾಪಾರ ವಿಸ್ತರಣೆಗೆ ಸಮಯ ಅನುಕೂಲಕರವಾಗಿದೆ. ಹೊಸ ಜವಾಬ್ದಾರಿಗಳು ಉದ್ಯೋಗಿಗಳಿಗೆ ಸಿಗುವುದು.

ಕರ್ಕಾಟಕ ರಾಶಿ (Cancer) :

ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುವುದು. ಮನೆಯಲ್ಲಿ ಶಾಂತಿಯುತ ಮತ್ತು ಸಂತೋಷದ ವಾತಾವರಣವಿರುವುದು. ಉದ್ಯಮಿಗಳಿಗೆ ದಿನ ಅನುಕೂಲಕರವಾಗಿರುವುದು. ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಆರೋಗ್ಯ ಸಾಮಾನ್ಯವಾಗಿರುವುದು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದು.

ಸಿಂಹ ರಾಶಿ (Leo) :

ಕುಟುಂಬದ ಜವಾಬ್ದಾರಿಗಳ ಬಗ್ಗೆ ಜಾಗರೂಕರಾಗಿರಿ. ಕೆಲಸಗಳನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಮನೆಯಲ್ಲಿ ಶುಭ ಕಾರ್ಯ ನಡೆಸುವ ಬಗ್ಗೆ ಮಾತುಕತೆ ನಡೆಯಬಹುದು. ಉದ್ಯೋಗ ಬದಲಾಯಿಸುವುದಕ್ಕೆ ಸಮಯ ಅನುಕೂಲಕರವಾಗಿದೆ.

ಕನ್ಯಾ ರಾಶಿ (Virgo) :

ಮನೆಯಲ್ಲಿನ ವಾತಾವರಣವು ಸೌಹಾರ್ದಯುತವಾಗಿರುವುದು. ಸಂಗಾತಿಯ ಬೆಂಬಲ ಸಿಗುವುದು. ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಗಮನ ಕೊಡಿ.
ಗೌರವ ಹೆಚ್ಚಾಗುವುದು. ಹೊಸ ಜವಾಬ್ದಾರಿಗಳು ಹುಟ್ಟಿಕೊಳ್ಳುವುದು. ಯೋಜಿತ ರೀತಿಯಲ್ಲಿ ಕೆಲಸ ಮಾಡುವುದರಿಂದ ಅತ್ಯುತ್ತಮ ಫಲಿತಾಂಶಗಳು ದೊರೆಯುವುದು. ಆರ್ಥಿಕ ಪರಿಸ್ಥಿತಿ ಸಮತೋಲನದಲ್ಲಿರುವುದು.

ತುಲಾ ರಾಶಿ (Libra):

ಉದ್ಯಮಿಗಳಿಗೆ ಹೊಸ ಆರ್ಡರ್ ಅಥವಾ ಪ್ರಮುಖ ಕ್ಲೈಂಟ್ ಸಿಗುವ ಸಾಧ್ಯತೆಯಿದೆ. ಹಳೆಯ ಸಂಪರ್ಕಗಳು ವ್ಯವಹಾರ ಲಾಭಗಳನ್ನು ತರುತ್ತವೆ. ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಈ ದಿನವು ವಿಶೇಷವಾಗಿರುವುದು. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗುವುದು. ಆರೋಗ್ಯ ಸಾಮಾನ್ಯವಾಗಿರುವುದು. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುವುದು.

ವೃಶ್ಚಿಕ ರಾಶಿ (Scorpio):

ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಸಿಗುವುದು. ಮಾತುಕತೆಯ ಮೂಲಕ ಹಳೆಯ ಸಮಸ್ಯೆಗಳನ್ನು ಬಗೆಹರಿಸುವುದು ಸಾಧ್ಯವಾಗುವುದು. ಹಿರಿಯ ಅಧಿಕಾರಿಗಳ ಬೆಂಬಲ ಸಿಗುವುದು. ಕಠಿಣ ಪರಿಶ್ರಮ ಮತ್ತು ದಕ್ಷತೆಗೆ ಸೂಕ್ತ ಮನ್ನಣೆ ಸಿಗುವುದು. ಮಾನಸಿಕ ಒತ್ತಡದಿಂದ ಮುಕ್ತಿ ಸಿಗುವುದು. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುವುದು.

ಧನು ರಾಶಿ (Sagittarius):

ಕುಟುಂಬ ಜೀವನದಲ್ಲಿ ಸಾಮರಸ್ಯ ನೆಲೆಯಾಗುವುದು. ಸ್ನೇಹಿತರು ಮತ್ತು ಪರಿಚಯಸ್ಥರಿಂದ ಬೆಂಬಲ ಸಿಗುವುದು. ಮನೆಯಲ್ಲಿ ಕೆಲವು ಶುಭ ಘಟನೆಗಳು ನಡೆಯುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಹೊಸ ಸಂಪರ್ಕವು ಭವಿಷ್ಯದಲ್ಲಿ ಆರ್ಥಿಕ ಲಾಭಗಳನ್ನು ತರುವುದು. ಯಾರಿಗೂ ಸಾಲ ನೀಡಲು ಹೋಗಬೇಡಿ.

ಮಕರ ರಾಶಿ (Capricorn):

ಮನೆಯಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗುವುದು. ಕೆಲಸದ ಶೈಲಿಯಲ್ಲಿ ಬದಲಾವಣೆಯಾಗುವುದು. ಹೊಸ ಜವಾಬ್ದಾರಿಗಳು ಹುಟ್ಟಿಕೊಳ್ಳುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ನಿಯಮಿತ ಅಧ್ಯಯನ ಮತ್ತು ಏಕಾಗ್ರತೆಯು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗುವುದು. ಆರ್ಥಿಕ ಪರಿಸ್ಥಿತಿ ನಿಯಂತ್ರಣದಲ್ಲಿರುವುದು.

ಕುಂಭ ರಾಶಿ (Aquarius):

ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳಿ. ಯಾವುದಕ್ಕೂ ತಕ್ಷಣವೇ ರಿಯಾಕ್ಟ್‌ ಮಾಡಬೇಡಿ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ವ್ಯವಹಾರ ಯೋಜನೆಗಳಲ್ಲಿ ನಿರಂತರವಾಗಿ ಕೆಲಸ ಮಾಡುವುದರಿಂದ ಉತ್ತಮ ಅವಕಾಶಗಳು ಸಿಗುವುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಫಲ ಸಿಗುವುದು. ಮಾನಸಿಕ ಆಯಾಸ ಮತ್ತು ಒತ್ತಡ ಹೆಚ್ಚಾಗುವುದು. ಹಳೆಯ ಹೂಡಿಕೆಗಳಿಂದ ಹಣಕಾಸಿನ ಲಾಭವಾಗುವ ಸಾಧ್ಯತೆಯಿದೆ.

ಮೀನ ರಾಶಿ (Pisces)

ಕುಟುಂಬದ ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುವಿರಿ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ಸರಿಯಾದ ಸಿದ್ದತೆ ಮಾಡಿಕೊಳ್ಳಿ. ಮೇಲಧಿಕಾರಿಗಳಿಂದ ಸಿಗುವ ಮಾರ್ಗದರ್ಶನ ಪ್ರಯೋಜನಕಾರಿಯಾಗಿರುವುದು. ಬಾಕಿ ಇರುವ ಕೆಲಸಗಳಿಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+