Daily Horoscope: ನವರಾತ್ರಿಯ ಮೊದಲ ದಿನವೇ ತೆರೆಯುವುದು ಈ ರಾಶಿಯವರ ಅದೃಷ್ಟ ಬಾಗಿಲು, ಭರ್ಜರಿ ಲಾಭ, ಹೊಸ ಅವಕಾಶ

Daily Horoscope: ಅಶ್ವಿನಿ ಶುಕ್ಲ ಪಕ್ಷದ ಪ್ರತಿಪಾದ ದಿನ ಇಂದು ರಾತ್ರಿ 9.32 ರವರೆಗೆ ಇರುತ್ತದೆ. ನಂತರ ಎರಡನೇ ದಿನ ಪ್ರಾರಂಭವಾಗುತ್ತದೆ. ಚಿತ್ರ ನಕ್ಷತ್ರ ರಾತ್ರಿ 10.33 ರವರೆಗೆ ಇರುತ್ತದೆ. ನಂತರ ಸ್ವಾತಿ ನಕ್ಷತ್ರ ಪ್ರಾರಂಭವಾಗುತ್ತದೆ. ಬೆಳಿಗ್ಗೆ 10.4ಕ್ಕೆ ಚಂದ್ರ ಕನ್ಯಾರಾಶಿಯನ್ನು ತೊರೆದು ತುಲಾ ರಾಶಿಯಲ್ಲಿ ಸಂಚರಿಸುತ್ತಾನೆ.

ಮೇಷ ರಾಶಿ (Aries)

ಹಬ್ಬದ ಋತು ಅರಂಭವಾಗಿದೆ. ಹೆಚ್ಚಿನ ಸಮಯವನ್ನು ಮನರಂಜನೆ ಮತ್ತು ಆನ್ಲೈನ್ ಶಾಪಿಂಗಿನಲ್ಲಿ ಕಳೆಯುವಿರಿ. ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಹಬ್ಬದ ಖರೀದಿಗ ಹೆಚ್ಚಿನ ಹಣ ಖರ್ಚು ಮಾಡುವಿರಿ. ವ್ಯಾಪಾರದಲ್ಲಿ ಲಾಭವಾಗುವುದು. ಆರೋಗ್ಯ ಸಾಮಾನ್ಯವಾಗಿರುವುದು.

Daily Horoscope Today Rashi Bhavishya October 11 Zodiac Predictions Lucky Number Colour Of All Signs

ವೃಷಭ ರಾಶಿ (Taurus)

ವ್ಯವಹಾರದಲ್ಲಿ ಮಾಡಿಕೊಳ್ಳುವ ಬದಲಾವಣೆಯಿಂದ ಯಶಸ್ಸು ಸಿಗುವುದು. ಸೋಮಾರಿತನವನ್ನು ಬದಿಗೆ ಸರಿಸಿ. ಹೊಸ ಆಲೋಚನೆಗಳು ವ್ಯಾಪಾರ ವ್ಯವಹಾರದಲ್ಲಿ ಲಾಭ ತರುವುದು. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ಅತಿಯಾದ ಕೆಲಸದಿಂದ ದೈಹಿಕ ಒತ್ತಡ ಹೆಚ್ಚಾಗಬಹುದು.

ಮಿಥುನ ರಾಶಿ (Gemini)

ಬೆಳಿಗ್ಗೆ 10.15 ರಿಂದ 12.15 ರವರೆಗೆ ಅಥವಾ ಮಧ್ಯಾಹ್ನ 2 ರಿಂದ ಮಧ್ಯಾಹ್ನ 3 ರವರೆಗೆ ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಹೊಸ ಕೆಲಸದಿಂದ ಲಾಭವೂ ಆಗುವುದು. ಕೋಪವನ್ನು ನಿಯಂತಣದಲ್ಲಿ ಇಟ್ಟುಕೊಳ್ಳಿ. ಕುಟುಂಬಕ್ಕಾಗಿ ಸಮಯ ಮೀಸಲಿಡುವುದು ಅವಶ್ಯಕ. ಆರೋಗ್ಯ ಉತ್ತಮವಾಗಿರುತ್ತದೆ.

ಕಟಕ ರಾಶಿ (Cancer)

ಕೌಟುಂಬಿಕ ಕಾರಣಗಳಿಂದ ವ್ಯಾಪಾರ ಪ್ರಯಾಣವನ್ನು ಮುಂದೂಡಬೇಕಾಗಬಹುದು. ಹೊಸ ಅವಕಾಶ ಸಿಗುವುದು. ಕೆಲಸದ ಹೊರೆ ಹೆಚ್ಚಾಗಿ ಮಾನಸಿಕ ಒತ್ತಡ ಉಂಟಾಗುವುದು. ಕೆಲವೊಂದು ಸಮಸ್ಯೆ ಎದುರಾಗಬಹುದು. ಸ್ವಲ್ಪ ಹುಷಾರಾಗಿರಿ. ಕುಟುಂಬ ಸದಸ್ಯರಿಂದ ಬೆಂಬಲ ಸಿಗುವುದು.

ಸಿಂಹ ರಾಶಿ (Leo)

ಫ್ಯಾಷನ್, ಸೌಂದರ್ಯವರ್ಧಕ, ಆಭರಣಗಳು ಮತ್ತು ಐಷಾರಾಮಿ ವಸ್ತುಗಳ ಉದ್ಯಮಿಗಳು ಬಂಪರ್ ಲಾಭ ಗಳಿಸುವರು. ಹೊಸ ಜವಾಬ್ದಾರಿ ಸಿಗುವುದು. ವೃತ್ತಿಯಲ್ಲಿ ಎದುರಾಗುವ ಅಡೆತಡೆ ನಿವಾರಣೆಯಾಗುವುದು. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಆರೋಗ್ಯ ಉತ್ತಮವಾಗಿರುವುದು.

ಕನ್ಯಾರಾಶಿ (Virgo)

ಹಣಕ್ಕೆ ಸಂಬಂಧಿಸಿದ ಶುಭ ಸುದ್ದಿ ಸಿಗುವುದು. ಧಾರ್ಮಿಕ ಕಾರ್ಯಗಳಿಗೆ ಹಣ ಖರ್ಚಾಗುವುದು. ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುವುದು. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುವುದು. ಆದಾಯ ಹೆಚ್ಚಾಗುವುದು. ಹಾಗಂತ ಸುಖಾ ಸುಮ್ಮನೆ ಹಣ ಖರ್ಚು ಮಾಡಬೇಡಿ. ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ (Libra)

ಕಠಿಣ ಸ್ಪರ್ಧೆಯ ಹೊರತಾಗಿಯೂ, ವ್ಯವಹಾರದಲ್ಲಿ ಲಾಭವಾಗುವುದು. ಯಾವುದೇ ಸರ್ಕಾರಿ ಕೆಲಸವನ್ನು ಮಾಡುವ ಮೊದಲು, ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಇವತ್ತು ಅದೃಷ್ಟ ನಿಮ್ಮ ಜೊತೆ ಇರುವುದು.ಬಾಕಿ ಕೆಲಸ ಪೂರ್ಣವಾಗುವುದು. ಮಕ್ಕಳ ಸಾಧನೆ ಖುಷಿ ನೀಡುವುದು. ಮಧ್ಯಾಹ್ನದವರೆಗೆ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಆಗಬಹುದು.

ವೃಶ್ಚಿಕ ರಾಶಿ (Scorpio)

ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆತುರಪಡಬೇಡಿ. ಕಚೇರಿ ರಾಜಕೀಯದಿಂದ ದೂರವಿದ್ದಷ್ಟು ಒಳ್ಳೆಯದು. ಅಪರಿಚಿತರನ್ನು ಕುರುಡಾಗಿ ನಂಬಬೇಡಿ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ ಕಾಪಾಡಿಕೊಳ್​ಳಿ. ಅನಗತ್ಯ ಖರ್ಚು ನಿಯಂತ್ರಿಸಿ. ಆರೋಗ್ಯವು ಉತ್ತಮವಾಗಿರುತ್ತದೆ.

ಧನು ರಾಶಿ(Sagittarius)

ವ್ಯಾಪಾರ ಪ್ರವಾಸದಿಂದ ಲಾಭವಾಗುವುದು. ಕೆಲಸ ಬದಲಾಯಿಸಲು ಬಯಸುವವರಿಗೆ ಒಳ್ಳೆಯ ಕಂಪನಿಯಿಂದ ಆಕರ್ಷಕ ಪ್ಯಾಕೇಜ್ ಆಫರ್ ಬರುವುದು. ವೃತ್ತಿಜೀವನಕ್ಕೆ ಸಂಬಂಧಿಸಿದ ಶುಭ ಸುದ್ದಿಯೊಂದಿಗೆ ಮನೆಯಲ್ಲಿ ಸಂತೋಷ ನೆಲೆಯಾಗುವುದು. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ.

ಮಕರ ರಾಶಿ (Capricorn)

ನವರಾತ್ರಿಯ ಮೊದಲ ದಿನವೇ ನಿಮ್ಮ ಪಾಲಿಗೆ ಅದೃಷ್ಟ. ಕೆಲಸಗಳು ಚುರುಕು ಪಡೆಯುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು.ಕೆಲಸದ ಸ್ಥಳದಲ್ಲಿ ಪ್ರಗತಿ ಮತ್ತು ಸಕಾರಾತ್ಮಕ ಶಕ್ತಿ ಇರುತ್ತದೆ. ಮದುವೆಯಾದವರ ಅದೃಷ್ಟ ಇನ್ನೂ ಹೆಚ್ಚಾಗುವುದು. ಹೊರಗೆ ಉಳಿದಿರುವ ಹಣ ಕೈ ಸೇರುವುದು.

ಕುಂಭ ರಾಶಿ (Aquarius)

ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಹೆಚ್ಚು ಲಾಭವಾಗುವುದು.ವ್ಯವಹಾರದಲ್ಲಿನ ಸಮಸ್ಯೆ ನಿವಾರಣೆಯಾಗುವುದು. ಕೆಲಸದ ಸ್ಥಳದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಫಲ ಸಿಗುವುದು. ಸಮಯಕ್ಕೆ ಸರಿಯಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ವ್ಯವಹಾರದಲ್ಲಿ ಹಣದ ಬಂಪರ್ ಆಗುವುದು. ಕೆಟ್ಟ ಅಭ್ಯಾಸಗಳು ಮತ್ತು ನಕಾರಾತ್ಮಕ ಜನರಿಂದ ದೂರವಿರಿ.

ಮೀನ ರಾಶಿ (Pisces)

ಮುಂದೆ ಹಿಂದೆ ಯೋಚನೆ ಮಾಡದೆ ಹೂಡಿಕೆ ಮಾಡಲು ಹೋಗಬೇಡಿ. ಬಾಕಿ ಇರುವ ಕೆಲಸ ಆದ್ಯತೆಯ ಆಧಾರದ ಮೇಲೆ ಮಾಡಿ ಮುಗಿಸುವಿರಿ. ಹೊಸ ಉದ್ಯೋಗದಲ್ಲಿ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆರ್ಥಿಕ ನಷ್ಟವಾಗದಂತೆ ತೀರ್ಮಾನ ತೆಗೆದುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+