Daily Horoscope: ಈ ರಾಶಿಯವರ ಮೇಲಿದೆ 'ಲಕ್ಷ್ಮೀ' ಆಶೀರ್ವಾದ, ಸಿದ್ಧಿ ಯೋಗ: ಒಲಿಯುತ್ತೆ ಅದೃಷ್ಟ!

Daily Horoscope: ಇವತ್ತು ಕೃಷ್ಣ ಪಕ್ಷದ ದಶಮಿ ತಿಥಿ ಸಂಜೆ 7.30 ರವರೆಗೆ ಇರುತ್ತದೆ. ನಂತರ ಏಕಾದಶಿ ತಿಥಿ ಪ್ರಾರಂಭವಾಗುವುದು. ಆರ್ದ್ರಾ ನಕ್ಷತ್ರವು ಸಂಜೆ 7.53 ರವರೆಗೆ ಇರುತ್ತದೆ. ನಂತರ ಪುನರ್ವಸು ನಕ್ಷತ್ರವು ಪ್ರಾರಂಭವಾಗುವುದು. ಇಂದು ಗ್ರಹಗಳು ಲಕ್ಷ್ಮಿ ಯೋಗ, ಸಿದ್ಧಿ ಯೋಗ, ಬುಧಾದಿತ್ಯ ಯೋಗ ಮತ್ತು ಮಾಲವ್ಯ ಯೋಗ ರೂಪುಗೊಳ್ಳುವುದು. ಇಂದಿನ ದಿನ ಭವಿಷ್ಯ ಇಲ್ಲಿದೆ.

ಮೇಷ ರಾಶಿ (Aries):

ಸಿದ್ಧಿ ಮತ್ತು ಲಕ್ಷ್ಮಿ ಯೋಗವು ಸಾಮಾನ್ಯಕ್ಕಿಂತ ಹೆಚ್ಚಿನ ಲಾಭವನ್ನು ತರುವುದು. ವ್ಯಾಪಾರಿಗಳೊಂದಿಗೆ ಸಮನ್ವಯವು ಸುಧಾರಿಸುವುದು. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳನ್ನು ಹೊರಬೇಕಾಗುವುದು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುವುದು. ಸ್ನೇಹಿತನ ಸಹಾಯದಿಂದ ಪ್ರೇಮ ಸಂಬಂಧವು ಮತ್ತೆ ಹಳಿಗೆ ಬರುವುದು. ಕುಟುಂಬ ಪರಿಸರದಲ್ಲಿ ಸಕಾರಾತ್ಮಕತೆ ಇರುವುದು. ಲಾಭ ಗಳಿಸಲು ಉತ್ತಮ ಅವಕಾಶಗಳು ಸಿಗುವುದು. ಆರೋಗ್ಯ ಸಾಮಾನ್ಯವಾಗಿರುವುದು.

Daily Horoscope

ವೃಷಭ ರಾಶಿ (Taurus):

ಇದ್ದಕ್ಕಿದ್ದಂತೆ ಒಂದು ಪ್ರಮುಖ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕುವಿರಿ. ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 12.15 ರ ನಡುವೆ ಅಥವಾ ಮಧ್ಯಾಹ್ನ 2.00 ರಿಂದ 3.00 ರ ನಡುವೆ ಹೊಸ ಕೆಲಸವನ್ನು ಪ್ರಾರಂಭಿಸುವುದು ಶುಭಫಲ ನೀಡುವುದು. ವಿದ್ಯಾರ್ಥಿಗಳಿಗೆ ತಮ್ಮ ಸಹೋದರರಿಂದ ಬೆಂಬಲ ಸಿಗುವುದು. ಪೂರ್ವಜರ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುವುದು. ಸಂಗಾತಿಯೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

ಮಿಥುನ ರಾಶಿ (Gemini):

ಹಣ ಸಂಪಾದಿಸಲು ಮಾಡುವ ಪ್ರಯತ್ನಗಳು ಯಶಸ್ವಿಯಾಗುವುದು. ಕಾನೂನು ಅಥವಾ ನ್ಯಾಯಾಲಯದ ವಿಷಯಗಳಲ್ಲಿ ಅನುಭವಿ ವಕೀಲರ ಸಲಹೆ ಪಡೆಯುವುದು ಪ್ರಯೋಜನಕಾರಿಯಾಗಿರುವುದು. ಸಿದ್ಧಿ ಮತ್ತು ಲಕ್ಷ್ಮಿ ಯೋಗದಿಂದ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಮೇಲಧಿಕಾರಿಗಳೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುವುದು. ಹೊಸ ಉದ್ಯೋಗವನ್ನು ಪಡೆಯುವ ಪ್ರಯತ್ನಗಳು ಯಶಸ್ವಿಯಾಗುವುದು. ದಾಂಪತ್ಯ ಜೀವನ ಸಂತೋಷವಾಗಿರುವುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುವುದು.

ಕಟಕ ರಾಶಿ (Cancer) :

ಕೆಲಸದಲ್ಲಿ ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದಿಲ್ಲ. ಹೀಗಾಗಿ ಕೆಲಸದ ಹೊರೆ ಹೆಚ್ಚಾಗುವುದು. ಅನುಭವವಿಲ್ಲದೆ ಯಾವುದೇ ಹೊಸ ಕೆಲಸಕ್ಕೆ ಕೈ ಹಾಕಬೇಡಿ. ದುರಹಂಕಾರದ ವರ್ತನೆಯಿಂದಾಗಿ, ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಅತಿಯಾದ ಕೆಲಸದ ಹೊರೆಯಿಂದ ಆಯಾಸ ಹೆಚ್ಚಾಗುವುದು.

ಸಿಂಹ ರಾಶಿ (Leo):

ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ಪೂರ್ವಜರ ವ್ಯವಹಾರದಿಂದ ಲಾಭವಾಗುವುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಿ. ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಿ. ಕುಟುಂಬದ ಹಿರಿಯ ಸದಸ್ಯರೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಆರೋಗ್ಯ ಸಮಸ್ಯೆ ಕಾಡುವುದು.

ಕನ್ಯಾರಾಶಿ (Virgo) :

ಅನುಕೂಲಕರ ಗ್ರಹ ಸ್ಥಾನಗಳಿಂದಾಗಿ ದಿನ ಅತ್ಯುತ್ತಮವಾಗಿರುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಮೊದಲು, ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ. ಹೊಸ ಉದ್ಯೋಗಕ್ಕಾಗಿ ನೀವು ಮಾಡುತ್ತಿರುವ ಹುಡುಕಾಟ ಕೊನೆಯಾಗುವುದು. ಮಹತ್ವಾಕಾಂಕ್ಷೆಗಳು ಪೂರ್ಣವಾಗುವುದು. ಕುಟುಂಬ ಜೀವನ ಶಾಂತಿಯುತವಾಗಿರುವುದು.ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಆರ್ಥಿಕ ಪರಿಸ್ಥಿತಿ ಸದೃಢವಾಗಿರುವುದು.

ತುಲಾ ರಾಶಿ (Libra) :

ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವುದು. ಸಿದ್ಧಿ ಮತ್ತು ಲಕ್ಷ್ಮಿ ಯೋಗವು ಉದ್ಯೋಗದಲ್ಲಿರುವವರಿಗೆ ಪ್ರಗತಿಗೆ ಅಮೂಲ್ಯವಾದ ಅವಕಾಶಗಳನ್ನು ಒದಗಿಸುವುದು. ಮನೆಯಲ್ಲಿ ಶಾಂತಿ ನೆಲೆಯಾಗುವುದು. ಸಂಗಾತಿಯೊಂದಿಗೆ ನಯವಾಗಿ ಮಾತನಾಡಿ. ಆರ್ಥಿಕ ಲಾಭ ಹೆಚ್ಚುವುದು. ಕೋಪ ಮತ್ತು ಕಠಿಣ ಮಾತುಗಳನ್ನು ನಿಯಂತ್ರಿಸಿ. ಆರೋಗ್ಯವು ಸಾಮಾನ್ಯವಾಗಿರುವುದು.

ವೃಶ್ಚಿಕ ರಾಶಿ (Scorpio):

ಬೇರೆಯವರ ಮಾತಿಗೆ ಹೆಚ್ಚು ಬೆಲೆ ಕೊಡಬೇಡಿ. ಪ್ರಮುಖ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಕೆಲಸದಲ್ಲಿ ಮೇಲಧಿಕಾರಿಗಳು ಅತೃಪ್ತರಾಗಬಹುದು. ಆದ್ದರಿಂದ ತಾಳ್ಮೆಯಿಂದಿರಿ. ವಿರೋಧಿಗಳು ಸಕ್ರಿಯರಾಗಬಹುದು. ಮಗುವಿನ ನಡವಳಿಕೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ಖರ್ಚುಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಯಾರನ್ನೂ ನಂಬಬೇಡಿ.

ಧನು ರಾಶಿ (Sagittarius):

ಹೊಸದಾಗಿ ಪ್ರಾರಂಭಿಸಿದ ವ್ಯವಹಾರಗಳು ಯಶಸ್ವಿಯಾಗುವುದು. ಎಲ್ಲಾ ಕೆಲಸಗಳು ಸಮಯಕ್ಕೆ ಮುನ್ನವೇ ಪೂರ್ತಿಯಾಗುವುದು. ಸಿದ್ಧಿ ಮತ್ತು ಲಕ್ಷ್ಮಿ ಯೋಗದಿಂದಾಗಿ ಕಚೇರಿ ಕೆಲಸಗಳಲ್ಲಿ ಯಶಸ್ವಿಯಾಗುವುದು. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುವುದು. ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಕುಟುಂಬದೊಂದಿಗೆ ಒಟ್ಟಾಗಿ ಕೆಲಸ ಮಾಡುವಿರಿ. ಆರ್ಥಿಕ ಲಾಭವಾಗುವುದು.
ಮಾನಸಿಕವಾಗಿ ಸಂತೋಷದಿಂದ ಇರುವಿರಿ.

ಮಕರ ರಾಶಿ (Capricorn):

ವ್ಯಾಪಾರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಸಮಯ ಅನುಕೂಲಕರವಾಗಿದೆ. ಭವಿಷ್ಯದ ಯೋಜನೆಗಳನ್ನು ಸಾಕಾರಗೊಳಿಸಲು ಸಹಾಯವಾಗುವುದು. ಸಿದ್ಧಿ ಮತ್ತು ಲಕ್ಷ್ಮಿ ಯೋಗವು ಹೊಸ ಉದ್ಯೋಗದ ಅವಕಾಶ ನೀಡುವುದು. ತಂದೆಯ ಸಹಕಾರದಿಂದ ಕಷ್ಟಕರ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುವುದು. ಹಳೆಯ ಹೂಡಿಕೆಗಳು ಭವಿಷ್ಯದಲ್ಲಿ ಲಾಭ ನೀಡುವುದು. ಆರೋಗ್ಯ ಚೆನ್ನಾಗಿರುವುದು.

ಕುಂಭ ರಾಶಿ (Aquarius):

ಸಿದ್ಧಿ ಮತ್ತು ಲಕ್ಷ್ಮಿ ಯೋಗದಿಂದಾಗಿ ಹಣದ ಹರಿವು ಹೆಚ್ಚಾಗುವುದು. ಕೆಲಸದಲ್ಲಿ ಎದುರಾಗಿರುವ ಸಮಸ್ಯೆಗಳು ಬಗೆಹರಿಯುವುದು. ಕುಟುಂಬ ಜೀವನ ಶಾಂತಿಯುತವಾಗಿರುವುದು. ಹೊಸ ಹೂಡಿಕೆಗಳ ಮೂಲಕ ಆರ್ಥಿಕ ಸ್ಥಿರತೆಯನ್ನು ಸಾಧಿಸುವಿರಿ. ಆರೋಗ್ಯವು ಸಾಮಾನ್ಯವಾಗಿರುವುದು.

ಮೀನ ರಾಶಿ (Pisces):

ಯಾರೊಂದಿಗೂ ಅನಗತ್ಯ ವಾದಕ್ಕೆ ಇಳಿಯಬೇಡಿ. ನಷ್ಟವಾಗುವುದು. ವಿಶೇಷ ಜಾಗರೂಕತೆ ವಹಿಸಬೇಕಾಗುವುದು. ಕುಟುಂಬದ ವಿಷಯಗಳಲ್ಲಿ ಬೇರೆಯವ ಹಸ್ತಕ್ಷೇಪಕ್ಕೆ ಅವಕಾಶ ನೀಡಬೇಡಿ. ಉದ್ಯೋಗಿಗಳ ಬೇಡಿಕೆಗಳು ಮತ್ತು ಅನಿರೀಕ್ಷಿತ ವೆಚ್ಚಗಳಿಂದಾಗಿ ಆರ್ಥಿಕ ಒತ್ತಡ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಹವಾಮಾನ ಬದಲಾವಣೆಗಳು ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+