Daily Horoscope: ಇಂದು ಈ ರಾಶಿಯವರಿಗೆ ಸಕಾರಾತ್ಮಕ ದಿನ! ಹೆಚ್ಚಲಿದೆ ಹರ್ಷ, 12 ರಾಶಿಗಳ ದಿನ ಭವಿಷ್ಯ
Daily Horoscope: ಗ್ರಹ ಮತ್ತು ನಕ್ಷತ್ರಗಳ ಸ್ಥಾನವನ್ನು ಆಧರಿಸಿ ನೋಡುವಾಗ ಈದಿನ ಕೆಲವು ರಾಶಿಯವರಿಗೆ ಅದೃಷ್ಟ ತಂದರೆ ಇನ್ನು ಕೆಲವು ರಾಶಿಯವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದ್ವಾದಶ ರಾಶಿಯ ನಿತ್ಯ ಭವಿಷ್ಯ ಹೀಗಿದೆ.
ಮೇಷ ರಾಶಿ (Aries):
ಇಂದು ನಿಮಗೆ ಒಳ್ಳೆಯ ದಿನವಾಗಿರುವುದು. ಅಧಿಕಾರಿಗಳೊಂದಿಗೆ ಮಾತನಾಡುವಾಗ ಜಾಗರೂಕರಾಗಿರಬೇಕು. ಆರ್ಥಿಕ ಲಾಭದ ಹೊಸ ಮೂಲಗಳು ಹೊರಹೊಮ್ಮಬಹುದು. ಕಠಿಣ ಪರಿಶ್ರಮಪಡಬೇಕಾಗುವುದು. ಇವತ್ತು ಯಾರೊಂದಿಗೂ ವಾದ ಮಾಡಲು ಹೋಗಬೇಡಿ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿರುವುದು.

ವೃಷಭ ರಾಶಿ (Taurus):
ಇವತ್ತು ಸಂತೋಷದ ಕ್ಷಣಗಳನ್ನು ತರುವುದು. ನಿಂತು ಹೋಗಿದ್ದ ಕೆಲಸವನ್ನು ಮತ್ತೆ ಪ್ರಾರಂಭಿಸಬಹುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು. ಕಷ್ಟಪಟ್ಟು ಕೆಲಸ ಮಾಡಿದಷ್ಟೂ ಉತ್ತಮ ಫಲಿತಾಂಶ ಸಿಗುವುದು. ಅಗತ್ಯವಿರುವವರಿಗೆ ಸಹಾಯ ಮಾಡುವುದರಿಂದ ಸಂತೋಷ ಸಿಗುವುದು.
ಮಿಥುನ ರಾಶಿ (Gemini):
ಇವತ್ತು ನಿಮ್ಮ ಪಾಲಿಗೆ ದಿನ ಬಹಳ ವಿಶೇಷವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಸಕಾರಾತ್ಮಕ ಫಲಿತಾಂಶ ಸಿಗುವುದು. ಹೊಸ ಯೋಜನೆಯನ್ನು ಪ್ರಾರಂಭಿಸಲು ಇದು ಒಳ್ಳೆಯ ದಿನ. ಸಂಜೆಯ ಹೊತ್ತು ಕುಟುಂಬದೊಂದಿಗೆ ಕಳೆಯುವಿರಿ.
ಕರ್ಕಾಟಕ ರಾಶಿ (Cancer):
ಇಂದು ದಿನ ಅನುಕೂಲಕರ ದಿನವಾಗಿರುವುದು. ತಾಳ್ಮೆಯಿಂದ ಕೆಲಸ ಮಾಡುವುದರಿಂದ ಕೆಲಸದಲ್ಲಿ ಸುಧಾರಣೆಯಾಗುವುದು. ಖಾಸಗಿ ಉದ್ಯೋಗದಲ್ಲಿರುವವರಿಗೆ ಪ್ರಯೋಜನಕಾರಿ ದಿನ. ಪ್ರಮುಖ ಕೆಲಸದ ಬಗ್ಗೆ ಸಂಗಾತಿಯ ಸಲಹೆ ಪಡೆಯುವುದರಿಂದ ಪ್ರಯೋಜನಕಾರಿಯಾಗುವುದು.
ಸಿಂಹ ರಾಶಿ (leo):
ಕುಟುಂಬದೊಂದಿಗೆ ಸಂತೋಷದ ಸಮಯವನ್ನು ಕಳೆಯುವಿರಿ.ವ್ಯಾಪಾರಿಗಳಿಗೆ ಇದ್ದಕ್ಕಿದ್ದಂತೆ ಲಾಭ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ. ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶಗಳು ನಿಮ್ಮ ಪರವಾಗಿರುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುವುದು.ಅದೃಷ್ಟ ನಿಮ್ಮ ಜೊತೆ ಇರುವುದು.
ಕನ್ಯಾ ರಾಶಿ(Virgo):
ಸಂತೋಷದಿಂದಲೇ ದಿನದ ಆರಂಭವಾಗುವುದು. ಕೈಗೊಳ್ಳುವ ಕೆಲಸ ಕಾರ್ಯಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣವಾಗುವುದು. ಉದ್ಯೋಗದಲ್ಲಿರುವವರಿಗೆ ಇಂದು ಒಳ್ಳೆಯ ದಿನ. ಆತ್ಮವಿಶ್ವಾಸ ಹೆಚ್ಚಾಗುವುದು. ವ್ಯವಹಾರಕ್ಕಾಗಿ ಕಚೇರಿ ಸಹೋದ್ಯೋಗಿಗಳೊಂದಿಗೆ ಹೊರಗೆ ಹೋಗಬಹುದು.
ತುಲಾ ರಾಶಿ (Libra):
ನಿಮಗೆ ಇಂದು ಮಹತ್ವದ ದಿನವಾಗಿರುವುದು. ಪ್ರಮುಖ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲಗೊಳ್ಳುವುದು. ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಸಿಗಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಪ್ರಯೋಜನವಾಗುವುದು.
ವೃಶ್ಚಿಕ ರಾಶಿ (Scorpio):
ವ್ಯಾಪಾರಿಗಳ ಲಾಭ ಇದ್ದಕ್ಕಿದ್ದಂತೆ ಹೆಚ್ಚಾಗುವುದು. ಸಿಗುವ ಅವಕಾಶವನ್ನು ಕಳೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಹಿರಿಯರ ಆಶೀರ್ವಾದದಿಂದ ದಿನ ಉತ್ತಮವಾಗಿ ನಡೆಯುವುದು. ಮದುವೆ ಮಾತುಕತೆ ನಡೆಯುವುದು.
ಧನು ರಾಶಿ (Sagittarius):
ಇವತ್ತು ನಿಮಗೆ ಸಂತೋಷದ ದಿನವಾಗಿರುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿರುವವರಿಗೆ ದಿನ ಶುಭವಾಗಿರುವುದು. ಯಾವುದೇ ಕೆಲಸಕ್ಕೆ ಆತುರಪಡಬೇಡಿ. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಸ್ನೇಹಿತರ ಭೇಟಿಯಿಂದ ಅರ್ಧಕ್ಕೇ ನಿಂತಿರುವ ಕೆಲಸ ಪೂರ್ಣವಾಗುವುದು.
ಮಕರ ರಾಶಿ (Capricorn):
ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿದ್ದ ಕೆಲಸ ಇವತ್ತು ಪೂರ್ಣವಾಗುವುದು. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವುದು. ನಿಮ್ಮ ತಾಯಿಯೊಂದಿಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುವುದು. ವಿದೇಶ ಪ್ರಯಾಣದ ಯೋಗವಿರುವುದು.
ಕುಂಭ ರಾಶಿ (Aquarius):
ರಾಜಕೀಯದಲ್ಲಿ ತೊಡಗಿರುವವರಿಗೆ ಇದು ಒಳ್ಳೆಯ ದಿನವಾಗಿರುವುದು. ಕುಟುಂಬ ಜೀವನವು ಉತ್ತಮವಾಗಿರುವುದು. ನಿಮ್ಮ ಆರೋಗ್ಯವು ಉತ್ತಮವಾಗಿರುವುದು. ಉತ್ತಮ ಉದ್ಯೋಗದ ಅವಕಾಶ ಸಿಗುವುದು. ಇಂದು ಮಕ್ಕಳೊಂದಿಗೆ ಹೆಚ್ಚು ಸಮಸಯ ಕಳೆಯುವಿರಿ.
ಮೀನ ರಾಶಿ (Pisces):
ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು. ಈ ರಾಶಿಯಡಿಯಲ್ಲಿ ಜನಿಸಿದ ಉದ್ಯಮಿಗಳು ಇವತ್ತು ಗಮನಾರ್ಹ ಲಾಭ ಪಡೆಯುವರು. ಅದೃಷ್ಟ ನಿಮ್ಮ ಕಡೆ ಇರುವುದು. ನಿಮ್ಮ ಸಂಗಾತಿಗೂ ಈ ದಿನ ಒಳ್ಳೆಯ ದಿನವಾಗಿರುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವರು.


Click it and Unblock the Notifications
