Daily Horoscope: ಕೌಟುಂಬಿಕವಾಗಿ ನೆಮ್ಮದಿ, ವೃತ್ತಿಯಲ್ಲಿ ಪ್ರಗತಿ: ಈ ರಾಶಿಯವರಿಗೆ ಆರ್ಥಿಕ ಲಾಭ, ದಿನ ಭವಿಷ್ಯ

Daily Horoscope: ಇವತ್ತು ಭಾದ್ರಪದ ಶುಕ್ಲ ಪಕ್ಷದ ಅನಂತ ಚತುರ್ದಶಿ ತಿಥಿ ರಾತ್ರಿ 11.07 ರವರೆಗೆ ಇರುತ್ತದೆ, ನಂತರ ಪೂರ್ಣಿಮಾ ತಿಥಿ ಪ್ರಾರಂಭವಾಗುತ್ತದೆ. ಶತಭಿಷ ನಕ್ಷತ್ರವು ಬೆಳಿಗ್ಗೆ 11.22 ರವರೆಗೆ ಇರುತ್ತದೆ, ನಂತರ ಪೂರ್ವ ಭಾದ್ರಪದ ನಕ್ಷತ್ರವು ಪ್ರಾರಂಭವಾಗುತ್ತದೆ. ಚಂದ್ರನು ದಿನವಿಡೀ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ವಿಷ್ಣುವಿನ ಅನಂತ ರೂಪ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಬುಧಾದಿತ್ಯ ಯೋಗ, ಪಾರಿಜಾತ ಯೋಗ, ಶೂಲ ಯೋಗ ಮತ್ತು ನಿರ್ದಿಷ್ಟ ರಾಶಿಯವರಿಗೆ ಮಾಲವ್ಯ ಮತ್ತು ಭದ್ರ ಯೋಗದೊಂದಿಗೆ ಸಂಯೋಜಿಸಲ್ಪಡುತ್ತಿದೆ .

ಮೇಷ ರಾಶಿ (Aries)

ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳಲು ಸಣ್ಣ ವಿಷಯಗಳಿಗೆ ತಕ್ಷಣ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ. ಅನುಭವಿ ವ್ಯಕ್ತಿಯೊಂದಿಗೆ ಸಮಾಲೋಚಿಸುವುದರಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತವೆ. ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಉದ್ಯಮಿಗಳಿಗೆ ಇದು ಅನುಕೂಲಕರ ಸಮಯ. ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ಈ ದಿನ

Daily Horoscope September 25
ಅನುಕೂಲಕರವಾಗಿರುವುದು.

ವೃಷಭ ರಾಶಿ (Taurus)

ಕುಟುಂಬದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗುವುದು. ಹಿರಿಯ ಸದಸ್ಯರ ಸಲಹೆ ಸಹಾಯಕವಾಗಿರುವುದು. ಸಂಬಂಧಿಕರಿಂದ ಒಳ್ಳೆಯ ಸುದ್ದಿ ಕೇಳಿ ಬರುವುದು. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಸಿಗುವುದು. ಕೆಲಸದ ಹೊಸ ಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ವೃತ್ತಿ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ಹಣಕಾಸಿನ ಸ್ಥಿತಿ ಸ್ಥಿರವಾಗಿರುವುದು.

ಮಿಥುನ ರಾಶಿ (Gemini)

ಹಳೆಯ ಸಮಸ್ಯೆಗಳನ್ನು ಮಾತುಕತೆ ಮೂಲಕ ಮೂಲಕ ಪರಿಹರಿಸಿಕೊಳ್ಳಿ. ಇಲ್ಲವಾದರೆ ಮಾನಸಿಕ ನೆಮ್ಮದಿ ಹಾಳಾಗುವುದು. ವ್ಯವಹಾರ ವಿಸ್ತರಣೆಗೆ ಅವಕಾಶ ಸಿಗುವುದು. ಹೊಸ ಮಾಹಿತಿಯನ್ನು ವಿಶ್ಲೇಷಿಸಿದ ನಂತರವೇ ನಿರ್ಧಾರಗಳನ್ನು ತೆಗೆದುಕೊಳ್ಳಿ. ಅನಿರೀಕ್ಷಿತ ವೆಚ್ಚಗಳು ಹುಟ್ಟಿಕೊಳ್ಳುವುದು.

ಕರ್ಕಾಟಕ ರಾಶಿ (Cancer)

ಮನೆಯಲ್ಲಿನ ವಾತಾವರಣ ಶಾಂತವಾಗಿರುವುದು. ಕುಟುಂಬ ಸದಸ್ಯರ ಬೆಂಬಲವು ಭಾವನಾತ್ಮಕ ಶಕ್ತಿಯನ್ನು ನೀಡುತ್ತದೆ. ಹಿಂದಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಬಂಧಗಳಲ್ಲಿ ಸಾಮರಸ್ಯವನ್ನು ತರಲು ಇದು ಸರಿಯಾದ ಸಮಯ. ಮೇಲಧಿಕಾರಿಗಳ ಸಲಹೆಯೊಂದಿಗೆ ಕೆಲಸಗಳು ಪೂರ್ಣಗೊಳ್ಳುತ್ತವೆ.ಮಾನಸಿಕ ಒತ್ತಡವು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಮನೆಯ ಅಗತ್ಯಗಳಿಗಾಗಿ ಖರ್ಚುಗಳು ಹೆಚ್ಚಾಗಬಹುದು.

ಸಿಂಹ ರಾಶಿ (Leo)

ಕೌಟುಂಬಿಕ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಾರ್ಗದರ್ಶನದ ಅಗತ್ಯವಿದೆ. ಹಿರಿಯರ ಸಲಹೆಯನ್ನು ಗೌರವಿಸಿ. ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಬಹುದು. ಕೆಲಸದಲ್ಲಿ ತಂಡವನ್ನು ಮುನ್ನಡೆಸಲು ನಿಮಗೆ ಅವಕಾಶ ಸಿಗುವುದು. ಉದ್ಯಮಿಗಳಿಗೆ ಹೊಸ ಅವಕಾಶ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.

ಕನ್ಯಾ ರಾಶಿ (Virgo)

ನಿಮ್ಮ ಕುಟುಂಬ ಜೀವನದಲ್ಲಿ ಮಾಧುರ್ಯತೆ ಇರುವುದು. ಇತರರಲ್ಲಿನ ಸಣ್ಣಪುಟ್ಟ ನ್ಯೂನತೆಗಳನ್ನು ನಿರ್ಲಕ್ಷಿಸಿ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಕೆಲಸದ ಹೊರೆ ಹೆಚ್ಚಾಗುವುದು. ಕೆಲಸಕ್ಕೆ ಆದ್ಯತೆ ನೀಡುವುದರಿಂದ ಪ್ರಮುಖ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಆರೋಗ್ಯ ಸಮಸ್ಯೆ ಕಾಡಬಹುದು.

ತುಲಾ ರಾಶಿ (Libra)

ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಮನೆಯಲ್ಲಿ ಹಬ್ಬದ ವಾತಾವರಣ ಇರುವುದು. ಸಹೋದ್ಯೋಗಿಗಳ ಸಂಪೂರ್ಣ ಬೆಂಬಲದೊಂದಿಗೆ ಯೋಜನೆಗಳು ಸರಾಗವಾಗಿ ಪೂರ್ಣಗೊಳ್ಳುವುದು. ವಿದ್ಯಾರ್ಥಿಗಳು ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯುವರು.

ವೃಶ್ಚಿಕ ರಾಶಿ (Scorpio)

ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಯಾಗುವುದು. ಹಿರಿಯರ ಸಲಹೆಯಿಂದ ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ದೀರ್ಘಕಾಲದಿಂದ ಮುಂದೂಡಲ್ಪಟ್ಟ ಕೆಲಸಗಳು ಪ್ರಗತಿ ಸಾಧಿಸುವುದು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

ಧನು ರಾಶಿ (Sagittarius)

ಮನೆಯಲ್ಲಿನ ವಾತಾವರಣ ಅನುಕೂಲಕರವಾಗಿರುವುದು. ಕುಟುಂಬದೊಂದಿಗೆ ಧಾರ್ಮಿಕ ಅಥವಾ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ಹಿರಿಯರ ಆಶೀರ್ವಾದ ಸಿಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗುವುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು.

ಮಕರ ರಾಶಿ (Capricorn)

ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುವುದು. ಮನೆಯ ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವುದರಿಂದ ಮಾನಸಿಕ ತೃಪ್ತಿ ಸಿಗುವುದು. ಹಿರಿಯರ ಆಶೀರ್ವಾದದಿಂದ ಮನೋಸ್ಥೈರ್ಯ ಹೆಚ್ಚಾಗುವುದು. ಉದ್ಯಮಿಗಳು ಹಳೆಯ ಸಂಪರ್ಕಗಳಿಂದ ಪ್ರಯೋಜನ ಪಡೆಯುವರು. ಅನಗತ್ಯ ಖರ್ಚುಗಳನ್ನು ನಿಲ್ಲಿಸಿ. ಮುಂಬರುವ ಪ್ರಮುಖ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯಕ್ಕೆ ಆದ್ಯತೆ ನೀಡಿ.

ಕುಂಭ ರಾಶಿ (Aquarius)

ಅತಿಥಿಗಳ ಆಗಮನವು ಮನೆಯ ಸಂತೋಷವನ್ನು ಹೆಚ್ಚಿಸುವುದು. ಉದ್ಯೋಗದಲ್ಲಿರುವವರು ಸಹೋದ್ಯೋಗಿಗಳ ಬೆಂಬಲದೊಂದಿಗೆ ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದು.ಯಾವುದೇ ಶೈಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಮೀನ ರಾಶಿ (Pisces)

ಮನೆಯಲ್ಲಿ ಸಾಮರಸ್ಯದ ವಾತಾವರಣ ಇರುವುದು. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವುದು. ಹೊಸ ಸಂಪರ್ಕಗಳಿಂದ ಉದ್ಯಮಿಗಳಿಗೆ ಉತ್ತಮ ಲಾಭವಾಗುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲಕರವಾಗಿರುವುದು. ಆರೋಗ್ಯ ಸಾಮಾನ್ಯವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+