Daily Horoscope: ಇವತ್ತು ಮೂರು ರಾಶಿಯವರಿಗೆ ಅದೃಷ್ಟದ ದಿನ; ಧನ ಲಾಭ, ಕೆಲಸದಲ್ಲಿ ಪ್ರಗತಿ

ಇವತ್ತು ಅಶ್ವಿನಿ ಕೃಷ್ಣ ಪಕ್ಷದ ಏಕಾದಶಿ ತಿಥಿ. ಆಶ್ಲೇಷ ನಕ್ಷತ್ರವು ರಾತ್ರಿ 10.18 ರವರೆಗೆ ಇರುತ್ತದೆ. ನಂತರ ಮಾಘ ನಕ್ಷತ್ರ ಪ್ರಾರಂಭವಾಗುತ್ತದೆ. ಏಕಾದಶಿ ತಿಥಿ, ಆಶ್ಲೇಷ ನಕ್ಷತ್ರ ಮತ್ತು ಸಾಧ್ಯ ಯೋಗದ ಶುಭ ಪ್ರಭಾವದಿಂದಾಗಿ ಕೆಲವು ರಾಶಿಯವರಿಗೆ ಇಂದು ಶುಭ ಫಲ ಸಿಗುವುದು.

ಮೇಷ ರಾಶಿ (Aries)

ನಿಂತುಹೋಗಿದ್ದ ವ್ಯಾಪಾರ ಮತ್ತೆ ಚುರುಕು ಪಡೆಯುವುದು. ಹೊಸ ಗ್ರಾಹಕರಿಂದ ಉದ್ಯಮದಲ್ಲಿ ಲಾಭವಾಗುವುದು. ಕಠಿಣ ಪರಿಶ್ರಮಕ್ಕೆ ಮೆಚ್ಚುಗೆ ಸಿಗುತ್ತದೆ. ಹೊಸ ಜವಾಬ್ದಾರಿ ಮುಂದಿನ ಬಡ್ತಿಗೆ ಕಾರಣವಾಗಬಹುದು. ಕೆಲಸಗಳಲ್ಲಿ ಯಶಸ್ಸು ಸಿಗುವುದು. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುವುದು. ಆರೋಗ್ಯವು ಉತ್ತಮವಾಗಿರುವುದು.

Daily Horoscope October 6 Today Rashi Bhavishya Zodiac Predictions Lucky Number Colour of all signs

ವೃಷಭ ರಾಶಿ (Taurus)

ವ್ಯಾಪಾರ ವಿಸ್ತರಣೆಯ ಯೋಜನೆಗಳು ಯಶಸ್ವಿಯಾಗುತ್ತವೆ. ಹೊಸ ಕೆಲಸ ಶುರು ಮಾಡುವಿರಿ. ಪಾಲುದಾರಿಕೆಯಲ್ಲಿ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದು. ಉದ್ಯೋಗಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳ ಮೆಚ್ಚುಗೆ ಸಿಗುವುದು. ಆರ್ಥಿಕ ಸ್ಥಿತಿ ಇವತ್ತು ಉತ್ತಮವಾಗಿರುತ್ತದೆ.

ಮಿಥುನ ರಾಶಿ (Gemini)

ಹೊಸ ಒಪ್ಪಂದ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ತರುವುದು. ಸ್ನೇಹಿತರು ಮತ್ತು ಹಿತೈಷಿಗಳ ಬೆಂಬಲದಿಂದ ಪ್ರಮುಖ ಕೆಲಸಗಳು ಸರಾಗವಾಗಿ ನಡೆಯುವುದು. ವೃತ್ತಿ ಪ್ರಗತಿಯಾಗುವುದು. ಹೊಸ ಜವಾಬ್ದಾರಿ ಸಿಗುವುದು. ಮನೆಯ ವಾತಾವರಣ ಸಕಾರಾತ್ಮಕವಾಗಿ ಇರುವುದು. ಆರೋಗ್ಯ ಸಾಮಾನ್ಯಕ್ಕಿಂತ ಉತ್ತಮವಾಗಿರುವುದು.

ಕಟಕ ರಾಶಿ (Cancer)

ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗುವುದು. ಆತುರದ ವ್ಯವಹಾರ ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು. ನಿರೀಕ್ಷೆ ಮೀರಿ ಶ್ರಮ ಹಾಕಬೇಕಾಗಬಹುದು. ಮೇಲಧಿಕಾರಿಗಳ ಸಲಹೆ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಮನೆಯಲ್ಲಿ ಶಾಂತಿಯುತ ಮತ್ತು ಸಂತೋಷದ ವಾತಾವರಣ ಇರುತ್ತದೆ. ಅನಗತ್ಯ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.

ಸಿಂಹ ರಾಶಿ (Leo)

ವ್ಯಾಪಾರ ವಿಸ್ತರಣೆಯ ಸಾಧ್ಯತೆಗಳಿವೆ. ಮೇಲಧಿಕಾರಿಗಳ ಪ್ರಶಂಸೆ ಸಿಗುವುದು. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಕುಟುಂಬದೊಂದಿಗೆ ಉತ್ತಮ ಸಮಸಯ ಕಳೆಯುವಿರಿ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ.

ಕನ್ಯಾರಾಶಿ (Virgo)

ವ್ಯವಹಾರದಲ್ಲಿ ಉತ್ತಮ ಲಾಭ ಸಿಗುವುದು. ಹೊಸ ಯೋಜನೆಗಳು ಯಶಸ್ವಿಯಾಗುತ್ತವೆ. ಪಾಲುದಾರಿಕೆ ವ್ಯವಹಾರದಿಂದ ಲಾಭವಾಗುತ್ತದೆ. ಉದ್ಯೋಗದಲ್ಲಿರುವವರ ಪ್ರಗತಿಯ ಹಾದಿ ತೆರೆಯುವುದು. ಹೆತ್ತವರ ಬೆಂಬಲ ಸಿಗುವುದು. ದಿನವು ಸಾಕಷ್ಟು ಶುಭವಾಗಿರುತ್ತದೆ.

ತುಲಾ ರಾಶಿ (Libra)

ಕೆಲಸದಲ್ಲಿ ಕೆಲವು ಸಮಸ್ಯೆ ಉಂಟಾಗಬಹುದು. ತಾಳ್ಮೆಯಿಂದ ಇರಿ. ಸಂಯಮವನ್ನು ಕಾಪಾಡಿಕೊಳ್ಳಿ. ಹೊಸ ಯೋಜನೆಯನ್ನು ಆತುರದಿಂದ ಪ್ರಾರಂಭಿಸಬೇಡಿ. ಯಾರನ್ನೂ ಕುರುಡಾಗಿ ನಂಬಬೇಡಿ. ಹೊಸ ಜವಾಬ್ದಾರಿ ಸಿಗಬಹುದು. ಇದು ಭವಿಷ್ಯದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು.

ವೃಶ್ಚಿಕ ರಾಶಿ (Scorpio)

ವ್ಯವಹಾರದಲ್ಲಿ ಹೊಸ ಅವಕಾಶ ಸಿಗುವುದು. ಯೋಜಿಸಿದ್ದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ವ್ಯವಹಾರದಲ್ಲಿ ಪ್ರಗತಿಯಾಗುವುದು. ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಲಾಭವಾಗುವುದು. ಆರ್ಥಿಕ ದೃಷ್ಟಿಕೋನದಿಂದ ಈ ದಿನ ಶುಭ. ಆದಾಯ ಹೆಚ್ಚಾಗುತ್ತದೆ. ಬಾಕಿ ಕೆಲಸ ಮುಗಿಸುವಿರಿ.

ಧನು ರಾಶಿ (Sagittarius)

ಇವತ್ತು ಎಚ್ಚರಿಕೆಯಿಂದ ಮುಂದುವರೆಯಿರಿ. ವ್ಯವಹಾರದಲ್ಲಿ ಲಾಭವಾಗುವುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ಬಡ್ತಿಗೆ ಅವಕಾಶವಿರುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ. ಕುಟುಂಬದಿಂದ ಸಂಪೂರ್ಣ ಬೆಂಬಲ ಸಿಗುತ್ತದೆ.

ಮಕರ ರಾಶಿ (Capricorn)

ವ್ಯಾಪಾರ ವಿಸ್ತರಣೆಗೆ ಹೊಸ ಅವಕಾಶ ಸಿಗುವುದು. ಮಧ್ಯಾಹ್ನದ ನಂತರ ಅದೃಷ್ಟ ನಿಮ್ಮ ಕಡೆ ಇರುತ್ತದೆ. ತುಂಬಾ ದಿನದಿಂದ ಬಾಕಿ ಇರುವ ಕೆಲಸ ಪೂರ್ಣಗೊಳ್ಳುವುದು. ಉದ್ಯೋಗದಲ್ಲಿರುವವರಿಗೆ ಪ್ರಗತಿಗೆ ಅವಕಾಶವಿದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದು ಮುಖ್ಯ. ಆರೋಗ್ಯ ಉತ್ತಮವಾಗಿರುತ್ತದೆ.

ಕುಂಭ ರಾಶಿ (Aquarius)

ಉದ್ಯಮಿಗಳು ಸ್ಥಿರವಾದ ಲಾಭ ಗಳಿಸುತ್ತಾರೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕೆಲಸದ ಬಗ್ಗೆ ಉತ್ಸಾಹ ಹೆಚ್ಚಾಗುತ್ತದೆ. ಹೊಸ ಪರಿಚಯ ಭವಿಷ್ಯದ ವೃತ್ತಿಜೀವನಕ್ಕೆ ಪ್ರಯೋಜನಕಾರಿಯಾಗುವುದು. ಮನೆಯಲ್ಲಿನ ವಾತಾವರಣ ಸಕಾರಾತ್ಮಕವಾಗಿರುವುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುವುದು. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಮುಖ್ಯ. ಆರೋಗ್ಯ ಸಾಮಾನ್ಯವಾಗಿರುತ್ತದೆ.

ಮೀನ ರಾಶಿ (Pisces)

ಉದ್ಯಮಿಗಳಿಗೆ ಹೊಸ ಅವಕಾಶ ಸಿಗುವುದು. ಹೊಸ ಜವಾಬ್ದಾರಿ ವ್ಯವಹಾರ ವಿಸ್ತರಣೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಉದ್ಯೋಗದಲ್ಲಿರುವವರಿಗೆ ಈ ದಿನ ಪ್ರಗತಿಯಾಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವರು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+