Daily Horoscope Oct 12: ದಿನ ಭವಿಷ್ಯ; ಇಂದು ಯಾವ ರಾಶಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ? 12 ರಾಶಿಗಳ ಫಲ ಹೀಗಿದೆ
Daily Horoscope Oct 12: ರಾಶಿ ನಕ್ಷತ್ರಕ್ಕೆ ಅನುಗುಣವಾಗಿ ಇಂದಿನ ದಿನ ಕೆಲವು ರಾಶಿಯವರಿಗೆ ಅದೃಷ್ಟ ತಂದರೆ ಇನ್ನು ಕೆಲವರಿಗೆ ಸಮಸ್ಯೆಯನ್ನು ಹೊತ್ತು ತರುವುದು. ಇಂದು ದ್ವಾದಶ ರಾಶಿಯವರ ರಾಶಿ ಫಲ ಹೇಗಿದೆ ನೋಡೋಣ.
ಮೇಷ ರಾಶಿ
ನಿಂತು ಹೋಗಿರುವ ಕೆಲಸ ಇವತ್ತು ಪೂರ್ಣವಾಗುವುದು. ಕೆಲಸ ಕಾರ್ಯಗಳ ಬಗ್ಗೆ ಜಾಗೃತೆ ಇರಲಿ. ವ್ಯಾಪಾರ ವಿಸ್ತರಣೆಗೆ ಅವಕಾಶವಿರುವುದು. ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ. ಮಕ್ಕಳ ಸಾಧನೆ ಖುಷಿ ತರುವುದು. ಕೆಟ್ಟ ಅಭ್ಯಾಸಗಳಿಂದ ದೂರವಿರಿ.

ವೃಷಭ ರಾಶಿ
ಸಂಬಂಧಿಕರೊಂದಿಗಿನ ಮನಸ್ತಾಪ ಕಡಿಮೆಯಾಗುವುದು. ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಹಣದ ಅವಶ್ಯಕತೆ ಎದುರಾಗುವುದು. ವೈವಾಹಿಕ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ. ಹಳೆಯ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ಮಿಥುನ ರಾಶಿ
ಕಷ್ಟಕರ ಕೆಲಸ ಇವತ್ತು ಪೂರ್ಣವಾಗುವುದು. ಭವಿಷ್ಯದ ಯೋಜನೆಗಳನ್ನು ಕಾರ್ಯಗತಗೊಳಿಸುವ ಸಮಯ. ಹಣಕಾಸಿನ ವಿಷಯದಲ್ಲಿ ಲಾಭವಾಗುವುದು. ಪ್ರೇಮ ಸಂಬಂಧಗಳು ಬಲವಾಗಿರುವುದು. ಗಂಟಲು ನೋವು, ಜ್ವರದಂತಹ ಸಮಸ್ಯೆಗಳು ಕಾಡಬಹುದು.
ಕರ್ಕಾಟಕ ರಾಶಿ
ಕಚೇರಿ ರಾಜಕೀಯದಿಂದ ಎಷ್ಟು ದೂರವಿರುತ್ತೀರೋ ಅಷ್ಟು ಒಳ್ಳೆಯದು. ವ್ಯವಹಾರದಲ್ಲಿ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರಬಹುದು. ನಿರ್ಧಾರದ ಬಗ್ಗೆ ಜಾಗರೂಕರಾಗಿರಿ. ಕೆಲವು ವೈಯಕ್ತಿಕ ವಿಷಯಗಳ ಬಗ್ಗೆ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು. ಮಾನಸಿಕ ಒತ್ತಡ ಹೆಚ್ಚಾಗಬಹುದು.
ಸಿಂಹ ರಾಶಿ
ಆಸ್ತಿ ಖರೀದಿಗೆ ಸಂಬಂಧಿಸಿದ ಕೆಲಸ ನಿಧಾನವಾಗುವುದು. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಮಾತನಾಡುವಾಗ ಎಚ್ಚರ ವಹಿಸಿ. ಇಲ್ಲವಾದರೆ ನಿಮ್ಮ ಮಾತೇ ಸಮಸ್ಯೆ ತರಬಹುದು. ಬೇರೆಯವರ ಕೆಲಸದಲ್ಲಿ ತಲೆ ಹಾಕಬೇಡಿ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುವುದು.
ಕನ್ಯಾರಾಶಿ
ಕುಟುಂಬದಲ್ಲಿನ ಸಮಸ್ಯೆಗೆ ಪರಿಹಾರ ಸಿಗುವುದು. ಹೂಡಿಕೆ ಮಾಡಲು ಸರಿಯಾದ ಸಮಯಕ್ಕಾಗಿ ಕಾಯಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯುವುದು. ನೆಮ್ಮದಿ ಹೆಚ್ಚಾಗುವುದು. ಮೊಣಕಾಲು ಮತ್ತು ಕೀಲು ನೋವಿನ ಸಮಸ್ಯೆ ಕಾಡಬಹುದು.
ತುಲಾ ರಾಶಿ
ಗ್ರಹ ಸ್ಥಾನಗಳಲ್ಲಿ ಸಕಾರಾತ್ಮಕ ಬದಲಾವಣೆ ಇರುವುದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುವುದು. ವಿಶ್ವಾಸದಿಂದ ಮುಂದುವರೆಯಿರಿ. ಗುರಿ ಸಾಧಿಸಲು ಪ್ರಯತ್ನಿಸಿ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣವಿರುತ್ತದೆ. ಅರೋಗ್ಯದ ಬಗ್ಗೆ ಕಾಳಜಿ ವಹಿಸಿ.
ವೃಶ್ಚಿಕ ರಾಶಿ
ಯಾವುದೇ ಕೆಲಸವನ್ನು ಮಾಡುವ ಮೊದಲು ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಸೋಮಾರಿತನ ಮತ್ತು ಆಲಸ್ಯದಿಂದ ಕೆಲಸ ಮುಂದೂಡಬೇಡಿ. ನಷ್ಟವಾದೀತು. ವ್ಯವಹಾರ ವಿಸ್ತರಣೆಗೆ ದಿನ ಉತ್ತಮವಾಗಿರುವುದು. ಮಂಡಿ ನೋವಿನ ಸಮಸ್ಯೆ ಕಾಡುವುದು.
ಧನು ರಾಶಿ
ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಹೆಚ್ಚು ಹೆಚ್ಚು ಗಮನ ಹರಿಸಬೇಕು. ವ್ಯವಹಾರದಲ್ಲಿ ಹೂಡಿಕೆ ಮಾಡಲು ಸೂಕ್ತವಾದ ದಿನ. ಪತಿ-ಪತ್ನಿಯ ನಡುವೆ ಭಿನ್ನಾಭಿಪ್ರಾಯ ಮೂಡುವುದು. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.
ಮಕರ ರಾಶಿ
ನಿರ್ದಿಷ್ಟ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಪ್ರಯೋಜನವಾಗುವುದು. ಯಶಸ್ಸನ್ನು ಪಡೆಯಲು ನೀವು ಇವತ್ತು ಸ್ವಾರ್ಥಿಯಂತೆ ಯೋಚಿಸಬಹುದು. ಮನೆಯಲ್ಲಿ ಪರಸ್ಪರ ಸಾಮರಸ್ಯದಿಂದ ಇರುವಿರಿ. ನಿಮ್ಮ ಎನರ್ಜಿಯನ್ನು ಬುದ್ದಿವಂತಿಕೆಯಿಂದ ಬಳಸಿ. ಹೊಸ ಕೆಲಸ ಮತ್ತು ವ್ಯವಹಾರದಲ್ಲಿ ಲಾಭವಾಗುವುದು.
ಕುಂಭ ರಾಶಿ
ಕೆಲಸದಲ್ಲಿ ಯಶಸ್ವಿಯಾಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಮನಸ್ಸಿನ ಸಂತೋಷ ಹೆಚ್ಚಾಗುವುದು. ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವುದು. ಅನಗತ್ಯ ವಾದಗಳಲ್ಲಿ ಭಾಗಿಯಾಗಬೇಡಿ. ಪ್ರೇಮ ಸಂಬಂಧಗಳು ಬಲಗೊಳ್ಳುವುದು.
ಮೀನ ರಾಶಿ
ದಿನವಿಡೀ ಕೆಲಸದಲ್ಲಿ ನಿರತರಾಗಿರುವಿರಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ರಿಸ್ಕ್ ತೆಗೆದುಕೊಳ್ಳಲು ದಿನ ಸೂಕ್ತವಾಗಿಲ್ಲ. ಹಣದ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ತೆಗೆದುಕೊಳ್ಳಬೇಡಿ. ಪ್ರೀತಿ ಪ್ರೇಮ ಎಂದು ಸಮಯ ವ್ಯರ್ಥ ಮಾಡಬೇಡಿ. ದೈಹಿಕ ಶ್ರಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.


Click it and Unblock the Notifications
