Daily Horoscope May 9: ಮೇ 9ರ ದ್ವಾದಶ ರಾಶಿ ಭವಿಷ್ಯ; ಯಾರಿಗೆ ಲಾಭ, ಯಾರಿಗೆ ಎಚ್ಚರಿಕೆ, 12 ರಾಶಿಗಳ ದಿನ ಭವಿಷ್ಯ

Daily Horoscope May 9: ಮೇ 9ರ ಶನಿವಾರ ದ್ವಾದಶ ರಾಶಿಗಳ ಗೋಚರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ನೋಡೋಣ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದೆರುವಂತಹ ದಿನ ಭವಿಷ್ಯವಾಗಿದೆ. ಮೇ 9ರ ಶನಿವಾರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ ರಾಶಿ

ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಆರ್ಥಿಕ ಸ್ಥಿತಿ ಸುಧಾರಿಸುವುದು. ಆರೋಗ್ಯವು ಉತ್ತಮವಾಗಿರುತ್ತದೆ. ಆದರೂ ಅತಿಯಾದ ಕೆಲಸ ಆಯಾಸಕ್ಕೆ ಕಾರಣವಾಗಬಹುದು.

ವೃಷಭ ರಾಶಿ

ಹಣಕಾಸಿನ ವಿಷಯಗಳಲ್ಲಿ, ಅದರಲ್ಲೂ ಹೂಡಿಕೆಗಳ ಬಗ್ಗೆ ಎಚ್ಚರಿಕೆ ಅತ್ಯಗತ್ಯ. ಶತ್ರುಗಳು ಮಾತ್ರವಲ್ಲ ನಿಮ್ಮವರಿಂದಲೇ ಮೋಸ ಆಗಬಹುದು. ಮಿತಿ ಮೀರಿದ ಕೆಲಸದಿಂದ ಒತ್ತಡ ಹೆಚ್ಚಾಗಬಹುದು.

Daily Horoscope May 9

ಮಿಥುನ ರಾಶಿ

ಆರ್ಥಿಕ ಪರಿಸ್ಥಿತಿ ಸಮತೋಲಿತವಾಗಿರುವುದು. ಪಾಲುದಾರಿಕೆ ವ್ವಹಾರಕ್ಕೆ ಕೈ ಹಾಕಬೇಡಿ. ಸಹೋದರರೊಂದಿಗೆ ವಾದ ಏರ್ಪಡುವ ಸಾಧ್ಯತೆ ಇದೆ. ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವರು.

ಕರ್ಕಾಟಕ ರಾಶಿ

ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು. ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಒಳ್ಳೆಯದು. ವ್ಯಾಪಾರ ವ್ಯವಹಾರ ಉತ್ತಮವಾಗಿ ನಡೆಯುವುದು. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಕಿರಿ ಕಿರಿ ಉಂಟಾಗುವುದು.

ಸಿಂಹ ರಾಶಿ

ನಿಮ್ಮ ಯೋಚನಾ ಶಕ್ತಿಗೆ ಮೆಚ್ಚುಗೆ ವ್ಯಕ್ತವಾಗುವುದು. ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವ್ಯವಹಾರದಲ್ಲಿ ಅಭಿವೃದ್ಧಿಯಾಗುವುದು. ಭೂಮಿ ಮತ್ತು ಕಟ್ಟಡ ಸಂಬಂಧಿತ ಕೆಲಸಗಳು ಗಮನಾರ್ಹ ಲಾಭವನ್ನು ನೀಡುತ್ತವೆ.

ಕನ್ಯಾ ರಾಶಿ

ಕೆಲಸದಲ್ಲಿ ಸ್ಥಿರತೆ ಇರುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಮನೆಯ ಖರ್ಚು ಸೇರಿದಂತೆ ಹಣಕಾಸಿನ ವೆಚ್ಚಗಳು ಹೆಚ್ಚಾಗಬಹುದು. ಕುಟುಂಬ ಮತ್ತು ಮನೆಯ ಬಗ್ಗೆ ಕಾಳಜಿ ಅಗತ್ಯ. ಆರೋಗ್ಯ ಸಮಸ್ಯೆ ಎದುರಾಗಬಹುದು.

ತುಲಾ ರಾಶಿ

ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವ್ಯವಹಾರದಲ್ಲಿ ಲಾಭವಾಗುವುದು. ಆರೋಗ್ಯವು ಸಾಮಾನ್ಯವಾಗಿರುವುದು. ಪ್ರವಾಸದಿಂದ ಲಾಭವಾಗುವುದು. ಅಂದುಕೊಂಡ ಕೆಲಸ ಸಾಧಿಸುವಿರಿ.

ವೃಶ್ಚಿಕ ರಾಶಿ

ಸಾಲದಿಂದ ಮುಕ್ತಿ ಸಿಗುವುದು. ಹೂಡಿಕೆಗಳಿಂದ ಲಾಭವಾಗುವುದು.ನಿಮ್ಮ ಮನಸ್ಸಿನ ಮಾತನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು ಮುಖ್ಯವಾಗಿರುತ್ತದೆ.

ಧನು ರಾಶಿ

ಹೊಸ ಕೆಲಸದಲ್ಲಿ ಯಶಸ್ಸು ಸಿಗುವುದು. ವ್ಯಾಪಾರ ವ್ಯವಹಾರ ಉತ್ತಮವಾಗಿರುವುದು. ಕುಟುಂಬ ಜೀವನವು ಶಾಂತಿಯುತ ಮತ್ತು ಸಂತೋಷದಿಂದ ಕೂಡಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ. ಪ್ರಯಾಣ ಬೆಳೆಸುವ ಅವಕಾಶ ಒದಗಿ ಬರಬಹುದು.

ಮಕರ ರಾಶಿ

ಹೊಸ ಉದ್ಯಮಗಳಲ್ಲಿ ಎಚ್ಚರಿಕೆ ಅತ್ಯಗತ್ಯ. ಖರ್ಚು ಹೆಚ್ಚಾಗಬಹುದು. ಮಾತಿನಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. ಪ್ರೇಮ ಜೀವನದಲ್ಲಿ ತಪ್ಪು ತಿಳುವಳಿಕೆಯಿಂದಾಗಿ ಸಮಸ್ಯೆ ಉಂಟಾಗಬಹುದು.ಆರೋಗ್ಯ ಮತ್ತು ನಿದ್ರೆಯ ಸಮಸ್ಯೆ ಕಾಡಬಹುದು.

ಕುಂಭ ರಾಶಿ

ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವ್ಯವಹಾರದಲ್ಲಿ ಪ್ರಗತಿ ನಿಧಾನವಾಗಬಹುದು. ಆದಾಯದ ಮೂಲಗಳು ಉಳಿದುಕೊಳ್ಳುವುದು. ಆತುರದ ನಿರ್ಧಾರವನ್ನು ತಪ್ಪಿಸಿ. ಆರೋಗ್ಯವು ಉತ್ತಮವಾಗಿರುತ್ತದೆ.

ಮೀನ ರಾಶಿ

ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುವುದು. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಆರೋಗ್ಯ ಸ್ಥಿತಿ ಸಾಮಾನ್ಯವಾಗಿರುವುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+