Horoscope Today: ದಿನ ಭವಿಷ್ಯ ಮಾರ್ಚ್ 3- ಈ ರಾಶಿಗೆ ಪರಶಿವನ ಕೃಪೆ, ಸಕಲೈಶ್ವರ್ಯ ಪ್ರಾಪ್ತಿ

ಮಾರ್ಚ್ ತಿಂಗಳ ಮೂರನೇ ದಿನ ಅಂದರೆ ಮಾರ್ಚ್ 3 ಸೋಮವಾರ ಫಾಲ್ಗುಣ ಮಾಸದ ಶುಕ್ಲ ಪಕ್ಷ. ಈ ದಿನದಂದು ಉತ್ತರಭಾದ್ರಪದ ನಕ್ಷತ್ರ ಮತ್ತು ಶುಭ ಯೋಗದ ಸಂಯೋಜನೆ ಇರುತ್ತದೆ. ಮಾರ್ಚ್ 3 ಬಹಳ ವಿಶೇಷವಾದ ದಿನವಾಗಿರುತ್ತದೆ. ಕೆಲ ರಾಶಿಯವರಿಗೆ ಈ ದಿನ ವೃತ್ತಿ, ವ್ಯವಹಾರ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯ ಲಕ್ಷಣಗಳಿವೆ. ಹಾಗಾದರೆ ಈ ದಿನ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.

ಮೇಷ ರಾಶಿ

ಮಾರ್ಚ್ 3 ಮೇಷ ರಾಶಿಯವರಿಗೆ ತುಂಬಾ ಶುಭ ದಿನವಾಗಿದೆ. ಈ ದಿನ ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಬದಲಾವಣೆ ಕಾಣುವಿರಿ. ನಿಮ್ಮ ಯಾವುದೇ ಕೆಲಸ ಬಾಕಿ ಇದ್ದರೆ ಅದು ಪೂರ್ಣಗೊಳ್ಳುವುದು ಮಾತ್ರವಲ್ಲದೆ ಅದರೆಇಂದ ಲಾಭ ಸಿಗುವುದು. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಅದೃಷ್ಟ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಳ್ಳೆಯ ದಿನ ಇದಾಗಿದೆ. ಈ ದಿನ ತೆಗೆದುಕೊಳ್ಳುವ ಯಾವುದೇ ಪ್ರಮುಖ ನಿರ್ಧಾರ ನಿಮಗೆ ಪ್ರಯೋಜನಕಾರಿಯಾಗಿರುತ್ತದೆ.

Daily horoscope march 3 know today predictions for 12 zodiac signs

ವೃಷಭ ರಾಶಿ

ಮಾರ್ಚ್ 3 ವೃಷಭ ರಾಶಿಯ ಜನರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುತ್ತೀರಿ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಲಿವೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಯಶಸ್ಸು ಸಿಗಲಿದೆ. ಬಡ್ತಿಯ ಸಾಧ್ಯತೆಗಳೂ ಇವೆ. ಈ ದಿನದಂದು ಯಾವುದೇ ಹಳೆಯ ಸಾಲದ ಹಣವನ್ನು ಮರುಪಡೆಯಬಹುದು. ಅದೃಷ್ಟ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಇದು ನೀವು ಬಯಸಿದ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ.

ಮಿಥುನ ರಾಶಿ

ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ದಾಂಪತ್ಯ ಜೀವನದಲ್ಲಿ ಸಹಕಾರ ಇರುವುದು. ಕುಟುಂಬದ ಸದಸ್ಯರ ಕಾರಣದಿಂದಾಗಿ ನೀವು ಒತ್ತಡಕ್ಕೊಳಗಾಗಬಹುದು. ನಿಮ್ಮ ಧಾರ್ಮಿಕ ಗುರುವಿನ ಬಳಿ ಸಲಹೆಯನ್ನು ಪಡೆಯಿರಿ. ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸೃಜನಶೀಲ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

ಕರ್ಕಾಟಕ ರಾಶಿ

ಯಾವುದೋ ವ್ಯಕ್ತಿಯಿಂದಾಗಿ ನಿಮ್ಮ ಮನಸ್ಸು ತೊಂದರೆಗೊಳಗಾಗಬಹುದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದಾಂಪತ್ಯ ಜೀವನದಲ್ಲಿ ಒತ್ತಡ ಇರುತ್ತದೆ. ಸಂಪತ್ತಿನಲ್ಲಿ ಹೆಚ್ಚಳವಾಗಬಹುದು. ಬೆಳಿಗ್ಗೆ ಚಂದ್ರನ ಮಂತ್ರವನ್ನು ಪಠಿಸಿ. ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಮಾರ್ಚ್ 3 ಪ್ರಗತಿ ಮತ್ತು ಯಶಸ್ಸಿನ ದಿನವಾಗಿದೆ. ನೀವು ಯಾವುದೇ ಉದ್ಯೋಗದಲ್ಲಿದ್ದರೆ, ಬಡ್ತಿ ಅಥವಾ ಸಂಬಳ ಹೆಚ್ಚಳದ ಲಕ್ಷಣಗಳಿವೆ. ಈ ದಿನ ವ್ಯಾಪಾರ ವರ್ಗಕ್ಕೂ ತುಂಬಾ ಶುಭವಾಗಿದೆ. ಕೆಲವು ದೊಡ್ಡ ವ್ಯವಹಾರಗಳನ್ನು ಅಂತಿಮಗೊಳಿಸಬಹುದು. ಕುಟುಂಬ ಜೀವನದಲ್ಲಿಯೂ ಸಂತೋಷದ ವಾತಾವರಣ ಇರುತ್ತದೆ. ಈ ದಿನ ನೀವು ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುವಿರಿ. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಈ ದಿನ ಶುಭವಾಗಿದೆ. ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸುವಿರಿ. ಶೈಕ್ಷಣಿಕ ಸ್ಪರ್ಧೆಯ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಫಲಪ್ರದವಾಗುತ್ತವೆ. ನಿಮ್ಮ ಸಂಗಾತಿಯಿಂದ ನಿಮಗೆ ಹಣಕಾಸಿನ ಬೆಂಬಲ ಸಿಗುತ್ತದೆ. ಹಸಿದ ಪ್ರಾಣಿಗಳಿಗೆ ಆಹಾರ ನೀಡಿ ಸೂರ್ಯನಿಗೆ ನೀರನ್ನು ಅರ್ಪಿಸಿ ಪೂಜಿಸಿ.

ತುಲಾ ರಾಶಿ

ದಾಂಪತ್ಯ ಜೀವನದಲ್ಲಿ ಅಡಚಣೆಗಳು ಉಂಟಾಗುತ್ತವೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೆ ಒಳ್ಳೆಯದು. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಂಪತ್ತು ಹೆಚ್ಚಾಗುವುದು. ಅಂದುಕೊಂಡ ಕಾರ್ಯಗಳು ನಿಮಗೆ ಲಾಭ ತಂದು ಕೊಡಲಿವೆ. ಸಂಕಷ್ಟ ನಿವಾರಣೆಗೆ ಶಿವ ಮಂತ್ರವನ್ನು ಪಠಿಸಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಆರ್ಥಿಕ ಲಾಭವಾಗುವ ಸೂಚನೆಗಳಿವೆ. ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಇದು ಸರಿಯಾದ ಸಮಯ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ ಮತ್ತು ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗಳು ದೂರವಾಗಲಿವೆ. ನೀವು ವಿಶೇಷ ವ್ಯಕ್ತಿಯಿಂದ ಸಹಾಯ ಪಡೆಯಬಹುದು. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಈ ದಿನವು ನಿಮಗೆ ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ.

ಧನು ರಾಶಿ

ಧನು ರಾಶಿಯವರಿಗೆ ಈ ದಿನ ಮಂಗಳಕರವಾಗಿರುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ, ಮನೆಯಲ್ಲಿ ಸಂತೋಷ ಹೆಚ್ಚಾಗುವುದು. ಬಹುನಿರೀಕ್ಷಿತ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ನಿಮ್ಮ ಹೆತ್ತವರಿಂದ ಆಶೀರ್ವಾದ ಪಡೆದ ನಂತರ ಮನೆಯಿಂದ ಹೊರಡಿ.

ಮಕರ ರಾಶಿ

ಈ ದಿನ ಮಾಡಿದ ಯಾವುದೇ ಯೋಜನೆ ಯಶಸ್ವಿಯಾಗುತ್ತದೆ. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಕೆಲಸದ ಕ್ಷೇತ್ರದಲ್ಲಿ ಅಡೆತಡೆಗಳು ಎದುರಾಗುತ್ತವೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ವಿರೋಧಿಗಳು ಸೋಲುತ್ತಾರೆ.

ಕುಂಭ ರಾಶಿ

ನೀವು ಉನ್ನತ ಅಧಿಕಾರಿ ಅಥವಾ ಮನೆಯ ಮುಖ್ಯಸ್ಥರಿಂದ ಬೆಂಬಲ ಪಡೆಯುತ್ತೀರಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಸೂರ್ಯನಿಗೆ ನೀರನ್ನು ಅರ್ಪಿಸಿ ಮತ್ತು ಶಿವನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಮಾರ್ಚ್ 3 ಬಹಳ ವಿಶೇಷವಾಗಿರುತ್ತದೆ. ಈ ದಿನ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಕೆಲಸ ಮಾಡುವ ಜನರಿಗೆ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ನಿಮಗೆ ದೊಡ್ಡ ಉದ್ಯೋಗ ಅವಕಾಶ ಸಿಗಬಹುದು. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಜನರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+