Daily Horoscope: ಅದೃಷ್ಟದೊಂದಿಗೆ ಈ ರಾಶಿಯವರ ದಿನ ಆರಂಭ, ಲಕ್ಷ್ಮೀ ಕೃಪೆಯಿಂದ ಧನಲಾಭ

Horoscope August 06: ಆಗಸ್ಟ್ 06ರ ಗುರುವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಆಗಸ್ಟ್ 06ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿದೆ ಎಂದು ತಿಳಿಯಿರಿ.

ಮೇಷ ರಾಶಿ (Aries):

ಇಂದು ನಿಮಗೆ ಆಹ್ಲಾದಕರ ದಿನವಾಗಿರುತ್ತದೆ. ಕಚೇರಿಯಲ್ಲಿ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುವುದು. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುವುದು. ಹೊಸ ಕೆಲಸವನ್ನು ಆರಂಭಿಸಲು ದಿನ ಸೂಕ್ತವಾಗಿದೆ. ಮನೆಯ ಹಿರಿಯರೊಂದಿಗೆ ಸಣ್ಣಪುಟ್ಟ ಮನಸ್ತಾಪ ಮೂಡಬಹುದು.

Daily Horoscope

ವೃಷಭ ರಾಶಿ (Taurus):

ವೃಷಭ ರಾಶಿಯವರಿಗೂ ಈ ದಿನ ಉತ್ತಮವಾಗಿರುವುದು. ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ಆದ್ರೆ ಖರ್ಚು ಕೂಡಾ ಹೆಚ್ಚಾಗುತ್ತಾ ಹೋಗುವುದು. ಉದ್ಯೋಗದಲ್ಲಿದ್ದವರಿಗೆ ಬೇರೆ ಊರಿಗೆ ವರ್ಗಾವಣೆಯಾಗಬಹುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರುವುದು. ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿರುವುದು.

ಮಿಥುನ ರಾಶಿ (Gemini):

ಮಿಥುನ ರಾಶಿಯವರಿಗೆ ದಿನ ಅನುಕೂಲಕರವಾಗಿರುವುದು. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಭೂಮಿ ಅಥವಾ ಮನೆ ಖರೀದಿಸುವ ಕೆಲಸಕ್ಕೆ ಕೈ ಹಾಕಬಹುದು. ದೊಡ್ಡ ಕಂಪನಿಯಲ್ಲಿ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು.

ಕರ್ಕಾಟಕ ರಾಶಿ (Cancer):

ಕರ್ಕಾಟಕ ರಾಶಿಯವರ ದಿನ ಸಂತೋಷದಿಂದ ಕೂಡಿರುವುದು. ಹೊಸ ಉದ್ಯೋಗಾವಕಾಶ ಸಿಗುವುದು. ಹೆಚ್ಚು ಉಲ್ಲಾಸದಿಂದ ಕೂಡಿರುವ ದಿನ ಇದಾಗುವುದು. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದು ಸಾಧ್ಯವಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸುವುದು. ನಿಮ್ಮ ಕೆಲಸಕ್ಕೆ ಮನ್ನಣೆ ಸಿಗುವುದು.

ಸಿಂಹ ರಾಶಿ (Leo):

ಅನಗತ್ಯ ವಸ್ತುಗಳ ಮೇಲೆ ಹಣ ಖರ್ಚು ಮಾಡಬೇಡಿ. ಮನೆಯಲ್ಲಿ ಮದುವೆ ಮಾತುಕತೆ ನಡೆಯಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಂತುಹೋಗಿದ್ದ ಕೆಲಸ ಮತ್ತೆ ಚುರುಕಾಗುವುದು.

ಕನ್ಯಾ ರಾಶಿ (Virgo):

ನಿಮ್ಮ ಪಾಲಿಗೆ ಅತ್ಯಂತ ಅದೃಷ್ಟದ ದಿನ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು.ಯಾವ ವಿಚಾರದ ಬಗ್ಗೆಯೂ ಅತಿಯಾಗಿ ಯೋಚಿಸಬೇಡಿ. ಗೊಂದಲಕ್ಕೆ ಕಾರಣವಾಗಬಹುದು, ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ತುಲಾ ರಾಶಿ (Libra):

ಮಾತಿನ ಮೇಲೆ ನಿಯಂತ್ರಣವಿದ್ದರೆ ದಿನ ಉತ್ತಮವಾಗಿ ಸಾಗುವುದು.ಕೈಗೆತ್ತಿಕೊಳ್ಳುವ ಕೆಲಸದಲ್ಲಿ ಯಶಸ್ಸು ಸಿಗುವುದು. ಹಣಕಾಸಿನ ಲಾಭವಾಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ.

ವೃಶ್ಚಿಕ ರಾಶಿ (Scorpio):

ವೃಶ್ಚಿಕ ರಾಶಿಯವರಿಗೆ ಇಂದು ಶುಭ ದಿನವಾಗಿರುವುದು. ಕೆಲವು ಪ್ರಮುಖ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಗಳು ಹೆಗಲೇರುವುದು. ನಿಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಸ್ನೇಹಿತರೊಂದಿಗೆ ಉತ್ತಮ ಸಮಸಯ ಕಳೆಯುವಿರಿ.

ಧನು ರಾಶಿ (Sagitarius):

ಇಂದು ನಿಮ್ಮ ಪಾಲಿಗೆ ಪ್ರಮುಖ ದಿನವಾಗಿರುತ್ತದೆ. ಖಾಸಗಿ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ಎದುರಾಗಿದ್ದ ಸಮಸ್ಯೆಯಿಂದ ಮುಕ್ತಿ ಸಿಗುವುದು. ಸಂಗಾತಿ ನಿಮಗೆ ಬೆನ್ನೆಲುಬಾಗಿ ನಿಲ್ಲುವರು.

ಮಕರ ರಾಶಿ (capricorn):

ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಅನೇಕ ಉತ್ತಮ ಅವಕಾಶಗಳು ಸಿಗುತ್ತವೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಮುಗಿಯುವುದು. ಹೊಸ ಕೆಲಸಕ್ಕೆ ಕೈ ಹಾಕಬಹುದು. ನಿಮ್ಮ ಸಂತೋಷ ಹೆಚ್ಚಾಗುವುದು. ಕೆಲವು ಮುಖ್ಯ ಸಮಸ್ಗೆ ಪರಿಹಾರ ಕಂಡುಕೊಳ್ಳುವಿರಿ.

ಕುಂಭ ರಾಶಿ (Aquarius):

ಚಿಂತೆ ಬಗೆಹರಿಯುವುದು. ಹೆತ್ತವರೊಂದಿಗೆ ದೇವಸ್ಥಾನಕ್ಕೆ ಹೋಗುವಿರಿ. ನಿಮ್ಮ ಕೆಲಸದಿಂದ ತಂದೆ ತಾಯಿ ಸಂತೋಷ ಪಡುವರು. ಕಚೇರಿ ಕೆಲಸಗಳಲ್ಲಿಯೂ ಪ್ರಶಂಸೆ ಸಿಗುವುದು.

ಮೀನ ರಾಶಿ (Pisces):

ನಿಮಗೆ ಉತ್ತಮ ದಿನವಾಗಿರಲಿದೆ. ಶುರು ಮಾಡಬೇಕೆಂದಿರುವ ವ್ಯವಹಾರಕ್ಕೆ ಸಹೋದರನ ಬೆಂಬಲ ಸಿಗುವುದು. ಕುಟುಂಬದ ಬೆಂಬಲದೊಂದಿಗೆ ನಿಮ್ಮ ಕನಸುಗಳನ್ನು ನನಸಾಗಿಸಲು ಶ್ರಮ ವಹಿಸುವಿರಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+