Daily Horoscope Aug 31: ಎರಡು ರಾಶಿಯವರಿಗೆ ಈ ದಿನ ತುಂಭಾ ಶುಭ, ಮೂರು ರಾಶಿಯವರಿಗೆ ಸಿಗುವುದು ಅಶುಭ ಫಲ!

Daily Horoscope Aug 31: ಆಗಸ್ಟ್‌ 31ರ ಸೋಮವಾರ ಕೃಷ್ಣ ಪಕ್ಷ ತೃಥಿಯಾ ತಿಥಿ. ಬೆಳಿಗ್ಗೆ 8.51ರವೆರೆಗೆ ಈ ತಿಥಿ ಇರುವುದು. ನಂತರ ಕೃಷ್ಣ ಪಕ್ಷ ಚತುರ್ಥಿ ತಿಥಿ ಆರಂಭವಾಗುವುದು. ರೇವತಿ ನಕ್ಷತ್ರ ಇರುವುದು. ಗಂಡ ಯೋಗವಿದ್ದು ಕೆಲವು ರಾಶಿಯವರಿಗೆ ಅದೃಷ್ಟಶಾಲಿಯಾಗಿರುವುದು. ದ್ವಾದಶ ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ನೋಡೋಣ.

ಮೇಷ ರಾಶಿ (Aries)

ಈ ದಿನ ನಿಮಗೆ ಪ್ರಯೋಜನಕಾರಿಯಾಗಿರುವುದು. ಕೆಲಸದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗುವುದು. ಹೊಸ ಪ್ರಯತ್ನಗಳಲ್ಲಿ ಯಶಸ್ಸು ಸಿಗುವುದು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಕೆಲಸ ಮಾಡುವ ಮೂಲಕ ವಿರೋಧಿಗಳನ್ನು ಸೋಲಿಸುವಿರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವರು.

Daily horoscope

ವೃಷಭ ರಾಶಿ (Taurus)

ವ್ಯವಹಾರ ಲಾಭ ಎರಡುಪಟ್ಟರಷ್ಟಾಗುವುದು. ಆದರೂ ಇವತ್ತು ಹಣದ ವಹಿವಾಟು ನಡೆಸದಿರುವುದು ಒಳ್ಳೆಯದು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಬೇಡಿ. ಅನಗತ್ಯ ಸಲಹೆ ನೀಡಲು ಹೋಗಬೇಡಿ.

ಮಿಥುನ ರಾಶಿ (Gemini)

ಸಹೋದ್ಯೋಗಿಗಳೊಂದಿಗೆ ಒಳ್ಳೆಯ ಸಂಬಂಧವನ್ನು ಕಾಯ್ದುಕೊಳ್ಳಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದು. ನಿಮ್ಮ ಸಾಮರ್ಥ್ಯಗಳ ಮೇಲೆ ನಂಬಿಕೆ ಇರಿಸಿ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು.

ಕರ್ಕಾಟಕ ರಾಶಿ (Cancer)

ನಿಮ್ಮ ಪಾಲಿನ ಅದ್ಭುತ ದಿನವಾಗಿರಲಿದೆ. ಕೆಲಸದ ಜವಾಬ್ದಾರಿ ಹೆಚ್ಚಾಗುವುದು. ಸಹೋದ್ಯೋಗಿಯ ಬೆಂಬಲದಿಂದ ಎಲ್ಲಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವಿರಿ. ಮನೆಗೆ ಅನಿರೀಕ್ಷಿತವಾಗಿ ಅತಿಥಿ ಬರಬಹುದು.

ಸಿಂಹ ರಾಶಿ (Leo)

ನಿಮ್ಮ ಮನಸ್ಸಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ದಿನ. ಮಾನಸಿಕ ಒತ್ತಡ, ಕಿರಿಕಿರಿ ಕಡಿಮೆಯಾಗುವುದು. ಸಂತೋಷ ಹೆಚ್ಚುವುದು. ಸಂಗಾತಿಯಿಂದ ಅಚ್ಚರಿಯ ಉಡುಗೊರೆ ಸಿಗುವುದು. ಕೆಲಸದಲ್ಲಿ ಯಶಸ್ಸು ಸಿಗುವುದು.

ಕನ್ಯಾ ರಾಶಿ (Virgo)

ಇಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಇಂದು ತೆಗೆದುಕೊಳ್ಳಿಉವ ನಿರ್ಧಾರ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು. ನಿಮಗೆ ತುಂಬಾ ಹತ್ತಿರದ ವ್ಯಕ್ತಿಯಿಂದ ಆರ್ಥಿಕ ಲಾಭವಾಗುವುದು.

ತುಲಾ ರಾಶಿ (Libra)

ಉತ್ಸಾಹದಿಂದ ತುಂಬಿದ ದಿನವಾಗಿರುವುದು. ವ್ಯವಹಾರ ಚಟುವಟಿಕೆಗಳು ಉತ್ತಮವಾಗಿ ನಡೆಯುವುದು. ಸಾಮಾನ್ಯಕ್ಕಿಂತ ಹೆಚ್ಚಿನ ಹಣವನ್ನು ಗಳಿಸುವಿರಿ. ಕುಟುಂಬದ ಸಮಸ್ಯೆಗಳು ಬಗೆಹರಿಯುವುದು. ಮನೆಯಲ್ಲಿ ಆಹ್ಲಾದಕರ ವಾತಾವರಣ ಇರುವುದು. ಮಕ್ಕಳೊಂದಿಗೆ ಶಾಪಿಂಗ್‌ಗೆ ಹೋಗುವಿರಿ.

ವೃಶ್ಚಿಕ ರಾಶಿ (Scorpio)

ನೀವು ಕುಟುಂಬಕ್ಕೆ ಸಂಬಂಧಿಸಿದಂತೆ ನೀವು ಇವತ್ತು ತೆಗೆದುಕೊಳ್ಳುವ ನಿರ್ಧಾರ ಎಲ್ಲರ ಸಂತೋಷಕ್ಕೆ ಕಾರಣವಾಗುವುದು. ವಹಿಸಿರುವ ಕೆಲಸವನ್ನು ನಿರ್ದಿಷ್ಟ ಸಮಯಕ್ಕೆ ಪೂರೈಸುವಿರಿ. ಕ್ರೀಡಾಪಟುಗಳಿಗೆ ಈ ದಿನ ಹೆಚ್ಚು ಪ್ರಾಮುಖ್ಯವಾಗಿರುವುದು. ಅಡೆತಡೆಗಳಿಲ್ಲದೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು.

ಧನು ರಾಶಿ (Sagittarius)

ವ್ಯವಹಾರದಲ್ಲಿ ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸುವಿರಿ. ಕೆಲಸವನ್ನು ಪೂರ್ಣಗೊಳಿಸಲು ಸಂಗಾತಿಯ ಸಹಾಯ ಪಡೆಯಬೇಕಾಗಬಹುದು. ಕೆಲಸದ ಹೊರೆ ಹೆಚ್ಚಾಗಿ ದೈಹಿಕ ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು. ನಿಮ್ಮ ಶ್ರಮಕ್ಕೆ ಸಕಾರಾತ್ಮಕ ಫಲ ಸಿಗುವುದು.

ಮಕರ ರಾಶಿ (Capricorn)

ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಕೆಲಸದಲ್ಲಿ ಯಶಸ್ಸಿ ಸಿಗಬೇಕಾದರೆ ಸ್ವಲಪ ಹೆಚ್ಚು ಶ್ರಮವಹಿಸಬೇಕಾಗುವುದು. ಹೆಚ್ಚುವರಿ ಕೆಲಸದ ಹೊರೆಯನ್ನು ತಪ್ಪಿಸಿ. ಮೊದಲೇ ಯೋಜಿಸಿರುವ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋದರೆ ಯಶಸ್ಸು ಸಿಗುವುದು.

ಕುಂಭ ರಾಶಿ (Aquarius)

ವ್ಯವಹಾರವನ್ನು ವಿಸ್ತರಣೆಗೆ ಕೈ ಹಾಕುವ ಸಾಧ್ಯತೆ ಇದೆ. ಮಕ್ಕಳ ಸಾಧನೆ ಸಂತೋಷ ತರುವುದು. ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದು.

ಮೀನ ರಾಶಿ (Pisces)

ವಿವಾಹಿತರಿಗೆ ಈ ದಿನ ಹೆಚ್ಚು ಅನುಕೂಲಕರವಾಗಿರುವುದು. ಕೆಲಸ ಬದಲಿಸುವ ಬಗ್ಗೆ ಯೋಚನೆ ಮಾಡುವಿರಿ. ವೃತ್ತಿಪರ ವಿಧಾನವು ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದು. ಅತ್ತೆ-ಮಾವರಿಂದ ಒಳ್ಳೆಯ ಸುದ್ದಿ ಸಿಗುವುದು. ಇದು ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗುವುದು. ಆರೋಗ್ಯ ಉತ್ತಮವಾಗಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+