Daily Horoscope Aug 29: ಸುಕರ್ಮ, ಧೃತಿ ಯೋಗದಿಂದ ನಾಲ್ಕು ರಾಶಿಯವರಿಗೆ ಅದೃಷ್ಟ, ಉನ್ನತ ಸ್ಥಾನಮಾನ - ಪ್ರತಿಷ್ಠೆ ಹೆಚ್ಚು

Daily Horoscope Aug 29: ಇಂದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಪ್ರತಿಪದ ತಿಥಿ. ಇದು ಬೆಳಿಗ್ಗೆ 09:57 ರವರೆಗೆ ಇರುತ್ತದೆ. ನಂತರ ದ್ವಿತೀಯ ತಿಥಿ ಪ್ರಾರಂಭ. ಪೂರ್ವ ಭಾದ್ರಪದ ನಕ್ಷತ್ರವು ದಿನವಿಡೀ ಪರಿಣಾಮಕಾರಿಯಾಗಿರುವುದು. ಚಂದ್ರನು ರಾತ್ರಿ 09:38 ರವರೆಗೆ ಕುಂಭ ರಾಶಿಯಲ್ಲಿ ಇದ್ದು ನಂತರ ಮೀನ ರಾಶಿಗೆ ಪ್ರವೇಶಿಸುತ್ತಾನೆ. ರಾತ್ರಿ 09:38 ರವರೆಗೆ, ಚಂದ್ರ-ರಾಹು ಗ್ರಹಣ ದೋಷವಿರುವುದು. ನಂತರ ಚಂದ್ರ-ಶನಿಯ ವಿಷ ದೋಷವಿರುತ್ತದೆ. ಸುಕರ್ಮ ಯೋಗ ಮತ್ತು ಧೃತಿ ಯೋಗದ ಶುಭ ಪ್ರಭಾವದ ಜೊತೆಗೆ, ಕೆಲವು ರಾಶಿಯವರಿಗೆ ದೊಡ್ಡ ಮಟ್ಟದ ಲಾಭವಾಗುವುದು.

ಮೇಷ ರಾಶಿ (Aries)

ಸುಕರ್ಮ ಮತ್ತು ಧೃತಿ ಯೋಗದ ಪರಿಣಾಮವಾಗಿ ಹೊಸ ಅವಕಾಶಗಳು ಸಿಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಇಡೀ ದಿನ ಕೆಲಸದಲ್ಲಿ ಬ್ಯುಸಿಯಾಗಿ ಇರುವಿರಿ. ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವುದನ್ನು ಮರೆಯಬೇಡಿ. ಸಂಗಾತಿಯೊಂದಿಗಿನ ಭಾವನಾತ್ಮಕ ಬಂಧ ಗಾಢವಾಗುವುದು.

Daily Horoscope Aug 29

ವೃಷಭ ರಾಶಿ (Taurus)

ವ್ಯಾಪಾರಿಗಳಿಗೆ ದಿನ ಅನುಕೂಲಕರವಾಗಿರುವುದು. ದೊಡ್ಡ ಬ್ಯುಸಿನೆಸ್‌ ಡೀಲ್‌ ಸಿಗಬಹುದು. ಉದ್ಯೋಗಿಗಳು ತಮ್ಮ ತಮ್ಮ ಕೆಲಸಕ್ಕಾಗಿ ಮೆಚ್ಚುಗೆ ಪಡೆಯುವರು. ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ವಿವಾಹಿತರು ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವರು.

ಮಿಥುನ ರಾಶಿ (Gemini)

ಹೊಸ ಕೆಲಸ ಆರಂಭಿಸುವ ಸಾಧ್ಯತೆ ಇದೆ. ಸುಕರ್ಮ ಮತ್ತು ಧೃತಿ ಯೋಗವು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅಸಾಧಾರಣ ಯಶಸ್ಸನ್ನು ಕೊಡುವುದು. ಕೆಲಸದ ಹೊರೆ ಹೆಚ್ಚಾಗಿ ಮಾನಸಿಕ ಒತ್ತಡ ಉಂಟಾಗಬಹುದು. ಆದರೂ ಮೇಲಧಿಕಾರಿಗಳು ನಿಮ್ಮ ಕೆಲಸದ ವೈಖರಿಯನ್ನು ಮೆಚ್ಚುವರು. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಪ್ರಣಯ ಮೇಲುಗೈ ಸಾಧಿಸುವುದು.

ಕಟಕ ರಾಶಿ (Cancer)

ಗ್ರಹಣ ಮತ್ತು ವಿಷ ದೋಷದ ಪರಿಣಾಮ ನಿಮ್ಮ ಮೇಲಾಗುವುದು. ಕೆಲಸ ಕಾರ್ಯಗಳಲ್ಲಿ ಅಡೆತಡೆ ಉಂಟಾಗಬಹುದು. ಆದಾಯದ ಜೊತೆಗೆ ಖರ್ಚುಗಳು ಕೂಡಾ ಹೆಚ್ಚಾಗುವುದು. ಕೆಲಸದ ಜಾಗದಲ್ಲಿ ನಿಮ್ಮ ವಿರೋಧಿಗಳ ತಂತ್ರಗಳ ಬಗ್ಗೆ ಎಚ್ಚರದಿಂದ ಇರಿ. ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿ.

ಸಿಂಹ ರಾಶಿ (Leo)

ವ್ಯವಹಾರದಲ್ಲಿ ಕುಟುಂಬದಿಂದ ನಿಮಗೆ ಸಂಪೂರ್ಣ ಬೆಂಬಲ ಸಿಗುವುದು. ಹೊಸ ಹೂಡಿಕೆ ಮಾಡುವಾಗ ಅಥವಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರಿಯಾಗಿ ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳಿ. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುವುದು.

ಕನ್ಯಾರಾಶಿ (Virgo)

ಸುಕರ್ಮ ಮತ್ತು ಧೃತಿ ಯೋಗದ ಪರಿಣಾಮವಾಗಿ ಕೆಲಸದಲ್ಲಿ ಯಶಸ್ಸು ಸಿಗುವುದು. ವ್ಯವಹಾರದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುವುದು. ವಿವಾಹಿತ ದಂಪತಿಗಳು ಹೊಸ ಅತಿಥಿಯ ಆಗಮನದ ಬಗ್ಗೆ ಶುಭ ಸುದ್ದಿಯನ್ನು ಪಡೆಯಬಹುದು. ಮನೆಯಲ್ಲಿ ಸಂತೋಷದ ವಾತಾವತಣ ಇರುವುದು.

ತುಲಾ ರಾಶಿ (Libra)

ನಿಮ್ಮ ಮಾತುಗಳ ಮೂಲಕವೇ ವ್ಯವಹಾರದಲ್ಲಿ ದೊಡ್ಡ ಲಾಭ ಗಳಿಸುವುದು ಸಾಧ್ಯವಾಗುವುದು. ಶುಭ ಸಮಯದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸಿ. ಸ್ನೇಹಿತರೊಂದಿಗಿನ ಮನಸ್ತಾಪ ಕೊನೆಯಾಗುವುದು. ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ನಿಮಗೆ ಅನುಕೂಲಕರ ಅವಕಾಶ ಸಿಗುವುದು.

ವೃಶ್ಚಿಕ ರಾಶಿ (Scorpio)

ಇದ್ದಕ್ಕಿದ್ದಂತೆ ವೆಚ್ಚಗಳು ಹೆಚ್ಚಾಗುವುದು. ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ನಿಮ್ಮ ವೃತ್ತಿಜೀವನಕ್ಕೆ ಸಂಬಂಧಿಸಿದ ಒತ್ತಡವನ್ನು ಎದುರಿಸುವಿರಿ. ಕುಟುಂಬ ಜೀವನದಲ್ಲಿ, ಅನುಭವಿ ಮತ್ತು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುವುದು.

ಧನು ರಾಶಿ (Sagittarius)

ಬುದ್ಧಿಶಕ್ತಿಯನ್ನು ಸರಿಯಾಗಿ ಉಪಯೋಗಿಸಿದರೆ ಕೆಲಸದಲ್ಲಿ ನಿಮ್ಮ ವಿರೋಧಿಗಳನ್ನು ಸೋಲಿಸಬಹುದು. ಕೆಲಸದಲ್ಲಿ ಹೊಸ ಉತ್ಸಾಹ ಇರುವುದು. ಜವಾಬ್ದಾರಿಗಳ ಜೊತೆಗೆ ಆರ್ಥಿಕ ಲಾಭಗಳಿಗೂ ಪ್ರಾಮುಖ್ಯತೆ ನೀಡಿ. ಸಂಬಂಧಗಳಲ್ಲಿ ಹಿಂದಿನ ನಕಾರಾತ್ಮಕ ಆಲೋಚನೆಗಳನ್ನು ತೆಗೆದುಹಾಕುವುದರಿಂದ ನೆಮ್ಮದಿ ಸಿಗುವುದು.

ಮಕರ ರಾಶಿ (Capricorn)

ಸುಕರ್ಮ ಮತ್ತು ಧೃತಿ ಯೋಗವು ನಿಮ್ಮ ವ್ಯವಹಾರದಲ್ಲಿ ಸ್ಥಿರತೆ ಮತ್ತು ಪ್ರಗತಿಯನ್ನು ತರುವುದು. ಬಂಡವಾಳ ಹೂಡಿಕೆ ಯೋಜನೆಗಳು ಫಲಪ್ರದವಾಗಿರುವುದು. ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸುವಿರಿ. ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹೊಸ ಅವಕಾಶ ಸಿಗಬಹುದು.

ಕುಂಭ ರಾಶಿ (Aquarius)

ಸರ್ಕಾರಿ ಒಪ್ಪಂದಗಳು ಮತ್ತು ವ್ಯಾಪಾರ ಪ್ರವಾಸಗಳು ಗಮನಾರ್ಹ ಆರ್ಥಿಕ ಲಾಭಗಳನ್ನು ತರುವ ಸಾಧ್ಯತೆಯಿದೆ. ಹೊಸ ಉದ್ಯಮಿಗಳಿಗೆ ಈ ದಿನ ಬಹಳ ಮುಖ್ಯವಾಗಿರುವುದು. ವಿನಯದಿಂದ ನಡೆದುಕೊಂಡರೆ ಲಾಭವಾಗುವುದು. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುವುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಕುಟುಂಬದ ಹಿರಿಯರ ಜೊತೆ ಚರ್ಚಿಸಿ.

ಮೀನ ರಾಶಿ (Pisces)

ಯಾರೊಂದಿಗೂ ವಾದಕ್ಕೆ ಹೋಗಬೇಡಿ. ಒಂದು ವೇಳೆ ವಾದ ಮಾಡಿದರೆ ಸೋಲು ನಿಮಗೇ ಆಗುವುದು. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಒತ್ತಡ ಇರುವುದು. ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+