Daily Horoscope Aug 21: ಈ ರಾಶಿಯವರಿಗೆ ಅದೃಷ್ಟ ತರುವ ದಿನ, ಲಕ್ಷ್ಮೀ ಕೃಪೆಯಿಂದ ಧನಲಾಭ: ಮಹಾಲಕ್ಷ್ಮೀ ಹಬ್ಬದ ದಿನವೇ ಧನಾಗಮನ
Daily Horoscope Aug 21: ಈ ದಿನ ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ ಮತ್ತು ಅಡಾಲ ಯೋಗ ಇರುವುದು. ಇಂದು ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನದಿಂದಾಗಿ, ಅದೃಷ್ಟ ನಕ್ಷತ್ರಗಳು ಕೆಲವು ರಾಶಿಯವರ ಮೇಲೆ ದಯೆ ತೋರುವುದು. ಕೆಲವು ರಾಶಿಯವರಿಗೆ ವ್ಯವಹಾರದಲ್ಲಿ ಲಾಭ ಮತ್ತು ಪ್ರಗತಿಗೆ ಅವಕಾಶಗಳಿರುವುದು. 12 ರಾಶಿಯವರ ನಿತ್ಯ ಭವಿಷ್ಯ ಹೇಗಿದೆ ನೋಡೋಣ.
ಮೇಷ ರಾಶಿ (Aries)
ಇಂದು ನಿಮ್ಮ ಪಾಲಿಗೆ ದಿನ ಅನುಕೂಲಕರವಾಗಿರುವುದು. ಇವತ್ತು ನೀವು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಿರುವುದು. ಇವತ್ತಿನ ದಿನ ಸೋಮಾರಿತನ ಕಾಡಬಹುದು. ವ್ಯವಹಾರ ಮಾಡುತ್ತಿದ್ದರೆ ಅದನ್ನು ವಿಸ್ತರಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಿ.

ವೃಷಭ ರಾಶಿ (Taurus)
ವ್ಯವಹಾರದಲ್ಲಿ ಲಾಭವಾಗುವುದು. ಅನಿರೀಕ್ಷಿತ ಮೂಲಗಳಿಂದ ಹಣ ಹರಿದು ಬರುವುದು. ಎಲ್ಲಾ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಆರೋಗ್ಯ ಉತ್ತಮವಾಗಿರುವುದು.
ಮಿಥುನ ರಾಶಿ (Gemini)
ನಿಗದಿತ ಕೆಲಸಗಳು ಸಮಯಕ್ಕೆ ಸರಿಯಾಗಿ ಮುಗಿಯುವುದು. ಕಚೇರಿಯಲ್ಲಿಯೂ ಸಂತೋಷದ ವಾತಾವರಣ ಇರುವುದು. ಬೇರೆಯವರು ನಿಮ್ಮ ಬಗ್ಗೆ ಕೊಡುವ ಅಭಿಪ್ರಾಯದಿಂದ ಸ್ವಲ್ಪ ಬೇಸರ ಉಂಟಾಗಬಹುದು. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ತಾಳ್ಮೆಯಿಂದ ಇರಿ.
ಕರ್ಕಾಟಕ ರಾಶಿ (Cancer)
ಇಂದು ಉತ್ಸಾಹದಿಂದ ಕೂಡಿದ ದಿನವಾಗಿರುವುದು. ವದಂತಿಗಳಿಗೆ ಕಿವಿ ಕೊಡದೆ ನಿಮ್ಮ ಕೆಲಸದಲ್ಲಿ ಮುಂದುವರೆಯಿರಿ. ಕೆಲವರು ಬೇಕೂಂತಲೇ ನಿಮ್ಮೊಂದಿಗೆ ಜಗಳಕ್ಕೆ ಬರಬಹುದು. ವ್ಯವಹಾರದಲ್ಲಿ ಬಹಳ ಎಚ್ಚರಿಕೆಯಿಂದ ಮುಂದುವರೆಯಿರಿ.
ಸಿಂಹ ರಾಶಿ (Leo)
ಹಿಂದಿನ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಕೆಲಸದಲ್ಲಿ ಪ್ರಗತಿಯಾಗುವುದು. ಹೊಸ ಜವಾಬ್ದಾರಿಗಳು ಸಿಗಬಹುದು. ನಿಮ್ಮ ಸಾಮರ್ಥಕ್ಕೆ ತಕ್ಕಂತೆ ಹೊಸ ಜವಾಬ್ದಾರಿ ಸಿಗಬಹುದು.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುವುದು. ಮಗುವಿನ ವೃತ್ತಿಜೀವನದಲ್ಲಿ ಎದುರಾಗುವ ಸಮಸ್ಯೆಗಳು ಬಗೆಹರಿಯುವುದು. ವಾದ ಜಗಳದ ಸಂದರ್ಭದಲ್ಲಿ ಕೋಪವನ್ನು ನಿಯಂತ್ರಿಸಿಕೊಳ್ಳಿ. ರಿಸ್ಕ್ ತೆಗೆದುಕೊಳ್ಳಬೇಡಿ. ಆತುರದ ನಿರ್ಧಾರ ಸಮಸ್ಯೆಗೆ ಕಾರಣವಾಗಬಹುದು.
ತುಲಾ ರಾಶಿ (Libra)
ಇಂದು ಸಂತೋಷದ ದಿನವಾಗಿರುವುದು. ಕೆಲಸವನ್ನು ಪೂರ್ಣಗೊಳಿಸುವಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗುವುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಸೂಕ್ತ ದಿನ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ಹೊಸ ಕೆಲಸಕ್ಕೆ ಕೈ ಹಾಕಬಹುದು.
ವೃಶ್ಚಿಕ ರಾಶಿ (Scorpio)
ರಾಜಕೀಯದಲ್ಲಿ ತೊಡಗಿರುವವರಿಗೆ ಒಳ್ಳೆಯ ದಿನ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗಬಹುದು. ನಿಮ್ಮ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತವಾಗುವುದು. ವಿದ್ಯಾರ್ಥಿಗಳು ಎಚ್ಚರದಿಂದ ಇರುವುದು ಒಳ್ಳೆಯದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಧನು ರಾಶಿ (Sagitarius)
ಇಂದು ದಿನ ಅನುಕೂಲಕರವಾಗಿರುವುದು. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಒಳ್ಳೆಯದು. ಸಣ್ಣ ಪುಟ್ಟ ವಿಚಾರಕ್ಕೆ ಸಂಗಾತಿಯೊಂದಿಗೆ ಜಗಳವಾಡುವಿರಿ. ಅವಿವಾಹಿತರಿಗೆ ಮದುವೆ ಮಾತುಕತೆ ನಡೆಯಬಹುದು.
ಮಕರ ರಾಶಿ (Capricorn)
ಕುಟುಂಬದ ಸದಸ್ಯರಿಂದ ಉತ್ತಮ ಬೆಂಬಲ ಸಿಗುವುದು. ಮನೆಗೆ ಅತಿಥಿಗಳು ಬರಬಹುದು. ಮನೆಯ ವಾತಾವರಣ ಉತ್ತಮವಾಗಿರುವುದು. ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲ ಸಿಗುವುದು.
ಕುಂಭ ರಾಶಿ (Aquarius)
ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿರುವ ಕೆಲಸ ಇಂದು ಪೂರ್ಣವಾಗುವುದು. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುವುದು. ತಾಯಿಯ ಬೆಂಬಲ ಇರುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು.
ಮೀನ ರಾಶಿ (Pisces)
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದು. ಉದ್ಯೋಗ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆಯಿದೆ. ಕೆಲಸದ ಮೇಲೆ ಗಮನಹರಿಸುವಿರಿ. ವ್ಯವಹಾರಗಳಲ್ಲಿ ಗಮನಾರ್ಹ ಅಭಿವೃದ್ದಿಯಾಗುವುದು.


Click it and Unblock the Notifications
