Daily Horoscope Aug 13: ಈ ರಾಶಿಯವರಿಗೆ ಇಂದು ಭರ್ಜರಿ ಧನಲಾಭ, ಉದ್ಯೋಗದಲ್ಲಿ ಪ್ರಗತಿ, ಹೆಚ್ಚುವುದು ನೆಮ್ಮದಿ
Daily Horoscope Aug 13: ಇಂದು ಶುಕ್ಲ ಪಕ್ಷ ಪ್ರತಿಪದ ತಿಥಿ. ಈ ತಿಥಿ ರಾತ್ರಿ 8.41 ರವರೆಗೆ ಇರುವುದು. ಈ ದಿನದ ನಕ್ಷತ್ರ ಮಘ. ಇದಕ್ಕನುಗುಣವಾಗಿ ೧೨ ರಾಶಿಯವರ ಅಂದರೆ ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ರಾಶಿ ಭವಿಷ್ಯ ಹೇಗಿದೆ ಎಂದು ನೋಡುವುದಾದರೆ..
ಮೇಷ ರಾಶಿ (Aries)
ವ್ಯವಹಾರದಲ್ಲಿ ಆರ್ಥಿಕ ಲಾಭ ಉತ್ತಮವಾಗಿರುವುದು. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ಕುಟುಂಬ ಸದಸ್ಯರ ಬೆಂಬಲ ಇರುವುದು.
ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯ ವಾತಾವರಣವಿರುವುದು. ಧೈರ್ಯ ಮತ್ತು ತಾಳ್ಮೆ ಹೆಚ್ಚಾಗುವುದು. ಮಗನ ಯಶಸ್ಸು ಸಂತೋಷ ತರುವುದು. ವೈವಾಹಿಕ ಜೀವನವು ಸಾಮರಸ್ಯದಿಂದ ತುಂಬಿರುವುದು.

ಮಿಥುನ ರಾಶಿ (Gemini)
ಮನಸ್ಸಿನ ಶಾಂತಿ ಹೆಚ್ಚುವುದು. ಕುಟುಂಬದೊಂದಿಗೆ ದೇವಸ್ಥಾನಕ್ಕೆ ಹೋಗುವಿರಿ. ವಿವಾಹಿತರಿಗೆ ಈ ದಿನ ತುಂಬಾ ಶುಭ. ಕೆಲಸ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮುಗಿಸುವಿರಿ. ಕೆಲಸದಲ್ಲಿ ಪ್ರಗತಿಗೆ ಉತ್ತಮ ಅವಕಾಶ ಸಿಗುವುದು.
ಕರ್ಕಾಟಕ ರಾಶಿ (Cancer)
ಇಂದು ನಿಮಗೆ ಅನುಕೂಲಕರ ದಿನವಾಗಿರುವುದು. ಅಂದುಕೊಂಡ ಕೆಲಸವನ್ನು ಸಾಧಿಸುವಿರಿ. ವೈವಾಹಿಕ ಜೀವನವು ಸಿಹಿಯಾಗಿರುವುದು. ಕೆಲಸದ ಜೊತೆಗೆ, ಆರೋಗ್ಯವನ್ನು ನೋಡಿಕೊಳ್ಳಿ. ಕೆಲವು ಉತ್ತಮ ಅವಕಾಶಗಳು ಸಿಗಬಹುದು.
ಸಿಂಹ ರಾಶಿ (Leo)
ಇಂದು ಸಿಹಿ ಸುದ್ದಿಯೊಂದಿಗೆ ದಿನದ ಆರಂಭವಾಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಪ್ರಮುಖ ಕೆಲಸಕ್ಕೆ ಕೈ ಹಾಕುವಾಗ ಸಂಗಾತಿಯ ಸಲಹೆಯನ್ನು ಪಡೆಯಿರಿ. ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ಆತ್ಮವಿಶ್ವಾಸ ಹೆಚ್ಚಾಗುವುದು.
ಕನ್ಯಾ ರಾಶಿ (Virgo)
ಬೇಡದ ಕೆಲಸಗಳಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಗಮನ ಕೇಂದ್ರೀಕರಿಸಿ. ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನವಾಗಿರುವುದು. ಸ್ವಲ್ಪ ಶ್ರಮವಹಿಸಿದರೂ ಉತ್ತಮ ಫಲಿತಾಂಶಗಳು ಸಿಗುವುದು.
ತುಲಾ ರಾಶಿ (Libra)
ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು ಸಿಗುವುದು. ವೈವಾಹಿಕ ಜೀವನದ ಸಂತೋಷ ಮತ್ತು ಸಾಮರಸ್ಯ ಹೆಚ್ಚಾಗುವುದು. ಕುಟುಂಬದಲ್ಲಿ ಸಮೃದ್ಧಿಯಾಗುವುದು.
ವೃಶ್ಚಿಕ ರಾಶಿ (Scorpio)
ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಸಂತೋಷ ಹೆಚ್ಚಾಗುವುದು. ಹೊಸ ವಾಹನ ಖರೀದಿಸುವ ಯೋಚನೆ ಮಾಡಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.
ಧನು ರಾಶಿ (Sagitarius)
ಕೆಲಸದಲ್ಲಿ ಯಶಸ್ಸು ಸಿಗುವ ಸಾಧ್ಯತೆಯಿದೆ. ಅತಿಯಾಗಿ ಖರ್ಚು ಮಾಡಬೇಡಿ. ಹಣದ ವಿಚಾರದಲ್ಲಿ ಎಚ್ಚ್ರಿಕೆ ಇರಲಿ. ಖರ್ಚನ್ನು ತಪ್ಪಿಸಿ; ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಕುಟುಂಬದೊಳಗಿನ ಶುಭ ಘಟನೆಗಳು ನಿಮ್ಮ ಕಾರ್ಯನಿರತತೆಯನ್ನು ಹೆಚ್ಚಿಸಬಹುದು.
ಮಕರ ರಾಶಿ (Capricorn)
ಉನ್ನತ ಶಿಕ್ಷಣ ಮಾಡಬೇಕು ಅಂದುಕೊಂಡಿರುವ ವಿದ್ಯಾರ್ಥಿಗಳಿಗೆ ಶುಭ ದಿನ. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಮನೆಯಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗುವುದು. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರುವುದು. ಹೊಸ ಜನರನ್ನು ಭೇಟಿಯಾಗುವಿರಿ.
ಕುಂಭ ರಾಶಿ (Aquarius)
ಇಂದು ನಿಮಗೆ ಅನುಕೂಲಕರ ದಿನವಾಗಿರುವುದು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು. ಅತಿಥಿಗಳು ಅನಿರೀಕ್ಷಿತವಾಗಿ ಮನೆಗೆ ಬರಬಹುದು.ಇಂದು ಕೈಗೆತ್ತಿಕೊಳ್ಳುವ ಕೆಲಸದಲ್ಲಿ ಯಶಸ್ಸು ಸಿಗುವುದು. ಅತಿಯಾದ ಕೆಲಸದ ಹೊರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
ಮೀನ ರಾಶಿ (Pisces)
ಹೊಸ ಉದ್ಯೋಗಾವಕಾಶಗಳು ಸಿಗುವುದು. ಉದ್ಯೋಗದಲ್ಲಿರುವವರಿಗೆ ಉತ್ತಮ ಆಫರ್ ಬರುವುದು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ವ್ಯವಹಾರದಲ್ಲಿ ಲಾಭವಾಗುವುದು.


Click it and Unblock the Notifications
