Daily Horoscope Aug 11: ಮೂರು ರಾಶಿಯವರ ಅದೃಷ್ಟ ಖುಲಾಯಿಸುವ ದಿನ, ಅನಿರೀಕ್ಷಿತ ಧನಲಾಭ, 12 ರಾಶಿಗಳ ದಿನ ಭವಿಷ್ಯ

Daily Horoscope Aug 11: ಆಗಸ್ಟ್ 11ರ ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದಿರುವ ದಿನ ಭವಿಷ್ಯವಾಗಿದೆ. ಆಗಸ್ಟ್ 12ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿದೆ ಎನ್ನುವುದನ್ನು ನೋಡೋಣ.

ಮೇಷ ರಾಶಿ (Aries)

ಇಂದು ಹೊಸ ಉತ್ಸಾಹ ತುಂಬಿದ ದಿನವಾಗಿರುತ್ತದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುವುದು. ಬಾಕಿ ಇರುವ ಕೆಲಸಗಳು ಪೂರ್ಣವಾಗುವುದು. ದೇವಸ್ಥಾನಕ್ಕೆ ಭೇಟಿ ನೀಡುವಿರಿ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿರುವುದು.

Daily Horoscope Aug 11

ವೃಷಭ ರಾಶಿ (Taurus)

ಇಂದು ವಿಶೇಷ ದಿನವಾಗಿರುತ್ತದೆ. ಕೆಲವು ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.

ಮಿಥುನ ರಾಶಿ (Gemini)

ಇಂದು ಒಳ್ಳೆಯ ದಿನವಾಗಿರಲಿದೆ. ಕೆಲಸದಲ್ಲಿ ನಿರತರಾಗಿರುವಿರಿ. ಅನಗತ್ಯ ಕೆಲಸಗಳಿಂದ ದೂರವಿರಿ. ಹಿರಿಯ ಕುಟುಂಬ ಸದಸ್ಯರ ಅನುಭವ ಮತ್ತು ಬೆಂಬಲ ಸಹಾಯಕ್ಕೆ ಬರುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು.

ಕರ್ಕಾಟಕ ರಾಶಿ (Cancer)

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವಿರಿ. ವ್ಯವಹಾರ ಮತ್ತು ಕುಟುಂಬದ ನಡುವೆ ಸಮತೋಲನ ಇರುವುದು. ಯಾವುದೇ ಕೆಲಸ ಆರಂಭಿಸಿದರೂ ಅದರಲ್ಲಿ ಪ್ರಯೋಜನವಾಗುವುದು. ತುಂಬಾ ದಿನಗಳಿಂದ ಬಾಕಿ ಇರುವ ಕೆಲಸ ಪೂರ್ಣಗೊಳ್ಳುವುದು.

ಸಿಂಹ ರಾಶಿ (Leo)

ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ವ್ಯವಹಾರದಲ್ಲಿ ತಾಳ್ಮೆ ಮುಖ್ಯವಾಗಿರುವುದು. ನಿಮ್ಮ ಸ್ಥಿತಿ ಶೀಘ್ರದಲ್ಲೇ ಸುಧಾರಿಸುವುದು. ಬೇರೆಯವರ ವಿಚಾರದಲ್ಲಿ ಮೂಗು ತೂರಿಸುವುದಕ್ಕೆ ಹೋಗಬೇಡಿ. ನಿಮ್ಮ ಕೆಲಸದ ಮೇಲೆ ಗಮನ ಇರಲಿ.

ಕನ್ಯಾ ರಾಶಿ (Virgo)

ವ್ಯಾಪಾರದಲ್ಲಿ ಸ್ಪಷ್ಟವಾದ ತಂತ್ರವನ್ನು ಅಳವಡಿಸಿಕೊಳ್ಳಿ. ಎಲ್ಲಾ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವಿರಿ. ಗೊಂದಲ, ಮಾನಸಿಕ ಒತ್ತಡ ನಿವಾರಣೆಯಾಗುವುದು. ಕೆಲವು ಮಾಡುವ ಕೆಲಸಗಳಿಂದ ಪ್ರಯೋಜನವಾಗುವುದು. ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು.

ತುಲಾ ರಾಶಿ (Libra)

ಇಂದು ನಿಮಗೆ ಅದ್ಭುತವಾದ ದಿನವಾಗಿರಲಿದೆ. ಕೆಲಸದ ನಿಮಿತ್ತ ಅನಿರೀಕ್ಷಿತ ಪ್ರವಾಸಕ್ಕೆ ತೆರಳಬೇಕಾಗಬಹುದು. ಸಹೋದ್ಯೋಗಿಗಳಿಂದ ಬೆಂಬಲ ಸಿಗುವುದು. ನಿಮ್ಮ ಕೆಲಸವು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ವೈವಾಹಿಕ ಜೀವನ ಸಂತೋಷದಿಂದ ಕೂಡಿರುವುದು.

ವೃಶ್ಚಿಕ ರಾಶಿ (Scorpio)

ಇಂದು ನಿಮ್ಮ ಪಾಲಿನ ಅದೃಷ್ಟದ ದಿನವಾಗಿರಲಿದೆ. ನಿಮ್ಮ ಪ್ರತಿಷ್ಠೆ ಹೆಚ್ಚುವುದು. ಮಕ್ಕಳ ಸಾಧನೆ ಸಂತೋಷ ತರುವುದು. ಹಿರಿಯರ ಆಶೀರ್ವಾದದಿಂದ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವಿರಿ.

ಧನು ರಾಶಿ (Sagitarius)

ಇಂದು ಸುವರ್ಣ ದಿನವಾಗಿರುವುದು. ಕೆಲವು ಸಮಯದಿಂದ ನಡೆಯುತ್ತಿರುವ ಕೌಟುಂಬಿಕ ವಿವಾದಗಳು ಬಗೆಹರಿಯುವುದು. ಮನೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗುವುದು. ವೈಯಕ್ತಿಕ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದು. ಈ ಹಿಂದೆ ಯೋಜಿಸಲಾದ ಕೆಲಸಗಳು ಇಂದು ಪೂರ್ಣಗೊಳ್ಳುವುದು. ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಪ್ರಯೋಜನಕಾರಿಯಾಗಿರಲಿದೆ.

ಮಕರ ರಾಶಿ (Capricorn)

ಸಂತೋಷದಿಂದ ತುಂಬಿದ ದಿನವಾಗಿರುವುದು.ಆರೋಗ್ಯ ಉತ್ತಮವಾಗಿರುವುದು. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಭವಿಷ್ಯದ ಬಗ್ಗೆ ಒಂದು ಸ್ಪಷ್ಟತೆ ಸಿಗುವುದು.

ಕುಂಭ ರಾಶಿ (Aquarius)

ಕುಟುಂಬ ಮತ್ತು ವೈಯಕ್ತಿಕ ಜೀವನಕ್ಕಾಗಿ ಸ್ವಲ್ಪ ಸಮಯ ಮೀಸಲಿಡುವುದರಿಂದ ಸಂಬಂಧಗಳಲ್ಲಿನ ಮಾಧುರ್ಯ ಹೆಚ್ಚಾಗುವುದು. ಕೆಲಸದಲ್ಲಿ ಕೆಲವು ಬದಲಾವಣೆಗಳಾಗುವುದು. ಆರ್ಥಿಕ ಸ್ಥಿತಿ ಬಲವಾಗಿರುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.

ಮೀನ ರಾಶಿ (Pisces)

ಇಂದು ಅನುಕೂಲಕರ ದಿನವಾಗಿರುವುದು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು. ವ್ಯವಹಾರವನ್ನು ವಿಸ್ತರಿಸಲು ಹೊಸ ಮಾರ್ಗಗಳನ್ನು ಪರಿಗಣಿಸಬಹುದು. ವ್ಯವಹಾರದಲ್ಲಿ ಲಾಭವಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+