Horoscope Today: ದಿನ ಭವಿಷ್ಯ ಮಾರ್ಚ್ 13- ಈ ರಾಶಿಗೆ ವಿಷ್ಣುವಿನ ಕೃಪೆಯಿಂದ ಜೀವನ ಕಲರ್‌ಫುಲ್

ಹೋಳಿಕಾ ದಹನ ಹಬ್ಬವನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ಈ ದಿನ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಿ ಸಕಾರಾತ್ಮಕ ಬದಲಾವಣೆಯನ್ನು ತರಲು ಒಂದು ಅವಕಾಶ. ಈ ವರ್ಷ ಮಾರ್ಚ್ 13ರಂದು ಹೋಳಿಕಾ ದಹನವನ್ನು ಮಾಡಲಾಗುತ್ತದೆ. ಈ ದಿನ ಕೆಲ ರಾಶಿಯವರಿಗೆ ವೃತ್ತಿ, ಹಣ ಮತ್ತು ವ್ಯವಹಾರದಲ್ಲಿ ಭಾರಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಾಗಾದರೆ ಮಾರ್ಚ್ 13ರಂದು ಗುರುವಾರ 12 ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಮಾರ್ಚ್ 13 ತುಂಬಾ ಶುಭ ದಿನವಾಗಿದೆ. ಉದ್ಯೋಗದಲ್ಲಿರುವವರಿಗೆ ದೊಡ್ಡ ಬಡ್ತಿ ಸಿಗಬಹುದು. ವ್ಯಾಪಾರ ಮಾಡುವವರಿಗೆ ಹೆಚ್ಚೆಚ್ಚು ಆರ್ಡರ್‌ಗಳು ಸಿಗುವ ಸಾಧ್ಯತೆ ಇದೆ. ಇದಲ್ಲದೆ ಆದಾಯ ತಂದುಕೊಡುವ ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ ಮತ್ತು ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.

Astrology dina bhavishya march 13 12 zodiac signs today prediction

ಈ ದಿನ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುವುದು. ಆತ್ಮವಿಶ್ವಾಸದ ಕೊರತೆ ಇರುವುದಿಲ್ಲ. ಉದ್ಯೋಗ ಉತ್ತಮವಾಗಿರುತ್ತದೆ. ಶುಭ ಅಥವಾ ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ಆನಂದಿಸುವಿರಿ. ಹೊಸ ವ್ಯವಹಾರವನ್ನು ಪ್ರಾರಂಭಿಸುವಿರಿ.

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಹೋಳಿಕಾ ದಹನದ ದಿನ ತುಂಬಾ ಮಂಗಳಕರವಾಗಿರುತ್ತದೆ. ನಿಮ್ಮ ಹಣ ಎಲ್ಲೋ ಸಿಲುಕಿಕೊಂಡಿದ್ದರೆ, ಅದು ಹಿಂತಿರುಗುವ ಸಾಧ್ಯತೆಗಳಿವೆ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಬಹುದು. ಅವರ ಸಂಬಳವೂ ಅಧಿಕವಾಗಲಿದೆ. ಕುಟುಂಬ ಜೀವನವೂ ಆಹ್ಲಾದಕರವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ಮಿಥುನ ರಾಶಿ

ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೋಳಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವಿರಿ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವಿರಿ. ಹಸುವಿಗೆ ಹಸಿರು ಮೇವು ತಿನ್ನಿಸಿ ಮತ್ತು ವಿಷ್ಣುವಿನ ಮಂತ್ರವನ್ನು ಪಠಿಸಿ.

ಕರ್ಕಾಟಕ ರಾಶಿ

ವ್ಯವಹಾರದಲ್ಲಿ ಅನಗತ್ಯ ಓಡಾಟ ಇರುತ್ತದೆ. ನಿಮ್ಮ ಮಗುವಿನ ಜೊತೆಗೆ ನೀವು ಹೋಳಿ ಹಬ್ಬವನ್ನು ಆಚರಿಸಲು ಸಂತೋಷವನ್ನು ಪಡುವಿರಿ. ಜನರೊಂದಿಗೆ ಮಾತನಾಡುವಾಗ ತಾಳ್ಮೆಯಿಂದಿರಿ. ನಿಮ್ಮ ಸ್ನೇಹಿತರ ಬಳಗ ಹೆಚ್ಚಾಗಲಿದೆ. ವಿಷ್ಣುವಿನ ಮಂತ್ರವನ್ನು ಪಠಿಸಿ ಮತ್ತು ಬಡವರಿಗೆ ದಾನ ಮಾಡಿ.

ಸಿಂಹ ರಾಶಿ

ಈ ಸಮಯದಲ್ಲಿ ಸಿಂಹ ರಾಶಿಯ ಜನರು ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ವಿದೇಶ ಪ್ರವಾಸ ಮಾಡಲು ಯೋಜಿಸುತ್ತಿರುವವರಿಗೆ ಈ ಸಮಯ ಅನುಕೂಲಕರವಾಗಿರುತ್ತದೆ. ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗುವುದು. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಈ ರಾಶಿಯ ಜನರು ಈ ಸಮಯದಲ್ಲಿ ಹೊಸ ಕಾರು ಅಥವಾ ಆಸ್ತಿಯನ್ನು ಸಹ ಖರೀದಿಸಬಹುದು.

ಈ ದಿನ ಮಾಡಿದ ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಮಾತಿನ ಪ್ರಭಾವದಿಂದ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆ ಇರಬಹುದು. ಈ ದಿನ ಆಂತರಿಕ ತೃಪ್ತಿ ಇರುತ್ತದೆ.

ಕನ್ಯಾ ರಾಶಿ

ಈ ದಿನ ನೀವು ಹೋಳಿ ಹಬ್ಬದ ತಯಾರಿ ಮಾಡಿಕೊಳ್ಳುವಿರಿ. ಮಾತಿನಲ್ಲಿ ಮಾಧುರ್ಯ ಇರುತ್ತದೆ. ನಿಮ್ಮ ಸಂಬಂಧಿಕರ ಆಗಮನವಾಗುವುದು. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಅಧಿಕಾರಿಯೊಂದಿಗೆ ಸಾಮರಸ್ಯ ಇರುತ್ತದೆ.

ತುಲಾ ರಾಶಿ

ಬರವಣಿಗೆ ಮುಂತಾದ ಬೌದ್ಧಿಕ ಕೆಲಸಗಳಿಂದ ಆದಾಯ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಆತ್ಮೀಯತೆ ಇರುವುದು. ನಿಮ್ಮ ಸಂಗಾತಿಯಿಂದ ಕೆಲಸದಲ್ಲಿ ನಿಮಗೆ ಬೆಂಬಲ ಸಿಗುತ್ತದೆ. ವ್ಯವಹಾರದಲ್ಲಿ ಬದಲಾವಣೆಗಳ ಸಾಧ್ಯತೆ ಇದೆ. ಬೆಳಿಗ್ಗೆ ಅಗತ್ಯ ಇರುವವರಿಗೆ ಬಟ್ಟೆ ದಾನ ಮಾಡಿ, ಬಡವನಿಗೆ ಊಟ ಹಾಕಿ. ಇದರ ಫಲ ನಿಮ್ಮನ್ನು ಯಾವಾಗಲೂ ಕಾಯುತ್ತದೆ.

ವೃಶ್ಚಿಕ ರಾಶಿ

ಹೋಳಿಕಾ ದಹನದ ಈ ದಿನ ವೃಶ್ಚಿಕ ರಾಶಿಯವರಿಗೆ ಅದ್ಭುತವಾಗಿದೆ. ಅನಗತ್ಯವಾಗಿ ಓಡಾಡುವುದರಿಂದ ಮನಸ್ಸು ತೊಂದರೆಗೊಳಗಾಗಬಹುದು. ತಾಳ್ಮೆಯಿಂದ ಇರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಎಲ್ಲಾ ಸ್ನೇಹಿತರು ಸೇರುವ ಸಮಯ ಇದಾಗಿದೆ. ಈ ದಿನವನ್ನು ನೀವು ಆನಂದಿಸುವಿರಿ.

ಧನು ರಾಶಿ

ಧನು ರಾಶಿಯವರಿಗೆ ಹೊಸ ವ್ಯವಹಾರ ಪ್ರಾರಂಭಿಸಲು ಇದು ತುಂಬಾ ಒಳ್ಳೆಯ ಸಮಯ. ಷೇರು ಮಾರುಕಟ್ಟೆ ಅಥವಾ ಯಾವುದೇ ರೀತಿಯ ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಸಮಯ ಉತ್ತಮ ಲಾಭವನ್ನು ತರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಗಳಿವೆ.

ಮಕರ ರಾಶಿ

ಮಕರ ರಾಶಿಯವರಿಗೆ ವೃತ್ತಿ ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ನಿಮಗೆ ಕೆಲವು ಹೊಸ ಜವಾಬ್ದಾರಿಗಳು ಸಿಗಲಿದೆ. ಅದು ನಿಮ್ಮ ಖ್ಯಾತಿ ಮತ್ತು ಆದಾಯ ಎರಡನ್ನೂ ಹೆಚ್ಚಿಸುವುದು. ನಿಮ್ಮ ಕುಟುಂಬದಿಂದ ನಿಮಗೆ ಕೆಲಸದಲ್ಲಿ ಬೆಂಬಲ ಸಿಗುತ್ತದೆ. ಅವರ ಸಹಾಯದಿಂದ ನೀವು ಹೆಚ್ಚಿನ ಆದಾಯ ಪಡೆಯುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.

ಕುಂಭ ರಾಶಿ

ಈ ದಿ ಕುಂಭ ರಾಶಿಯವರಿಗೆ ಆತ್ಮವಿಶ್ವಾಸ ತುಂಬಿರುತ್ತದೆ. ವ್ಯವಹಾರ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಸ್ನೇಹಿತರ ಸಹಾಯದಿಂದ ವ್ಯಾಪಾರ ಅವಕಾಶಗಳು ಸಿಗಬಹುದು. ಶನಿಯ ಮಂತ್ರವನ್ನು ಪಠಿಸಿ, ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಎಣ್ಣೆ ದೀಪವನ್ನು ಬೆಳಗಿಸಿ. ಜೀವನದಲ್ಲಿ ಬರುವ ತೊಂದರೆಗಳ ನಿವಾರಣೆಗೆ ಇಂದು ಗುರುರಾಯರನ್ನು ಪೂಜಿಸಿ, ವಿಷ್ಣುವಿನ ದೇವಸ್ಥಾನಕ್ಕೆ ಭೆಟಿ ನೀಡಿ ತುಪ್ಪದ ದೀಪ ಬೆಳಗಿಸಿ.

ಮೀನ ರಾಶಿ

ಮೀನ ರಾಶಿಯವರು ಈ ದಿನ ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಮಕ್ಕಳ ಮದುವೆಯ ಬಗ್ಗೆ ಒಳ್ಳೆಯ ಸುದ್ದಿ ಸಿಗಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಬೆಳಿಗ್ಗೆ ಹಸುವಿಗೆ ಆಹಾರ ನೀಡಿ ಮತ್ತು ಗುರುರಾಯರ ಮಂತ್ರವನ್ನು ಪಠಿಸಿ.

(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ನೀಡುವುದಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+