Horoscope Today: ದಿನ ಭವಿಷ್ಯ ಜನವರಿ 27- ಈ ರಾಶಿಗೆ ಶಿವನ ಕೃಪಕಟಾಕ್ಷ ಉದ್ಯೋಗದಲ್ಲಿ ಬಡ್ತಿ, ಆದಾಯ ಹೆಚ್ಚಳ
ಜನವರಿ 27 ಸೋಮವಾರ ಕೆಲ ರಾಶಿಯವರಿಗೆ ಅದೃಷ್ಟದ ದಿನವಾಗಿದೆ. ಈ ದಿನ ಶಿವ ದೇವನ ಆಶೀರ್ವಾದದಿಂದ ಕೆಲ ರಾಶಿಯವರ ಉದ್ಯೋಗ ಬದಲಾಗಲಿದೆ. ಅಂದುಕೊಂಡ ಕೆಲಸವನ್ನು ನೀವು ಪಡೆಯುವಿರಿ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಶತ್ರು ಕಾಟದಿಂದ ಮುಕ್ತಿ ಸಿಗಲಿದೆ. ಹಾಗಾದರೆ ಜನವರಿ 27 ಯಾವ ರಾಶಿಯವರಿಗೆ ಅದೃಷ್ಟ ತರಲಿದೆ. 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಜನವರಿ 27 ಅದೃಷ್ಟದ ದಿನವಾಗಿದೆ. ಶಿವನ ಕೃಪೆಯಿಂದ ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ. ಸಾಮಾಜಿಕವಾಗಿ ಪ್ರತಿಷ್ಠೆ ಹಾಗೂ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕುಟುಂಬದ ಜವಾಬ್ದಾರಿಗಳನ್ನು ಸುಲಭವಾಗಿ ನಿಭಾಯಿಸುವಿರಿ. ಶಿಕ್ಷಣ ಕ್ಷೇತ್ರದಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ಧಾರ್ಮಿಕ ಕಾರ್ಯಗಳು ಮನೆಯಲ್ಲಿ ನಡೆಯಲಿವೆ. ಬೆಳಿಗ್ಗೆ ಶಿವ ಮಂತ್ರವನ್ನು ಪಠಿಸಿ.

ವೃಷಭ ರಾಶಿ
ಜನವರಿ 27 ವೃಷಭ ರಾಶಿಯವರಿಗೆ ಅದೃಷ್ಟದ ದಿನವಾಗಿದೆ. ಈ ದಿನ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಇರುವುದು. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಧಾರ್ಮಿಕ ಗುರುವಿನ ಆಶೀರ್ವಾದದಿಂದ ಎಲ್ಲಾ ಗೆಲುವು ನಿಮ್ಮದಾಗಲಿದೆ. ಶುತ್ರುಗಳ ನಾಶವಾಗುವುದು. ನಿಮ್ಮಿಂದ ನಿಮ್ಮ ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಅಗತ್ಯ ಇರುವವರಿಗೆ ಬಟ್ಟೆ ದಾನ ಮಾಡಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನ ಅದೃಷ್ಟದ ದಿನ. ನೀವು ಇಂದು ಮಾಡಿದ ಪ್ರಯತ್ನಗಳು ಸಾರ್ಥಕವಾಗುತ್ತವೆ. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಸಂಬಂಧಗಳಲ್ಲಿ ಆತ್ಮೀಯತೆ ಇರುವುದು. ಲಾಭದಲ್ಲಿ ಇಳಿಕೆಯಾಗಬಹುದು. ಬೆಳಿಗ್ಗೆ ಹಸುವಿಗೆ ಹಸಿರು ಮೇವು ಕೊಡಿ. ಶಿವ ದೇವನ ಪೂಜೆ ಮಾಡಿ.
ಕರ್ಕಾಟಕ ರಾಶಿ
ನೀವು ಉದ್ಯೋಗ ಸ್ಥಳದಲ್ಲಿ ಒತ್ತಡವನ್ನು ಎದುರಿಸಬಹುದು. ಮನಸ್ಸು ಚಂಚಲವಾಗಿರುತ್ತದೆ ಮತ್ತು ಅನಗತ್ಯ ಗೊಂದಲ ಉಂಟಾಗುತ್ತದೆ. ನಿಮ್ಮ ಮಾತನ್ನು ನಿಯಂತ್ರಿಸಿ. ದಾಂಪತ್ಯ ಜೀವನದಲ್ಲಿ ಒತ್ತಡ ಇರುವುದು. ಸಂಪತ್ತಿನಲ್ಲಿ ಹೆಚ್ಚಳವಾಗಬಹುದು. ಬೆಳಿಗ್ಗೆ ಶಿವ ಮಂತ್ರವನ್ನು ಪಠಿಸಿ. ಶಿವಲಿಂಗದ ಮೇಲೆ ಬಿಲ್ವಪತ್ರೆ ಅರ್ಪಿಸಿ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಅದ್ಭುತ ದಿನ ಇದಾಗಿದೆ. ಈ ದಿನದ ಅದೃಷ್ಟ ರಾಶಿಗಳಲ್ಲಿ ಸಿಂಹ ರಾಶಿಯೂ ಒಂದು. ಆರ್ಥಿಕ ಸ್ಥಿತಿ ಸುಧಾರಿಸುತ್ತವೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶುಭ ಉತ್ಸವಗಳಲ್ಲಿ ಭಾಗವಹಿಸುವಿಕೆ ಇರುತ್ತದೆ. ಸ್ನೇಹ ಸಂಬಂಧಗಳು ಗಾಢವಾಗುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹಾಗೂ ಧಾರ್ಮಿಕ ಒಲವು ಹೆಚ್ಚಾಗುತ್ತದೆ. ರಾಜಕೀಯ ಮಹತ್ವಾಕಾಂಕ್ಷೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ.
ಕನ್ಯಾ ರಾಶಿ
ಜನವರಿ 27 ಕನ್ಯಾ ರಾಶಿಯವರಿಗೆ ಮಿಶ್ರ ದಿನ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಸಂಬಂಧಿಕರಿಂದ ಒತ್ತಡ ಎದುರಾಗಬಹುದು. ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ. ಹಸಿದವರಿಗೆ ಅನ್ನ ನೀಡಿ.
ತುಲಾ ರಾಶಿ
ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣಕಾಸಿನ ವಿಷಯಗಳಲ್ಲಿ ನಷ್ಟ ಉಂಟಾಗಬಹುದು. ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ಗುರುವಿನಿಂದ ನಿಮಗೆ ಬೆಂಬಲ ಸಿಗುತ್ತದೆ. ಸಾಮಾಜಿಕವಾಗಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮಗೆ ಸರ್ಕಾರದಿಂದ ಹಣದ ಬೆಂಬಲ ಸಿಗಬಹುದು. ಬೆಳಿಗ್ಗೆ ಶಿವ ಮಂತ್ರವನ್ನು ಪಠಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ಜನವರಿ 27ರ ಅದೃಷ್ಟ ರಾಶಿಗಳಲ್ಲಿ ವೃಶ್ಚಿಕ ರಾಶಿಯೂ ಒಂದು. ಶಿವ ದೇವನ ಆಶೀರ್ವಾದದಿಂದ ವೈಯಕ್ತಿಕ ಸಂತೋಷ ಹೆಚ್ಚಾಗುತ್ತದೆ. ಆರ್ಥಿಕ ವಿಷಯಗಳಲ್ಲಿ ಪ್ರಗತಿ ಕಂಡುಬರಲಿದೆ. ಉದ್ಯೋದಲ್ಲಿ ಪ್ರಮೋಷನ್, ಆಸ್ತಿ, ವಾಹನ ಖರೀದಿ ಮಾಡಲು ಉತ್ತಮ ಸಮಯ.
ಧನು ರಾಶಿ
ಧನು ರಾಶಿಯವರಿಗೆ ಜನವರಿ 27ರಂದು ಮಿಶ್ರ ಫಲ ಸಿಗಲಿದೆ. ಮಕ್ಕಳ ಜವಾಬ್ದಾರಿ ಹೆಚ್ಚಾಗುತ್ತದೆ. ಹೊರಗಿನ ಆಹಾರ ತ್ಯಜಿಸುವುದು ಉತ್ತಮ. ಸಂಬಂಧಗಳಲ್ಲಿ ಆತ್ಮೀಯತೆ ಇರುತ್ತದೆ. ವ್ಯವಹಾರದ ಖ್ಯಾತಿ ಹಾಗೂ ಆತ್ಮಗೌರವ ಹೆಚ್ಚಾಗುತ್ತದೆ. ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ ಮತ್ತು ನೀವು ಆರ್ಥಿಕ ಲಾಭವನ್ನು ಪಡೆಯುವಿರಿ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಹಸಿದ ಹಸುವಿಗೆ ಆಹಾರ ನೀಡಿ. ಸಮಸ್ಯೆಗಳಿಂದ ದೂರವಾಗಲು ದಾನ ಮಾಡಿ.
ಮಕರ ರಾಶಿ
ಜನವರಿ 27 ಮಕರ ರಾಶಿಯವರಿಗೆ ಮಿಶ್ರ ಫಲ ನೀಡಲಿದೆ. ಇಂದು ಕುಟುಂಬ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೆಲಸದಲ್ಲಿ ನಿಮಗೆ ಒತ್ತಡ ಹೆಚ್ಚಾಗಲಿದೆ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬೆಳಿಗ್ಗೆ ಶಿವ ಲಿಂಗಕ್ಕೆ ಬಿಲ್ವಪತ್ರೆ ಇಟ್ಟು ಪೂಜೆ ಮಾಡಿ. ಕಷ್ಟಗಳ ನಿವಾರಣತೆ ಪ್ರಾರ್ಥನೆ ಮಾಡಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ವಿರೋಧಿಗಳು ಸೋಲುತ್ತಾರೆ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಖರ್ಚು ಇರುತ್ತದೆ. ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ನೀವು ಚಿಂತಿತರಾಗಿರುತ್ತೀರಿ. ದೀರ್ಘ ಪ್ರಯಾಣದ ಸಾಧ್ಯತೆಗಳಿವೆ. ಬೆಳಿಗ್ಗೆ ಪೋಷಕರಿಂದ ಆಶೀರ್ವಾದ ಪಡೆದು ಹೊರಗಡೆ ಹೋಗಿ. ಕಷ್ಟಗಳ ನಿವಾರಣೆಗೆ ಇಂದು ಶಿವ ದೇವಸ್ಥಾನಕ್ಕೆ ತೆರಳಿ ತುಪ್ಪದ ದೀಪ ಹಚ್ಚಿ.
ಮೀನ ರಾಶಿ
ಮೀನ ಜನವರಿ 27ರ ಅದೃಷ್ಟ ರಾಶಿಗಳಲ್ಲಿ ಒಂದು. ಈ ದಿನ ಸಂಪತ್ತು, ಖ್ಯಾತಿ ಹೆಚ್ಚಳದಿಂದಾಗಿ ಮನಸ್ಸು ಖುಷಿ ಪಡುವುದು. ಸರ್ಕಾರದಿಂದ ಹಣದ ಬೆಂಬಲ ಸಿಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಕೆಲಸದಲ್ಲಿ ಸಹಾಯ ಸಿಗಲಿದೆ. ಸೃಜನಶೀಲ ಕೆಲಸಗಳಲ್ಲಿ ಕಾರ್ಯನಿರತರಾಗಿರುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಬೆಳಿಗ್ಗೆ ಶಿವ ದೇವನನ್ನು ಪೂಜಿಸಿ ದಿನವನ್ನು ಆರಂಭಿಸಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತಾರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಟಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications