Horoscope Today: ದಿನ ಭವಿಷ್ಯ ಫೆಬ್ರವರಿ 14- ಈ ರಾಶಿಯವರ ಪ್ರೇಮಿಯಿಂದ ಬೇಕೆಂದಷ್ಟು ಪ್ರೀತಿ ಲಭ್ಯ
ಗ್ರಹಗಳು ಕಾಲ ಕಾಲಕ್ಕೆ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತವೆ. ಜಾತಕದಲ್ಲಿ ಗ್ರಹಗಳ ಸ್ಥಾನ ಉತ್ತಮವಾಗಿದ್ದರೆ ಶುಭ ಫಲ ಸಿಗಲಿದೆ. ಆದರೆ ಜಾತಕದಲ್ಲಿ ಗ್ರಹಗಳ ಸ್ಥಾನ ಉತ್ತಮವಾಗಿ ಇಲ್ಲದೇ ಇದ್ದರೆ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ 2025 ಫೆಬ್ರವರಿ 14 ಶುಕ್ರವಾರ 12 ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಲಕ್ಷ್ಮೀ ದೇವಿಯ ಕೃಪೆ ಇರಲಿದೆ? ಯಾವ ರಾಶಿಯವರು ಈ ದಿನದ ಅದೃಷ್ಟ ರಾಶಿಯವರು? ಯಾರ ಲವ್ ಸಕ್ಸಸ್ ಆಗುತ್ತದೆ ಎಲ್ಲವನ್ನೂ ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರಿಗೆ ಫೆಬ್ರವರಿ 14 ತುಂಬಾ ಶುಭ ದಿನವಾಗಿದೆ. ಈ ದಿನ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಸಾಲ ಕೊಟ್ಟ ಹಣವನ್ನು ಮರಳಿ ಪಡೆಯಬಹುದು. ಕೆಲಸದಲ್ಲಿ ಕಷ್ಟಪಡುವವರಿಗೆ ಯಶಸ್ಸು ಸಿಗುತ್ತದೆ. ವ್ಯವಹಾರದಲ್ಲಿಯೂ ಲಾಭದ ಸಾಧ್ಯತೆ ಇದೆ. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಇದು ತುಂಬಾ ಒಳ್ಳೆಯ ಸಮಯವಾಗಿದೆ. ಅಲ್ಲದೆ ಕುಬೇರನ ಕೃಪೆ ನಿಮ್ಮ ಮೇಲೆ ಇರಲಿದೆ. ಈ ದಿನ ನಿಮ್ಮ ಪ್ರೇಮ ಪ್ರಸ್ತಾಪಕ್ಕೆ ಶುಭ ಸುದ್ದಿ ಸಿಗಲಿದೆ.

ವೃಷಭ ರಾಶಿ
ಫೆಬ್ರವರಿ 14 ವೃಷಭ ರಾಶಿಯವರಿಗೆ ಆರ್ಥಿಕ ಪ್ರಗತಿಯಾಗುವುದು. ಶೈಕ್ಷಣಿಕ ಸ್ಪರ್ಧೆಯಲ್ಲಿನ ಪ್ರಯತ್ನಗಳು ಫಲಪ್ರದವಾಗುತ್ತವೆ. ನಿಮ್ಮ ದಿನ ಚೆನ್ನಾಗಿ ನಡೆಯಲು ಕೆಲಸದಲ್ಲಿರುವ ಜನರೊಂದಿಗೆ ಮೃದುವಾಗಿ ಮಾತನಾಡಿ. ನೀವು ಸಂಪತ್ತು, ಸ್ಥಾನ ಮತ್ತು ಪ್ರತಿಷ್ಠೆಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
ಮಿಥುನ ರಾಶಿ
ಫೆಬ್ರವರಿ 14 ಮಿಥುನ ರಾಶಿಯವರಿಗೆ ಉಡುಗೊರೆಗಳು ಹೆಚ್ಚಾಗಿ ಸಿಗಲಿವೆ. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ಬಡ್ತಿ ಪಡೆಯುವಿರಿ. ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದೆ. ಬೆಳಿಗ್ಗೆ ಹಸುವಿಗೆ ಹಸಿರು ಮೇವು ನೀಡಿ. ಅನ್ನದಾನ ಮಾಡಿ, ದೇವಸ್ಥಾನಕ್ಕೆ ಹೋಗಿ ತುಪ್ಪದ ದೀಪವನ್ನು ಬೆಳಗಿಸಿ.
ಕರ್ಕಾಟಕ ರಾಶಿ
ಈ ದಿನ ಕರ್ಕಾಟಕ ರಾಶಿಯ ಜನರ ಕೌಟುಂಬಿಕ ತೊಂದರೆಗಳು ಕೊನೆಗೊಳ್ಳಲಿವೆ. ಬಹುದಿನದ ಪ್ರೀತಿಗೆ ಒಪ್ಪಿಗೆ ಸಿಗುವ ಸಮಯ ಇದಾಗಿದೆ. ನೀವು ಅನುಭವಿಸುತ್ತಿದ್ದ ಒತ್ತಡದಿಂದ ಮುಕ್ತಿ ಪಡೆಯುತ್ತೀರಿ. ಮನೆ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನಿಮ್ಮ ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚುವುದು. ಅಲ್ಲದೆ ಸಂಬಂಧಗಳು ಬಲಗೊಳ್ಳುತ್ತವೆ.
ಸಿಂಹ ರಾಶಿ
ಸಂಬಂಧಗಳಲ್ಲಿ ಆತ್ಮೀಯತೆ ಹೆಚ್ಚಾಗುವುದು. ಮಾಡಿದ ಪ್ರಯತ್ನಗಳು ಫಲಪ್ರದವಾಗುತ್ತವೆ. ಇಂದು ನಿಮಗೆ ಶಕ್ತಿ ತುಂಬಿದ ದಿನವಾಗಿರುತ್ತದೆ. ನೀವು ಇಂದು ಸಂಬಂಧಿಕರನ್ನು ಭೇಟಿಯಾಗುತ್ತೀರಿ. ಸ್ನೇಹಿತ ಅಥವಾ ಸಂಬಂಧಿಕರನ್ನು ಭೇಟಿಯಾದ ನಂತರ ನೀವು ತುಂಬಾ ಸಂತೋಷವಾಗಿರುತ್ತೀರಿ. ಬೆಳಿಗ್ಗೆ ಲಕ್ಷ್ಮೀ ಮಂತ್ರವನ್ನು ಪಠಿಸಿ, ಹಸುವಿಗೆ ಆಹಾರ ನೀಡಿ.
ಕನ್ಯಾ ರಾಶಿ
ಈ ದಿನ ಮಾಡಿದ ಸೃಜನಶೀಲ ಪ್ರಯತ್ನಗಳು ಫಲ ನೀಡುತ್ತವೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಅತ್ತೆ-ಮಾವಂದಿರ ಕಡೆಯಿಂದ ಸಂತೋಷದ ಸುದ್ದಿ ಬರುವ ಸಾಧ್ಯತೆಗಳಿವೆ. ಇಂದು ಹಣ ಸಿಗುವ ಸಾಧ್ಯತೆಗಳಿವೆ. ಹಸುವಿಗೆ ಆಹಾರ ನೀಡಿ ಮನೆಗೆ ಲಕ್ಷ್ಮೀ ಬರುತ್ತಾಳೆ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಈಡೇರುತ್ತವೆ.
ತುಲಾ ರಾಶಿ
ಹಾಳಾದ ಕೆಲಸಗಳನ್ನು ಬುದ್ಧಿವಂತಿಕೆ ಮತ್ತು ಕೌಶಲ್ಯದ ಮೂಲಕ ಸಾಧಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ವ್ಯವಹಾರದಲ್ಲಿ ಏರಿಳಿತಗಳು ಇರುತ್ತವೆ ಆದರೆ ಭಯಪಡಬೇಡಿ. ಹಸಿದವರಿಗೆ ಆಹಾರ ನೀಡಿ. ಬೆಳಿಗ್ಗೆ ಕುಬೇರನನ್ನು ಪೂಜಿಸಿ, ಸೂರ್ಯನಿಗೆ ನೀರನ್ನು ಅರ್ಪಿಸಿ.
ವೃಶ್ಚಿಕ ರಾಶಿ
ಫೆಬ್ರವರಿ 14 ವೃಶ್ಚಿಕ ರಾಶಿಯವರಿಗೆ ಬಹಳ ಅದ್ಭುತವಾಗಿದೆ. ಇಂದಿನಿಂದ ನೀವು ಹಳೆಯ ಸಾಲಗಳಿಂದ ಮುಕ್ತರಾಗುವಿರಿ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದರೆ, ಈ ಸಮಯದಲ್ಲಿ ಅದು ಸುಧಾರಣೆ ಕಾಣುತ್ತದೆ. ಉದ್ಯೋಗ ಮತ್ತು ವ್ಯವಹಾರಗಳಲ್ಲಿಯೂ ಹೊಸ ಅವಕಾಶಗಳು ಕಂಡುಬರಬಹುದು. ಇದು ಮುಂದುವರಿಯಲು ಮತ್ತು ನಿಮ್ಮ ಕನಸುಗಳನ್ನು ನನಸಾಗಿಸಲು ಉತ್ತಮ ಸಮಯವಾಗಿರುತ್ತದೆ. ಪ್ರೇಮಿಗಳಿಗೆ ಮದುವೆಯಾಗುವ ಯೋಗ ಕೂಡಿ ಬರಲಿದೆ.
ಧನು ರಾಶಿ
ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯ ದಿನವಾಗಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ ಮತ್ತು ಸಂಬಂಧಿಕರ ಆಗಮನವು ಮನೆಗೆ ಸಂತೋಷವನ್ನು ತರುತ್ತದೆ. ಆರ್ಥಿಕ ವಿಷಯಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನೀವು ಉತ್ಸಾಹದಿಂದ ಕೆಲಸ ಮಾಡುತ್ತೀರಿ.
ಮಕರ ರಾಶಿ
ಮಕರ ರಾಶಿಯವರಿಗೆ ಹೊಸ ಕೆಲಸ ಆರಂಭಿಸಲು ಈ ಸಮಯ ಶುಭವಾಗಿದೆ. ನೀವು ಹೊಸ ಯೋಜನೆ ಅಥವಾ ವ್ಯವಹಾರವನ್ನು ಯೋಜಿಸುತ್ತಿದ್ದರೆ, ಈ ಸಮಯ ತುಂಬಾ ಅನುಕೂಲಕರವಾಗಿದೆ. ಆರ್ಥಿಕ ಲಾಭದ ಸಾಧ್ಯತೆಯಿದ್ದು, ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು. ಅದೃಷ್ಟ ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಮತ್ತು ಯಶಸ್ಸು ನಿಮ್ಮ ಪಾದಗಳಿಗೆ ಮುತ್ತಿಡುತ್ತದೆ.
ಕುಂಭ ರಾಶಿ
ಕುಟುಂಬ ಸದಸ್ಯರೊಂದಿಗೆ ರಾಜಿ ಮಾಡಿಕೊಳ್ಳುವ ಮೂಲಕ ಸಂಬಂಧಗಳು ಉತ್ತಮವಾಗಿರುತ್ತವೆ. ನಿಮ್ಮ ಕುಟುಂಬದೊಂದಿಗೆ ನೀವು ಮನೆಯಲ್ಲಿ ಹೆಚ್ಚು ಶಾಂತಿಯಿಂದ ಇದ್ದಷ್ಟೂ ನಿಮ್ಮ ದಿನ ಉತ್ತಮವಾಗಿರುತ್ತದೆ. ನೀವು ಕೆಲವು ಶುಭ ಅಥವಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ವ್ಯಾಪಾರ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ದೀರ್ಘ ಪ್ರಯಾಣದ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುವುದು.
ಮೀನ ರಾಶಿ
ಫೆಬ್ರವರಿ 14 ಮೀನ ರಾಶಿಯವರಿಗೆ ಪ್ರೀತಿ ಮತ್ತು ಶಾಂತಿಯನ್ನು ತರುತ್ತದೆ. ನಿಮ್ಮ ಸಂಬಂಧಗಳಲ್ಲಿ ಮಾಧುರ್ಯ ಕಾಣುವಿರಿ. ಯಾವುದೇ ತಪ್ಪುಗ್ರಹಿಕೆಗಳು ದೂರವಾಗುತ್ತವೆ. ಕುಟುಂಬ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ. ನೀವು ಮಾನಸಿಕ ಒತ್ತಡದಿಂದ ಪರಿಹಾರ ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕ ಒಲವು ಹೆಚ್ಚಾಗಲಿದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆದರಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications