Horoscope Today: ದಿನ ಭವಿಷ್ಯ ಏಪ್ರಿಲ್ 20- ಈ ರಾಶಿಗೆ ಸೂರ್ಯ ದೇವನ ಅನುಗ್ರಹದಿಂದ ಇಷ್ಟಾರ್ಥ ಸಿದ್ಧಿ
ಏಪ್ರಿಲ್ 20 ಭಾನುವಾರ ತುಂಬಾ ವಿಶೇಷವಾಗಿದೆ. ಈ ದಿನ ಬ್ರಹ್ಮ ಮುಹೂರ್ತ ಬೆಳಗ್ಗೆ 04:22 ರಿಂದ 05:06ರವರೆಗೆ ಇದೆ. ಅಭಿಜಿತ್ ಕಾಲ ಬೆಳಗ್ಗೆ 11:54 ರಿಂದ ಮಧ್ಯಾಹ್ನ 12:46ರವರೆಗೆ ಹಾಗೂ ವಿಜಯ ಮುಹೂರ್ತ ಸಂಜೆ 06:49 ರಿಂದ ಸಂಜೆ 07:11ರವರೆಗೆ ಇರುತ್ತದೆ. ಈ ದಿನ ಸೂರ್ಯ ದೇವನನ್ನು ಪೂಜಿಸುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಇಂದು ಕೆಲ ರಾಶಿಯವರಿಗೆ ಅದ್ಭುತವಾದ ದಿನ. ಹಾಗಾದರೆ ಇಂದು 12 ರಾಶಿಗಳ ಭವಿಷ್ಯ ಹೇಗಿದೆ ಎಂದು ಈಗ ತಿಳಿಯೋಣ.
ಮೇಷ ರಾಶಿ
ಇಂದು ಮೆಷ ರಾಶಿಯವರಿಗೆ ಒಳ್ಳೆಯ ದಿನವಾಗಿದೆ. ನೀವು ಯಾವುದೋ ಪ್ರಮುಖ ಕೆಲಸದ ನಿಮಿತ್ತ ಊರಿಂದ ಹೊರಗೆ ಹೋಗಬೇಕಾಗಬಹುದು. ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಬಹುದು.

ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಸಾಮಾನ್ಯ ದಿನವಾಗಿದೆ. ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯದಲ್ಲಿ ಏರುಪೇರುಗಳು ಕಂಡುಬಹುದು. ಕುಟುಂಬದಲ್ಲಿ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಲಿವೆ. ವ್ಯವಹಾರದಲ್ಲಿ ಆರ್ಥಿಕ ಸ್ಥಿತಿ ಹದಗೆಡಬಹುದು. ಯಾವುದೇ ನಿರ್ಧಾರವನ್ನು ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳಿ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇದು ಒಳ್ಳೆಯ ದಿನವಾಗಿದೆ. ಬಾಕಿ ಇರುವ ಕೆಲವು ಕೆಲಸಗಳು ಮುಗಿದ ನಂತರ ಮನಸ್ಸು ಸಂತೋಷವಾಗುತ್ತದೆ. ಆರೋಗ್ಯದಲ್ಲಿ ಏರಿಳಿತಗಳು ಇರುತ್ತವೆ. ವ್ಯವಹಾರದಲ್ಲಿ ಆರ್ಥಿಕ ಪರಿಸ್ಥಿತಿ ಬಲವಾಗಿರುವುದು. ಕುಟುಂಬದಲ್ಲಿ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆ ಇರುತ್ತದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿದೆ. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ನೀವು ಯಾರನ್ನಾದರೂ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಇದು ಭವಿಷ್ಯದಲ್ಲಿ ಪ್ರಯೋಜನ ನೀಡಲಿದೆ. ನೀವು ವ್ಯವಹಾರದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಬಹುದು.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಇಂದು ಅನುಕೂಲಕರವಾದ ದಿನವಾಗಿದೆ. ಉದ್ಯೋಗ ಹುಡುಕಾಟ ಕೊನೆಗೊಳ್ಳುತ್ತದೆ. ಅಂದುಕೊಂಡ ಕೆಲಸ ನಿಮಗೆ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ವ್ಯವಹಾರದಲ್ಲಿ ಬದಲಾವಣೆ ಕಂಡು ಬರಲಿದೆ. ನೀವು ಯಾರನ್ನಾದರೂ ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಕುಟುಂಬದ ಪ್ರತಿಯೊಬ್ಬರಿಂದಲೂ ನಿಮಗೆ ಸಂಪೂರ್ಣ ಬೆಂಬಲ ಸಿಗುತ್ತದೆ.
ಕನ್ಯಾ ರಾಶಿ
ಇಂದು ನಿಮ್ಮ ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ನಿಮ್ಮ ಆರೋಗ್ಯದಲ್ಲಿ ನೀವು ಪ್ರಯೋಜನಗಳನ್ನು ಪಡೆಯುತ್ತೀರಿ. ನೀವು ಹಳೆಯ ಸ್ನೇಹಿತ ಅಥವಾ ಸಹೋದ್ಯೋಗಿಯನ್ನು ಭೇಟಿಯಾಗಬೇಕಾಗುತ್ತದೆ. ಇದರಿಂದ ನಿಮ್ಮ ವ್ಯವಹಾರ ಸುಧಾರಿಸಲಿದೆ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿಗಳು ಕೇಳಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ. ನಿರ್ಲಕ್ಷ್ಯ ಆರ್ಥಿಕ ನಷ್ಟವನ್ನುಂಟು ಮಾಡಬಹುದು. ನಿಮಗೆ ಇಂದು ಒಳ್ಳೆಯ ಸುದ್ದಿ ಸಿಗುತ್ತದೆ. ಪತ್ನಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ.
ವೃಶ್ಚಿಕ ರಾಶಿ
ನೀವು ನಿಮ್ಮ ಆರೋಗ್ಯದ ಬಗ್ಗೆ ಚಿಂತಿತರಾಗಬಹುದು. ವ್ಯವಹಾರದಲ್ಲಿ ನಷ್ಟವನ್ನು ಎದುರಿಸಬಹುದು. ನಿಮ್ಮ ಕೆಲಸದ ಸ್ಥಳವನ್ನು ಬದಲಾಯಿಸುವುದು ನಿಮಗೆ ಇಷ್ಟವಿರುವುದಿಲ್ಲ. ಹೀಗೆನಿಸಿದರೆ ಕೆಲಸ ಬದಲಾಗಿಸಬೇಡಿ. ಕುಟುಂಬದಲ್ಲಿ ವಾದಗಳನ್ನು ತಪ್ಪಿಸಿ. ನಿಮ್ಮ ಪತ್ನಿಯೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ.
ಧನು ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ನಿರ್ಲಕ್ಷ್ಯ ನಿಮ್ಮನ್ನು ಅಸ್ವಸ್ಥಗೊಳಿಸಬಹುದು. ನೀವು ಯಾವುದೋ ಪಿತೂರಿಯ ಬಲಿಪಶುವಾಗಬಹುದು. ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗಬಹುದು. ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಇದು ಸರಿಯಾದ ಸಮಯವಲ್ಲ.
ಮಕರ ರಾಶಿ
ನೀವು ಇಂದು ಹೊಸ ವಾಹನ ಖರೀದಿಸಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಇರುತ್ತದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮಗೆ ದೊಡ್ಡ ಕೆಲಸ ಸಿಗಬಹುದು. ಉದ್ಯೋಗ ಕ್ಷೇತ್ರದಲ್ಲಿನ ಜನರಿಗೆ ಬಡ್ತಿ ಸಿಗಬಹುದು. ಕುಟುಂಬದಲ್ಲಿನ ವಾತಾವರಣ ಅದ್ಭುತವಾಗಿರುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಶುಭ ದಿನವಾಗಿದೆ. ಕುಟುಂಬದ ಸದಸ್ಯರಿಗೆ ಕೆಲಸ ಸಿಗಬಹುದು. ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗುತ್ತವೆ. ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಕ್ರಮ ನಡೆಯುವ ಸಾಧ್ಯತೆ ಇರುತ್ತದೆ. ನೀವು ಹೊಸ ವಾಹನ ಅಥವಾ ಕಟ್ಟಡವನ್ನು ಖರೀದಿಸಬಹುದು.
ಮೀನ ರಾಶಿ
ಇಂದು ಪತ್ನಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಕುಟುಂಬದಲ್ಲಿನ ವಾತಾವರಣ ನಿಮ್ಮ ಪರವಾಗಿರಲಿದೆ. ವ್ಯವಹಾರದಲ್ಲಿ ಕೆಲವು ಹೊಸ ಕ್ರಿಯಾ ಯೋಜನೆಗಳನ್ನು ಮಾಡಬಹುದು. ನೀವು ನ್ಯಾಯಾಲಯದ ಪ್ರಕರಣವನ್ನು ಗೆಲ್ಲುತ್ತೀರಿ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಕ್ಕೆ ತರುವ ಮುನ್ನ ಸಂಬಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications